'ತರಕಾರಿಗಳ ಜ್ಯೂಸ್‌' ಕುಡಿದರೆ ಸಾಕು, ಯಾವ ಕಾಯಿಲೆಯೂ ಬರಲ್ಲ

By: manu
Subscribe to Boldsky

ತರಕಾರಿ ನೋಡಿದರೆ ಕೆಲವರಿಗೆ ಆಗಲ್ಲ. ಅದನ್ನು ತಿನ್ನುವುದು ಬಿಡಿ, ನೋಡಿದರೂ ದೂರ ಓಡಿಹೋಗುವರು. ಆದರೆ ತರಕಾರಿಗಳಲ್ಲಿ ಇರುವಂತಹ ಹಲವಾರು ರೀತಿಯ ಪೋಷಕಾಂಶಗಳು ದೇಹಕ್ಕೆ ತುಂಬಾ ಒಳ್ಳೆಯದು. ತರಕಾರಿ ಜ್ಯೂಸ್ ಅನ್ನು ಕುಡಿದರೆ ಅದರಿಂದ ದೇಹಕ್ಕೆ ಮತ್ತಷ್ಟು ಪೌಷ್ಠಿಕಾಂಶಗಳು ಸಿಗುವುದು. ಆದರೆ ಕೇವಲ ಒಂದು ತರಕಾರಿಯಲ್ಲಿರುವ ಪೌಷ್ಠಿಕಾಂಶವನ್ನು ಸೇವಿಸುವ ಬದಲು ವಿವಿಧ ರೀತಿಯ ತರಕಾರಿಗಳನ್ನು ಬಳಸಿಕೊಂಡು ಜ್ಯೂಸ್ ಮಾಡಿದರೆ ಅದರಿಂದ ಹೆಚ್ಚಿನ ಆರೋಗ್ಯ ಲಾಭ ಮತ್ತು ರುಚಿಯನ್ನು ಹೆಚ್ಚಿಸುವುದು.

ತರಕಾರಿಗಳ ಜ್ಯೂಸ್ ದೇಹಕ್ಕೆ ಸಮತೋಲಿತ ಅಹಾರ ಒದಗಿಸುವುದು. ಯಾಕೆಂದರೆ ಇದರಲ್ಲಿ ಹಲವಾರು ರೀತಿಯ ತರಕಾರಿಗಳು ಒಳಗೊಂಡಿರುವುದು. ಈ ಜ್ಯೂಸ್ ನಲ್ಲಿ ಪೈಥೋಕೆಮಿಕಲ್ಸ್, ಬಣ್ಣ, ರುಚಿ ಮತ್ತು ಪೋಷಕಾಂಶಗಳು ಒಳಗೊಂಡಿವೆ. ತರಕಾರಿ ಮತ್ತು ಹಣ್ಣುಗಳ ಜ್ಯೂಸ್ ನ್ನು ದೇಹವು ಬೇಗನೆ ಹೀರಿಕೊಳ್ಳುವುದು. ಇದರಿಂದ ಜೀರ್ಣಕ್ರಿಯೆಗೆ ಯಾವುದೇ ಸಮಸ್ಯೆಯಾಗದು. ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗಿರುವುದು, ಯೂರಿಕ್ ಆಮ್ಲ ಮಟ್ಟ, ಆತಂಕ, ಕೂದಲು ಉದುರುವಿಕೆ, ಒತ್ತಡ ಇತ್ಯಾದಿ ಸಮಸ್ಯೆಗಳನ್ನು ಇದು ನಿವಾರಿಸುವುದು.

ಲವಲವಿಕೆಯ ಆರೋಗ್ಯಕ್ಕೆ 'ತರಕಾರಿ ಜ್ಯೂಸ್' ಸಹಕಾರಿ

ತರಕಾರಿ ಜ್ಯೂಸ್‌ಗಳನ್ನು ತಯಾರಿಸಿಕೊಂಡು 15 ನಿಮಷಗಳ ಒಳಗಡೆ ಕುಡಿಯಬೇಕು. ಇಲ್ಲವಾದಲ್ಲಿ ಇದರಲ್ಲಿ ಇರುವ ಪೋಷಕಾಂಶಗಳು ದೇಹಕ್ಕೆ ಸಿಗದು. ಕೆಲವೊಂದು ತರಕಾರಿ ಜ್ಯೂಸ್ ಗಳಲ್ಲಿ ಇರುವ ಪೋಷಕಾಂಶಗಳು ಮತ್ತು ಅದು ಯಾವ ರೋಗಗಳಿಗೆ ಒಳ್ಳೆಯದು ಎಂದು ತಿಳಿದುಕೊಳ್ಳುವ....

ಕೊಲೆಸ್ಟ್ರಾಲ್ ಚಿಕಿತ್ಸೆಗೆ ಕ್ಯಾರೆಟ್ ಜ್ಯೂಸ್

ಕೊಲೆಸ್ಟ್ರಾಲ್ ಚಿಕಿತ್ಸೆಗೆ ಕ್ಯಾರೆಟ್ ಜ್ಯೂಸ್

ಪೊಟಾಶಿಯಂ ಮತ್ತು ಮೆಗ್ನಿಶಿಯಂ ಒಳಗೊಂಡಿರುವ ಕ್ಯಾರೆಟ್ ಜ್ಯೂಸ್ ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡುವುದು. ಇದು ಅಧಿಕ ರಕ್ತದೊತ್ತಡ ಮತ್ತು ರಕ್ತದ ಸಕ್ಕರೆ ಮಟ್ಟವನ್ನು ಸಾಮಾನ್ಯಗೊಳಿಸುವುದು. ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಇರುವವರು ನಿಯಮಿತವಾಗಿ ಕ್ಯಾರೆಟ್ ಜ್ಯೂಸ್ ಕುಡಿಯಿರಿ.

ಮೌನ ಕೊಲೆಗಾರ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಸರಳ ಸೂತ್ರ

ಯೂರಿಕ್ ಆಮ್ಲಕ್ಕೆ ಬೀಟ್ ರೂಟ್ ಜ್ಯೂಸ್

ಯೂರಿಕ್ ಆಮ್ಲಕ್ಕೆ ಬೀಟ್ ರೂಟ್ ಜ್ಯೂಸ್

ಕತ್ತರಿಸಿದಾಗ ರಕ್ತದಂತೆ ಕೆಂಪಗಿರುತ್ತದೆ ಎಂಬ ಏಕಮಾತ್ರ ಕಾರಣಕ್ಕೆ ಹೆಚ್ಚಿನವರು ಬೀಟ್ರೂಟನ್ನು ಇಷ್ಟಪಡುವುದಿಲ್ಲ. ಒಂದು ವೇಳೆ ನೀವೂ ಇದೇ ಕಾರಣಕ್ಕೆ ಬೀಟ್ರೂಟನ್ನು ದೂರ ಮಾಡಿದ್ದಿದ್ದಿರೆ ಏನನ್ನು ಕಳೆದುಕೊಂಡಿದ್ದೀರಿ ಎಂದು ತಿಳಿದ ಬಳಿಕ ವ್ಯಾಕುಲರಾಗಬಹುದು. ಇದರಲ್ಲಿರುವ ಹಲವು ವಿಟಮಿನ್, ಖನಿಜಗಳು ಮತ್ತು ವಿಶೇಷವಾಗಿ ನೈಟ್ರೇಟುಗಳು ರಕ್ತಸಂಚಾರವನ್ನು ಉತ್ತಮಗೊಳಿಸುತ್ತವ. ಅದರಲ್ಲೂ ಬೀಟ್ ರೂಟ್, ಕ್ಯಾರೆಟ್ ಮತ್ತು ಸೌತೆಕಾಯಿ ಹಾಕಿಕೊಂಡು ಆರೋಗ್ಯಕರ ತರಕಾರಿ ಜ್ಯೂಸ್ ತಯಾರಿಸಿಕೊಳ್ಳಬಹುದು. ಯೂರಿಕ್ ಆಮ್ಲದಿಂದ ಗಂಟುಗಳಲ್ಲಿ ಉಂಟಾಗಿರುವ ನೋವು ಮತ್ತು ಉರಿಯೂತವನ್ನು ಇದು ನಿವಾರಿಸುವುದು. ರಕ್ತದಲ್ಲಿ ಯೂರಿಕ್ ಆಮ್ಲದ ಮಟ್ಟವು ಹೆಚ್ಚಾದಾಗ ಅದು ಕಲ್ಲುಗಳನ್ನು ಉಂಟು ಮಾಡುವುದು. ಇದರಿಂದ ಗಂಟುಗಳಲ್ಲಿ ನೋವು, ಕೆಂಪಾಗುವುದು, ಉರಿಯೂತ ಮತ್ತು ತುರಿಕೆ ಕಾಣಿಸಿಕೊಳ್ಳುವುದು. ಇನ್ನು ಕೇವಲ ಬೀಟ್ ರೂಟಿನ ಜ್ಯೂಸ್ ಇಷ್ಟ ಪಡುವವರು ಹಸಿ ಬೀಟ್ ರೂಟಿನ ಅರ್ಧ ಭಾಗವನ್ನು ತುರಿದು ಕೊಂಚ ನೀರಿನೊಂದಿಗೆ ಮಿಕ್ಸಿಯಲ್ಲಿ ಕಡೆದು ಪ್ರತಿದಿನ ಒಂದು ಗ್ಲಾಸ್ ಕುಡಿಯುತ್ತಾ ಬನ್ನಿ.

ತೂಕ ಕಳಕೊಳ್ಳಲು ಜ್ಯೂಸ್

ತೂಕ ಕಳಕೊಳ್ಳಲು ಜ್ಯೂಸ್

10 ಗ್ರಾಂನಷ್ಟು ಕೇಲ್, ಐದು ಗ್ರಾಂ ಪಾಲಕ್, ಐದು ಗ್ರಾಂ ಸೌತೆಕಾಯಿ ಮತ್ತು ಐದು ಗ್ರಾಂ ಲೆಟೆಸ್ ಹಾಕಿಕೊಳ್ಳಿ. ಸ್ವಲ್ಪ ನೀರು ಹಾಕಿಕೊಂಡು ಒಳ್ಳೆಯ ಜ್ಯೂಸ್ ಮಾಡಿಕೊಳ್ಳಿ ಮತ್ತು ಕುಡಿಯಿರಿ. ಸೊಂಟ ಮತ್ತು ತೊಡೆಗಳಲ್ಲಿ ಇರುವಂತಹ ಕೊಬ್ಬನ್ನು ಇದು ತೆಗೆಯುವುದು. ಖಾಲಿ ಹೊಟ್ಟೆಯಲ್ಲಿ ಈ ಜ್ಯೂಸ್ ಕುಡಿಯಿರಿ. ಉತ್ತಮ ಫಲಿತಾಂಶ ಪಡೆಯಲು ಒಂದು ತಿಂಗಳ ಕಾಲ ಇದನ್ನು ಪಾಲಿಸಿಕೊಂಡು ಹೋಗಿ.

ವಯಸ್ಸಾಗುವುದನ್ನು ತಡೆಯಲು ಕ್ಯಾಬೇಜ್ ಮತ್ತು ಕೆಂಪು ಮೆಣಸಿನ ಜ್ಯೂಸ್

ವಯಸ್ಸಾಗುವುದನ್ನು ತಡೆಯಲು ಕ್ಯಾಬೇಜ್ ಮತ್ತು ಕೆಂಪು ಮೆಣಸಿನ ಜ್ಯೂಸ್

ನೆರಿಗೆ, ಕಪ್ಪು ಕಲೆ ಮತ್ತು ನಿಸ್ತೇಜ ತ್ವಚೆಯು ವಯಸ್ಸಾಗುವುದರ ಲಕ್ಷಣವಾಗಿದೆ. ಈ ಲಕ್ಷಣಗಳು ಕಾಣದಂತೆ ಮಾಡಲು ಐದು ಗ್ರಾಂ ಕ್ಯಾಬೇಜ್, 4 ಗ್ರಾಂ ಕ್ಯಾರೆಟ್ ಮತ್ತು 3 ಗ್ರಾಂ ಕೆಂಪು ಮೆಣಸು ಹಾಕಿಕೊಂಡು ಜ್ಯೂಸ್ ತಯಾರಿಸಿ ಕುಡಿಯಿರಿ. ಇದನ್ನು ಪ್ರತಿದಿನ ಮೂರು ವಾರಗಳ ಕಾಲ ಕುಡಿಯಬೇಕು. ಬರೀ

ಕ್ಯಾಬೇಜ್ ಜ್ಯೂಸ್ ರೆಸಿಪಿ ತಯಾರಿಸುವ ವಿಧಾನ

ಬೇಕಾಗುವ ಸಾಮಗ್ರಿಗಳು:

1. ಒ೦ದು ದೊಡ್ಡ ನೇರಳೆ ಅಥವಾ ಹಸಿರು ಬಣ್ಣದ ಕ್ಯಾಬೇಜು (ನೇರಳೆ ಬಣ್ಣದ ಕ್ಯಾಬೇಜಿನಲ್ಲಿ ಆ೦ಟಿ ಆಕ್ಸಿಡೆ೦ಟ್ ಗಳು ಹೆಚ್ಚಿನ ಪ್ರಮಾಣದಲ್ಲಿರುತ್ತವೆ). 2. ಸಿಪ್ಪೆ ಸುಲಿದಿರುವ ಲಿ೦ಬೆ ಹಣ್ಣುಗಳು.

3. ಎರಡು ಸೇಬುಗಳು.

4. ಎರಡು ಇ೦ಚು ಉದ್ದದ ಶು೦ಠಿ

ತಯಾರಿಕಾ ವಿಧಾನ

ತಯಾರಿಕಾ ವಿಧಾನ

ಮೇಲಿನ ಎಲ್ಲಾ ಸಾಮಗ್ರಿಗಳನ್ನೂ ಜ್ಯೂಸರ್ ಒ೦ದನ್ನು ಬಳಸಿಕೊ೦ಡು ಸ೦ಸ್ಕರಿಸಿ ಕೂಡಲೇ ಕುಡಿಯಿರಿ...!! ಮತ್ತೊ೦ದು ವಿಧಾನವೆ೦ದರೆ, ಮೇಲಿನ ಎಲ್ಲಾ ಸಾಮಗ್ರಿಗಳನ್ನು ಚೆನ್ನಾಗಿ ಬೆರೆಸಿಕೊಳ್ಳುವ೦ತಾಗಲು ನೀವು ಬ್ಲೆ೦ಡರ್ ಒ೦ದನ್ನು ಬಳಸಿಕೊಳ್ಳಬಹುದು ಹಾಗೂ ಬಳಿಕ ದೊರೆಯುವ ರಸದಿ೦ದ ಬಳಸಿಕೊ೦ಡಿರುವ ಸಾಮಗ್ರಿಗಳ ತುಣುಕಗಳನ್ನು ಬೇರ್ಪಡಿಸಿ, ರಸವನ್ನು ಪಡೆಯಬಹುದು. ಹಾಗೆ ಪಡೆದ ರಸವನ್ನು ನಿಮ್ಮಿಷ್ಟದ ಗ್ಲಾಸ್ ಒ೦ದರಲ್ಲಿ ಹಾಕಿಕೊ೦ಡು, ಈ ಆರೋಗ್ಯದಾಯಕ ಪಾನೀಯವನ್ನು ಕುಡಿಯಿರಿ.

ಆತಂಕ ಕಡಿಮೆಗೊಳಿಸಲು ಲೆಟೆಸ್ ಮತ್ತು ಸೌತೆಕಾಯಿ ಜ್ಯೂಸ್

ಆತಂಕ ಕಡಿಮೆಗೊಳಿಸಲು ಲೆಟೆಸ್ ಮತ್ತು ಸೌತೆಕಾಯಿ ಜ್ಯೂಸ್

ತರಕಾರಿ ಜ್ಯೂಸ್ ಕುಡಿಯುವುದರಿಂದ ಆತಂಕ ಹಾಗೂ ಒತ್ತಡ ನಿವಾರಣೆ ಮಾಡಬಹುದು. ಸೌತೆಕಾಯಿ, ಲೆಟೆಸ್ ನ್ನು ಹಾಕಿ ಜ್ಯೂಸ್ ಮಾಡಿ. ಇದಕ್ಕೆ ಐಸ್ ಹಾಕಿ ಕುಡಿಯಿರಿ. ಇದು ನರಗಳಿಗೆ ಶಮನ ನೀಡಿ ಆತಂಕ ಕಡಿಮೆಗೊಳಿಸುವುದು. ಬರೀ ಸೌತೆಕಾಯಿ ಜ್ಯೂಸ್ ಇಷ್ಟಪಡುವವರಿಗೆ ಇಲ್ಲಿದೆ ನೋಡಿ ಸಿಂಪಲ್ ಜ್ಯೂಸ್ ರೆಸಿಪಿ

ಬೇಕಾಗುವ ಸಾಮಗ್ರಿಗಳು

ಬೇಕಾಗುವ ಸಾಮಗ್ರಿಗಳು

*ಸೌತೆಕಾಯಿ - ಒ೦ದು (ಸಿಪ್ಪೆ ತೆಗೆದು ಹೆಚ್ಚಿಟ್ಟದ್ದು).

*ಶು೦ಠಿ - ಮಧ್ಯಮ ಗಾತ್ರದ ಒ೦ದು ಶು೦ಠಿ.

*ಸಕ್ಕರೆ - ಒ೦ದು ಟೀ ಚಮಚದಷ್ಟು.

*ಜೀರಿಗೆ ಪುಡಿ - ಅರ್ಧ ಟೀ ಚಮಚದಷ್ಟು.

*ಕಪ್ಪುಪ್ಪು - ಅರ್ಧ ಟೀ ಚಮಚದಷ್ಟು.

*ನೀರು - ಒ೦ದು ಕಪ್ ನಷ್ಟು

ತಯಾರಿಕಾ ವಿಧಾನ:

1. ಮಿಕ್ಸರ್ ಅನ್ನು ಬಳಸಿಕೊ೦ಡು ಸೌತೆಕಾಯಿಯ ಹೋಳುಗಳು, ಶು೦ಠಿ, ಹಾಗೂ ನೀರನ್ನು ಚೆನ್ನಾಗಿ ಬೆರೆಸಿರಿ. ಒ೦ದು ನಯವಾದ ಪೇಸ್ಟ್‌ನ ರೂಪಕ್ಕೆ ತ೦ದುಕೊಳ್ಳಿರಿ.

2. ಅಗತ್ಯವಿದ್ದಲ್ಲಿ ಈ ಮಿಶ್ರಣವನ್ನು ಹೆಚ್ಚುವರಿ ನೀರನ್ನು ಸೇರಿಸಿಕೊಳ್ಳುವುದರ ಮೂಲಕ ತೆಳ್ಳಗೆ ಮಾಡಿಕೊಳ್ಳಿರಿ.

3. ಈ ಜ್ಯೂಸ್ ಅನ್ನು ದೊಡ್ಡ ಬಟ್ಟಲೊ೦ದಕ್ಕೆ ವರ್ಗಾಯಿಸಿರಿ. ಬಳಿಕ ಇದಕ್ಕೆ ಕಪ್ಪುಪ್ಪು, ಸಕ್ಕರೆ, ಹಾಗೂ ಜೀರಿಗೆ ಪುಡಿಯನ್ನು ಸೇರಿಸಿರಿ. ಇವೆಲ್ಲವನ್ನೂ ಚೆನ್ನಾಗಿ ಬೆರಕೆ ಮಾಡಿರಿ.

4. ಜ್ಯೂಸ್ ಅನ್ನು ಲೋಟಗಳಿಗೆ ಸುರಿದು ಕುಡಿಯಲು ನೀಡಿರಿ. ಈ ಆಹ್ಲಾದಕರ, ತ೦ಪನ್ನೀಯುವ ಪಾನೀಯವನ್ನು ಕುಡಿಯುವುದರ ಮೂಲಕ ಸುಡು ಬಿಸಿಲ ಬೇಗೆಯನ್ನು ಹೊಡೆದೋಡಿಸಿರಿ.

ಕೊಬ್ಬು ಕರಗಿಸುವ ಜ್ಯೂಸ್

ಕೊಬ್ಬು ಕರಗಿಸುವ ಜ್ಯೂಸ್

10 ಗ್ರಾಂನಷ್ಟು ಹಾಗಲಕಾಯಿ, 5 ಗ್ರಾಂನಷ್ಟು ಬಸಳೆ, 5 ಗ್ರಾಂನಷ್ಟು ಸೌತೆಕಾಯಿ ಮತ್ತು 5 ಗ್ರಾಂನಷ್ಟು ಹೂಕೋಸು ನ್ನು ಸೇರಿಸಿಕೊಂಡು ಜ್ಯೂಸ್ ಮಾಡಿ. ತರಕಾರಿ ಜ್ಯೂಸ್ ಗೆ ಸ್ವಲ್ಪ ನೀರು ಹಾಕಿಕೊಂಡು ಸೇವಿಸಿ. ಈ ಜ್ಯೂಸ್ ಸೊಂಟ ಹಾಗೂ ಹೊಟ್ಟೆಯಲ್ಲಿರುವ ಕೊಬ್ಬನ್ನು ಕರಗಿಸುತ್ತದೆ. ಖಾಲಿ ಹೊಟ್ಟೆಯಲ್ಲಿ ಈ ಜ್ಯೂಸ್ ಕುಡಿದರೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಧನಾತ್ಮಕ ಫಲಿತಾಂಶ ಪಡೆಯಲು ಒಂದು ತಿಂಗಳ ಕಾಲ ಈ ಚಿಕಿತ್ಸೆಯನ್ನು ಪಾಲಿಸಿಕೊಂಡು ಹೋಗಿ.

ಕೂದಲು ಉದುರುವಿಕೆಗೆ ಜ್ಯೂಸ್

ಕೂದಲು ಉದುರುವಿಕೆಗೆ ಜ್ಯೂಸ್

500 ಗ್ರಾಮ ಜಲಸಸ್ಯದ ಜ್ಯೂಸ್ ತೆಗೆದುಕೊಂಡು ಅದನ್ನು ಕೂದಲು ಮತ್ತು ತಲೆಬುರುಡೆಗೆ ಸರಿಯಾಗಿ ಮಸಾಜ್ ಮಾಡಿಕೊಳ್ಳಿ. 15 ನಿಮಿಷ ಕಾಲ ಜ್ಯೂಸ್ ತಲೆಯಲ್ಲಿ ಒಣಗಲಿ. ಬಳಿಕ ಬಿಸಿ ನೀರಿನಿಂದ ಕೂದಲು ತೊಳೆಯಿರಿ.

ತುಳಸಿ ಎಲೆ ಮತ್ತು ಸೌತೆಕಾಯಿಯ ಪಾನಕ

ತುಳಸಿ ಎಲೆ ಮತ್ತು ಸೌತೆಕಾಯಿಯ ಪಾನಕ

ತುಳಸಿ ಮತ್ತು ಸೌತೆಕಾಯಿಯನ್ನು ಬೆರೆಸಿದ ನೀರು ಕುಡಿದರೆ ಇದು ನಾಲಿಗೆಗೆ ಚುರುಗುಟ್ಟಿಸುವ ರುಚಿಯನ್ನು ನೀಡುವ ಜೊತೆಗೇ ತುಳಸಿ ಮತ್ತು ಸೌತೆ ಎರಡರ ಆರೋಗ್ಯಕರ ಪ್ರಯೋಜನವನ್ನೂ ಪಡೆಯಬಹುದು. ಇದಕ್ಕಾಗಿ ಒಂದು ಕಪ್ ಸಕ್ಕರೆಯನ್ನು ಕೊಂಚ ನೀರಿನಲ್ಲಿ ಬೆರೆಸಿ ಬಿಸಿಮಾಡಿ. ಇದಕ್ಕೆ ಕೆಲವು ಲಿಂಬೆಯ ಹನಿಗಳನ್ನು ಸೇರಿಸಿ. ಸಕ್ಕರೆ ಕರಗಿದ ಬಳಿಕ ಉರಿ ಆರಿಸಿ ಅರ್ಧ ಸೌತೆಕಾಯಿಯ ತುಂಡುಗಳು ಮತ್ತು ಕೆಲವು ತುಳಸಿ ಎಲೆಗಳನ್ನು ಸೇರಿಸಿ. ತಣಿದ ಬಳಿಕ ಈ ಮಿಶ್ರಣವನ್ನು ಒಂದು ದೊಡ್ಡ ಬಾಟಲಿ ನೀರಿಗೆ ಬೆರೆಸಿ ಫ್ರಿಜ್ಜಿನಲ್ಲಿ ಒಂದು ಘಂಟೆ ಇಡಿ. ಬಳಿಕ ಇಡಿಯ ದಿನ ಬಾಯಾರಿಕೆಯಾದಾಗಲೆಲ್ಲಾ ಐಸ್ ನೊಂದಿಗೆ ಅಥವಾ ಇಲ್ಲದೇ ಕೊಂಚಕೊಂಚವಾಗಿ ಸೇವಿಸುತ್ತಾ ಇರಿ.

ಸೌತೆ ಮತ್ತು ಲಿಂಬೆಯ ಪಾನಕ

ಸೌತೆ ಮತ್ತು ಲಿಂಬೆಯ ಪಾನಕ

ಸೌತೆಕಾಯಿಯನ್ನು ಚಿಕ್ಕದಾಗಿ ತುಂಡರಿಸಿ ಈ ತುಂಡುಗಳನ್ನು ಒಂದು ದೊಡ್ಡ ಬಾಟಲಿಯಲ್ಲಿ ಹಾಕಿ ನೀರು ತುಂಬಿ. ಇದಕ್ಕೆ ಲಿಂಬೆರಸವನ್ನು ಬೆರೆಸಿ ಫ್ರಿಜ್ಜಿನಲ್ಲಿಡಿ. ಬಾಯಾರಿಕೆಯಾದಾಗಲೆಲ್ಲಾ ಈ ನೀರನ್ನು ತಣ್ಣಗಿರುವಂತೆ ಕುಡಿದರೆ ರುಚಿಯಾಗಿಯೂ ಆರೋಗ್ಯಕರವೂ ಆಗಿರುತ್ತದೆ.

ಕಲ್ಲಂಗಡಿ+ ಸೌತೆ ಜ್ಯುಸ್

ಕಲ್ಲಂಗಡಿ+ ಸೌತೆ ಜ್ಯುಸ್

ಇದಕ್ಕೆ ಕೊಂಚವೇ ಕಾಳುಮೆಣಸಿನ ಪುಡಿ ಮತ್ತು ಕೆಲ ಹನಿ ಲಿಂಬೆರಸವನ್ನು ಸೇರಿಸಿ. ಅಗತ್ಯವೆನಿಸಿದಷ್ಟು ನೀರನ್ನು ಸೇರಿಸಿ. ಈ ಪಾನೀಯವನ್ನು ಮಧ್ಯಾಹ್ನದ ಊಟ ಅಥವಾ ರಾತ್ರಿಯ ಊಟದ ಬಳಿಕ ಸೇವಿಸುವುದರಿಂದ ಹೆಚ್ಚಿನ ಪ್ರಯೋಜನ ದೊರಕುತ್ತದೆ. ಇದು ದೇಹವನ್ನು ತಂಪಾಗಿಟ್ಟು ನೀರಿನ ಕೊರತೆಯಿಂದ ಕಾಪಾಡುತ್ತದೆ.

ಮಧುಮೇಹಿಗಳಿಗೆ ಹಾಗಲಕಾಯಿ ಜ್ಯೂಸ್

ಮಧುಮೇಹಿಗಳಿಗೆ ಹಾಗಲಕಾಯಿ ಜ್ಯೂಸ್

ಹಾಗಾಲಕಾಯಿಮ ಜ್ಯೂಸ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮಧುಮೇಹಿಗಳು ಇದನ್ನು ಕುಡಿದರೆ ಇನ್ಸುಲಿನ್ ಮಾತ್ರೆಯ ಅಗತ್ಯ ಕಂಡು ಬರುವುದಿಲ್ಲ. ಅಷ್ಟರ ಮಟ್ಟಿಗೆ ಪ್ರಯೋಜನಕಾರಿ. ಇದನ್ನು ಕುಡಿಯಲು ತುಂಬಾ ಕಹಿ ಅನಿಸಿದರೆ ಸ್ವಲ್ಪ ನಿಂಬೆ ರಸ ಹಿಂಡಿ ಕುಡಿಯಿರಿ. ಮಧುಮೇಹ ಇಲ್ಲದವರು ಇದಕ್ಕೆ ಸಕ್ಕರೆ ಮತ್ತು ನಿಂಬೆ ರಸ ಹಾಕಿ ಕುಡಿಯಬಹುದು.

ಹಾಗಲಕಾಯಿ ಜ್ಯೂಸ್‌ನಲ್ಲಿದೆ 15 ಆರೋಗ್ಯಕರ ಪ್ರಯೋಜನಗಳು

English summary

Vegetable juices for Health and Disease Prevention

Vegetable and fruit juices are known for their health benefits. They are easily absorbed and digested since it is in a liquid form. Vegetable juices help to alleviate most of the diseases such as high cholesterol level, uric acid level, anxiety, hair loss, stress etc.
Please Wait while comments are loading...
Subscribe Newsletter