For Quick Alerts
ALLOW NOTIFICATIONS  
For Daily Alerts

ಸರಿಯಾಗಿ ನಿದ್ದೆ ಬರುತ್ತಿಲ್ಲವೇ? ಹಾಗಾದರೆ ಇನ್ನು ಚಿಂತೆ ಬಿಡಿ

|

ನಮ್ಮ ದೈನಂದಿನ ಜೀವನದಲ್ಲಿ ನಿದ್ರೆಯು ಅತ್ಯಂತ ಮುಖ್ಯವಾದ ಭಾಗವಾಗಿರುವುದರಿಂದ ಜೀವನದ ಮೂರನೆಯ ಒಂದು ಭಾಗವನ್ನು ನಾವು ನಿದ್ದೆಯಲ್ಲಿ ಕಳೆಯುತ್ತೇವೆ. ಆದರೂ ಸಹ ನಿದ್ದೆಯ ಹಿಂದಿನ ಕಾರಣಗಳು ಇಂದಿಗು ರಹಸ್ಯವಾಗಿ ಉಳಿದುಬಿಟ್ಟಿವೆ. ನಿದ್ದೆ ಮಾಡುವಾಗ ಒಂದು ಸಮಯದಲ್ಲಿ ನಮಗೆ ಎಚ್ಚರವಾದಾಗ ನಾವೇಕೆ ಮತ್ತೆ ನೆಮ್ಮದಿಯಾಗಿ ನಿದ್ದೆ ಮಾಡಲಾಗುವುದಿಲ್ಲ ಎಂಬುದರ ಬಗ್ಗೆ ಹಲವಾರು ಸಂಶೋಧನೆಗಳು ಇಂದಿಗು ನಡೆಯುತ್ತಿವೆ.

ಆದರೂ ಅದರ ಕಾರಣಗಳ ಪತ್ತೆ ಇಂದಿಗು ಸಾಧ್ಯವಾಗಿಲ್ಲ. ಅತಿ ಮುಖ್ಯವಾದ ವಿಚಾರವೆಂದರೆ ಏಳರಿಂದ ಒಂಬತ್ತು ಗಂಟೆಗಳ ಸುಖ ನಿದ್ದೆಯ ನಂತರ ನಾವು ಎಚ್ಚೆತ್ತರೆ ಮತ್ತೆ ನಿದ್ದೆ ಮಾಡಲಾಗುವುದಿಲ್ಲ ಎಂಬ ಅಂಶ ಇಂದು ಬಹಿರಂಗಗೊಂಡಿದೆ. ನಿದ್ರಾಹೀನತೆ ಸಮಸ್ಯೆ ನಿವಾರಿಸುವ ಮನೆಮದ್ದು!

ಏಕೆಂದರೆ ಅಷ್ಟು ಹೊತ್ತಿನ ನಂತರ ನಮ್ಮ ದೇಹದಲ್ಲಿ ಹಲವಾರು ಬದಲಾವಣೆಗಳು ಕಂಡು ಬರುತ್ತವೆ ಮತ್ತು ನಮ್ಮ ದೇಹವು ತನ್ನನ್ನು ತಾನು ಪುನಃಶ್ಚೇತನಗೊಳಿಸಿಕೊಳ್ಳುತ್ತಿರುತ್ತದೆ. ಹಲವಾರು ಅಧ್ಯಯನಗಳಿಂದ ಧೃಡಪಟ್ಟ ವಿಚಾರವೆಂದರೆ ನಿದ್ದೆಯು ನಮ್ಮ ಮೆದುಳಿನ ಬೆಳವಣಿಗೆಯಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸುತ್ತದೆ. ಏನೇ ಆಗಲಿ ನಮಗೆ ನಿದ್ದೆ ಏಕೆ ಬೇಕು ಎಂಬುದು ಇಂದಿಗು ರಹಸ್ಯವಾಗಿದೆ.

ಯಾವುದೇ ಕಾರಣಕ್ಕು ನಾವು ನಿದ್ದೆಯನ್ನು ನಿರಂತರವಾಗಿ ಅಥವಾ ಅನಿಯಮಿತವಾಗಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನಿದ್ರಾಹೀನತೆಯು ಹಲವಾರು ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ನಮ್ಮಲ್ಲಿ ಉಂಟು ಮಾಡುತ್ತದೆ. ಅಲ್ಲದೆ ಇದರಿಂದ ಮಾನಸಿಕ ಒತ್ತಡ, ಜೀವನ ಶೈಲಿಯಲ್ಲಿ ಬದಲಾವಣೆ, ಫಿಸಿಯೋಲಾಜಿಕಲ್ ಡಿಸಾರ್ಡರ್, ಪಥ್ಯದಲ್ಲಿ ಬದಲಾವಣೆ ಇತ್ಯಾದಿ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ನಿದ್ರಾಹೀನತೆ ಸಮಸ್ಯೆಯೇ? ಈ ಆಹಾರಗಳನ್ನು ದೂರವಿಡಿ

ಹಾಗಾಗಿ ನಿದ್ದೆಯ ವಿಚಾರದಲ್ಲಿ ಪರಿಪೂರ್ಣತೆ ಮತ್ತು ಗುಣಮಟ್ಟವನ್ನು ಕಾಯ್ದುಕೊಳ್ಳುವ ಅಗತ್ಯ ನಮಗಿದೆ. ಆದರೆ ನಿದ್ರಾಹೀನತೆಯ ತೊಂದರೆಯನ್ನು ತಕ್ಷಣ ನೋಡಿ ಸರಿಪಡಿಸಿಕೊಂಡರೆ ಮುಂದೆ ಉಂಟಾಗುವ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಬಹುದು. ಒಂದು ವೇಳೆ ಈ ನಿದ್ರಾಹೀನತೆಯನ್ನು ಆರಂಭದಲ್ಲಿಯೇ ನೋಡಿಕೊಳ್ಳದಿದ್ದರೆ, ಮುಂದೆ ಇದು ನಮ್ಮ ರೋಗ ನಿರೋಧಕ ಶಕ್ತಿಯನ್ನು ಕುಂಠಿತಗೊಳಿಸಿ, ಹಲವಾರು ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ. ಇದರ ಜೊತೆಗೆ ನೆನಪಿನ ಶಕ್ತಿ ಕುಂದುವಿಕೆ, ನಿರ್ಧಾರ ತೆಗೆದುಕೊಳ್ಳುವ ಸಾಮಾರ್ಥ್ಯ ಕುಂಠಿತಗೊಳ್ಳುವುದು, ಇತ್ಯಾದಿ ಸಮಸ್ಯೆಗಳು ಉಲ್ಪಣಿಸುತ್ತವೆ. ಹಾಗಾಗಿ ನಿದ್ರಾಹೀನತೆಯನ್ನು ನಿವಾರಿಸುವ ಉಪಾಯಗಳ ಕಡೆಗೆ ನಾವು ಇಂದು ಗಮನ ಹರಿಸೋಣ ಬನ್ನಿ.

ಮಲಗುವ ಮೊದಲು ಸ್ವಲ್ಪ ಬಿಸಿ ಹಾಲು ಕುಡಿಯಿರಿ

ಮಲಗುವ ಮೊದಲು ಸ್ವಲ್ಪ ಬಿಸಿ ಹಾಲು ಕುಡಿಯಿರಿ

ಹಲವಾರು ಶತಮಾನಗಳಿಂದಲು ನಿದ್ರಾಹೀನತೆಗೆ ಇದೇ ಅತ್ಯುತ್ತಮ ಪರಿಹಾರವಾಗಿ ಕಾರ್ಯನಿರ್ವಹಿಸುತ್ತಿದೆ. ಹಾಲಿನಲ್ಲಿರುವ ಅಮೈನೊ ಆಮ್ಲವು ನಿದ್ದೆಯನ್ನು ಉದ್ದೀಪಿಸಿ, ಅದರ ಅಡ್ಡಪರಿಣಾಮಗಳನ್ನು ತಡೆಯುತ್ತದೆ. ನೀವು ಆಲ್ಕೋಹಾಲ್ ಸೇವಿಸಿದ್ದರು ಸಹ ಒಂದು ಲೋಟ ಬೆಚ್ಚಗಿನ ಹಾಲನ್ನು ಕುಡಿಯಿರಿ, ಇದರಿಂದಾಗಿ ಮುಂದೆ ನಿಮಗೆ ಬರಬಹುದಾದ ನಿದ್ರಾಹೀನತೆ ಸಮಸ್ಯೆ ದೂರವಾಗುತ್ತದೆ.

ಹಸಿವನ್ನು ನಿಯಂತ್ರಿಸಿ

ಹಸಿವನ್ನು ನಿಯಂತ್ರಿಸಿ

ಹಸಿವಾಗಿದ್ದಾಗ ನಿದ್ದೆ ಸರಿಯಾಗಿ ಬರುವುದಿಲ್ಲ ಎಂಬ ವಿಚಾರ ಎಲ್ಲರಿಗು ತಿಳಿದಿರುವಂಥಹದ್ದೆ. ರಾತ್ರಿಯ ಹೊತ್ತು ಹೊಟ್ಟೆ ತುಂಬ ಊಟ ಮಾಡುವುದರಿಂದಾಗಿ ಒಳ್ಳೆಯ ನಿದ್ದೆ ಬರುತ್ತದೆ. ಆದರೆ ಆದಷ್ಟು ಸಂಜೆಯ ಹೊತ್ತು ಸ್ನ್ಯಾಕ್ಸ್ ತಿನ್ನುವ ಚಟವನ್ನು ಬಿಟ್ಟು ಬಿಡಿ. ಇದು ಆರೋಗ್ಯಕ್ಕು ಒಳ್ಳೆಯದಲ್ಲ ಮತ್ತು ನಿದ್ದೆಗು ಒಳ್ಳೆಯದಲ್ಲ.

 ಹರ್ಬಲ್ ಟೀ

ಹರ್ಬಲ್ ಟೀ

ಚಹಾವು ನಮ್ಮನ್ನು ಚಟುವಟಿಕೆಯಿಂದ ಮತ್ತು ಲವಲವಿಕೆಯಿಂದ ಇರುವಂತೆ ಮಾಡುವ ಪಾನೀಯವಾಗಿದೆ. ಕೆಲವೊಂದು ಹರ್ಬಲ್ ಟೀ ಪ್ರಬೇಧಗಳು ನಮ್ಮ ನಿದ್ದೆಯನ್ನು ಉದ್ದೀಪಿಸುತ್ತವೆ. ಚಾಮೊಮೈಲ್, ಪ್ಯಾಷನ್ ಫ್ಲವರ್ ಅಥವಾ ಲೆಮನ್ ಬಾಲ್ಮ್ ಟೀಗಳು ನಿದ್ದೆಯನ್ನು ಪ್ರೇರೇಪಿಸುತ್ತವೆ ಎಂದು ತಿಳಿದುಬಂದಿದೆ.

ನಡಿಗೆ

ನಡಿಗೆ

ರಾತ್ರಿಯ ಊಟದ ನಂತರ ಸ್ವಲ್ಪ ಹೊತ್ತು ದೈಹಿಕ ಶ್ರಮವನ್ನುಂಟು ಮಾಡುವ ಚಟುವಟಿಕೆಗಳಲ್ಲಿ ನಾವು ತೊಡಗಿಸಿಕೊಳ್ಳುವುದರಿಂದಾಗಿ ಒಳ್ಳೆಯ ನಿದ್ದೆ ಬರುತ್ತದೆ. ನಿಮ್ಮ ಮಹಡಿಯ ಮೇಲೆ ಅಥವಾ ಮನೆಯ ಅಕ್ಕ ಪಕ್ಕ ಸ್ವಲ್ಪ ಹೊತ್ತು ಓಡಾಡುವುದರಿಂದ ಒಳ್ಳೆಯ ನಿದ್ದೆಯನ್ನು ಗಳಿಸಬಹುದು.

ಆದಷ್ಟು ಕೆಫೀನ್ ಸೇವನೆಯನ್ನು ಕಡಿಮೆ ಮಾಡಿ

ಆದಷ್ಟು ಕೆಫೀನ್ ಸೇವನೆಯನ್ನು ಕಡಿಮೆ ಮಾಡಿ

ಬೆಳಗಿನ ಹೊತ್ತು ಬಹುಶಃ ನೀವು ಹೆಚ್ಚಿನ ಕಾಫೀ ಸೇವನೆ ಮಾಡುವ ಅಭ್ಯಾಸವನ್ನು ಹೊಂದಿರಬಹುದು. ಅದು ನಿಮ್ಮ ಕೆಲಸಕ್ಕೆ ಅಗತ್ಯವಾಗಿರುವ ಪ್ರೇರೇಪಣೆಯನ್ನು ಸಹ ನೀಡುತ್ತಿರಬಹುದು. ಆದರೆ ಸಂಜೆಯ ಹೊತ್ತು ಈ ಕೆಫೀನ್ ಇರುವ ಪಾನೀಯಗಳನ್ನು ಸೇವನೆ ಮಾಡುವುದನ್ನು ಆದಷ್ಟು ಕಡಿಮೆ ಮಾಡಿ. ಇಲ್ಲವಾದಲ್ಲಿ ಮಾಡುವುದನ್ನೆ ತ್ಯಜಿಸಿಬಿಡಿ. ಕೆಫೀನ್ ನಿದ್ದೆಗೆ ಮಾರಕ ಎಂಬ ಅಂಶವನ್ನು ಮೊದಲು ಮನಗಾಣಿ.

English summary

How to cure sleep deprivation naturally

Sleeplessness during night can make you feel tired and sleepy during the whole day. You won't be able to concentrate on your work and will feel restless. During sleep all your body cells are repaired and rejuvenated. It is a natural process that will heal you and will boost your immunity. If you sleep well, you will be rarely afflicted by diseases and will be happy all time due to reduced stress levels. Have a look at some tips to sleep faster.
Story first published: Monday, September 28, 2015, 18:50 [IST]
X
Desktop Bottom Promotion