ಏನೇ ಕಸರತ್ತು ಮಾಡಿದರೂ, ಬೊಜ್ಜು ಕರಗುತ್ತಿಲ್ಲ! ಯಾಕೆ ಹೀಗೆ?

By: Arshad
Subscribe to Boldsky

ಸಾಮಾನ್ಯವಾಗಿ ಸ್ಥೂಲಕಾಯದಲ್ಲದವರಿಗೂ ಕಾಡುವ ಚಿಂತೆ ಎಂದರೆ ಸೊಂಟದಲ್ಲಿ ತುಂಬಿಕೊಂಡಿರುವ ಕೊಬ್ಬು. ಮಹಿಳೆಯರಂತೂ "ಇಸ್ ಕಮರೇ ಕೋ ಕಮರ್ ಕೈಸೇ ಬನಾಯೇಂ (ಕೋಣೆಯಂತಿರುವ ಈ ಸೊಂಟವನ್ನು ಬಳುಕಿಸುವಂತೆ ಮಾಡುವುದು ಹೇಗಪ್ಪಾ) ಎಂದು ಅವಲತ್ತುಕೊಳ್ಳುತ್ತಾರೆ. ಹೊಟ್ಟೆಯ ಬೊಜ್ಜನ್ನು ಕರಗಿಸಲು ಪರಿಣಾಮಕಾರಿ ಟಿಪ್ಸ್

ಎಷ್ಟೇ ವ್ಯಾಯಾಮ, ನಡಿಗೆ ಮಾಡಿದರೂ ಬೇರೆಲ್ಲಾ ಕಡೆಯಿಂದ ಕೊಬ್ಬು ಕಡಿಮೆಯಾದರೂ ಸೊಂಟದ ಸುತ್ತಳತೆ ಮಾತ್ರ ಕಡಿಮೆಯಾಗುವುದೇ ಇಲ್ಲ. ಏಕೆಂದರೆ ಈ ಕೊಬ್ಬಿನ ಹಿಂದೆ ಹಲವಾರು ಕಾರಣಗಳಿವೆ. ಈ ಸರಳ ಟಿಪ್ಸ್ ಪಾಲಿಸಿದರೆ ಖಂಡಿತ ಬೊಜ್ಜು ಬೆಳೆಯಲ್ಲ 

ಇದು ಅನುವಂಶಿಕವಾಗಿ ಬಂದಿರುವುದು ಎಂದು ಹೆಚ್ಚಿನವರು ಅನುಮಾನಿಸುತ್ತಾರೆ. ಆದರೆ ಈ ಕೊಬ್ಬಿಗೆ ನಿಜವಾದ ಕಾರಣವನ್ನು ಕಂಡುಕೊಂಡ ಬಳಿಕ ಇದನ್ನು ಕಡಿಮೆಗೊಳಿಸಲು ನಿಮಗೆ ಸರಿಯಾದ ಮಾರ್ಗ ಕಂಡುಬರಬಹುದು.....   

ನಿಮ್ಮ ಶಾರೀರ

ನಿಮ್ಮ ಶಾರೀರ

ನಿಮ್ಮ ಶರೀರ ಯಾವ ಬಗೆಯದ್ದು ಅಥವಾ ನಿಮ್ಮ ಶಾರೀರ ಎಂತಹದ್ದು ಎಂಬುದನ್ನು ಮೊದಲು ಕಂಡುಕೊಳ್ಳಬೇಕು. ಇದಕ್ಕೆ ತಕ್ಕನಾದ ನಮ್ಮ ಆಹಾರಕ್ರಮ ಇದೆಯೇ ಎಂದು ಮೊದಲು ಕಂಡುಕೊಳ್ಳಿ. ನಿಮ್ಮ ಎತ್ತರ ಮತ್ತು ತೂಕವನ್ನು ಅನುಸರಿಸಿ ಬಿಎಂಐ ಎಂಬ ಕೋಷ್ಟಕವಿದ್ದು ಇದರ ಪ್ರಕಾರ ನಿಮ್ಮ ತೂಕ ಇದೆಯೇ ಕಂಡುಕೊಳ್ಳಿ. ಆದರೆ ಹೆಚ್ಚಿನವರು ತಮ್ಮ ಶಾರೀರಕ್ಕೂ ಹೆಚ್ಚಿನ ಪ್ರಮಾಣದ ಆಹಾರ ಸೇವನೆ ಮಾಡುತ್ತಾರೆ. ಇದರ ಪರಿಣಾಮವೇ ಸೊಂಟದ ಕೊಬ್ಬು.

ನಿಮ್ಮ ಶಾರೀರಕ್ಕೆ ಸೂಕ್ತವಾದ ವ್ಯಾಯಾಮ

ನಿಮ್ಮ ಶಾರೀರಕ್ಕೆ ಸೂಕ್ತವಾದ ವ್ಯಾಯಾಮ

ವ್ಯಾಯಾಮಗಳಲ್ಲಿಯೂ ಹಲವು ವಿಧಗಳಿದ್ದು ಇವುಗಳಲ್ಲಿ ಎಲ್ಲವೂ ಎಲ್ಲಾ ವಿಧದ ಶರೀರದ ವ್ಯಕ್ತಿಗಳಿಗೆ ಸೂಕ್ತವಾಗುವುದಿಲ್ಲ. ಆದ್ದರಿಂದ ನಿಮ್ಮ ಶರೀರ ಯಾವ ಬಗೆಯದ್ದು ಮತ್ತು ನಿಮಗೆ ಯಾವ ವ್ಯಾಯಾಮಗಳು ಸೂಕ್ತ ಎಂಬುದನ್ನು ಪರಿಣಿತರಿಂದ ಕಂಡುಕೊಳ್ಳುವುದು ಉತ್ತಮ. ಇದರಿಂದ ನಿಮ್ಮ ಶರೀರದ ಅನಗತ್ಯ ಕೊಬ್ಬು ಶೀಘ್ರವಾಗಿ ಇಳಿಯಲು ಸಾಧ್ಯವಾಗುತ್ತದೆ.

ನಿದ್ದೆಯ ಕೊರತೆ

ನಿದ್ದೆಯ ಕೊರತೆ

ಕೊಬ್ಬು ಕರಗಲು ಸಾಕಷ್ಟು ನಿದ್ದೆಯೂ ಅಗತ್ಯ. ನಿಮ್ಮ ನಿದ್ದೆಯ ಸಮಯ ಮತ್ತು ಅವಧಿ ಎರಡೂ ಮುಖ್ಯವಾಗಿದ್ದು ಇದರಲ್ಲಿ ಯಾವುದೇ ಏರುಪೇರಾದರೂ ತೂಕ ಇಳಿಯುವ ಪ್ರಕ್ರಿಯೆಯೂ ಏರುಪೇರಾಗುತ್ತದೆ.

ಪೊಟ್ಯಾಶಿಯಂ ಕೊರತೆ

ಪೊಟ್ಯಾಶಿಯಂ ಕೊರತೆ

ನಿಮ್ಮ ಆಹಾರದಲ್ಲಿ ಸಾಕಷ್ಟು ಪೊಟ್ಯಾಶಿಯಂ ಇಲ್ಲದಿದ್ದರೆ ಕೊಬ್ಬು ಕರಗಲು ಸಾಧ್ಯವಾಗದು. ಆದ್ದರಿಂದ ನಿಯಮಿತವಾಗಿ ಪೊಟ್ಯಾಶಿಯಂ ಹೆಚ್ಚಿರುವ ಆಹಾರಗಳನ್ನು ಸೇವಿಸಬೇಕು. ಬಾಳೆಹಣ್ಣು ಉತ್ತಮ ಆಯ್ಕೆ.

ಅತಿ ಹೆಚ್ಚಿನ ಪ್ರೋಟೀನ್

ಅತಿ ಹೆಚ್ಚಿನ ಪ್ರೋಟೀನ್

ರುಚಿ ಎಂದು ಹೆಚ್ಚಿನ ಪ್ರೋಟೀನ್ ತಿಂದರೆ ಇದು ನೇರವಾಗಿ ಕೊಬ್ಬಿಗೆ ಪರಿವರ್ತಿತವಾಗಿ ಸೊಂಟದಲ್ಲಿ ಶೇಖರವಾಗುತ್ತದೆ. ವಿಶೇಷವಾಗಿ ಸಿದ್ಧ ಆಹಾರಗಳು, ಮಾಂಸ ಮೊದಲಾದವುಗಳ ಪ್ರಮಾಣ ಅತಿ ಕಡಿಮೆ ಇರಬೇಕು.

ಅತಿ ಹೆಚ್ಚಿನ ವ್ಯಾಯಾಮ

ಅತಿ ಹೆಚ್ಚಿನ ವ್ಯಾಯಾಮ

ವ್ಯಾಯಾಮ ಹೆಚ್ಚಾದರೂ ಕಷ್ಟ. ಏಕೆಂದರೆ ವ್ಯಾಯಾಮ ಹೆಚ್ಚಾದಷ್ಟೂ ದೇಹದಲ್ಲಿ ಸ್ನಾಯುಗಳ ಪ್ರಮಾಣ ಹೆಚ್ಚಾಗುತ್ತದೆ. ಇವುಗಳಿಗೆ ಹೆಚ್ಚಿನ ಶಕ್ತಿ ನೀಡಲು ದೇಹ ಇನ್ನಷ್ಟು ಕೊಬ್ಬನ್ನು ಶೇಖರಿಸುತ್ತದೆ. ಇದರಿಂದ ಕೈಗಳ ಸ್ನಾಯುಗಳು ಹುರಿಗಟ್ಟಿದರೂ ಹೊಟ್ಟೆಯೂ ಕೊಬ್ಬಿನಿಂದ ತುಂಬಿಕೊಳ್ಳುತ್ತದೆ.

 
English summary

What's The Hidden Reason Behind Belly Fat?

You may ask yourself what's the real culprit behind your belly fat. If your diet is normal and your exercise routines are regular, that's enough to get rid of fat, right? No, there could be other hidden reasons behind your belly fat. So, are you trying to blame your genetics for that? Wait. There could be so many probable reasons; read on to know about them and change your lifestyle.
Please Wait while comments are loading...
Subscribe Newsletter