For Quick Alerts
ALLOW NOTIFICATIONS  
For Daily Alerts

ಈ ಸರಳ ಟಿಪ್ಸ್ ಪಾಲಿಸಿದರೆ ಖಂಡಿತ ಬೊಜ್ಜು ಬೆಳೆಯಲ್ಲ

|

ಹೆಚ್ಚಾಗುತ್ತಿರುವ ಮೈ ತೂಕ ಹೆಚ್ಚಿನವರ ಸಮಸ್ಯೆಯಾಗಿದೆ. ನಾವು ಮಾಡುತ್ತಿರುವ ಕೆಲಸ, ನಮ್ಮ ಬದಲಾದ ಆಹಾರಕ್ರಮ ಹಾಗೂ ನಡೆಸುತ್ತಿರುವ ಜೀವನಶೈಲಿ ತೂಕ ಹೆಚ್ಚಾಗಲು ಪ್ರಮುಖ ಕಾರಣಗಳಾಗಿವೆ. ಕೆಲವರು ಹಾರ್ಮೋನ್ ಗಳ ವ್ಯತ್ಯಾಸದಿಂದಲೂ ದಪ್ಪಗಾಗುತ್ತಾರೆ.

ದಪ್ಪಗಾಗುವುದನ್ನು ತಡೆಯಲು ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು. ಈ ಕ್ರಮಗಳನ್ನು ಅನುಸರಿಸದೆ ನೀವು ಏನೇ ಮಾಡಿದರೂ ಸಮತೂಕವನ್ನು ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ತೂಕವನ್ನು ನಿಯಂತ್ರಣದಲ್ಲಿಡುವ ಆ ಪ್ರಮುಖ ಅಂಶಗಳಾವುವು ಎಂದು ನೋಡೋಣ:

ಆಹಾರದಲ್ಲಿ ಕ್ಯಾಲೋರಿ ಕಡಿಮೆ ಇರಲಿ

ಆಹಾರದಲ್ಲಿ ಕ್ಯಾಲೋರಿ ಕಡಿಮೆ ಇರಲಿ

ಅಧಿಕ ಕ್ಯಾಲೋರಿ ಇರುವ ಆಹಾರಗಳು ಬಾಯಿಗೆ ರುಚಿ ಅನಿಸಿದರೂ ಆರೋಗ್ಯಕ್ಕೆ ಒಳ್ಳೆಯದಲ್ಲ, ಆದ್ದರಿಂದ ಕ್ಯಾಲೋರಿ ಅಧಿಕವಿರುವ ಆಹಾರಗಳನ್ನು ತಿನ್ನಲೇಬೇಡಿ ಎಂದು ಹೇಳುತ್ತಿಲ್ಲ, ಮಿತಿಯಲ್ಲಿ ತಿನ್ನಿ ಎಂಬ ಸಲಹೆಯನ್ನು ನೀಡುತ್ತಿದ್ದೇವೆ ಅಷ್ಟೇ.

ವ್ಯಾಯಾಮ ಬರೀ ತೂಕ ಕಮ್ಮಿಯಾಗಲು ಮಾತ್ರವಲ್ಲ

ವ್ಯಾಯಾಮ ಬರೀ ತೂಕ ಕಮ್ಮಿಯಾಗಲು ಮಾತ್ರವಲ್ಲ

ಹೆಚ್ಚಿನವರಿಗೆ ಈ ಅಭಿಪ್ರಾಯವಿರುತ್ತದೆ, ನಾನೇನು ಹೆಚ್ಚು ದಪ್ಪವಿಲ್ಲ ವ್ಯಾಯಾಮ ಅಗತ್ಯವಿಲ್ಲ, ತುಂಬಾ ದಪ್ಪಗಿರಲಿ, ತೆಳ್ಳಗಿರಲಿ ವ್ಯಾಯಾಮ ಮಾಡಬೇಕಾದದು ಅವಶ್ಯಕ. ವ್ಯಾಯಾಮ ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ, ನಿಮ್ಮಲ್ಲಿ ಲವಲವಿಕೆ ತುಂಬುವುದು.

ಸಕ್ಕರೆಯಂಶವನ್ನು ಮಿತಿಯಲ್ಲಿ ತಿನ್ನಿ

ಸಕ್ಕರೆಯಂಶವನ್ನು ಮಿತಿಯಲ್ಲಿ ತಿನ್ನಿ

ಸಿಹಿ ಪ್ರಿಯರಾಗಿದ್ದರೂ ಸಕ್ಕರೆ ಅಂಶವನ್ನು ಮಿತಿಯಲ್ಲಿ ತಿನ್ನಿ. ಸಕ್ಕರೆ ಬದಲು ಜೇನು ಅಥವಾ ಬೆಲ್ಲ ಬಳಸುವುದು ಒಳ್ಳೆಯದು.

 ಬೆಳಗ್ಗೆ ಬಿಸಿ ನೀರು ಕುಡಿಯಿರಿ

ಬೆಳಗ್ಗೆ ಬಿಸಿ ನೀರು ಕುಡಿಯಿರಿ

ಬೆಳಗ್ಗೆ ಎದ್ದ ತಕ್ಷಣ ಒಂದು ಲೋಟ ಬಿಸಿ ನೀರು ಕುಡಿಯಿರಿ. ಇದು ದೇಹದಲ್ಲಿರುವ ಕಲ್ಮಶಗಳನ್ನು ಹೊರಹಾಕುತ್ತದೆ. ಅಲ್ಲದೆ ದಿನದಲ್ಲಿ 7-8 ಲೋಟ ನೀರು ಕುಡಿಯುವ ಅಭ್ಯಾಸ ರೂಢಿಸಿಕೊಳ್ಳಿ.

ಡಯಟ್ ನಲ್ಲಿ falx seeds ಸೇರಿಸಿ

ಡಯಟ್ ನಲ್ಲಿ falx seeds ಸೇರಿಸಿ

2 ಚಮಚ falx seeds ಅನ್ನು ದಿನನಿತ್ಯ ತಿನ್ನುವುದರಿಂದ ಮೈ ತೂಕವನ್ನು ಕರಗಿಸಬಹುದು.

ಉಪ್ಪು ಹೆಚ್ಚು ತಿನ್ನಬೇಡಿ

ಉಪ್ಪು ಹೆಚ್ಚು ತಿನ್ನಬೇಡಿ

ಹೆಚ್ಚು ಉಪ್ಪಿನಂಶವಿರುವ ಆಹಾರ ತಿನ್ನುವುದರಿಂದ ಮೈ ತೂಕವೂ ಹೆಚ್ಚುವುದು. ಉಪ್ಪನ್ನು ಕಮ್ಮಿಯಾಗಿ ಹಾಕಿ ಹರ್ಬ್ಸ್ ಹೆಚ್ಚಾಗಿ ಬಳಸಿ.

ವಿಟಮಿನ್ ಸಿ

ವಿಟಮಿನ್ ಸಿ

ಕಿತ್ತಳೆ, ಮೂಸಂಬಿ ಈ ರೀತಿಯ ಸಿಟ್ರಸ್ ಅಂಶವಿರುವ ಆಹಾರಗಳನ್ನು ಆಹಾರಕ್ರಮದಲ್ಲಿ ಸೇರಿಸಿ. ಪ್ರತೀದಿನ ಒಂದು ಕಿತ್ತಳೆ ಹಣ್ಣು ತಿನ್ನಿ ತುಂಬಾ ಒಳ್ಳೆಯದು.

 ನಿದ್ದೆ

ನಿದ್ದೆ

ಸರಿಯಾದ ನಿದ್ದೆ ಇಲ್ಲದಿದ್ದರೆ ಮೈ ತೂಕದಲ್ಲಿ ಅಸಮತೋಲನ ಉಂಟಾಗುವುದು, ಆದ್ದರಿಂದ 6-8 ಗಂಟೆಗಳ ಸವಿ ನಿದ್ದೆಯನ್ನು ಮಿಸ್ ಮಾಡ್ಕೋಬೇಡಿ.

 ನಿಂಬೆ ಹಣ್ಣು ಮತ್ತು ಜೇನು ಹಾಕಿದ ಪಾನೀಯ

ನಿಂಬೆ ಹಣ್ಣು ಮತ್ತು ಜೇನು ಹಾಕಿದ ಪಾನೀಯ

ದಿನಾ ಒಂದು ಲೋಟ ನೀರಿಗೆ ನಿಂಬೆ ರಸ ಹಿಂಟಿ, ಜೇನು ಹಾಕಿ ಕುಡಿಯಿರಿ.

ವಿಶ್ರಾಂತಿ

ವಿಶ್ರಾಂತಿ

ಹೆಚ್ಚಿನವರು ದೇಹಕ್ಕೆ ಒಂದಿಷ್ಟೂ ರೆಸ್ಟ್ ಕೊಡದೆ ದುಡಿಯುತ್ತಾರೆ. ಈ ರೀತಿ ಮಾಡುವುದು ಒಳ್ಳೆಯದಲ್ಲ, ನಿಮ್ಮ ದೇಹ ದಣಿದಾಗ ವಿಶ್ರಾಂತಿ ತೆಗೆದುಕೊಳ್ಳಿ.

English summary

Top 10 Tips To Not To Gain Weight

There are en numbers of ways and diets that intend to help you lose weight. But here are few home tips to reduce fat easily and get maximum results. These simple home tips can be followed by anyone.
X
Desktop Bottom Promotion