ಕ್ಯಾನ್ಸರ್ ವಿರುದ್ಧ ಹೋರಾಡುವ ಶಕ್ತಿ ಚಿನ್ನದ ದೇವತೆ 'ಅರಿಶಿನ'ದಲ್ಲಿದೆ!

Posted By: Arshad
Subscribe to Boldsky

ಅರಿಶಿನ, ಹಿಂದಿಯಲ್ಲಿ ಹಲ್ದೀ ಎಂದೇ ಹೆಚ್ಚು ಪರಿಚಿತವಾಗಿರುವ ಈ ಹಳದಿ ಬಣ್ಣದ ಸಾಂಬಾರ ಪದಾರ್ಥವನ್ನು ನಿಸರ್ಗದ ಹಳದಿ ಚಿನ್ನವೆಂದೇ ಭಾರತದಲ್ಲಿ ಪರಿಗಣಿಸಲಾಗುತ್ತದೆ. ಇದು ಕೇವಲ ಅಡುಗೆಯ ರುಚಿ ಹೆಚ್ಚಿಸುವ, ಅಥವಾ ಅಡುಗೆಗೆ ಹಳದಿ ಬಣ್ಣದ ರಂಗು ನೀಡುವ ಮಸಾಲೆ ಮಾತ್ರವಲ್ಲ, ಇದೊಂದು ಹಲವು ರೋಗಗಳಿಗೆ ಉಪಶಮನ ನೀಡುವ ಅದ್ಭುತ ಔಷಧಿಯೂ ಆಗಿದೆ.

ಸಾಮಾನ್ಯವಾಗಿ ಎದುರಾಗುವ ಶೀತ, ನೆಗಡಿ ಮೊದಲಾದವುಗಳಿಗೆ ಉಪಶಮನ ನೀಡಲು ಅರಿಶಿನವನ್ನು ಬಳಸುವ ಬಗ್ಗೆ ನಾವೆಲ್ಲರೂ ಅರಿತೇ ಇದ್ದೇವೆ. ನೂರಾರು ವರ್ಷಗಳಿಂದಲೂ ನಮ್ಮ ಪೂರ್ವಜರು ಅರಿಶಿನವನ್ನು ಮಳೆಗಾಲದ ಶೀತ ನೆಗಡಿಗಳನ್ನು ಕಡಿಮೆಯಾಗಿಸಿಕೊಳ್ಳಲು ಬಳಸುತ್ತಾ ಬಂದಿದ್ದಾರೆ. ಆದರೆ ಈ ಅರಿಶಿನಕ್ಕೆ ಕ್ಯಾನ್ಸರ್ ತಡೆಗಟ್ಟುವ ಸಾಮರ್ಥ್ಯವೂ ಇದೆ ಎಂದು ಮಾತ್ರ ನಮ್ಮ ಪೂರ್ವಜರಿಗೆ ತಿಳಿದಿರಲಿಲ್ಲ.

ಹೌದು, ಕ್ಯಾನ್ಸರ್ ಬರದಂತೆ ತಡೆಗಟ್ಟುವ ಕೆಲವೇ ಆಹಾರ ಸಾಮಾಗ್ರಿಗಳಲ್ಲಿ ಅರಿಶಿನವೂ ಒಂದು. ಇದಕ್ಕೆ ಹಳದಿ ಬಣ್ಣ ಬರಲು ಕಾರಣವಾದ ಕುರ್ಕುಮಿನ್ ಎಂಬ ಪೋಷಕಾಂಶಕ್ಕೆ ಕ್ಯಾನ್ಸರ್ ನಿರೋಧಕ ಗುಣವಿದೆ ಹಾಗೂ ಕ್ಯಾನ್ಸರ್ ಉಂಟುಮಾಡುವ ಕಣಗಳನ್ನು ವಿಕರ್ಷಿಸುವ ಗುಣ ಹೊಂದಿದೆ. ಇದರ ಜೊತೆಗೇ ಅರಿಶಿನದ ಉರಿಯೂತ ನಿವಾರಕ ಹಾಗೂ ಆಂಟಿ ಆಕ್ಸಿಡೆಂಟು ಗುಣ ಕ್ಯಾನ್ಸರ್ ಉಂಟುಮಾಡುವ ಕಣಗಳನ್ನು ನಿವಾರಿಸಲು ನೆಅರ್ವಾಗುತ್ತದೆ.

ಮಧುಮೇಹಿಗಳಿಗೆ ಬೆಸ್ಟ್ ಮನೆಮದ್ದು ಅರಿಶಿಣ

ಒಂದು ವೇಳೆ ಈಗಾಗಲೇ ಕ್ಯಾನ್ಸರ್ ಆವರಿಸಿದ್ದು ಇದಕ್ಕಾಗಿ ಖೀಮೋಥೆರಪಿ ಅಥವಾ ರೇಡಿಯೇಶನ್ (ವಿಕಿರಣ) ಚಿಕಿತ್ಸೆ ನಡೆಯುತ್ತಿದ್ದರೆ ಈ ಚಿಕಿತ್ಸೆಯ ಅಡ್ಡಪರಿಣಾಮಗಳನ್ನು (ಕೂದಲು ಉದುರಿ ತಲೆ ಬೋಳಾಗುವುದು ಇತ್ಯಾದಿ) ತಡೆಯಲೂ ಅರಿಶಿನ ಸಮರ್ಥವಾಗಿದೆ. ಕ್ಯಾನ್ಸರ್ ಆವರಿಸುವ ಸಾಧ್ಯತೆಗಳನ್ನು ನಿವಾರಿಸುವ ಅದ್ಭುತ ಗುಣವಿರುವ ಅರಿಶಿನದ ಬಗ್ಗೆ ಕೆಲವು ಮಾಹಿತಿಗಳನ್ನು ಇಂದು ವಿವರಿಸಲಾಗಿದೆ....

ಕ್ಯಾನ್ಸರ್ ಪೀಡಿತ ಜೀವಕೋಶಗಳನ್ನು ನಿವಾರಿಸುತ್ತದೆ

ಕ್ಯಾನ್ಸರ್ ಪೀಡಿತ ಜೀವಕೋಶಗಳನ್ನು ನಿವಾರಿಸುತ್ತದೆ

ಅರಿಶಿನದಲ್ಲಿರುವ ಕುರ್ಕುಮಿನ್ ಎಂಬ ಪೋಷಕಾಂಶ ಒಂದು ಅದ್ಭುತ ಔಷಧಿಯಾಗಿದ್ದು ಇದರಲ್ಲಿ ಕ್ಯಾನ್ಸರ್ ವಿರೋಧಿ ಗುಣಗಳಿವೆ. ಈ ಗುಣವನ್ನು ಹಲವಾರು ಸಂಶೋಧನೆಗಳಲ್ಲಿ ಸಾಬೀತುಪಡಿಸಲಾಗಿದೆ. ನಿಮ್ಮ ನಿತ್ಯದ ಆಹಾರಗಳಲ್ಲಿ ಸದಾ ಅರಿಶಿನ ಇರುವಂತೆ ನೋಡಿಕೊಳ್ಳುವ ಮೂಲಕ ಒಂದು ವೇಳೆ ಈಗಾಗಲೇ ಕೆಲವು ಜೀವಕೋಶಗಳು ಕ್ಯಾನ್ಸರ್ ಪೀಡಿತವಾಗಿದ್ದರೆ ಇವುಗಳನ್ನು ನಿವಾರಿಸಿ ಇನ್ನಷ್ಟು ಹರಡದಂತೆ ನೋಡಿಕೊಳ್ಳುತ್ತದೆ.

ಕ್ಯಾನ್ಸರ್ ಪೂರ್ವ ಬಾಧಿಸುವ ಬೆಳವಣಿಗೆಯನ್ನು ತಡೆಯುತ್ತದೆ

ಕ್ಯಾನ್ಸರ್ ಪೂರ್ವ ಬಾಧಿಸುವ ಬೆಳವಣಿಗೆಯನ್ನು ತಡೆಯುತ್ತದೆ

ಶೀತ, ಕೆಮ್ಮು ನೆಗಡಿಗಳ ನಿವಾರಣೆಗೆ ಅರಿಶಿನ ನೆರವಾಗುತ್ತದೆ ಎಂದು ಈಗಾಗಲೇ ತಿಳಿದುಕೊಂಡಿದ್ದೇವೆ. ಒಂದು ವೇಳೆ ಅರಿಸಿನವನ್ನು ನಿತ್ಯವೂ ಒಂದು ನಿಗದಿತ ಪ್ರಮಾಣದಲ್ಲಿ ಸೇವಿಸುತ್ತಾ ಬಂದರೆ ಇದರಿಂದ ಕ್ಯಾನ್ಸರ್ ಪೂರ್ವ ಬೆಳವಣಿಗೆಯನ್ನು (pre-cancerous lesions) ತಡೆಗಟ್ಟಬಹುದು. ಅರಿಶಿನ ಅಥವಾ ಈ ಮೂಲಕ ಕುರ್ಕುಮಿನ್ ಪೋಷಕಾಂಶವನ್ನು ಸೇವಿಸುವ ಮೂಲಕ ವಿಶೇಷವಾಗಿ ಬಾಯಿಯ ಕ್ಯಾನ್ಸರ್ ಉಂಟಾಗುವ ಸಾಧ್ಯತೆ ಕಡಿಮೆಯಾಗುತ್ತದೆ. ಅಲ್ಲದೇ ಅರಿಶಿನದ ಎಣ್ಣೆಯ ಬಳಕೆಯಿಂದ ಗರ್ಭಕಂಠದ ಕ್ಯಾನ್ಸರ್ ಹರಡುವ ಬೆಳವಣಿಗೆಯನ್ನು ತಡೆಗಟ್ಟಬಹುದು.

Metastasis ಸ್ಥಿತಿಯಿಂದ ತಡೆಯುತ್ತದೆ

Metastasis ಸ್ಥಿತಿಯಿಂದ ತಡೆಯುತ್ತದೆ

ಒಂದು ವೇಳೆ ಕ್ಯಾನ್ಸರ್ ಪೀಡಿತ ಜೀವಕೋಶಗಳು ಒಂದು ಅಂಗದಿಂದ ಪ್ರಾರಂಭವಾಗಿದ್ದರೂ ದೇಹದ ಇನ್ನೊಂದು ಅಂಗದಲ್ಲಿ ಬೆಳವಣಿಗೆ ಪಡೆಯುವುದಕ್ಕೆ ಮೆಟಾಸ್ಟಾಸಿಸ್ ಎಂದು ಕರೆಯುತ್ತಾರೆ. ಇದು ಇಡಿಯ ದೇಹವನ್ನೂ ವ್ಯಾಪಿಸಬಹುದು. ಅರಿಶಿನದ ಸೇವನೆಯಿಂದ ಈ ಜೀವಕೋಶಗಳು ಇತರ ಭಾಗಗಳಿಗೆ ಹರಡುವುದನ್ನು ತಡೆಯಬಹುದು ಹಾಗೂ ಕ್ಯಾನ್ಸರ್ ಪೀಡಿತ ಅಂಗಾಂಶದಲ್ಲಿ ಹೊಸ ರಕ್ತನಾಳಗಳು ಬೆಳೆಯುವುದನ್ನೂ ತಡೆಯಬಹುದು. ನಿಮ್ಮ ನಿತ್ಯದ ಆಹಾರದಲ್ಲಿ ಕೊಂಚವೇ ಅರಿಶಿನವನ್ನು ಸೇರಿಸುವ ಮೂಲಕ ಅಥವಾ ನಿತ್ಯವೂ ಒಂದು ಲೋಟ ಹಾಲನ್ನು ಕಾಲು ಚಿಕ್ಕ ಚಮಚ ಅರಿಶಿನ ಬೆರೆಸಿ ರಾತ್ರಿ ಮಲಗುವ ಮುನ್ನ ಕುಡಿಯುವ ಮೂಲಕ ಅರಿಶಿನದ ರಕ್ಷಣೆಯ ಪೂರ್ಣ ಪ್ರಯೋಜನವನು ಪಡೆಯಬಹುದು.

ಕ್ಯಾನ್ಸರ್ ಬೆಳವಣಿಗೆಯನ್ನು ತಡೆಯುವ ಗುಣ ಹೊಂದಿದೆ

ಕ್ಯಾನ್ಸರ್ ಬೆಳವಣಿಗೆಯನ್ನು ತಡೆಯುವ ಗುಣ ಹೊಂದಿದೆ

ಅರಿಶಿನದಲ್ಲಿರುವ ಕುರ್ಕುಮಿನ್ ಕ್ಯಾನ್ಸರ್ ವಿಕರ್ಷಕ ಗುಣವನ್ನು ಹೊಂದಿದೆ. ಅಲ್ಲದೇ ಇದು ಅತ್ಯುತ್ತಮ ಆಂಟಿ ಆಕ್ಸಿಡೆಂಟ್ ಗುಣವನ್ನೂ ಹೊಂದಿದೆ. ಅಲ್ಲದೇ ಅಹಾರದಲ್ಲಿರುವ ವಿಷಕಾರಿ ವಸ್ತುಗಳು ನಮ್ಮ ದೇಹದ ಪ್ರಮುಖ ಅಂಗಗಳನ್ನು ಬಾಧಿಸುವುದನ್ನು ತಡೆಯಲೂ ಅರಿಶಿನ ನೆರವಾಗುತ್ತದೆ. ತನ್ಮೂಲಕ ಹಲವಾರು ಬಗೆಯ ಕ್ಯಾನ್ಸರ್ ಬರುವ ಸಾಧ್ಯತೆಯನ್ನು ಇಲ್ಲವಾಗಿಸುತ್ತದೆ.

ಉರಿಯೂತವನ್ನು ಕಡಿಮೆ ಮಾಡಲು ನೆರವಾಗುತ್ತದೆ

ಉರಿಯೂತವನ್ನು ಕಡಿಮೆ ಮಾಡಲು ನೆರವಾಗುತ್ತದೆ

ಅರಿಶಿನ ತನ್ನ ಉರಿಯೂತ ನಿವಾರಕ ಗುಣಕ್ಕೆ ಖ್ಯಾತಿ ಪಡೆದಿದೆ. ನಿಮ್ಮ ನಿತ್ಯದ ಆಹಾರದಲ್ಲಿ ಅರಿಶಿನವನ್ನು ಬೆರೆಸಿ ಸೇವಿಸುವ ಮೂಲಕ ದೇಹದ ವಿವಿಧ ಭಾಗಗಳಲ್ಲಿ ಎದುರಾಗುವ ಉರಿಯೂತವನ್ನು ಇಲ್ಲವಾಗಿಸಲು, ತನ್ಮೂಲಕ ಎದುರಾಗಬಹುದಾದ ಕ್ಯಾನ್ಸರ್ ಅನ್ನೂ ಇಲ್ಲವಾಗಿಸಲು ಸಾಧ್ಯವಾಗುತ್ತದೆ. ವಿಶೇಷವಾಗಿ ಶ್ವಾಸಕೋಶದ ಕ್ಯಾನ್ಸರ್ ಬರುವ ಸಾಧ್ಯತೆಯನ್ನು ಕಡಿಮೆಯಾಗಿಸುವಲ್ಲಿ ಅರಿಶಿನ ಪ್ರಮುಖ ಪಾತ್ರ ವಹಿಸುತ್ತದೆ.

ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ರೋಗ ನಿರೋಧಕ ಶಕ್ತಿಯನ್ನು ನಿಯಂತ್ರಿಸುತ್ತದೆ

ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ರೋಗ ನಿರೋಧಕ ಶಕ್ತಿಯನ್ನು ನಿಯಂತ್ರಿಸುತ್ತದೆ

ಅರಿಶಿನದ ನಿತ್ಯದ ಸೇವನೆಯಿಂದ ರೋಗ ನಿರೋಧಕ ಶಕ್ತಿ ಉತ್ತಮಗೊಳ್ಳುತ್ತದೆ ಹಾಗೂ ತನ್ಮೂಲಕ ಕ್ಯಾನ್ಸರ್ ವಿರುದ್ದ ಹೋರಾಡುವ ಶಕ್ತಿಯನ್ನೂ ಉತ್ತಮಗೊಳಿಸುತ್ತದೆ. ಅರಿಶಿನದಲ್ಲಿರುವ ಕುರ್ಕುಮಿನ್ ರೋಗ ನಿರೋಧಕ ಶಕ್ತಿಯನ್ನು ನಿಯಂತ್ರಿಸಿ ಕ್ಯಾನ್ಸರ್ ವಿರುದ್ದ ಹೋರಾಟದಲ್ಲಿ ನೆರವಾಗುತ್ತದೆ.

ಖೀಮೋಥೆರಪಿ ಹಾಗೂ ರೇಡಿಯೇಶನ್ ಪರಿಣಾಮಗಳಿಂದ ರಕ್ಷಿಸುತ್ತದೆ

ಖೀಮೋಥೆರಪಿ ಹಾಗೂ ರೇಡಿಯೇಶನ್ ಪರಿಣಾಮಗಳಿಂದ ರಕ್ಷಿಸುತ್ತದೆ

ಒಂದು ವೇಳೆ ಈಗಾಗಲೇ ಕ್ಯಾನ್ಸರ್ ಆವರಿಸಿದ್ದರೆ ಇದಕ್ಕೆ ಖೀಮೋಥೆರಪಿ ಹಾಗೂ ವಿಕಿರಣ ಚಿಕಿತ್ಸೆ ಅಥವಾ ರೇಡಿಯೇಶನ್ ಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ. ಇವೆರಡೂ ಚಿಕಿತ್ಸೆಯಲ್ಲಿ ಪ್ರಬಲವಾದ ಅಡ್ಡಪರಿಣಾಮಗಳಿವೆ. ಅರಿಶಿನದಲ್ಲಿರುವ ಕುರ್ಕುಮಿನ್ ಉತ್ತಮ ಉರಿಯೂತ ನಿವಾರಕ ಹಾಗೂ ಆಂಟಿ ಆಕ್ಸಿಡೆಂಟ್ ಆಗಿದ್ದು ತ್ಯವೂ ಅರಿಶಿನ ಸೇವಿಸುವ ಮೂಲಕ ಈ ಅಡ್ಡಪರಿಣಾಮಗಳು ಎದುರಾಗದಂತೆ ತಡೆಗಟ್ಟುತ್ತದೆ.

ಅರಿಶಿನದಲ್ಲಿದೆ ಕ್ಯಾನ್ಸರ್ ಗಡ್ಡೆಯಾಗದಂತೆ ತಡೆಯುವ ಗುಣ

ಅರಿಶಿನದಲ್ಲಿದೆ ಕ್ಯಾನ್ಸರ್ ಗಡ್ಡೆಯಾಗದಂತೆ ತಡೆಯುವ ಗುಣ

ಗಡ್ಡೆಗಳಲ್ಲಿ ಎರಡು ವಿಧಗಳಿವೆ. ಮೊದಲನೆಯದು ಕ್ಯಾನ್ಸರ್ ಕಾರಕವಲ್ಲದ (non-cancerous) ಹಾಗೂ ಇನ್ನೊಂದು ಕ್ಯಾನ್ಸರ್ ಪೀಡಿತ (cancerous) ಗಡ್ಡೆಗಳು. ಕುರ್ಕುಮಿನ್ ನಲ್ಲಿ ಈ ಗಡ್ಡೆಗಳಾಗದಂತೆ ತಡೆಯುವ ಗುಣವಿದ್ದು ಗಡ್ಡೆಯಾಗಲು ಕಾರಣವಾಗುವ ಅಂಶಗಳನ್ನು ಮೂಲದಲ್ಲಿಯೇ ನಿಗ್ರಹಿಸಿ ಈ ಗಡ್ಡೆಗಳಿಂದ ರಕ್ಷಣೆ ಒದಗಿಸುತ್ತದೆ. ವಿಶೇಷವಾಗಿ ಪ್ರಾಸ್ಟ್ರೇಟ್, ಸ್ತನ, ಶ್ವಾಸಕೋಶ ಹಾಗೂ ಮೆದುಳಿನ ಕ್ಯಾನ್ಸರ್ ಆಗದಂತೆ ತಡೆಯುವಲ್ಲಿ ಕುರ್ಕುಮಿನ್ ಅತ್ಯುತ್ತಮ ರಕ್ಷಣೆ ಒದಗಿಸುತ್ತದೆ.

ಕ್ಯಾನ್ಸರ್ ಪೀಡಿತ ಜೀವಕೋಶಗಳು ಔಷಧಿಗೆ ಒಡ್ಡುವ ಪ್ರತಿರೋಧವನ್ನು ವಿರುದ್ಧ ದಿಕ್ಕಿಗೆ ತಿರುಗಿಸುತ್ತದೆ

ಕ್ಯಾನ್ಸರ್ ಪೀಡಿತ ಜೀವಕೋಶಗಳು ಔಷಧಿಗೆ ಒಡ್ಡುವ ಪ್ರತಿರೋಧವನ್ನು ವಿರುದ್ಧ ದಿಕ್ಕಿಗೆ ತಿರುಗಿಸುತ್ತದೆ

ಕ್ಯಾನ್ಸರ್ ರೋಗಿಗಳ ಚಿಕಿತ್ಸೆಯಲ್ಲಿ ಎದುರಾಗುವ ಪ್ರಮುಖ ಅಡಚಣೆ ಎಂದರೆ ಔಷಧಿಗಳಿಗೆ ಕ್ಯಾನ್ಸರ್ ಪೀಡಿತ ಜೀವಕೋಶಗಳು ಒಡ್ಡುವ ಪ್ರತಿರೋಧ. ಅರಿಶಿನದಲ್ಲಿರುವ ಕುರ್ಕುಮಿನ್ ಕ್ಯಾನ್ಸರ್ ಜೀವಕೋಶಗಳನ್ನು ನಿಯಂತ್ರಿಸಿ ಈ ಪ್ರತಿರೋಧವನ್ನು ವಿರುದ್ಧ ದಿಕ್ಕಿಗೆ ತಿರುಗಿಸಲು ನೆರವಾಗುತ್ತದೆ. ಈ ಶಕ್ತಿಯನ್ನು ಪಡೆಯಲು ನಿತ್ಯವೂ 6-8 ಗ್ರಾಂ ನಷ್ಟು ಅರಿಶಿನವನ್ನು ಸೇವಿಸಬೇಕಾಗುತ್ತದೆ.

English summary

Ways In Which Turmeric Helps To Fight Cancer

Turmeric, commonly known as haldi in the Indian sub-continent and often referred to as the nature's yellow gold, is not just a spice that gives a tinge of yellow colour to your food, but it is also known to possess plenty of health benefits. Well, turmeric is one of the commonly found spices that helps in effectively fighting cancer. One of the most interesting parts about turmeric is that, it contains an important compound called the curcumin, which is known as an anti-cancerous agent.