For Quick Alerts
ALLOW NOTIFICATIONS  
For Daily Alerts

ಮೊಟ್ಟೆಗಳ ಬಗ್ಗೆ ನಮಗೆ ತಿಳಿದೇ ಇರದ ಹತ್ತು ಅದ್ಭುತ ಮಾಹಿತಿಗಳು

|

ಪ್ರೋಟೀನ್ ಭರಿತ, ಪೋಷಕಾಂಶಗಳಿಂದ ಸಮೃದ್ದ, ಅಗ್ಗ ಹಾಗೂ ವರ್ಷದ ಸದಾಕಾಲ ಎಲ್ಲರಿಗೂ ಸುಲಭವಾಗಿ ಲಭಿಸುವ ಹಾಗೂ ಆರೋಗ್ಯವನ್ನು ಉತ್ತಮವಾಗಿರಿಸಿಕೊಳ್ಳಲು ಅಗತ್ಯವಾದ ಆಹಾರವೆಂದರೆ ಮೊಟ್ಟೆ. ಇವು ರುಚಿಕರವಾಗಿರುವ ಜೊತೆಗೇ ಉತ್ತಮ ಪ್ರಮಾಣದ ಬಿ-ವಿಟಮಿನ್ನುಗಳು ಹಾಗೂ ಪ್ರೋಟೀನ್ ಅನ್ನೂ ಹೊಂದಿದೆ. ಇಂದಿನ ಲೇಖನದಲ್ಲಿ ಮೊಟ್ಟೆಗಳ ಬಗ್ಗೆ ನಮಗೆ ಇದುವರೆಗೆ ಗೊತ್ತಿರದೇ ಇರುವ ಪ್ರಮುಖ ಮಾಹಿತಿಗಳನ್ನು ವಿವರಿಸಲಾಗಿದೆ.

ಆರೋಗ್ಯತಜ್ಞರ ಪ್ರಕಾರ ನಿತ್ಯದ ಆರೋಗ್ಯಕರ ಆಹಾರದಲ್ಲಿ ಮೊಟ್ಟೆಯೊಂದು ಒಳಗೊಂಡಿರುವುದು ಅವಶ್ಯವಾಗಿದೆ. ಒಂದು ಅಧ್ಯಯನದಲ್ಲಿ ಕಂಡುಕೊಂಡಂತೆ ಮುಂಜಾನೆಯ ಉಪಾಹಾರ ಸೇವಿಸದೇ ಇರುವ ಅಥವಾ ಕೇವಲ ಏಕದಳ ಧಾನ್ಯ ಆಧಾರಿತ ಅಲ್ಪ ಆಹಾರದ ಸೇವನೆಗಿಂತಲೂ ಮೊಟ್ಟೆಯನ್ನೊಳಗೊಂಡ ಉಪಾಹಾರ ಸೇವಿಸುವ ಮೂಲಕ ಮದ್ಯಾಹ್ನದವರೆಗೂ ಸಕ್ಕರೆಯುಕ್ತ ಅಥವಾ ಕೊಬ್ಬುಯುಕ್ತ ಆಹಾರಗಳ ಸೇವನೆಗೆ ಪ್ರಚೋದನೆ ಪಡೆಯದೇ ಹೋಗಲು ನೆರವಾಗುತ್ತದೆ. ಅಲ್ಲದೇ ಅಮಲಿನಿಂದ ಹೊರಬರಲು ಮೊಟ್ಟೆ ಅತ್ಯುತ್ತಮವಾದ ಆಹಾರವಾಗಿದೆ.

ಮೊಟ್ಟೆಯ ಹಿಂದಿರುವ ಸತ್ಯಾಸತ್ಯತೆ- ಎಲ್ಲವೂ ಹಣ ಮಾಡುವ ಕುತಂತ್ರ!

ಇದರಲ್ಲಿ ಸಮೃದ್ಧವಾಗಿರುವ ಸಿಸ್ಟೀನ್ ಎಂಬ ಅಮೈನೋ ಆಮ್ಲ ಅಮಲಿಗೆ ಕಾರಣವಾದ ಅಸಿಟಾಲ್ಡಿಹೈಡ್ ಎಂಬ ರಾಸಾಯನಿಕವನ್ನು ಒಡೆದು ಸರಳವಾಗಿಸಲು ನೆರವಾಗುವ ಮೂಲಕ ಅಮಲು ಇಲ್ಲದಂತೆ ಮಾಡುತ್ತದೆ. ಅಲ್ಲದೇ ಅಮಲುಪದಾರ್ಥ ಸೇವನೆಯಿಂದ ದೇಹದಲ್ಲಿ ಸಂಗ್ರಹಗೊಂಡಿದ್ದ ಕಲ್ಮಶಗಳನ್ನು ಹೊರಹಾಕಲೂ ಮೊಟ್ಟೆಯಲ್ಲಿರುವ ಪೋಷಕಾಂಶಗಳು ನೆರವಾಗುತ್ತವೆ.

ಅದರಲ್ಲೂ ಸಾವಯವ ವಿಧಾನದಲ್ಲಿ ಬೆಳೆಸಿದ ಕೋಳಿಗಳಿಂದ ಲಭಿಸಿದ ಮೊಟ್ಟೆಗಳಲ್ಲಿ ಯಾವುದೇ ಪ್ರತಿಜೀವಕ, ಕೀಟನಾಶಕ, ರಾಸಾಯನಿಕ ಗೊಬ್ಬರ ಅಥವಾ ರಸದೂತಗಳಿರುವುದಿಲ್ಲ ಎಂದು ಅಮೇರಿಕಾದ USDA National Organic Program Standards ಎಂದ ಸಂಸ್ಥೆಯೇ ತಿಳಿಸಿದೆ. ಬನ್ನಿ, ಮೊಟ್ಟೆಗಳನ್ನು ಸೇವಿಸುವ ಮೂಲಕ ಪಡೆಯಬಹುದಾದ ಹತ್ತು ಪ್ರಮುಖ ಪ್ರಯೋಜನಗಳ ಬಗ್ಗೆ ಅರಿಯೋಣ...

ಮೆದುಳಿನ ಬೆಳವಣಿಗೆಯಲ್ಲಿ ಮೊಟ್ಟೆಯ ಹಳದಿಭಾಗ ನೆರವಾಗುತ್ತದೆ

ಮೆದುಳಿನ ಬೆಳವಣಿಗೆಯಲ್ಲಿ ಮೊಟ್ಟೆಯ ಹಳದಿಭಾಗ ನೆರವಾಗುತ್ತದೆ

ಕೋಲೈನ್ ಎಂಬ ಬಿ-ಕಾಂಪ್ಲೆಕ್ಸ್ ವಿಟಮಿನ್ ಸಮೃದ್ದವಾಗಿರುವ ನೈಸರ್ಗಿಕ ಆಹಾರದಲ್ಲಿ ಮೊಟ್ಟೆಯ ಹಳದಿಭಾಗ ಪ್ರಮುಖವಾಗಿದೆ. ಕೋಲೈನ್ ಮೆದುಳಿನ ಕ್ಷಮತೆಯನ್ನು ಹೆಚ್ಚಿಸುವ ಹಾಗೂ ಉರಿಯೂತವನ್ನು ಕಡಿಮೆ ಮಾಡುವ ಗುಣವನ್ನು ಹೊಂದಿದೆ. ಆಹಾರದ ಮೂಲಕ ಲಭಿಸುವ ಕೋಲೈನ್ ವಿಶೇಷವಾಗಿ ಗರ್ಭದಲ್ಲಿ ಬೆಳೆಯುತ್ತಿರುವ ಮಗುವಿನ ಮೆದುಳಿನ ಬೆಳವಣಿಗೆಗೆ ನೆರವಾಗುತ್ತದೆ ಹಾಗೂ ಇದೇ ಕಾರಣಕ್ಕೆ ಗರ್ಭವತಿಯರು ಹೆಚ್ಚು ಹೆಚ್ಚಾಗಿ ಮೊಟ್ಟೆಗಳನ್ನು ಸೇವಿಸಲು ಸಲಹೆ ಮಾಡಲಾಗುತ್ತದೆ. ಈ ಕೋಲೈನ್ ಜೀರ್ಣಕ್ರಿಯೆಯಲ್ಲಿ ಒಡೆದು ಬೀಥೇನ್ ಎಂಬ ರಾಸಾಯನಿಕವಾಗಿ ಮಾರ್ಪಾಡಾಗುತ್ತದೆ ಹಾಗೂ ಬಳಿಕ ಇದು ಸೆರೋಟೋನಿನ್, ಡೋಪಮೈನ್ ಹಾಗೂ ನೋರಿಫೈನೆಫ್ರಿನ್ ಎಂಬ ರಸದೂತಗಳನ್ನು ಉತ್ಪಾದಿಸುತ್ತದೆ. ಇವೆಲ್ಲವೂ ಮೆದುಳಿಗೆ ಮುದನೀಡುವ ರಸದೂತಗಳಾಗಿದ್ದು ಸಂತೋಷದ ಭಾವನೆಯನ್ನು ಹೆಚ್ಚಿಸುತ್ತವೆ.

ಪ್ರೋಟೀನ್ ಅಗತ್ಯತೆಯನ್ನು ಪೂರೈಸುವ ಪರಿಪೂರ್ಣ ಆಹಾರ

ಪ್ರೋಟೀನ್ ಅಗತ್ಯತೆಯನ್ನು ಪೂರೈಸುವ ಪರಿಪೂರ್ಣ ಆಹಾರ

ಪ್ರೋಟೀನ್ ಗುಣಮಟ್ಟ ಹಾಗೂ ಸಮೃದ್ದತೆಯನ್ನು ಪರಿಗಣಿಸಿದರೆ ಪ್ರೋಟೀನ್ ಯುಕ್ತ ಆಹಾರಗಳಲ್ಲಿಯೇ ಮೊಟ್ಟೆ ಅಗ್ರಸ್ಥಾನ ಪಡೆಯುತ್ತದೆ. ಏಕೆಂದರೆ ಮೊಟ್ಟೆಯಲ್ಲಿರುವ ಪ್ರೋಟೀನ್ ಗಳು ನಮ್ಮ ದೇಹದಲ್ಲಿ ಅತಿ ಸುಲಭವಾಗಿ ಜೀರ್ಣಿಸಲ್ಪಡುತ್ತವೆ ಹಾಗೂ ಶೀಘ್ರವಾಗಿ ಮತ್ತು ಪೂರ್ಣಪ್ರಮಾಣದಲ್ಲಿ ಉಪಯೋಗಿಸಲ್ಪಡುತ್ತವೆ. ಉತ್ತಮ ಗುಣಮಟ್ಟದ ಪ್ರೋಟೀನ್ ಮಾತ್ರವಲ್ಲ, ಇದರಲ್ಲಿ ಸಮೃದ್ದ ಪ್ರಮಾಣದ ಆಂಟಿ ಆಕ್ಸಿಡೆಂಟುಗಳು, ವಿಟಮಿನ್ ಎ, ಬಿ೧೨, ರೈಬೋಫ್ಲೇವಿನ್, ಗಂಧಕ ಹಾಗೂ ಕೋಲೈನ್ ಗಳೂ ಇವೆ. ಒಂದು ಬೇಯಿಸಿದ ಮೊಟ್ಟೆಯಲ್ಲಿ ಆರು ಗ್ರಾಂ ಪ್ರೋಟೀನ್ ಇದೆ ಹಾಗೂ ಇದು ಮಹಿಳೆಯರ ದೈನಂದಿನ ಅಗತ್ಯದ 14% ಹಾಗೂ ಪುರುಷರ ದೈನಂದಿನ ಅಗತ್ಯದ 11% ದಷ್ಟನ್ನು ಪೂರೈಸುತ್ತದೆ.

ತೂಕ ಇಳಿಸುವವರಿಗೆ ಸೂಕ್ತ ಆಯ್ಕೆ

ತೂಕ ಇಳಿಸುವವರಿಗೆ ಸೂಕ್ತ ಆಯ್ಕೆ

ನಿತ್ಯದ ಆಹಾರದಲ್ಲಿ ಮೊಟ್ಟೆಗಳನ್ನು ಸೇವಿಸುವ ಮೂಲಕ ನಿಮ್ಮ ದೇಹದ ತೂಕವನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ. ಹೇಗೆಂದು ಗೊತ್ತೇ? ಮೊಟ್ಟೆಯಲ್ಲಿರುವ ಪ್ರೋಟೀನುಗಳು ಆಹಾರಸೇವನೆಯ ಬಳಿಕ ಹೆಚ್ಚಿನ ಹೊತ್ತು ಹೊಟ್ಟೆ ತುಂಬಿರುವ ಭಾವನೆ ಮೂಡಿಸಲು ನೆರವಾಗ್ತುತದೆ ಹಾಗೂ ಅನಗತ್ಯ ಆಹಾರಸೇವನೆಯಿಂದ ತಡೆಯುತ್ತದೆ. ಅಲ್ಲದೇ ದೇಹದ ತೂಕದಲ್ಲಿ ಸ್ನಾಯುಗಳ ತೂಕವನ್ನು ಉತ್ತಮ ಮಟ್ಟದಲ್ಲಿ ಉಳಿಸಿಕೊಳ್ಳಲು ನೆರವಾಗುತ್ತವೆ. ಒಂದು ದೊಡ್ಡ ಗಾತ್ರದ ಮೊಟ್ಟೆಯಲ್ಲಿ ಸುಮಾರು ಎಪ್ಪತ್ತು ಕ್ಯಾಲೋರಿಗಳು ಮತ್ತು ಆರು ಗ್ರಾಂ ಪ್ರೋಟೀನ್ ಇದ್ದು ಇದೊಂದು ಕಡಿಮೆ ಕ್ಯಾಲೋರಿಯುಕ್ತ ಆಹಾರವೆಂದು ಪರಿಗಣಿಸಲ್ಪಡುತ್ತದೆ ಹಾಗೂ ಇದು ತೂಕ ಇಳಿಸುವವರಿಗೆ ಸೂಕ್ತವಾದ ಆಹಾರವಾಗಿದೆ.

ದೇಹದಾರ್ಢ್ಯ ಹೆಚ್ಚಿಸಲು ಸೂಕ್ತ ಆಹಾರ

ದೇಹದಾರ್ಢ್ಯ ಹೆಚ್ಚಿಸಲು ಸೂಕ್ತ ಆಹಾರ

ನಿತ್ಯ ವ್ಯಾಯಾಮ ಮಾಡುವ ವ್ಯಕ್ತಿಗಳಿಗೆ, ವ್ಯಾಯಾಮದ ಬಳಿಕ ಹೆಚ್ಚಿನ ಪ್ರೋಟೀನ್ ನ ಅಗತ್ಯವಿರುತ್ತದೆ. ಏಕೆಂದರೆ ವ್ಯಾಯಾಮದ ಬಳಿಕ ಶಿಥಿಲವಾದ ಸ್ನಾಯುಗಳ ರಿಪೇರಿ ಹಾಗೂ ಹೊಸ ಸ್ನಾಯುಗಳ ಅಂಗಾಂಶದ ಬೆಳವಣಿಗೆಗೆ ಪ್ರೋಟೀನ್ ಅಗತ್ಯವಿರುತ್ತದೆ. ಸ್ನಾಯುಗಳ ಬೆಳವಣಿಗೆಗೆ ಸೂಕ್ತವಾದ ಅಮೈನೋ ಆಮ್ಲಗಳು ಅಗತ್ಯವಾಗಿದ್ದು ಪ್ರೋಟೀನ್ ಈ ಅಗತ್ಯತೆಯನ್ನು ಪೂರೈಸುತ್ತದೆ. ಈ ವ್ಯಕ್ತಿಗಳ ಪ್ರತಿ ಹೊತ್ತಿನ ಆಹಾರ ಮತ್ತು ಉಪಾಹಾರದಲ್ಲಿ, ವಿಶೇಷವಾಗಿ ವ್ಯಾಯಾಮದ ಬಳಿಕ ಸೇವಿಸುವ ಅಹಾರದಲ್ಲಿ ಮೊಟ್ಟೆಗಳು ಅಗತ್ಯವಾಗಿ ಇರಬೇಕಾಗುತ್ತದೆ. ತಾಜಾ ಹಣ್ಣು ತರಕಾರಿಗಳಿಗಳ ಜೊತೆಗೆ ಬೇಯಿಸಿದ ಮೊಟ್ಟೆಗಳನ್ನು ಆಹಾರದಲ್ಲಿ ಅಳವಡಿಸುವುದು ಉತ್ತಮ.

ವಿಟಮಿನ್ ಡಿ ಸಮೃದ್ಧವಾಗಿರುವ ಆಹಾರಮೂಲ

ವಿಟಮಿನ್ ಡಿ ಸಮೃದ್ಧವಾಗಿರುವ ಆಹಾರಮೂಲ

ನಮ್ಮ ದೇಹದಲ್ಲಿ ವಿಟಮಿನ್ ಡಿ ಉತ್ಪತ್ತಿಯಾಗಲು ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದು ಅಗತ್ಯವಾಗಿದ್ದು ಈ ಸಮಯದಲ್ಲಿ ನಾವು ಸೇವಿಸುವ ಆಹಾರಗಳು ಪ್ರಮುಖ ಪಾತ್ರ ವಹಿಸುತ್ತವೆ. ಮೊಟ್ಟೆಗಳಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಡಿ ಇದ್ದು ಮೊಟ್ಟೆಗಳನ್ನು ಆಹಾರದಲ್ಲಿ ಸೇವಿಸಿದ ಬಳಿಕ ಸೂರ್ಯನ ಬೆಳಕಿನಲ್ಲಿ ಅಡ್ಡಾಡುವ ಮೂಲಕ ದೇಹದ ಅಗತ್ಯದ ವಿಟಮಿನ್ ಡಿ ಪಡೆಯಲು ಸಾಧ್ಯವಾಗುತ್ತದೆ. ಒಂದು ವೇಳೆ ನಿಮಗೆ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದು ಸಾಧ್ಯವಾಗದೇ ಹೋದರೂ ಮೊಟ್ಟೆಯಲ್ಲಿರುವ ನೈಸರ್ಗಿಕ ವಿಟಮಿನ್ ಡಿ ದೇಹದಲ್ಲಿ ಈ ಪೋಷಕಾಂಶದ ಕೊರತೆಯಾಗದಂತೆ ನೋಡಿಕೊಳ್ಳುತ್ತದೆ. ಒಂದು ಮೊಟ್ಟೆಯ ಹಳದಿ ಭಾಗದಲ್ಲಿ ವಿಟಮಿನ್ ಡಿ ಯ ಅಂತಾರಾಷ್ಟ್ರೀಯ ಮಟ್ಟದ 41 ಅಂಶದಷ್ಟಿದ್ದು ಪ್ರತಿದಿನದ ಅಗತ್ಯದ ಹತ್ತು ಶೇಖಡಾದಷ್ಟು ಪೋಷಕಾಂಶವನ್ನು ಒದಗಿಸುತ್ತದೆ.

ಮೊಟ್ಟೆಯ ಬಣ್ಣ ಪೋಷಕಾಂಶಗಳನ್ನು ನಿರ್ಧರಿಸುವುದಿಲ್ಲ

ಮೊಟ್ಟೆಯ ಬಣ್ಣ ಪೋಷಕಾಂಶಗಳನ್ನು ನಿರ್ಧರಿಸುವುದಿಲ್ಲ

ಕೆಲವರು ಕಂದು ಮೊಟ್ಟೆಗಳಲ್ಲಿ ಹೆಚ್ಚಿನ ಪೋಷಕಾಂಶಗಳಿದ್ದು ಹೆಚ್ಚು ಆರೋಗ್ಯಕರ ಎಂಬ ಅಭಿಪ್ರಾಯ ಹೊಂದಿರುತ್ತಾರೆ. ಆದರೆ, ಮೊಟ್ಟೆಯ ಬಣ್ಣಕ್ಕೂ ಮೊಟ್ಟೆಯ ಗುಣಮಟ್ಟಕ್ಕೂ ಯಾವುದೇ ಸಂಬಂಧವಿಲ್ಲ. ಮೊಟ್ಟೆಯ ಹಳದಿ ಭಾಗ ಕೋಳಿಗೆ ತಿನಿಸಿದ ಆಹಾರವನ್ನು ಅವಲಂಬಿಸಿದ್ದರೂ ಮೊಟ್ಟೆಯಲ್ಲಿರುವ ಪೋಷಕಾಂಶಗಳ ಮೇಲೆ ಅಪಾರವಾದ ಪರಿಣಾಮವನ್ನೇನೂ ಉಂಟುಮಾಡುವುದಿಲ್ಲ. ಆದರೆ ವಿಟಮಿನ್ ಎ ಮತ್ತು ಲ್ಯೂಟಿನ್ ಎಂಬ ಪೋಷಕಾಂಶಗಳ ಪ್ರಮಾಣದಲ್ಲಿ ಕೊಂಚ ಮಾತ್ರವೇ ವ್ಯತ್ಯಾಸ ಕಂಡುಬರಬಹುದು. ಆದರೆ ಮೊಟ್ಟೆಯ ಬಣ್ಣಕ್ಕೂ ಹೊರತಾಗಿ ಮೊಟ್ಟೆಯ ಹಳದಿ ಭಾಗದಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ನುಗಳು ಹಾಗೂ ಮೊಟ್ಟೆಯ ಬಿಳಿಭಾಗದಲ್ಲಿ ಉತ್ತಮ ಪ್ರಮಾಣದ ರೈಬೋಫ್ಲೇವಿನ್ ಮತ್ತು ಪ್ರೋಟೀನ್ ಇವೆ.

ತಾಜಾ ಮೊಟ್ಟೆಗಳೇ ಅತ್ಯುತ್ತಮ

ತಾಜಾ ಮೊಟ್ಟೆಗಳೇ ಅತ್ಯುತ್ತಮ

ಉತ್ಪಾದನಾ ದಿನಾಂಕದಿಂದ ಮೂರು ವಾರಗಳ ಒಳಗೆ, ಸೂಕ್ತ ತಾಪಮಾನದಲ್ಲಿ ಫ್ರಿಜ್ಜಿನಲ್ಲಿ ಸಂಗ್ರಹಿಸಿಟ್ಟ ಮೊಟ್ಟೆಗಳೇ ಸೇವನೆಗೆ ಅತ್ಯುತ್ತಮವಾಗಿವೆ. ಸಾಮಾನ್ಯ ತಾಪಮಾನದಲ್ಲಿ ಮೊಟ್ಟೆಗಳು ಶೀಘ್ರವಾಗಿ ಬಲಿಯತೊಡಗುತ್ತವೆ ಹಾಗೂ ಇದೇ ಕಾರಣಕ್ಕೆ ಹೆಚ್ಚು ದಿನಗಳವರೆಗೆ ಮೊಟ್ಟೆಗಳನ್ನು ಸಂಗ್ರಹಿಸಿಡಬಾರದು. ಆದ್ದರಿಂದ ಮೊಟ್ಟೆಗಳನ್ನು ಆದಷ್ಟೂ ಉತ್ಪಾದನಾ ದಿನಗಳಿಗೆ ಮೂರು ವಾರದ ಒಳಗೇ ಸೇವಿಸಬೇಕು ಹಾಗೂ ಮೊಟ್ಟೆಗಳನ್ನು ಸೇವಿಸುವಾಗ ಕೈಗಳ ಮತ್ತು ಪಾತ್ರೆಗಳ ಸ್ವಚ್ಛತೆಗೆ

ಆದ್ಯತೆ ನೀಡಬೇಕಾಗುತ್ತದೆ.

ಮೊಟ್ಟೆಯಲ್ಲಿರುವ ಕೊಬ್ಬಿನ ಪ್ರಮಾಣ

ಮೊಟ್ಟೆಯಲ್ಲಿರುವ ಕೊಬ್ಬಿನ ಪ್ರಮಾಣ

ಒಂದು ಸಾಮಾನ್ಯ ಗಾತ್ರದ ಮೊಟ್ಟೆಯಲ್ಲಿ ಒಂದೂವರೆ ಗ್ರಾಂ ಸಂತುಲಿತ ಕೊಬ್ಬು, ಒಂದು ಗ್ರಾಂ ಅಸಂತುಲಿತ ಕೊಬ್ಬು ಹಾಗೂ 1.8 ಗ್ರಾಂ ಏಕಕಾಲಿನ ಅಸಂತುಲಿತ ಕೊಬ್ಬು ಇರುತ್ತದೆ. ಕೆಲವು ಮೊಟ್ಟೆಗಳಲ್ಲಿ ಒಮೆಗಾ 3 ಕೊಬ್ಬಿನ ಆಮ್ಲಗಳೂ ಇರುತ್ತವೆ, ಏಕೆಂದರೆ ಈ ಮೊಟ್ಟೆಯನ್ನಿಡುವ ಕೋಳಿಗಳಿಗೆ ಅಗಸೆ ಬೀಜಗಳನ್ನು ಸೇರಿಸಿದ ಆಹಾರವನ್ನು ತಿನ್ನಿಸಲಾಗಿರುತ್ತದೆ. ಈ ಕೋಳಿಗಳು ಅಗಸೆ ಬೀಜಗಳನ್ನು ಜೀರ್ಣಿಸಿಕೊಳ್ಳುವಾಗ ಕೆಲವು ALA ಗಳು DHA(Dihydroxyacetone) ಗಳನ್ನಾಗಿ ಒಡೆಯಲ್ಪಡುತ್ತವೆ ಹಾಗೂ ಇವೆರಡೂ ಕೊಬ್ಬಿನ ಆಮ್ಲಗಳು ಮೊಟ್ಟೆಯ ಹಳದಿ ಭಾಗದಲ್ಲಿ ಸಂಗ್ರಹಿಸಲ್ಪಡುತ್ತವೆ.

ಸಂತುಲಿತ ಆಹಾರವೇ ಆರೋಗ್ಯದ ಕೀಲಿಕೈ

ಸಂತುಲಿತ ಆಹಾರವೇ ಆರೋಗ್ಯದ ಕೀಲಿಕೈ

ಎಲ್ಲಾ ಪೋಷಕಾಂಶಗಳನ್ನು ಸಂತುಲಿತ ಪ್ರಮಾಣದಲ್ಲಿ ಸೇವಿಸುವ ಮೂಲಕ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಮೊಟ್ಟೆಗಳ ಹೊರತಾಗಿ ಇತರ ಪ್ರೋಟೀನ್ ಯುಕ್ತ ಆಹಾರಗಳಾದ ಮೀನು ಮತ್ತು ಧಾನ್ಯಗಳನ್ನೂ ನಿತ್ಯದ ಅಹಾರದಲ್ಲಿ ಸೇವಿಸಬೇಕು. ಇದರಲ್ಲಿ ಇಡಿಯ ಧಾನ್ಯಗಳು, ಹಸಿರು ತರಕಾರಿಗಳು, ಹಣ್ಣುಗಳು, ಕ್ಯಾಲ್ಸಿಯಂ-ಸಮೃದ್ದ ಆಹಾರಗಳು ಮತ್ತು ಆರೋಗ್ಯಕರ ಕೊಬ್ಬು ಇರುವ ಆಹಾರಗಳಾದ ಒಣಫಲ ಮತ್ತು ಬೀಜಗಳನ್ನೂ ಒಳಗೊಳ್ಳುವ ಮೂಲಕ ಕಾರ್ಬೋಹೈಡ್ರೇಟುಗಳು

ಮತ್ತು ಕೊಬ್ಬಿನ ಸಂತುಲಿತ ಪ್ರಮಾಣ ಹೊಂದಿರುವ ಆಹಾರ ಸೇವನೆಯೇ ಉತ್ತಮ ಆರೋಗ್ಯಕ್ಕೆ ಕೀಲಿಕೈ ಯಾಗಿದೆ.

 ಮೊಟ್ಟೆಯ ಕವಚ ದೃಢವಾಗಿದ್ದಷ್ಟೂ ಎಳೆಯ ಕೋಳಿ ಎಂದರ್ಥ

ಮೊಟ್ಟೆಯ ಕವಚ ದೃಢವಾಗಿದ್ದಷ್ಟೂ ಎಳೆಯ ಕೋಳಿ ಎಂದರ್ಥ

ಕಂದು ಮೊಟ್ಟೆಯ ಕವಚ ಹೆಚ್ಚು ದಪ್ಪ ಎಂದು ಹೆಚ್ಚಿನವರು ಭಾವಿಸಿದ್ದಾರೆ. ವಾಸ್ತವವಾಗಿ ಕೋಳಿ ಮೊಟ್ಟೆ ಇಡುವ ಪ್ರಾರಂಭದಲ್ಲಿ ಕವಚ ಹೆಚ್ಚು ದಪ್ಪ ಮತ್ತು ಗಡಸಾಗಿದ್ದು ವಯಸ್ಸಾದಂತೆ ಇದು ತೆಳು ಮತ್ತು ಕಡಿಮೆ ಗಡಸುತನ ಹೊಂದುತ್ತಾ ಹೋಗುತ್ತದೆ.

English summary

10 Amazing Facts You Didn't Know About Eggs

Eggs are a protein-packed, nutrient-rich and affordable breakfast food options that aid in keeping you fit and healthy. They are a delicious way to get a good dose of B vitamins, nutrients and protein. In this article, you will learn about the amazing facts you didn't know about eggs. Health experts have suggested that a diet which includes eggs is considered a healthy diet. A study also found that a breakfast consisting of eggs, when compared to cereal or no breakfast at all, helped people in having reduced cravings for sugary and fatty foods. Let's have a look at the 10 things you didn't know about eggs.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more