ಅನಾರೋಗ್ಯ ಎದುರಾದಾಗ ಏನನ್ನೂ ತಿನ್ನಲು ಮನಸ್ಸಾಗುವುದಿಲ್ಲ. ಕುಡಿಯುವ ನೀರು ಸಹಾ ಕಹಿ ಎನಿಸುತ್ತದೆ. ಜೀವರಾಸಾಯನಿಕ ಕ್ರಿಯೆ ಕುಂಠಿತಗೊಳ್ಳುತ್ತದೆ ಹಾಗೂ ಇದು ಇನ್ನಷ್ಟು ಆಯಾಸಕ್ಕೆ ಕಾರಣವಾಗುತ್ತದೆ. ಕೆಲವೊಮ್ಮೆ, ಇದಕ್ಕೆ ವ್ಯತಿರಿಕ್ತವಾಗಿ ತಿನ್ನಬಾರದದನ್ನು, ಉದಾಹರಣೆಗೆ ಐಸ್ ಕ್ರೀಂ, ಚಾಕಲೇಟು ಅಥವಾ ವೈನ್ ಸೇವಿಸುವ ಮನಸ್ಸಾಗುತ್ತದೆ. ಇಂದಿನ ಲೇಖನದಲ್ಲಿ ಅನಾರೋಗ್ಯದ ಸಮಯದಲ್ಲಿ ಸೇವಿಸಬಹುದಾದ ಹತ್ತು ಆಹಾರಗಳ ಬಗ್ಗೆ ಕೆಲವು ಮಾಹಿತಿಗಳನ್ನು ನೀಡಲಾಗಿದೆ.
ಅನಾರೋಗ್ಯಕ್ಕೆ ಕೆಲವಾರು ಕಾರಣಗಳಿವೆ ಹಾಗೂ ಇದು ಯಾವ ಸಮಯದಲ್ಲಿ ಬೇಕಾದರೂ ಎದುರಾಗಬಹುದು. ಸಾಮಾನ್ಯವಾಗಿ ಚಳಿ ಇರುವ ಸಮಯದಲ್ಲಿ ಗಾಳಿಯಲ್ಲಿ ತೇಲಿ ಬರುವ ವೈರಸ್ಸುಗಳು ಫ್ಲೂ, ಶೀತ, ನೆಗಡಿ ಜ್ವರಗಳಿಗೆ ಕಾರಣವಾಗುತ್ತವೆ. ಈ ಸಮಯದಲ್ಲಿ ಸೇವಿಸಲ್ಪಡುವ ಕೆಲವು ಆಹಾರಗಳು ನಮ್ಮ ದೇಹದಲ್ಲಿ 'ಆರೋಗ್ಯ ಚೆನ್ನಾಗಿಯೇ ಇದೆ' ಎಂಬ ಭಾವನೆ ಮೂಡಿಸುವ ರಸದೂತಗಳು ಹೆಚ್ಚು ಬಿಡುಗಡೆಯಾಗುತ್ತವೆ ಹಾಗೂ ಇದು ಅನಾರೋಗ್ಯದಿಂದ ಶೀಘ್ರವೇ ಹೊರಬರುವಂತಾಗಲು ನೆರವಾಗುತ್ತದೆ.
ಈ ಆಹಾರಗಳು ಅನಾರೋಗ್ಯದ ಸಮಯದಲ್ಲಿ ದೇಹಕ್ಕೆ ಹೆಚ್ಚೇ ಅಗತ್ಯವಿರುವ ಪೋಷಕಾಂಶಗಳು ಮತ್ತು ಶಕ್ತಿಯನ್ನು ಒದಗಿಸುತ್ತವೆ. ಇವುಗಳಲ್ಲಿ ಪ್ರಬಲವಾದ ರೋಗಗಳ ವಿರುದ್ಧ ಹೋರಾಡುವ ಗುಣವಿದ್ದು ಶೀಘ್ರವೇ ಅನಾರೋಗ್ಯ ದೂರಾಗಲು ನೆರವಾಗುತ್ತದೆ. ಬನ್ನಿ, ಈ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ನೋಡೋಣ...
ಚಿಕನ್ ಸೂಪ್
ಕೋಳಿ ಮಾಂಸದ ಸೂಪ್ ಅನ್ನು ಸಾಮಾನ್ಯವಾಗಿ ಶೀತವಿದ್ದಾಗ ಸೇವಿಸಲಾಗುತ್ತದೆ. ಇದೊಂದು ವಿಟಮಿನ್, ಖನಿಜಗಳು, ಪ್ರೋಟೀನು ಮತ್ತು ಕ್ಯಾಲೋರಿಗಳಿಂದ ಭರಿತ ಅದ್ಭುತ ಆಹಾರವಾಗಿದೆ. ಇವೆಲ್ಲವೂ ಅನಾರೋಗ್ಯದ ಸಮಯದಲ್ಲಿ ಹೆಚ್ಚೇ ಅಗತ್ಯವಿರುತ್ತದೆ. ಅಲ್ಲದೇ ಈ ಸೂಪ್ ನಲ್ಲಿ ಹೆಚ್ಚಿನ ಪ್ರಮಾಣದ ಎಲೆಕ್ಟ್ರೋಲೈಟುಗಳು ಹಾಗೂ ನೀರಿನ ಅಂಶವಿದ್ದು ದೇಹದ ನೀರಿನ ಅಗತ್ಯತೆಯನ್ನು ಪೂರೈಸುತ್ತದೆ.
ಬೆಳ್ಳುಳ್ಳಿ
ಶತಮಾನಗಳಿಂದ ಬೆಳ್ಳುಳ್ಳಿಯನ್ನು ಔಷಧೀಯ ರೂಪದಲ್ಲಿ ಬಳಸಲಾಗುತ್ತಾ ಬರಲಾಗಿದೆ. ಇದರ ಬ್ಯಾಕ್ಟೀರಿಯಾ ನಿರೋಧಕ, ವೈರಸ್ ನಿರ್ವಾರಕ ಹಾಗೂ ಶಿಲೀಂಧ್ರ ನಿವಾರಕ ಗುಣಗಳು ಅನಾರೋಗ್ಯವನ್ನು ಶೀಘ್ರವೇ ಗುಣಪಡಿಸಲು ನೆರವಾಗುತ್ತವೆ. ಅಲ್ಲದೇ ವಿವಿಧ ಬ್ಯಾಕ್ಟೀರಿಯಾ ಹಾಗೂ ವೈರಸ್ಸುಗಳನ್ನು ಕೊಂದು ರೋಗ ನಿರೋಧಕ ಶಕ್ತಿಯನ್ನೂ ಬಲಪಡಿಸುತ್ತದೆ. ಬೆಳ್ಳುಳ್ಳಿಯನ್ನು ಚಿಕನ್ ಸೂಪ್ ಅಥವಾ ನಿಮ್ಮ ನೆಚ್ಚಿನ ಮಾಂಸದ ಸಾರಿನಲ್ಲಿ ಬೆರೆಸಿ ಸೇವಿಸಿ.
ಬಿಸಿಬಿಸಿ ಟೀ
ಸಾಮಾನ್ಯ ಶೀತ ಮತ್ತು ಫ್ಲೂಗಳಿಗೆ ಬಿಸಿಬಿಸಿ ಟೀ ಅತ್ಯುತ್ತಮ ಪರಿಹಾರ ಒದಗಿಸುತ್ತದೆ. ಇದೊಂದು ಅತ್ಯುತ್ತಮವಾದ ಕಫನಿರೋಧಕವಾಗಿದ್ದು ವಿಶೇಷವಾಗಿ ಕುಹರ ಅಥವಾ ಸೈನಸ್ ಭಾಗದಲ್ಲಿ ಉಂಟಾಗಿದ್ದ ಸೋಂಕಿನಿಂದಾಗಿ ಸಂಗ್ರಹವಾಗಿದ್ದ ಕಫವನ್ನು ನಿವಾರಿಸಲು ನೆರವಾಗುತ್ತದೆ. ಅಲ್ಲದೇ ಇದರಲ್ಲಿರುವ ಪಾಲಿಫೆನಾಲುಗಳು ಅನಾರೋಗ್ಯದ ವಿರುದ್ದ ಹೋರಾಡುವ ಆಂಟಿ ಆಕ್ಸಿಡೆಂಟ್ ಗುಣವನ್ನು ಹೊಂದಿದೆ. ಇದಕ್ಕೆ ಬಿಸಿಯಾದ, ಹಾಲಿಲ್ಲದ, ಕಪ್ಪು ಟೀ ಯನ್ನು ಕುಡಿಯಿರಿ, ಈ ಮೂಲಕ ಗಂಟಲಿನಲ್ಲಿದ್ದ ಬ್ಯಾಕ್ಟೀರಿಯಾಗಳು ವೃದ್ದಿಯಾಗದಂತೆ ತಡೆಯುತ್ತದೆ.
ಮಾಂಸದ ಸಾರುಗಳು
ಸಾರುಗಳು ಸಹಾ ಸೂಪ್ ನಂತೆಯೇ ಇರುತ್ತವೆ, ಆದರೆ ಕೊಂಚ ಗಾಢವಾಗಿರುತ್ತವೆ. ಈ ಸಾರುಗಳು ಸ್ವಾದಿಷ್ಟವೂ, ಕ್ಯಾಲೋರಿಗಳಿಂದ ಭರಿತವೂ ಆಗಿರುತ್ತವೆ. ಅಲ್ಲದೇ ಹೆಚ್ಚಿನ ಪ್ರಮಾಣದ ವಿಟಮಿನ್ನುಗಳು, ಖನಿಜಗಳಾದ ಮೆಗ್ನೀಶಿಯಂ, ಫೋಲೇಟ್, ಕ್ಯಾಲ್ಸಿಯಂ ಹಾಗೂ ಗಂಧಕಗಳಿವೆ. ವಿಶೇಷವಾಗಿ ಮೂಳೆಗಳನ್ನು ಕುದಿಸಿ ತಯಾರಿಸಿದ ಸಾರು ಅನಾರೋಗ್ಯದಿಂದ ಶೀಘ್ರವೇ ಹೊರಬರಲು ನೆರವಾಗುತ್ತದೆ.
ಜೇನು
ಜೇನಿನಲ್ಲಿ ಬ್ಯಾಕ್ಟೀರಿಯಾನಿವಾರಕ ಹಾಗೂ ಸೂಕ್ಷ್ಮಜೀವಿ ನಿವಾರಕ ಸಂಯುಕ್ತಗಳಿವೆ. ಇವು ಜೇನನ್ನು ಅನಾರೋಗ್ಯದ ಸಮಯದಲ್ಲಿ ಸೇವಿಸಲು ಅತ್ಯುತ್ತಮ ಆಹಾರವಾಗಿಸಿವೆ. ವಿಶೇಷವಾಗಿ ಗಂಟಲಬೇನೆ ಮತ್ತು ಕಫ ಇದ್ದ ಸಮಯದಲ್ಲಿ ಒಂದು ದೊಡ್ಡ ಚಮಚ ಜೇನನ್ನು ದಿನಕ್ಕೊಮ್ಮೆ ಸೇವಿಸಬೇಕು.
ಮಸಾಲೆಯುಕ್ತ ಆಹಾರಗಳು
ಮೆಣಸು, ಕಾಳುಮೆಣಸು ಮೊದಲಾದ ಖಾರವಾದ ಮಸಾಲೆಪದಾರ್ಥಗಳಲ್ಲಿ ಕ್ಯಾಪ್ಸೈಸಿನ್ ಎಂಬ ಪೋಷಕಾಂಶವಿದ್ದು ಇವು ದೇಹದ ನೋವನ್ನು ಕಡಿಮೆ ಮಾಡಲು ಸಮರ್ಥವಾಗಿವೆ. ಶೀತದ ಪರಿಣಾಮವಾಗಿ ಮೂಗು ಸೋರುತ್ತಿದ್ದರೆ ನಿಮ್ಮ ಆಹಾರ ಆದಷ್ಟೂ ಖಾರವಾಗಿರಲಿ. ಇದರಿಂದ ಕಫ ಸಡಿಲವಾಗಿ ಸುಲಭವಾಗಿ ಕಳಚಿ ಬರುತ್ತದೆ ಹಾಗೂ ಮೂಗು ಮತ್ತು ಕುಹರದ ಭಾಗಗಳನ್ನು ತೆರವುಗೊಳಿಸುತ್ತದೆ.
ಬಾಳೆಹಣ್ಣು
ಅನಾರೋಗ್ಯದ ಸಮಯದಲ್ಲಿ ಸೇವಿಸಲು ಬಾಳೆಹಣ್ಣು ಸಹಾ ಉತ್ತಮ ಆಯ್ಕೆಯಾಗಿದೆ. ಇದರಲ್ಲಿ ಉತ್ತಮ ಪ್ರಮಾಣದ ಕ್ಯಾಲೋರಿಗಳಿವೆ ಹಾಗೂ ವಿವಿಧ ಪೋಷಕಾಂಶಗಳಿವೆ. ಇವು ವಾಕರಿಕೆ ಮತ್ತು ಅತಿಸಾರದ ತೊಂದರೆಗಳನ್ನೂ ಗುಣಪಡಿಸಲು ನೆರವಾಗುತ್ತವೆ.
ಓಟ್ಸ್ ರವೆ
ಓಟ್ಸ್ ರವೆಯಲ್ಲಿ ವಿಟಮಿನ್ನುಗಳು, ಖನಿಜಗಳು ಹಾಗೂ ಹೆಚ್ಚಿನ ಕ್ಯಾಲೋರಿಗಳಿವೆ. ಇದರ ಸೇವನೆಯಿಂದ ರೋಗ ನಿರೋಧಕ ಶಕ್ತಿಗೆ ಪ್ರಚೋದನೆ ದೊರಕುತ್ತದೆ, ಜೀರ್ಣವ್ಯವಸ್ಥೆಯಲ್ಲಿ ಉಂಟಾದ ಉರಿಯೂತವನ್ನು ಕಡಿಮೆಗೊಳಿಸುತ್ತದೆ ಹಾಗೂ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ. ಒಟ್ಟಾರೆಯಾಗಿ ಇದರ ಸೇವನೆಯಿಂದ ಅನಾರೋಗ್ಯದಿಂದ ಶೀಘ್ರವೇ ಗುಣಹೊಂದಲು ನೆರವಾಗುತ್ತದೆ.
ಮೊಸರು
ಅನಾರೋಗ್ಯದ ಸಮಯದಲ್ಲಿ ಸೇವಿಸಲು ಮೊಸರು ಅತ್ಯುತ್ತಮ ಆಯ್ಕೆಯಾಗಿದೆ. ಒಂದು ಕಪ್ ಮೊಸರಿನ ಸೇವನೆಯಿಂದ ನೂರೈವತ್ತು ಕ್ಯಾಲೋರಿ ಹಾಗೂ ಎಂಟು ಗ್ರಾಂ ಪ್ರೋಟೀನ್ ಒದಗುತ್ತದೆ. ಅಲ್ಲದೇ ಮೊಸರಿನಲ್ಲಿರುವ ಕ್ಯಾಲ್ಸಿಯಂ ಮೂಳೆಗಳನ್ನು ಬಲಪಡಿಸುತ್ತದೆ. ಇದರಲ್ಲಿರುವ ಜೀರ್ಣಸ್ನೇಹಿ ಬ್ಯಾಕ್ಟೀರಿಯಾಗಳು ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ ಹಾಗೂ ನಿಯಮಿತ ಸೇವನೆಯಿಂದ ಆರೋಗ್ಯವೂ ಉತ್ತಮವಾಗಿರುತ್ತದೆ ಹಾಗೂ ಅನಾರೋಗ್ಯದಿಂದ ಶೀಘ್ರ ಚೇತರಿಸಿಕೊಳ್ಳಲು ನೆರವಾಗುತ್ತದೆ.
ಹಣ್ಣುಗಳು
ಸ್ಟ್ರಾಬೆರಿ, ಕ್ರ್ಯಾನ್ಬೆರಿಗಳು, ಬ್ಲೂ ಬೆರಿಗಳು, ದಾಳಿಂಬೆ, ಬ್ಲಾಕ್ ಬೆರಿ ಮೊದಲಾದವುಗಳನ್ನು ಅನಾರೋಗ್ಯದ ಸಮಯದಲ್ಲಿ ಸೇವಿಸಲು ಯೋಗ್ಯವಾದ ಫಲಗಳಾಗಿವೆ. ಈ ಹಣ್ಣುಗಳಲ್ಲಿ ಆಂಥೋಸಯಾನಿನ್ ಎಂಬ ಸಂಯುಕ್ತಗಳಿವೆ ಹಾಗೂ ಅನಾರೋಗ್ಯವನ್ನು ಶೀಘ್ರವೇ ಗುಣಪಡಿಸಲು ನೆರವಾಗುತ್ತದೆ. ಈ ಪೋಷಕಾಂಶಗಳಲ್ಲಿ ಉರಿಯೂತ ನಿವಾರಕ, ವೈರಸ್ ನಿವಾರಕ ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣಗಳಿವೆ. ಒಂದು ವೇಳೆ ಈ ಮಾಹಿತಿ ನಿಮಗೆ ಉಪಯುಕ್ತವೆಂದು ಕಂಡುಬಂದರೆ ನಿಮ್ಮ ಸ್ನೇಹಿತರು ಮತ್ತು ಆಪ್ತರೊಂದಿಗೆ ಇದರ ಕೊಂಡಿಯನ್ನು ಹಂಚಿಕೊಳ್ಳುವ ಮೂಲಕ ಹೆಚ್ಚು ಜನರಿಗೆ ಪ್ರಯೋಜನವಾಗಲು ನೆರವಾಗಿ...
Boldsky ಇದರಿಂದ ಬ್ರೇಕಿಂಗ್ ನ್ಯೂಸ್ ಅಲರ್ಟ್ಗಳನ್ನು ಪಡೆಯಿರಿ | Subscribe to Kannada Boldsky.
Related Articles
8 ಗಂಟೆ ನಿದ್ದೆ ಮಾಡಿದ್ರೂ ಇನ್ನೂ ಸುಸ್ತಾದಂತಾಗುತ್ತಾ ?
ಲಿಂಬೆಸಿಪ್ಪೆ-ಸಂಧಿವಾತದ ಚಿಕಿತ್ಸೆ ಹಾಗೂ ಇತರ ಪ್ರಯೋಜನಗಳು
ಯಾವ್ಯಾವ ಹಣ್ಣಿನ ಜ್ಯೂಸ್ಗಳು ಆರೋಗ್ಯಕ್ಕೆ ಒಳ್ಳೆಯದು? ಇಲ್ಲಿದೆ ಡಿಟೇಲ್ಸ್
ಖಾಲಿ ಹೊಟ್ಟೆಯಲ್ಲಿ ಬಾಳೆ ಹಣ್ಣು ಸೇವಿಸುವುದು ಆರೋಗ್ಯಕರವೇ?
ಶೀತ-ಕೆಮ್ಮಿನಿಂದ ರಕ್ಷಣೆ ನೀಡುತ್ತವೆ ಈ ಅದ್ಭುತ ಹತ್ತು ಸರಳ ಟ್ರಿಕ್ಸ್
ಕರಬೂಜ ಹಣ್ಣು ತಿಂದ್ರೆ, ಈ 15 ಆರೋಗ್ಯಕಾರಿ ಲಾಭಗಳು ಪಡೆಯಬಹುದು
ಕದ್ದುಮುಚ್ಚಿ ಬ್ಲೂ ಫಿಲಂ ನೋಡುತ್ತಿದ್ದೀರಾ? ಹಾಗಾದರೆ ಇಂದೇ ನಿಲ್ಲಿಸಿ! ಯಾಕೆ ಗೊತ್ತೇ?
ನಿಮ್ಮ ಹಲ್ಲುಗಳನ್ನು ಹೆಚ್ಚು ಕಾಲ ಬಾಳಿಕೆ ಬರುವಂತೆ ಮಾಡಬಹುದಾದ 5 ವಿಧಾನಗಳು
ನೈಟ್ ಶಿಫ್ಟ್ನಲ್ಲಿ ಕೆಲಸ ಮಾಡುತ್ತಿದ್ದೀರೇ? ಹಾಗಾದ್ರೆ ಸೇವಿಸುವ ಆಹಾರ ಹೀಗಿರಲಿ…
ಆರೋಗ್ಯ ಟಿಪ್ಸ್: ಕ್ಯಾನ್ಸರ್ನ್ನು ನಿಯಂತ್ರಿಸುವ ಪವರ್ ಈ ತರಕಾರಿಗಳಲ್ಲಿದೆ!
ದೇಹದ ಲಿವರ್ನ ಆರೋಗ್ಯಕ್ಕೆ ಪವರ್ ಫುಲ್ ಆಹಾರಗಳು
ಏಲಕ್ಕಿ ನೀರನ್ನು ಒಂದು ವಾರ ಕುಡಿಯಿರಿ-ಪರಿಣಾಮ ಗಮನಿಸಿ
ಈಗೆಲ್ಲಾ ಸಮಸ್ಯೆ ಬಂದರೆ, ನಾಚಿಕೆ ಮಾಡಿಕೊಳ್ಳಬೇಡಿ! ಕೂಡಲೇ ವೈದ್ಯರಿಗೆ ತೋರಿಸಿ...
-
ಕರ್ನಾಟಕ ವಿಧಾನಸಭೆ ಚುನಾವಣೆ 2018
ಕರ್ನಾಟಕ ಚುನಾವಣೆ : ಇದುವರೆಗೂ ಸಿಕ್ಕ ಹಣ 34.39 ಕೋಟಿ!
ಕರ್ನಾಟಕ ಚುನಾವಣೆ ಬಗ್ಗೆ ಮಹತ್ವದ ಸುಳಿವು ನೀಡಿದ ಪ್ರಕಾಶ್ ರೈ
ಕಗ್ಗಂಟಾಗಿದ್ದ ಮಂಗಳೂರಿನ 3 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳು ಘೋಷಣೆ