ಅರಿಶಿನ ಚಹಾ ಕುಡಿದರೆ ಈ ಎಲ್ಲಾ ಲಾಭಗಳು ನಿಮಗೆ ಸಿಗುವುದು

Posted By: Lekhaka
Subscribe to Boldsky
ಆರೋಗ್ಯಕ್ಕೆ ಲಾಭದಾಯಕವಾಗಿರುವ ಅರಿಶಿನ ಟೀ ತಯಾರಿಸುವ ವಿಧಾನ ಹೇಗೆ? Boldsky

ಭಾರತವು ಸಾಂಬಾರ ಪದಾರ್ಥಗಳ ತವರು ಎಂದರೆ ಯಾವುದೇ ತಪ್ಪಿಲ್ಲ ಬಿಡಿ. ಸಾವಿರಾರು ವರ್ಷಗಳ ಹಿಂದಿನಿಂದಲೂ ಭಾರತೀಯರು ಸಾಂಬಾರ ಪದಾರ್ಥಗಳನ್ನು ಬಳಸುತ್ತಾ ಬಂದಿದ್ದಾರೆ. ಇದರಲ್ಲಿ ಇರುವಂತಹ ಕೆಲವೊಂದು ಔಷಧೀಯ ಗುಣಗಳಿಂದಾಗಿ ಇವುಗಳನ್ನು ಆಯುರ್ವೇದದಲ್ಲೂ ಔಷಧಿಗಳಿಗೆ ಬಳಲಾಗುತ್ತಾ ಇದೆ. ವಿದೇಶದದಿಂದ ಬಂದಂತಹ ಹಲವಾರು ಮಂದಿ ವ್ಯಾಪಾರಿಗಳು ಹಾಗೂ ಪ್ರವಾಸಿಗರು ಭಾರತದ ಸಾಂಬಾರ ಪದಾರ್ಥಗಳನ್ನು ಕೊಂಡುಹೋಗಿ ತಮ್ಮ ದೇಶಗಳಲ್ಲಿ ಪರಿಚಯಿಸಿದ್ದಾರೆ.

ದಕ್ಷಿಣ ಏಷ್ಯಾ ಅದರಲ್ಲೂ ಭಾರತದಲ್ಲಿ ವಿದೇಶಿಗರು ಅರಿಶಿನವನ್ನು ಕಂಡು ಹಿಡಿದರು ಎಂದು ಹೇಳಲಾಗುತ್ತದೆ. ಇದರಲ್ಲಿರುವ ಹಲವಾರು ರೀತಿಯ ಔಷಧೀಯ ಗುಣಗಳಿಂದ ಇದನ್ನು ಆಯುರ್ವೇದದೊಂದಿಗೆ ಅಡುಗೆಯಲ್ಲೂ ಬಳಸಲಾಗುತ್ತದೆ. ಭಾರತೀಯರು ತಮ್ಮ ಹೆಚ್ಚಿನ ಎಲ್ಲಾ ಅಡುಗೆಗಳಲ್ಲಿ ಅರಿಶಿನ ಬಳಸುವರು. ಅರಿಶಿನವನ್ನು ಕೆಲವೊಂದು ಧಾರ್ಮಿಕ ಚಟುವಟಿಕೆಗಳಲ್ಲಿ ಬಳಸುವ ಕಾರಣದಿಂದ ಇದನ್ನು ಪವಿತ್ರವೆಂದು ನಂಬಲಾಗುತ್ತದೆ. ಯಾವುದೇ ರೀತಿಯ ಗಾಯದಿಂದ ಹಿಡಿದು ದೊಡ್ಡ ಮಟ್ಟದ ಕ್ಯಾನ್ಸರ್ ಅನ್ನು ತಡೆಯುವಂತಹ ಶಕ್ತಿ ಅರಿಶಿನಕ್ಕೆ ಇದೆ ಎಂದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ.

ಹಾಲಿಗೆ ಅರಿಶಿನ ಹಾಕಿ ಕುಡಿದರೆ-ಹೊಟ್ಟೆಯ ಕೊಬ್ಬು ಕರಗುತ್ತದೆ...

ಭಾರತದಲ್ಲಿ ಹೆಚ್ಚಾಗಿ ಅರಿಶಿನವನ್ನು ಅಡುಗೆಯಲ್ಲಿ ಅಥವಾ ಬಿಸಿ ಹಾಲು ಅಥವಾ ಬಿಸಿ ನೀರಿಗೆ ಹಾಕಿ ಕುಡಿಯಲಾಗುತ್ತದೆ. ಆದರೆ ಇಂದಿನ ದಿನಗಳಲ್ಲಿ ಅರಿಶಿನ ಚಹಾವು ವಿಶ್ವದಾದ್ಯಂತ ಜನಪ್ರಿಯತೆ ಪಡೆದುಕೊಂಡಿದೆ. ಅರಶಿನ ಚಹಾದಲ್ಲಿ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ. ಆ ಲಾಭಗಳು ಯಾವುದು ಮತ್ತು ಅರಿಶಿನ ಚಹಾ ತಯಾರಿಸುವುದು ಹೇಗೆ ಎಂದು ತಿಳಿಯಿರಿ.

ತಯಾರಿಸುವ ವಿಧಾನ

*ಒಂದು ಸಣ್ಣ ಪಾತ್ರೆಯಲ್ಲಿ ಎರಡು ಕಪ್ ನೀರು ಬಿಸಿ ಮಾಡಿ.

*ಒಂದು ಇಂಚಿನಷ್ಟಿರುವ ತಾಜಾ ಅರಿಶಿನ ಕೊಂಬನ್ನು ತುರಿದು ನೀರಿಗೆ ಹಾಕಿ.

*ಅರಿಶಿನ ಕೊಂಬು ಸಿಗಲಿಲ್ಲವೆಂದಾದರೆ ನೀವು ಒಂದು ಚಮಚ ಅರಶಿನ ಹುಡಿ ಬಳಸಬಹುದು.

*ಪಾತ್ರೆಗೆ ಮುಚ್ಚಳ ಮುಚ್ಚಿಕೊಳ್ಳಿ ಮತ್ತು 2-3 ನಿಮಿಷ ಕಾಲ ಇದು ಕುದಿಯಲು ಬಿಡಿ.

*ಈಗ ಈ ಮಿಶ್ರಣವನ್ನು ಒಂದು ಲೋಟಕ್ಕೆ ಹಾಕಿ.

*ಒಂದು ಚಮಚ ಜೇನುತುಪ್ಪ ಮತ್ತು ಚಿಟಿಕೆ ಕರಿಮೆಣಸಿನ ಹುಡಿ ಹಾಕಿ ಕಲಸಿ.

*ಪ್ರತಿನಿತ್ಯ ಉಪಹಾರಕ್ಕೆ ಮೊದಲು ಇದನ್ನು ಸೇವಿಸಿ.

ಕ್ಯಾನ್ಸರ್ ಅಪಾಯ ತಪ್ಪಿಸುವುದು

ಕ್ಯಾನ್ಸರ್ ಅಪಾಯ ತಪ್ಪಿಸುವುದು

ಮನುಷ್ಯರನ್ನು ಕಾಡುವಂತಹ ಅತ್ಯಂತ ಮಾರಕ ಕಾಯಿಲೆಯೆಂದರೆ ಅದು ಕ್ಯಾನ್ಸರ್ ಎಂದು ಪರಿಗಣಿಸಲಾಗುತ್ತದೆ. ಇದು ಮನುಷ್ಯನ ಜೀವನವನ್ನೇ ಹಾಳುಗೆಡವಿ ಬಿಡಬಹುದು. ಅರಿಶಿನದಲ್ಲಿರುವ ಉರಿಯೂತ ಶಮನಕಾರಿ ಗುಣ ಮತ್ತು ಆ್ಯಂಟಿಆಕ್ಸಿಡೆಂಟ್ ಕ್ಯಾನ್ಸರ್ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುವುದು.

ಅಲ್ಝೈಮರ್ ಕಾಯಿಲೆ ತಡೆಯುವುದು

ಅಲ್ಝೈಮರ್ ಕಾಯಿಲೆ ತಡೆಯುವುದು

ಅಲ್ಝೈಮರ್ ಕಾಯಿಲೆಯಲ್ಲಿ ಮನುಷ್ಯನು ತನ್ನ ಕಾರ್ಯಚಟುವಟಿಕೆ ಸಾಮರ್ಥ್ಯ ಕಳೆದುಕೊಳ್ಳುವನು. ವಯಸ್ಸಾದಂತೆ ಇದು ಸಾಮಾನ್ಯ. ಆದರೆ ಅರಶಿನದಲ್ಲಿರುವ ಆ್ಯಂಟಿಆಕ್ಸಿಡೆಂಟ್ ಮೆದುಳಿನ ಕೋಶ ನಾಶವಾಗುವುದನ್ನು ತಡೆದು ರೋಗ ಬರದಂತೆ ಕಾಪಾಡುವುದು.

ಸಂಧಿವಾತಕ್ಕೆ

ಸಂಧಿವಾತಕ್ಕೆ

ವಯಸ್ಸಾಗುತ್ತ ಇರುವಂತೆ ಬರುವಂತಹ ಮತ್ತೊಂದು ಕಾಯಿಲೆಯೆಂದರೆ ಅದು ಸಂಧಿವಾತ. ಇದರಿಂದ ಗಂಟು ಹಾಗೂ ಮಣಿಕಟ್ಟಿನಲ್ಲಿ ನೋವು ಕಾಣಿಸಿಕೊಳ್ಳುವುದು. ಅರಶಿನದಲ್ಲಿರುವ ಉರಿಯೂತ ಶಮನಕಾರಿ ಗುಣಗಳು ನೋವು ಮತ್ತು ಸೆಳೆತ ಕಡಿಮೆ ಮಾಡುವುದು.

ರೋಗನಿರೋಧಕ ಶಕ್ತಿ ಸುಧಾರಣೆ

ರೋಗನಿರೋಧಕ ಶಕ್ತಿ ಸುಧಾರಣೆ

ಅರಿಶಿನ, ಜೇನುತುಪ್ಪ ಮತ್ತು ಕರಿಮೆಣಸಿನ ಹುಡಿ ಹಾಕಿರುವ ಚಹಾವು ರೋಗನಿರೋಧಕ ಶಕ್ತಿ ಸುಧಾರಣೆ ಮಾಡುವುದು. ಇದರಿಂದ ರೋಗಗಳ ವಿರುದ್ದ ಹೋರಾಡುವ ಶಕ್ತಿ ದೇಹಕ್ಕೆ ಸಿಗುವುದು.

 ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ

ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ

ರಕ್ತನಾಳಗಳಲ್ಲಿ ಅಂಟಿಕೊಳ್ಳುವ ಕೆಟ್ಟ ಕೊಲೆಸ್ಟ್ರಾಲ್ ಈ ಮೂಲಕ ಹೃದಯದ ಮೇಲಿನ ಒತ್ತಡವನ್ನು ಹೆಚ್ಚಿಸಿ ಹೃದಯ ಸಂಬಂಧಿ ಕಾಯಿಲೆಗಳ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಅರಿಶಿನದ ಸೇವನೆಯಿಂದ ಈ ಜಿಡ್ದು ಸಡಿಲಗೊಂಡು ನಿವಾರಣೆಯಾಗಲು ನೆರವಾಗುವ ಮೂಲಕ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ. ಅಲ್ಲದೇ ಯಕೃತ್ ಅನ್ನು ನೈಸರ್ಗಿಕವಾಗಿ ಸ್ವಚ್ಛಗೊಳಿಸಲೂ ಅರಿಸಿನ ನೆರವಾಗುತ್ತದೆ. ಚೀನಾದಲ್ಲಿ ಖಿನ್ನತೆಗೆ ಚಿಕಿತ್ಸೆಯಾಗಿ ಅರಿಶಿನವನ್ನು ಸಾವಿರಾರು ವರ್ಷಗಳಿಂದ ಬಳಸಲ್ಪಡುತ್ತಾ ಬರಲಾಗಿದೆ.

ಯುವೆಟಿಸ್ ತಡೆಯುವುದು

ಯುವೆಟಿಸ್ ತಡೆಯುವುದು

ಯುವೆಟಿಸ್ ತುಂಬಾ ನೋವಿನ ಹಾಗೂ ಅಪಾಯಕಾರಿ ಪರಿಸ್ಥಿತಿಯಾಗಿದೆ. ಇದರಲ್ಲಿ ಕಣ್ಣಿನ ಪೊರೆಗೆ ಉರಿಯೂತ ಉಂಟಾಗಿ ಕಣ್ಣು ಕೆಂಪಗೆ ಆಗುವುದು ಮತ್ತು ದೃಷ್ಟಿ ಮಂದವಾಗುವುದು. ಅರಿಶಿನದಲ್ಲಿರುವ ಕರ್ಕ್ಯೂಮಿನ್ ಕಣ್ಣಿನ ಅಂಗಾಂಶಗಳನ್ನು ಶಾಂತವಾಗಿಡುವುದು ಮತ್ತು ಪರಿಸ್ಥಿತಿಯನ್ನು ಕಡಿಮೆ ಮಾಡುವುದು.

ಕೆರಳಿಸುವ ಕರುಳಿನ ಸಮಸ್ಯೆ

ಕೆರಳಿಸುವ ಕರುಳಿನ ಸಮಸ್ಯೆ

ಕೆರಳಿಸುವ ಕರುಳಿನ ಸಮಸ್ಯೆ(ಐಬಿಎಸ್) ಜೀರ್ಣಾಂಗದ ಉರಿಯೂತವಾಗಿದ್ದು, ಇದರಿಂದ ಆ ವ್ಯಕ್ತಿಗೆ ಅತಿಸಾರ ಅಥವಾ ಮಲಬದ್ಧತೆ ಸಮಸ್ಯೆ ಕಾಡಬಹುದು. ಅರಿಶಿನ ಚಹಾದಲ್ಲಿರುವ ಆ್ಯಂಟಿಆಕ್ಸಿಡೆಂಟ್ ಮತ್ತು ಕರ್ಕ್ಯೂಮಿನ್ ಜೀರ್ಣಾಂಗ ವ್ಯವಸ್ಥೆಯಲ್ಲಿರುವ ಉರಿಯೂತ ಕಡಿಮೆ ಮಾಡುವುದು.

ಮಧುಮೇಹ ತಡೆಯುವುದು ಮತ್ತು ನಿಯಂತ್ರಿಸುವುದು

ಮಧುಮೇಹ ತಡೆಯುವುದು ಮತ್ತು ನಿಯಂತ್ರಿಸುವುದು

ಅರಿಶಿನಲ್ಲಿರುವ ಆ್ಯಂಟಿಆಕ್ಸಿಡೆಂಟ್ ಮತ್ತು ಕರ್ಕ್ಯೂಮಿನ್ ಅಂಶವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಡುವುದು. ಇದರಿಂದ ಮಧುಮೇಹ ಬರದಂತೆ ತಡೆಯುವುದು ಮತ್ತು ಮಧುಮೇಹಕ್ಕೆ ಸಂಬಂಧಿಸಿದ ಹಲವಾರು ಸಮಸ್ಯೆಗಳನ್ನು ನಿವಾರಿಸುವುದು.

ಶ್ವಾಸಕೋಶದ ಆರೋಗ್ಯಕ್ಕೆ

ಶ್ವಾಸಕೋಶದ ಆರೋಗ್ಯಕ್ಕೆ

ಅರಿಶಿನ ಚಹಾದಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ಶ್ವಾಸಕೋಶವು ಕಾರ್ಬನ್ ಡೈಯಾಕ್ಸೈಡ್ ಅನ್ನು ಹೊರಹಾಕುವ ಸಾಮರ್ಥ್ಯವನ್ನು ಹೆಚ್ಚಿಸುವುದು. ಇದರಿಂದ ಶ್ವಾಸಕೋಶ ಆರೋಗ್ಯವಾಗಿರುವುದು.

 ತೂಕ ಕಳೆದುಕೊಳ್ಳಲು

ತೂಕ ಕಳೆದುಕೊಳ್ಳಲು

ಆರೋಗ್ಯಕರ ಉಪಾಹಾರ ಸೇವನೆಗೆ ಮೊದಲು ಅರಿಶಿನ ಚಹಾ ಕುಡಿದರೆ ಅದು ಚಯಪಚಯ ಕ್ರಿಯೆ ಹೆಚ್ಚಿಸಿ ಕೊಬ್ಬು ಬೇಗನೆ ಕರಗುವಂತೆ ಮಾಡುವುದು. ಅರಿಶಿನವನ್ನು ಸರಿಯಾಗಿ ಬಳಸಿಕೊಳ್ಳುವ ವಿಧಾನ ಮಾತ್ರ ತಿಳಿದಿರಬೇಕುತೂಕ ಕಡಿಮೆ ಮಾಡಿಕೊಳ್ಳುವವರಿಗೆ ಅರಿಶಿನ ನೆರವಾಗುತ್ತದೆ. ಆದರೆ ಇದನ್ನು ಸರಿಯಾಗಿ ಬಳಸುವ ರೀತಿಯನ್ನು ತಿಳಿದಿರಬೇಕು.ಅರಿಶಿನದ ಸೇವನೆಯಿಂದ ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು ಮಾತ್ರವಲ್ಲ,ಕೊಬ್ಬನ್ನು ಕರಗಿಸಿ ಕೊಳ್ಳಲೂಬಹುದು. ಸಂಶೋಧನೆಗಳಲ್ಲಿ ಕಂಡುಕೊಂಡಂತೆ ಅರಿಶಿನದ ಸೇವನೆಯಿಂದ ಪಿತ್ತರಸದ ಉತ್ಪಾದನೆ ಹೆಚ್ಚುತ್ತದೆ ಹಾಗೂ ಈ ಹೆಚ್ಚಿನ ಪಿತ್ತರಸ ಕೊಬ್ಬನ್ನು ಹೆಚ್ಚು ಹೆಚ್ಚಾಗಿ ಬಳಸಿಕೊಳ್ಳುತ್ತದೆ.ದಿನದ ಪ್ರತಿ ಊಟಕ್ಕೂ ಮುನ್ನ ಕೇವಲ ಒಂದು ಚಿಕ್ಕಚಮಚದಷ್ಟು ಅರಿಶಿನವನ್ನು ಸೇವಿಸುವ ಮೂಲಕ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ ಹಾಗೂ ಕೊಬ್ಬನ್ನು ಅತಿಯಾಗಿ ಬಳಸಿಕೊಳ್ಳುವ ಮೂಲಕ ತೂಕ ಇಳಿಯಲು ನೆರವಾಗುತ್ತದೆ. ಇಲಿಗಳ ಮೇಲೆ ನಡೆಸಿದ ಪ್ರಯೋಗಗಳಲ್ಲಿ ಕಂಡುಬಂದಂತೆ ಅರಿಶಿನ ಕೊಬ್ಬನ್ನು ತಿಂದುಹಾಕುತ್ತದೆ. ಅರಿಶಿನ ಸಹಿತ ಆಹಾರ ಸೇವಿಸಿದ ಇಲಿಗಳು ಅಷ್ಟೇ ಪ್ರಮಾಣದ ಅರಿಶಿನ ರಹಿತ ಆಹಾರವನ್ನು ಸೇವಿಸಿದ ಇಲಿಗಳಿಗಿಂತ ಕಡಿಮೆ ಕೊಬ್ಬನ್ನು ಹೊಂದಿದ್ದವು.

ಹಾಲಿಗೆ ಅರಿಶಿನ ಹಾಕಿ ಕುಡಿದರೆ-ಹೊಟ್ಟೆಯ ಕೊಬ್ಬು ಕರಗುತ್ತದೆ...

ಇನ್ಸುಲಿನ್ ಪ್ರತಿರೋಧದ ವಿರುದ್ದ ಹೋರಾಡುತ್ತದೆ

ಇನ್ಸುಲಿನ್ ಪ್ರತಿರೋಧದ ವಿರುದ್ದ ಹೋರಾಡುತ್ತದೆ

ಅರಿಶಿನದ ಇನ್ನೊಂದು ಪ್ರಮುಖ ಪ್ರಯೋಜನವೆಂದರೆ ಇದರ ಇನ್ಸುಲಿನ್ ಪ್ರತಿರೋಧದ ವಿರುದ್ಧ ಹೋರಾಡುವ ಮೂಲಕ ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ಸಂತುಲಿತ ಪ್ರಮಾಣದಲ್ಲಿರಿಸುವುದು. ಇದು ನಿಮ್ಮ ದೇಹದಲ್ಲಿ ಹೆಚ್ಚಿನ ಕೊಬ್ಬು ಸಂಗ್ರಹವಾಗದಂತೆ ತಡೆಯುವುದು ಮಾತ್ರವಲ್ಲ, ಮಧುಮೇಹ ಆವರಿಸುವ ಸಾಧ್ಯತೆಯನ್ನೂ ಕಡಿಮೆಗೊಳಿಸುತ್ತದೆ. ಒಂದು ವೇಳೆ ನಿಮಗೀಗಾಗಲೇ ಮಧುಮೇಹ ಆವರಿಸಿದ್ದರೆ ಅರಿಶಿನದ ಸೇವನೆಯಿಂದ ನಿಮ್ಮ ಗ್ಲುಕೋಸ್ ಮಟ್ಟ ಸಂತುಲಿತ ಮಟ್ಟದಲ್ಲಿರಲು ನೆರವಾಗುತ್ತದೆ.

ಒಟ್ಟಾರೆ ಆರೋಗ್ಯದ ಕೀಲಿಕೈ

ಒಟ್ಟಾರೆ ಆರೋಗ್ಯದ ಕೀಲಿಕೈ

ನಿತ್ಯವೂ ಅರಿಶಿನವನ್ನು ಆಹಾರದ ಮೂಲಕ ಸೇವಿಸುತ್ತಾ ಬಂದರೆ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ. ಇಂದು ವೇಳೆ ಇದಕ್ಕೂ ಮುನ್ನ ಅರಿಶಿನವನ್ನು ಸೇವಿಸದೇ ಇದ್ದವರು ಈಗಲಾದರೂ ಕೊಂಚ ಪ್ರಯತ್ನಿಸುವ ಮೂಲಕ ಕೆಲವೇ ದಿನಗಳಲ್ಲಿ ದೇಹ ಉತ್ತಮ ಆರೋಗ್ಯವನ್ನು ಪಡೆದಿರುವುದನ್ನು ಗಮನಿಸಬಹುದು. ಇದರೊಂದಿಗೆ ತೂಕ ಇಳಿಯುವ ಬೋನಸ್ ಪ್ರತ್ಯೇಕ ಕೊಡುಗೆಯಾಗಿ ಲಭಿಸುತ್ತದೆ.

English summary

turmeric-tea-health-benefits-preparation-methods

There is also a type of tea known as the turmeric tea, which has become popular throughout the world lately for its amazing health benefits.So, have a look at how turmeric tea is prepared and what are its health benefits, here.
Story first published: Wednesday, November 22, 2017, 23:41 [IST]
Please Wait while comments are loading...
Subscribe Newsletter