For Quick Alerts
ALLOW NOTIFICATIONS  
For Daily Alerts

ಮೀನಿನ ಎಣ್ಣೆಯ 10 ಆರೋಗ್ಯ ಲಾಭಗಳು

By Sushma Charhra
|

ನೀವು ಪ್ರತಿ ದಿನ ಮೀನಿನ ಆಹಾರ ಸೇವಿಸುತ್ತೀರಾ? ಹೌದಾಗಿದ್ರೆ, ಖಂಡಿತ ನೀವು ಮೀನಿನ ಎಣ್ಣೆಯ ಬಗ್ಗೆ ಕೂಡ ತಿಳಿದುಕೊಳ್ಳಬೇಕು. ರುಚಿಯಾದ ಮೀನಿನ ಎಣ್ಣೆಯಿಂದ ಆಗುವ ಆರೋಗ್ಯಕಾರಿ ಲಾಭಗಳ ಬಗ್ಗೆ ಮಾಹಿತಿ ಪಡೆಯಲೇ ಬೇಕು . ಮೀನಿನ ಎಣ್ಣೆಯಲ್ಲಿ ಒಮೆಗಾ-3 ಫ್ಯಾಟಿ ಆಸಿಡ್ ಗಳು ಅಧಿಕವಾಗಿರುತ್ತೆ. ಇವುಗಳು ನಿಮ್ಮ ಆರೋಗ್ಯಕ್ಕೆ ಬಹಳ ಉಪಯುಕ್ತವಾಗಿದೆ. ಮೀನಿನ ಎಣ್ಣೆ ಅಂದರೆ ಏನು ಎಂದು ನೀವು ಕೇಳಬಹುದು. ಫಿಶ್ ಆಯಿಲ್ ಅನ್ನುವುದು ಮೀನುಗಳ ಮೇಲ್ಪದರದಲ್ಲಿರುವ ಎಣ್ಣೆಯಂಶದಿಂದ ಶೋಧಿಸಲ್ಪಟ್ಟ ಎಣ್ಣೆ.

ಮೀನು ತಿಂದರೆ ದೊರೆಯುವ ಪ್ರಮುಖ ಗುಣಗಳು

ಸಲ್ಮೋನ್,ಹೆರ್ರಿಂಗ್, ವೈಟ್ ಫಿಶ್,ಆಂಕೋವಿವ್ಸ್,ಸಾರ್ಡ್ನಿಸ್ ಗಳಂತ ವಿಶೇಷ ಮೀನುಗಳಿಂದ ತಯಾರಿಸಲ್ಪಡುವ ಎಣ್ಣೆ.
ವಿಶ್ವ ಆರೋಗ್ಯ ಸಂಸ್ಥೆ ವಾರಕ್ಕೆ ಒಂದರಿಂದ ಎರಡು ಮೀನು ಸೇವಿಸುವುದು ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂದು ಅಭಿಪ್ರಾಯಪಟ್ಟಿದೆ. ಫಿಶ್ ಆಯಿಲ್ 30 ಶೇಕಡಾದಷ್ಟು ಮೀನಿನ ಎಣ್ಣೆ ಅಂಶದಿಂದಲೂ, ಉಳಿದ 70 ಶೇಕಡಾ ಇತರೆ ಅಗತ್ಯ ನ್ಯೂಟ್ರಿಯಂಟ್ಸ್ ಗಳಿಂದಲೂ ತಯಾರಿಸಲ್ಪಡುತ್ತೆ. ತೂಕ ಇಳಿಸುವುದರಿಂದ ಹಿಡಿದು ಕ್ಯಾನ್ಸರ್ ವರೆಗಿನ ಹಲವು ಕಾಯಿಲೆಗಳಿಗೆ ಫಿಶ್ ಆಯಿಲ್ ಬಳಕೆ ಮಾಡಲಾಗುತ್ತೆ. ಹಾಗಾದ್ರೆ ಫಿಶ್ ಆಯಿಲ್ ನಿಂದ ಆಗುವ ಆರೋಗ್ಯಕಾರಿ ಲಾಭಗಳೇನು ಅನ್ನುವುದರ ಪೂರ್ಣ ಮಾಹಿತಿಗಾಗಿ ಈ ಲೇಖನ ಮುಂದೆ ಓದಿ....

ಹೃದಯದ ಆರೋಗ್ಯಕ್ಕೆ ಉಪಕಾರಿ

ಹೃದಯದ ಆರೋಗ್ಯಕ್ಕೆ ಉಪಕಾರಿ

ಈ ಪ್ರಪಂಚದಲ್ಲಿ ಸಾವಿನ ಸಂಖ್ಯೆಗೆ ಕಾರಣಗಳಲ್ಲಿ ಪ್ರಮುಖವಾದದ್ದು ಹೃದಯದ ಸಮಸ್ಯೆ. ಒಂದು ಅಧ್ಯಯನದ ಪ್ರಕಾರ ಫಿಶ್ ಆಯಿಲ್ ಬಳಕೆ ಮಾಡುವವರಲ್ಲಿ ಹೃದಯದ ಸಮಸ್ಯೆ ಕಾಣಿಸಿಕೊಳ್ಳುವುದು ಬಹಳ ವಿರಳ. ಮೀನಿನ ಎಣ್ಣೆಯಿಂದಾಗಿ ಕೊಲೆಸ್ಟ್ರಾಲ್ ಕಡಿಮೆಯಾಗುತ್ತೆ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತೆ ಮತ್ತು ಹೃದಯಾಘಾತ ಆಗುವ ಸಮಸ್ಯೆ ಕೂಡ ಬಹಳ ಕಡಿಮೆ.

ತೂಕ ಕಡಿಮೆಗೊಳಿಸುತ್ತೆ

ತೂಕ ಕಡಿಮೆಗೊಳಿಸುತ್ತೆ

ಒಬೆಸಿಟಿ ಅನ್ನುವುದೊಂದು ಸಾಯಿಸುವ ಕಾಯಿಲೆ. ನೇರವಾಗಿ ಒಬೆಸಿಟಿಯೇ ಸಾಯಿಸದೆ ಬೇರೆ ಇತರೆ ಕಾಯಿಲೆಗಳಿಗೆ ದೇಹವನ್ನು ಎಳೆದು, ನಂತರ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತೆ ಉದಾಹರಣೆಗೆ ಹೃದಯ ಕಾಯಿಲೆ, ಟೈಪ್ 2 ಡಯಾಬಿಟೀಸ್, ಮತ್ತು ಕ್ಯಾನ್ಸರ್. ಮೀನಿನ ಎಣ್ಣೆ ಬಳಕೆಯಿಂದ ಒಬೆಸಿಟಿಯ ಸಮಸ್ಯೆ ಕಡಿಮೆಗೊಳಿಸಿ ದೇಹತೂಕವನ್ನು ಇಳಿಸುತ್ತೆ., ನೀವು ದಿನದಿಂದ ದಿನಕ್ಕೆ ತೂಕ ಹೆಚ್ಚಿಸಿಕೊಳ್ಳುತ್ತಿದ್ದರೆ ಕೂಡಲೇ ಮೀನಿನ ಎಣ್ಣೆ ಬಳಕೆ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ.

ಕೆಲವು ಮಾನಸಿಕ ಸಮಸ್ಯೆಗಳಿಗೂ ಇದು ಪರಿಹಾರ ನೀಡುತ್ತೆ

ಕೆಲವು ಮಾನಸಿಕ ಸಮಸ್ಯೆಗಳಿಗೂ ಇದು ಪರಿಹಾರ ನೀಡುತ್ತೆ

ಒಮೆಗಾ 3 ಫ್ಯಾಟಿ ಆಸಿಡ್ ಗಳು ನಮ್ಮ ಮೆದುಳಿನ ಕಾರ್ಯಚಟುವಟಿಕೆಗೆ ಸಹಕಾರಿಯಾಗಿದೆ. ಹಾಗಾಗಿ ಕೆಲವು ಮಾನಸಿಕ ಅಂದರೆ ಮೆದುಳಿಗೆ ಸಂಬಂಧಿಸಿದ ಕಾಯಿಲೆಗಳು ಯಾರಿಗಾದರೂ ಇದ್ದಲ್ಲಿ ಫಿಶ್ ಆಯಿಲ್ ಬಳಕೆಯಿಂದಾಗಿ ಅದನ್ನು ನಿಯಂತ್ರಣದಲ್ಲಿ ಬಹುದು. ಸ್ಕಿಝೋಫ್ರೇನಿಯಾ, ಸೈಕೋಟಿಕ್ ಡಿಸಾರ್ಡರ್, ಬೈಪೋಲಾರ್ ಡಿಸಾರ್ಡರ್ ನಿವಾರಣೆಗೆ ಸಹಾಯಕ.

ಕಣ್ಣಿನ ಆರೋಗ್ಯಕ್ಕೆ ಸಹಕಾರಿ

ಕಣ್ಣಿನ ಆರೋಗ್ಯಕ್ಕೆ ಸಹಕಾರಿ

ವಯಸ್ಸಾದಂತೆ ಕಣ್ಣಿಗೆ ಪೊರೆ ಬರುವುದು, ಕಣ್ಣು ಕಾಣಿಸದಂತಾಗುವುದು ಸರ್ವೇ ಸಾಮಾನ್ಯ. ಯಾರಿಗೆ ಒಮೆಗಾ 3 ಫ್ಯಾಟಿ ಆಸಿಡ್ ಗಳು ಸರಿಯಾಗಿ ದೇಹಕ್ಕೆ ಪೂರೈಕೆ ಆಗುವುದಿಲ್ಲವೋ ಅಂತಹವರಿಗೆ ವಯಸ್ಸಾದಂತೆ ಕಣ್ಣಿನ ಸಮಸ್ಯೆ ಕಾಣಿಸಿಕೊಳ್ಳುತ್ತೆ. ಹಾಗಾಗಿ ಮೀನಿನ ಎಣ್ಣೆ ಬಳಕೆ ಮಾಡುವುದರಿಂದ ಕಣ್ಣಿಗೆ ಬೇಕಾಗುವ ಅಗತ್ಯ ಪೋಷಕಾಂಶಗಳು ದೊರೆತು ಕಣ್ಣು ಆರೋಗ್ಯವಾಗಿರುತ್ತೆ.

ಉರಿಯೂತ ಸಮಸ್ಯೆ ನಿವಾರಣೆ

ಉರಿಯೂತ ಸಮಸ್ಯೆ ನಿವಾರಣೆ

ಉರಿಯೂತ ಸಮಸ್ಯೆ ಅಧಿಕಗೊಂಡಂತೆ ಡಿಪ್ರೆಷನ್, ಡಯಾಬಿಟೀಸ್, ಒಬೆಸಿಟಿ ಹೀಗೆ ಹಲವು ಕಾಯಿಲೆಗಳಿಗೆ ಎಳೆಯುತ್ತೆ. ಈ ಕಾಯಿಲೆಗಳೇ ಹಾಗೆ.. ಒಂದಕ್ಕೊಂದು ಕೊಂಡಿ ಇದ್ದಂತೆ. ಒಂದು ಪಡೆದರೆ ಮತ್ತೊಂದು ಉಚಿತ ಎನ್ನುವಂತೆ ದಾಳಿ ಇಟ್ಟು ನಮ್ಮನ್ನು ಕಾಡುತ್ತವೆ. ಆತ್ರೈಟೀಸ್ ಸಮಸ್ಯೆಯನ್ನು ನಿವಾರಿಸಿ ಉರಿಯೂತವನ್ನು ಕಡಿಮೆ ಮಾಡುವ ಶಕ್ತಿ ಮೀನಿನ ಎಣ್ಣೆಗಿದೆ.

ದೈಹಿಕ ಬೆಳವಣಿಗೆಗೆ ಅಗತ್ಯ

ದೈಹಿಕ ಬೆಳವಣಿಗೆಗೆ ಅಗತ್ಯ

ಮಕ್ಕಳ ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆಗೆ ಮೀನಿನ ಎಣ್ಣೆಯಲ್ಲಿರುವ ಒಮೆಗಾ 3 ಫ್ಯಾಟಿ ಆಸಿಡ್ ಸಹಕರಿಸುತ್ತೆ. ಅದೇ ಕಾರಣಕ್ಕೆ ಬಸುರಿ ಹೆಂಗಸರು ಕೂಡ ಇದನ್ನು ಸೇವಿಸಬೇಕು ಎಂದು ಹೇಳಲಾಗುತ್ತೆ. ಮತ್ತು ಎದೆಹಾಲು ಕುಡಿಸುವ

ತಾಯಂದಿರು ಕೂಡ ಮೀನಿನ ಎಣ್ಣೆಯನ್ನು ಬಳಕೆ ಮಾಡುವುದು ಮಕ್ಕಳ ಬೆಳವಣಿಗೆಯ ದೃಷ್ಟಿಯಿಂದ ಬಹಳ ಒಳ್ಳೆಯದು.

ಕ್ಯಾನ್ಸರ್ ಬರದಂತೆ ತಡೆಯುತ್ತೆ

ಕ್ಯಾನ್ಸರ್ ಬರದಂತೆ ತಡೆಯುತ್ತೆ

ಬ್ರಷ್ಟ್ ಕ್ಯಾನ್ಸರ್,ಪ್ರೋಸ್ಟೇಟ್ ಕ್ಯಾನ್ಸರ್ ನಂತ ವಿವಿಧ ಕ್ಯಾನ್ಸರ್ ಸೆಲ್ ಗಳ ನಿವಾರಣೆಗೆ ಫಿಶ್ ಆಯಿಲ್ ಸಹಕರಿಸುತ್ತೆ. ಕ್ಯಾನ್ಸರ್ ಸೆಲ್ ಗಳು ಅಧಿಕಗೊಳ್ಳದಂತೆ ಮೀನಿನ ಎಣ್ಣೆ ತಡೆಯುತ್ತೆ.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತೆ

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತೆ

ರೋಗ ನಿರೋಧಕ ಶಕ್ತಿ ದೇಹದಲ್ಲಿ ಅಧಿಕವಾಗಿದ್ದಾಗ ಕೆಮ್ಮು, ಜ್ವರ, ಶೀತ ಇಂತಹ ಕಾಯಿಲೆಗಳು ಕೂಡಲೇ ಅಟ್ಯಾಕ್ ಆಗುವುದಿಲ್ಲ. ಚರ್ಮದಲ್ಲಿ ರ್ಯಾಷಸ್ ಆಗುವುದು, ಕ್ರಿಮಿಕೀಟಗಳಿಂದಾಗ ಸಣ್ಣಪುಟ್ಟ ಬಾಧೆಗಳು ತಗುಲದಂತೆ ತಡೆಯುತ್ತೆ

ಹೈಪರ್ ಆಕ್ಟೀವಿಟಿಯ ನಿಯಂತ್ರಣ

ಹೈಪರ್ ಆಕ್ಟೀವಿಟಿಯ ನಿಯಂತ್ರಣ

ಮಕ್ಕಳಲ್ಲಿ ಕಾಣಿಸಿಕೊಳ್ಳುವ ಹೈಪರ್ ಆಕ್ಟಿವಿಟಿ, ಡಿಸ್ಲೆಕ್ಸಿಯಾ, ಕಡಿಮೆ ಲಕ್ಷ್ಯ, ಬಹಳ ಬೇಗನೆ ಭಾವುಕರಾಗುವುದು ಇಂತಹ ಸಮಸ್ಯೆಗಳಿದ್ದಲ್ಲಿ ಮೀನಿನ ಎಣ್ಣೆಯನ್ನು ಬಳಕೆ ಮಾಡಿ

ಚರ್ಮದ ಆರೋಗ್ಯಕ್ಕೆ ಸಹಕಾರಿ

ಚರ್ಮದ ಆರೋಗ್ಯಕ್ಕೆ ಸಹಕಾರಿ

ಚರ್ಮ ಕೆಂಪು ಬಣ್ಣಕ್ಕೆ ತಿರುಗುವುದು, ತುರಿಕೆ, ರ್ಯಾಷಸ್ ಆಗುವುದು, ಚರ್ಮದಲ್ಲಿ ಕಜ್ಜಿಗಳು ಕಾಣಿಸಿಕೊಳ್ಳುವುದು ಹೀಗೆ ಚರ್ಮದ ಬೇರೆಬೇರೆ ಕಾಯಿಲೆಗಳಿಗೆ ಮೀನಿನ ಎಣ್ಣೆ ಸಹಕಾರಿ. ಚರ್ಮದ ಕಾಂತಿ ಹೆಚ್ಚಿಸುವುದಕ್ಕೆ ಈ ಎಣ್ಣೆ ಸಹಾಯ ಮಾಡುತ್ತೆ. ಅದೇ ಕಾರಣಕ್ಕೆ ಕೆಲವು ಕ್ರೀಮ್ ಮತ್ತು ಬ್ಯೂಟಿ ಪ್ರೊಡಕ್ಟ್ ಗಳಲ್ಲಿ ಈ ಎಣ್ಣೆಯನ್ನು ಬಳಕೆ ಮಾಡಲಾಗುತ್ತೆ.

English summary

10 Awesome Health Benefits Of Fish Oil

Do you love eating fish on a daily basis? If the answer is yes, then you should know that fish oil is also surprisingly very healthy and tasty. Fish oil is high in omega-3 fatty acids that can ward away many health ailments. What is fish oil, you ask? Well, fish oil is obtained from the tissues of oily fish, especially cold-water fatty fish such as salmon, herring, white fish, sardines and anchovies. Fish oil is made up of 30 percent omega-3 fatty acids and 70 percent of other essential nutrients. Fish oil has numerous health benefits from promoting weight loss to reducing the risk of cancer. So, have a look at the health benefits of fish oil, below.
X
Desktop Bottom Promotion