For Quick Alerts
ALLOW NOTIFICATIONS  
For Daily Alerts

ಮಲಗಿದ ತಕ್ಷಣ ನಿದ್ದೆ ಬರಬೇಕೇ? ಹಾಗಾದರೆ ಹೀಗೆ ಮಾಡಿ...

By Hemanth
|

ಪ್ರತಿಯೊಬ್ಬರಿಗೂ ನಿದ್ರಾದೇವಿ ಒಲಿಯುವುದಿಲ್ಲ. ನಿದ್ರಾದೇವಿ ಒಲಿಯಲು ಬೇಕಾಗುವ ದೈಹಿಕ ಆರೋಗ್ಯ ಮತ್ತು ಮನಸ್ಸಿನ ಶಾಂತಿ ತುಂಬಾ ಮುಖ್ಯ. ನಿದ್ರೆಗಾಗಿ ಹಾಸಿಗೆಯ ಮೇಲೆ ಒದ್ದಾಡುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಾ ಇದೆ. ಇದಕ್ಕೆ ಮುಖ್ಯ ಕಾರಣ ಮಾನಸಿಕ ಒತ್ತಡ. ಆಧುನಿಕ ಜೀವನಶೈಲಿಯಲ್ಲಿ ಒತ್ತಡವು ಪ್ರತಿಯೊಬ್ಬರನ್ನು ಕಾಡುವ ಸಮಸ್ಯೆಯಾಗಿದೆ.

Sleep

ಒತ್ತಡವಿಲ್ಲದ ಜೀವನವಿಲ್ಲವೆನ್ನುವಂತಾಗಿದೆ. ಯಾಕೆಂದರೆ ಜೀವನದ ಜಂಜಾಟದಲ್ಲಿ ಒತ್ತಡವೆನ್ನುವುದು ತನ್ನಿಂದ ತಾನೇ ಬರುತ್ತದೆ. ಆದರೆ ಜೀವನಶೈಲಿಯಲ್ಲಿ ಕೆಲವೊಂದು ಬದಲಾವಣೆ ಮತ್ತು ಆಹಾರಕ್ರಮವನ್ನು ಸರಿಯಾಗಿ ಅನುಸರಿಸಿಕೊಂಡು ಹೋದರೆ ಖಂಡಿತವಾಗಿಯೂ ಒಳ್ಳೆಯ ನಿದ್ರೆಯನ್ನು ಪಡೆಯಬಹುದಾಗಿದೆ.

ಉತ್ತಮ ನಿದ್ರೆಯನ್ನು ಪಡೆಯಬೇಕಾದರೆ ಪ್ರತೀದಿನ ವ್ಯಾಯಾಮ ಮಾಡುವುದು ಅಗತ್ಯವಾಗಿದೆ. ನಿದ್ರೆಗೆ ಭಂಗ ಉಂಟು ಮಾಡುವಂತಹ ಪಾನೀಯವನ್ನು ಕಡೆಗಣಿಸಿ. ಕೆಫಿನ್ ನಿದ್ರೆಗೆ ಭಂಗ ಉಂಟು ಮಾಡುತ್ತದೆ ಎಂದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರವಾಗಿದೆ. ಮಲಗಿದ ತಕ್ಷಣ ನಿದ್ದೆ ಬರಬೇಕೆ? ಈ ಆಹಾರಗಳನ್ನು ತಿನ್ನಿ

Sleep

ಆದರೆ ಆಲ್ಕೋಹಾಲ್ ಕೂಡ ನಿದ್ರೆಗೆ ತೊಂದರೆ ಉಂಟು ಮಾಡುವುದು. ರಾತ್ರಿ ನಿದ್ರಿಸುವ ಮೊದಲು ನೀರು ಕುಡಿದರೆ ತುಂಬಾ ಒಳ್ಳೆಯದು. ದಿನಪೂರ್ತಿ ನಿದ್ರೆ ಮಾಡಿದರೆ ರಾತ್ರಿ ಸರಿಯಾಗಿ ನಿದ್ರೆ ಬರುವುದಿಲ್ಲ. ಇದರಿಂದ ದಿನದಲ್ಲಿ ಕೇವಲ ಅರ್ಧಗಂಟೆ ಮಾತ್ರ ನಿದ್ರೆ ಮಾಡಬೇಕು.

ರಾತ್ರಿ ವೇಳೆ ಹೊಟ್ಟೆ ತುಂಬಾ ತಿಂದರೆ ನಿದ್ರೆ ಸರಿಯಾಗಿ ಬರುವುದಿಲ್ಲ. ಇದರಿಂದ ಹಗುರವಾಗಿ ತಿನ್ನಿ. ಹೊಟ್ಟೆ ತುಂಬಾ ತಿನ್ನುವುದರಿಂದ ಜೀರ್ಣಕ್ರಿಯೆ ಕಷ್ಟವಾಗಬಹುದು ಮತ್ತು ಅಜೀರ್ಣ ಸಮಸ್ಯೆಯಿಂದ ನಿದ್ರೆ ಬರುವುದಿಲ್ಲ.

ನಿದ್ರಾಕೋಣೆ ಎನ್ನುವುದು ನಿದ್ರೆ ಮಾಡಲು ಇರುವುದು. ಇಲ್ಲಿ ಕುಳಿತುಕೊಂಡು ಇಂಟರ್ನೆಟ್ ನಲ್ಲಿ ಚಾಟ್ ಮಾಡುವುದು ಅಥವಾ ಆಟವಾಡುವುದು ಸರಿಯಲ್ಲ. ನಿಮ್ಮ ಮೊಬೈಲ್ ಗಳನ್ನು ನಿದ್ರಿಸುವ ಕೋಣೆಯಿಂದ ಹೊರಗಿಡಿ. ಮಲಗಲು ಹೋಗುವ ಮೊದಲು ಟಿವಿ ನೋಡಬೇಡಿ. ಇದರಿಂದ ಮನಸ್ಸು ಕದಡುವುದು. ಇದರ ಬದಲಿಗೆ ಹಿತವಾದ ಸಂಗೀತ ಕೇಳಿ. ಸರಿಯಾಗಿ ನಿದ್ದೆ ಬರುತ್ತಿಲ್ಲವೇ? ಹಾಗಾದರೆ ಇನ್ನು ಚಿಂತೆ ಬಿಡಿ

ಇದರಿಂದ ನಿಮ್ಮ ಮೆದುಳು ಶಾಂತವಾಗಿ ನಿಮ್ಮನ್ನು ಶಾಂತವಾಗಿಡುವುದು. ಕೋಣೆಯಲ್ಲಿ ವಾತಾವರಣವು ಶಾಂತವಾಗಿದ್ದರೆ ಬೇಗನೆ ನಿದ್ರೆ ಬರುವುದು.ಪ್ರತೀ ದಿನ ಒಂದೇ ಸಮಯಕ್ಕೆ ನಿದ್ರೆ ಮಾಡುವುದರಿಂದ ನೀವು ಬೇಗನೆ ನಿದ್ರೆಗೆ ಜಾರಬಹುದು. ನಿದ್ದೆಯೆಂಬ ಅಮೂಲ್ಯ ವರಕ್ಕಿರುವ ಕರಾಮತ್ತೇನು?

Sleep

ಈ ಅಭ್ಯಾಸದಿಂದ ದೇಹವು ಮಲಗುವ ಸಮಯಕ್ಕೆ ಹೊಂದಿಕೊಂಡಿರುತ್ತದೆ. ಇದರಿಂದ ಬೇಗನೆ ನಿದ್ರೆ ಬರುತ್ತದೆ. ಗಿಡಮೂಲಿಕೆ ಚಹಾ ಅಥವಾ ಹಾಲು ಕುಡಿದರೆ ಬೇಗನೆ ನಿದ್ರೆಗೆ ಜಾರಬಹುದು. ಇದರಿಂದ ದೇಹ ಹಾಗೂ ಮೆದುಳು ಶಾಂತವಾಗಿ ನಿದ್ರೆ ಸುಗಮವಾಗುವುದು. ಇದು ಮಾಮೂಲಿ ಚಹಾ ಅಲ್ಲ, ನೈಸರ್ಗಿಕ ಚಹಾ!

English summary

Ways to Fall Asleep Faster

In this article we shall discuss certain ways in which one can fall asleep faster.One way to fall asleep as soon as you hit the bed is to exercise daily. All of us know exercise enhances our health; however, in addition, it enhances our sleep by reducing stress.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more