ನೋಡಿ ಇದೇ ಕಾರಣಕ್ಕೆ ಗ್ರಹಣದ ಸಮಯದಲ್ಲಿ ಆಹಾರ ಸೇವಿಸಲೇಬಾರದು...

By: Divya
Subscribe to Boldsky

ಭಾರತ ಎಂದರೆ ನೂರಾರು ಸಂಪ್ರದಾಯಗಳ ಪವಿತ್ರ ಭೂಮಿ. ಇಲ್ಲಿ ಹಲವಾರು ಆಚರಣೆ ಹಾಗೂ ನಂಬಿಕೆಗಳಿಗೆ ಹೆಚ್ಚಿನ ಮಹತ್ವ ನೀಡಲಾಗುವುದು. ವಿಭಿನ್ನ ಬಗೆಯ ಧರ್ಮ, ಜಾತಿ, ಪಂಗಡ ಹಾಗೂ ಉಪಜಾತಿಗಳನ್ನು ಹೊಂದಿರುವುದರಿಂದ ವಿವಿಧ ಬಗೆಯಲ್ಲಿ ಧಾರ್ಮಿಕ ಆಚರಣೆಗಳು ನಡೆಯುವುದನ್ನು ಗಮನಿಸಬಹುದು.

ಆದರೆ ಕೆಲವೊಂದು ನಂಬಿಕೆಗಳಿಗೆ ಎಲ್ಲಾ ವರ್ಗದವರೂ ಒಂದೇ ಬಗೆಯ ನಿಲುವನ್ನು ಹೊಂದಿರುತ್ತಾರೆ. ಅದೇ ಇಲ್ಲಿಯ ವಿಶೇಷ. ಅಂತಹ ಒಂದು ವಿಚಾರಗಳಲ್ಲಿ "ಗ್ರಹಣದ ಸಮಯದಲ್ಲಿ ಆಹಾರವನ್ನು ಸೇವಿಸಬಾರದು" ಎನ್ನುವುದು ಒಂದು. ವಿವಿಧ ಜನಾಂಗದವರು ಹಲವು ಬಗೆಯ ಆಚರಣೆ ಮತ್ತು ನಂಬಿಕೆ ಇಟ್ಟುಕೊಂಡಿದ್ದರೂ ಪ್ರತಿಯೊಂದು ಪದ್ಧತಿಯ ಹಿಂದೆಯೂ ವ್ಯಕ್ತಿಯ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಸಂಬಂಧಿಸಿರುವುದಾಗಿದೆ.

Eclipse

ಕೆಲವು ನಂಬಿಕೆಗಳಿಗೆ ಉದಾರಹಣೆ ನೀಡ ಬೇಕೆಂದರೆ..."ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆಗೆ ಸ್ವರ್ಗದಲ್ಲಿ ಸ್ಥಾನವಿದೆ ಎನ್ನುವುದು", "ಮಹಿಳೆಯರಿಗೆ ಪ್ರತಿ ತಿಂಗಳ ಋತುಚಕ್ರದ 3ನೇ ದಿನ ತಲೆ ಸ್ನಾನ ಮಾಡಬೇಕು. ಋತುಚಕ್ರದ ಸಮಯದಲ್ಲಿ ಮಹಿಳೆಯರ ದೇಹದಿಂದ ಹೆಚ್ಚು ಸಕ್ಕರೆ ಹಾಗೂ ಎಣ್ಣೆಅಂಶವು ದೇಹದಿಂದ ಹೊರ ಸೂಸುತ್ತದೆ. ಈ ಸಮಯದಲ್ಲಿ ಮೂರನೇ ದಿನ ಸ್ನಾನ ಮಾಡುವುದು ಆರೋಗ್ಯಕರ ಅಭ್ಯಾಸ ಎಂದು ಪರಿಗಣಿಸಲಾಗುವುದು." 

ಸೂರ್ಯಗ್ರಹಣ ನೋಡುವ ಮೊದಲು ಈ ಮುನ್ನೆಚ್ಚರಿಕೆಗಳನ್ನು ವಹಿಸಿ

ಹೀಗೆಯೇ ನೈಸರ್ಗಿಕ ವಿದ್ಯಮಾನಗಳ ವಿಚಾರಕ್ಕೆ ಬಂದರೆ ಗ್ರಹಣಗಳ ವಿಚಾರದಲ್ಲೂ ಭಾರತೀಯರು ಕೆಲವು ನಂಬಿಕೆಯನ್ನು ಹೊಂದಿದ್ದಾರೆ. ಗ್ರಹಣದ ಸಮಯದಲ್ಲಿ ಹೊರಗಡೆ ಬರಬಾರದು, ಊಟ-ತಿಂಡಿಗಳನ್ನು ಸೇವಿಸಬಾರದು. ಹೀಗೆ ಮಾಡಿದರೆ ವಿಪತ್ತು ಹಾಗೂ ಅನಾರೋಗ್ಯ ಉಂಟಾಗುವುದು ಎಂದು ಹೇಳಲಾಗುತ್ತದೆ. ಇಂತಹ ನಂಬಿಕೆಗಳ ಹಿನ್ನೆಲೆಯೇನು? ಏಕೆ ಈ ಆಚರಣೆಯನ್ನು ಮಾಡಬೇಕು ಎನ್ನುವುದನ್ನು ತಿಳಿಯೋಣ ಬನ್ನಿ...

eating dinner

ಕಾರಣ -1

ಚಂದ್ರನು ಸೂರ್ಯ ಮತ್ತು ಭೂಮಿಯ ನಡುವೆ ಬಂದಾಗ ಭೂಮಿಗೆ ಸೂರ್ಯನು ಕಾಣಿಸಿಕೊಳ್ಳುವುದಿಲ್ಲ ಅಥವಾ ಅಸ್ಪಷ್ಟಗೊಳ್ಳುತ್ತದೆ. ಆ ಸಂದರ್ಭವನ್ನೇ ಸೂರ್ಯಗ್ರಹಣ ಎಂದು ಕರೆಯಲಾಗುತ್ತದೆ. ಖಗೋಳಶಾಸ್ತ್ರಜ್ಞರು ಹಾಗೂ ವಿಜ್ಞಾನಿಗಳು ಹೇಳುವ ಪ್ರಕಾರ ಗ್ರಹಣದ ಸಮಯದಲ್ಲಿ ಕೆಲವು ವಿಕಿರಣಗಳು ಭೂಮಿಯನ್ನು ತಲುಪುತ್ತವೆ. ಇವು ಆಹಾರದಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಾಗಳನ್ನು ವೇಗವಾಗಿ ಹೆಚ್ಚುವಂತೆ ಮಾಡುತ್ತವೆ. ಅಂತಹ ಆಹಾರವನ್ನು ಸೇವಿಸುವುದರಿಂದ ದೈಹಿಕ ಆರೋಗ್ಯ ಹಾಳಾಗುವುದು ಎನ್ನುವ ಉದ್ದೇಶದಿಂದ, ಗ್ರಹಣದ ಸಂದರ್ಭದಲ್ಲಿ ಆಹಾರವನ್ನು ಸೇವಿಸಬಾರದು ಎನ್ನುವ ಆಚರಣೆಯನ್ನು ತರಲಾಯಿತು.

Stomach pain

ಕಾರಣ-2

ಗ್ರಹಣದ ಸಮಯದಲ್ಲಿ ಆಹಾರದ ಮೇಲೆ ವಿಕಿರಣಗಳು ಕೆಟ್ಟ ಪರಿಣಾಮವನ್ನು ಬೀರುತ್ತವೆ. ಇಂತಹ ಅಶುದ್ಧವಾದ ಆಹಾರವನ್ನು ಸೇವಿಸಿದರೆ ಜೀರ್ಣಕ್ರಿಯೆಯ ಮೇಲೆ ಮಹತ್ತರವಾದ ಪರಿಣಾಮ ಬೀರುವುದು ಎನ್ನಲಾಗುವುದು. ಈ ವಿಚಾರದ ಕುರಿತು ಹಲವಾರು ಸಂಶೋಧನೆ ಹಾಗೂ ಅಧ್ಯಯನಗಳನ್ನು ನಡೆಸಲಾಗಿದೆ. ಇವು ಹೇಳುವ ಪ್ರಕಾರ "ಗ್ರಹಣದಿಂದ ನೇರವಾಗಿ ಬೀಳುವ ವಿಕರಣಗಳು ಆಹಾರದ ಮೇಲೆ ಬಿದ್ದಾಗ ಅದು ವಿಷಕಾರಿ ಆಹಾರವಾಗಿರುತ್ತದೆ". ಇವುಗಳನ್ನು ಸೇವಿಸಿದರೆ ಅನಾರೋಗ್ಯ ಉಂಟಾಗುವುದು ಎನ್ನುತ್ತಾರೆ. ಅದಕ್ಕಾಗಿಯೇ ಅನೇಕ ಭಾರತೀಯರು ಗ್ರಹಣದ ಸಮಯದಲ್ಲಿ ಆಹಾರವನ್ನು ಸೇವಿಸುವುದಿಲ್ಲ.

English summary

Why Indians Do Not Consume Food During An Eclipse

As it is rightly termed, the "subcontinent", India is a country which houses a whole array of different cultural backgrounds, religions, castes and sub-castes, so one can imagine how many traditions are born out of all these different cultural backgrounds.
Subscribe Newsletter