ಕೆಮ್ಮಿಗೆ ಮನೆ ಮದ್ದುಗಳು- ಒಂದೆರಡು ದಿನಗಳಲ್ಲಿ ಕೆಮ್ಮು ಮಾಯ!

By: Deepu
Subscribe to Boldsky

ಚಳಿಗಾಲ ಲಗ್ಗೆಯಿಟ್ಟಾಗಿದೆ ಹಾಗೂ ನಾವೆಲ್ಲರೂ ನಮ್ಮ ಬೆಚ್ಚಗಿನ ಬಟ್ಟೆ, ಕಂಬಳಿ ರಗ್ಗುಗಳನ್ನು ಹೊರತೆಗೆದಾಗಿದೆ. ಆದರೆ ದೇಹವನ್ನು ಸುಮ್ಮನೇ ಬೆಚ್ಚಗಿರಿಸಿದರೆ ಶೀತ ಬರದೇ ಇರುತ್ತದೆಯೇ? ಅಲ್ಲದೇ ಕೆಮ್ಮು ಬರುತ್ತದೆ ಎಂದು ಹೊರಗೆ ಹೋರದೇ ಇರಲಾಗುತ್ತದೆಯೇ? ಆದ್ದರಿಂದ ಕೆಮ್ಮು ಶೀತಗಳು ಬಾರದಂತೆ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಂಡು ಹೊರಗಿನ ಕೆಲಸಗಳನ್ನು ಪೂರೈಸುವುದೇ ಜಾಣತನದ ಮಾರ್ಗವಾಗಿದೆ.

ಮಧ್ಯರಾತ್ರಿ ಕಾಡುವ ಕೆಮ್ಮು, ಏನು ಮಾಡಬೇಕು?

ಈ ಕಾರ್ಯವನ್ನು ನಿಸರ್ಗ ಸುಲಭವಾಗಿ ನಿರ್ವಹಿಸಲು ಪರಿಣಾಮಕಾರಿ, ಸುಲಭವಾಗಿ ಸಿಗುವ ಹಾಗೂ ಸುರಕ್ಷಿತವಾದ ಕೆಲವು ಸಾಮಗ್ರಿಗಳನ್ನು ಒದಗಿಸಿದ್ದು ಇದರ ಬಳಕೆಯ ಮೂಲಕ ಚಳಿಗಾಲದ ಸಾಮಾನ್ಯ ಶೀತ ಕೆಮ್ಮುಗಳನ್ನು ಹತೋಟಿಯಲ್ಲಿರಿಸಬಹುದು. ಇದು ಎಲ್ಲಾ ವಯೋಮಾನದವರಿಗೂ ಉತ್ತಮವಾದ ಪರಿಣಾಮವನ್ನು ನೀಡುತ್ತದೆ. ನಮ್ಮ ಹಿರಿಯರು ಈ ವಿಧಾನವನ್ನು ನಿಯಮಿತವಾಗಿ ಅನುಸರಿಸುತ್ತಿದ್ದುದೇ ಅವರ ಆರೋಗ್ಯಕ್ಕೆ ಕಾರಣವಾಗಿದೆ. ಬನ್ನಿ, ಕೆಮ್ಮು ಬಾರದಂತೆ ತುಳಸಿ ಹಾಗೂ ಜೇನನ್ನು ಹೇಗೆ ಬಳಸುವುದು ಎಂಬುದನ್ನು ನೋಡೋಣ.... 

ತುಳಸಿ ಹಾಗೂ ಜೇನು

ತುಳಸಿ ಹಾಗೂ ಜೇನು

ಚಳಿಗಾಲದ ಕೆಮ್ಮಿಗೆ ತುಳಸಿ ಹಾಗೂ ಜೇನು ಅತ್ಯುತ್ತಮ ಪರಿಹಾರವಾಗಿದೆ. ಇದಕ್ಕಾಗಿ ಬೆಳಗ್ಗೆ ಖಾಲಿಹೊಟ್ಟೆಯಲ್ಲಿ ಸುಮಾರು ಮೂರು ನಾಲ್ಕು ತುಳಸಿ ಎಲೆಗಳನ್ನು ಹಸಿಯಾಗಿ ಜಗಿಯಬೇಕು. ಹೆಚ್ಚು ಎಲೆಗಳು ಬೇಡ. ಚೆನ್ನಾಗಿ ಅಗಿದು ನೀರಾದ ಬಳಿಕ ಒಂದು ಚಿಕ್ಕ ಚಮಚ ಜೇನನ್ನು ಬಾಯಿಗೆ ಹಾಕಿಕೊಂಡು ಈಗ ಒಟ್ಟಿಗೇ ನುಂಗಿಬಿಡಬೇಕು.

ತುಳಸಿ ಹಾಗೂ ಜೇನು

ತುಳಸಿ ಹಾಗೂ ಜೇನು

ಬಳಿಕ ಕನಿಷ್ಠ ಹತ್ತು ಹದಿನೈದು ನಿಮಿಷವಾದರೂ ನೀರು ಮತ್ತೇನನ್ನೂ ಸೇವಿಸಬಾರದು. ಹದಿನೈದು ನಿಮಿಷದ ಬಳಿಕ ಕೊಂಚ ನೀರು ಹಾಗೂ ಅರ್ಧ ಗಂಟೆಯ ಬಳಿಕ ಅಲ್ಪ ಉಪಾಹಾರ ಸೇವಿಸಬೇಕು. ಇದರಿಂದ ತುಳಸಿ ಹಾಗೂ ಜೇನಿನ ಎಲ್ಲಾ ಗುಣಗಳು ದೇಹದ ಮೇಲೆ ಪರಿಣಾಮವುಂಟುಮಾಡಲು ಸಾಧ್ಯವಾಗುತ್ತದೆ.

ಹಸಿಶುಂಠಿ+ಜೇನು

ಹಸಿಶುಂಠಿ+ಜೇನು

ಅರ್ಧ ದೊಡ್ಡಚಮಚ ಹಸಿಶುಂಠಿಯನ್ನು ಜಜ್ಜಿ ಕೊಂಚ ಕಾಳುಮೆಣಸಿನ ಪುಡಿ ಹಾಗೂ ಒಂದು ದೊಡ್ಡ ಚಮಚ ಜೇನು ಮತ್ತು ಕೊಂಚ ಶಿರ್ಕಾ ಸೇರಿಸಿ. ಇವೆಲ್ಲವನ್ನೂ ಸುಮಾರು ಎರಡರಿಂದ ಮೂರು ದೊಡ್ಡಚಮಚ ನೀರು ಬೆರೆಸಿ ಈ ಪ್ರಮಾಣವನ್ನು ದಿನದಲ್ಲಿ ಮೂರು ಹೊತ್ತು ಸೇವಿಸಿ ಖಾಲಿ ಮಾಡಬೇಕು. ಇದರ ಬ್ಯಾಕ್ಟೀರಿಯಾ ನಿರೋಧಕ ಗುಣ ಹಲವು ರೀತಿಯ ಸೋಂಕುಗಳಿಂದ ರಕ್ಷಣೆ ಒದಗಿಸುತ್ತದೆ. ಕೆಮ್ಮಿನ ಒಂದು ಅಡ್ಡಪರಿಣಾಮವಾಗಿರುವ ಸೋಂಕನ್ನು ಹಸಿಶುಂಠಿ ನಿವಾರಿಸುವ ಕಾರಣ ಕೆಮ್ಮಿಗೆ ಇದು ಅತ್ಯುತ್ತಮ ಪರಿಹಾರವಾಗಿದೆ.

ಜೇನುತುಪ್ಪ, ಈರುಳ್ಳಿ ರಸ, ಹಾಗೂ ಬೆಳ್ಳುಳ್ಳಿ

ಜೇನುತುಪ್ಪ, ಈರುಳ್ಳಿ ರಸ, ಹಾಗೂ ಬೆಳ್ಳುಳ್ಳಿ

ಬಟ್ಟಲೊ೦ದರಲ್ಲಿ ಸ್ವಲ್ಪ ಈರುಳ್ಳಿಯ ರಸವನ್ನು ತೆಗೆದುಕೊ೦ಡು ಬಿಸಿಮಾಡಿರಿ. ಉರಿಯನ್ನು ನ೦ದಿಸಿದ ಬಳಿಕ, ಬೆಳ್ಳುಳ್ಳಿಯ ಒ೦ದು ದಳವನ್ನು ಇದಕ್ಕೆ ಸೇರಿಸಿರಿ. ಈರುಳ್ಳಿಯ ರಸವು ಇನ್ನೂ ಬಿಸಿಯಾಗಿಯೇ ಇರುವ ವೇಳೆ, ಬೆಳ್ಳುಳ್ಳಿಯ ದಳವನ್ನು ಸ್ವಲ್ಪ ಹುರಿಯಿರಿ. ಈ ಮಿಶ್ರಣವನ್ನು ಒ೦ದು ಲೋಟದಷ್ಟು ಬಿಸಿನೀರಿಗೆ ಸೇರಿಸಿರಿ ಹಾಗೂ ಇದಕ್ಕೆ ಒ೦ದು ಚಮಚದಷ್ಟು ಜೇನುತುಪ್ಪವನ್ನು ಸೇರಿಸಿರಿ. ಈಗ ಈ ನೈಸರ್ಗಿಕವಾದ ಕೆಮ್ಮಿನ ಸಿರಪ್ ಅನ್ನು ಹನಿಹನಿಯಾಗಿ ಸೇವಿಸಿರಿ.

ಶು೦ಠಿ, ಬೆಳ್ಳುಳ್ಳಿ, ಹಾಗೂ ಕರಿಮೆಣಸು

ಶು೦ಠಿ, ಬೆಳ್ಳುಳ್ಳಿ, ಹಾಗೂ ಕರಿಮೆಣಸು

ಜಜ್ಜಿದ ಶು೦ಠಿ, ಬೆಳ್ಳುಳ್ಳಿಯ ದಳಗಳು, ಹಾಗೂ ಸ್ವಲ್ಪ ಕಾಳುಮೆಣಸು - ಇವೆಲ್ಲವನ್ನೂ ಒ೦ದು ಲೋಟದಷ್ಟು ಕುದಿಯುತ್ತಿರುವ ನೀರಿನಲ್ಲಿ ಸೇರಿಸಿ ಚೆನ್ನಾಗಿ ಕುದಿಸಿ, ಸುಮಾರು 15 ನಿಮಿಷ ಬಿಟ್ಟು ಕುಡಿಯಿರಿ0 . ಕೆಮ್ಮನ್ನು ನಿವಾರಿಸಿಕೊಳ್ಳುವ೦ತಾಗಲು ಈ ಸಿರಪ್ ಅನ್ನು ದಿನಕ್ಕೆರಡು ಬಾರಿ ಸೇವಿಸಿರಿ

ಜೇನು ಮತ್ತು ದಾಲ್ಚಿನ್ನಿಯ ಕಷಾಯ

ಜೇನು ಮತ್ತು ದಾಲ್ಚಿನ್ನಿಯ ಕಷಾಯ

ಸ್ವಲ್ಪ ಜೇನುತುಪ್ಪ ಮತ್ತು ದಾಲ್ಚಿನ್ನಿಯನ್ನು ಕೆಲವು ನಿಮಿಷಗಳ ಕಾಲ ಬೇಯಿಸಿದ ಬಳಿಕ ಒಲೆಯಿಂದ ಇಳಿಸಿ ಒಂದು ಲೋಟಕ್ಕೆ ಅರ್ಧ ಲಿಂಬೆಹಣ್ಣಿನ ರಸ ಸೇರಿಸಿ ಸಾಧ್ಯವಾದಷ್ಟು ಬಿಸಿಯಾಗಿರುವಾಗಲೇ ಕುಡಿಯುವ ಮೂಲಕ ಕೆಮ್ಮಿಗೆ ಮತ್ತು ಶೀತಕ್ಕೆ ಶೀಘ್ರ ಉಪಶಮನ ದೊರಕುತ್ತದೆ.

ಉಪ್ಪು-ಬೆಳ್ಳುಳ್ಳಿ ಬೇಯಿಸಿದ ನೀರು ಕುಡಿಯಿರಿ

ಉಪ್ಪು-ಬೆಳ್ಳುಳ್ಳಿ ಬೇಯಿಸಿದ ನೀರು ಕುಡಿಯಿರಿ

ಒಂದು ಲೋಟ ನೀರಿಗೆ ಕೆಲವು ಹರಳು ಉಪ್ಪು ಹಾಗೂ ಕೆಲವು ಎಸಳು ಬೆಳ್ಳುಳ್ಳಿಗಳನ್ನು ಜಜ್ಜಿ ಕುದಿಸಬೇಕು. ಸುಮಾರು ಐದು ನಿಮಿಷ ಕುದಿಸಿದ ಬಳಿಕ ಒಂದು ಚಮಚ ಅರಿಶಿನದ ಪುಡಿ ಸೇರಿಸಿ ಸೋಸಿದ ನೀರನ್ನು ಸಾಧ್ಯವಾದಷ್ಟು ಬಿಸಿಯಿರುವಾಗಲೇ ಸೇವಿಸುವ ಮೂಲಕ ಕೆಮ್ಮು ಕಡಿಮೆಯಾಗುತ್ತದೆ.

ತುಳಸಿ+ಕರಿಮೆಣಸಲು

ತುಳಸಿ+ಕರಿಮೆಣಸಲು

ತುಳಸಿ, ಮತ್ತು ಕಾಳುಮೆಣಸನ್ನು ಅಥವಾ ಕರಿಮೆಣಸನ್ನು ಸಮಪ್ರಮಾಣದಲ್ಲಿ ಪುಡಿಮಾಡಿ, ಒಂದು ಇಂಚಿನಷ್ಟು ದೊಡ್ಡ ಶುಂಠಿಯನ್ನು ಜಜ್ಜಿ ಎಲ್ಲವನ್ನೂ ಒಂದು ಲೋಟ ನೀರಿನಲ್ಲಿ ಕುದಿಸಿ ಎಷ್ಟು ಸಾಧ್ಯವೋ ಅಷ್ಟು ಬಿಸಿಯಿರುವಾಗಲೇ ಕುಡಿಯುವ ಮೂಲಕ ಎಷ್ಟೇ ಗಟ್ಟಿಯಾದ ಕಫವಿದ್ದರೂ ಶೀಘ್ರ ಉಪಶಮನ ದೊರಕುತ್ತದೆ.

ಬಾದಾಮಿ

ಬಾದಾಮಿ

ಕೆಮ್ಮು ನಿವಾರಿಸಲು ಬಲು ಪ್ರಾಚೀನವಾದ ವಿಧಾನವೆಂದರೆ ಬಾದಾಮಿ ಅರೆದು ಸೇವಿಸುವುದು. ಸುಮಾರು ಏಳೆಂಟು ಬಾದಾಮಿಗಳನ್ನು ರಾತ್ರಿಯಿಡೀ ತಣ್ಣೀರಿನಲ್ಲಿ ನೆನೆಸಿಡಿ. ಮರುದಿನ ಸಿಪ್ಪೆ ಸುಲಿದು ನುಣ್ಣಗೆ ಅರೆಯಿರಿ. ಇದಕ್ಕೆ ಕೊಂಚ ಬೆಣ್ಣೆ ಮತ್ತು ಸಕ್ಕರೆ ಬೆರೆಸಿ ದಿನಕ್ಕೆರಡು ಬಾರಿ ಸೇವಿಸಿ.

ವೀಳ್ಯದೆಲೆ

ವೀಳ್ಯದೆಲೆ

ಕೆಲವು ವೀಳ್ಯದೆಲೆಗಳನ್ನು ನುಣ್ಣಗೆ ಅರೆದು ಎದೆಯ ಮೇಲೆ ಹಚ್ಚಿ. ಇದರಿಂದ ನಿಧಾನವಾಗಿ ಕೆಮ್ಮು ಕಡಿಮೆಯಾಗುತ್ತದೆ. ಕೆಮ್ಮು ಎದುರಾದರೆ ರೋಗಿ ಧೂಮಪಾನ, ಮಾಂಸಾಹಾರ, ಸಕ್ಕರೆ, ಟೀ, ಕಾಫಿ ಸಂಸ್ಕರಿತ ಆಹಾರಗಳಿಂದ ದೂರವಿದ್ದಷ್ಟೂ ಒಳ್ಳೆಯದು.

ಈರುಳ್ಳಿ

ಈರುಳ್ಳಿ

ಈರುಳ್ಳಿಯನ್ನು ಹೆಚ್ಚಿ ಜಜ್ಜಿ ಹಿಂಡಿ ರಸವನ್ನು ಸೇವಿಸುವ ಮೂಲಕ ಕೆಮ್ಮು ಕಡಿಮೆಯಾಗುವುದು ಮಾತ್ರವಲ್ಲ ಕಟ್ಟಿಕೊಂಡಿರುವ ಎದೆಯೂ ಸಡಿಲಗೊಳ್ಳುತ್ತದೆ. ಪ್ರತಿ ಆರು ಗಂಟೆಗಳಿಗೊಮ್ಮೆ ಒಂದರಿಂದ ಎರಡು ಚಿಕ್ಕ ಚಮಚ ಈರುಳ್ಳಿ ರಸವನ್ನು ಸಮಪ್ರಮಾಣದ ಜೇನಿನೊಂದಿಗೆ ಬೆರೆಸಿ ದಿನಕ್ಕೆರಡು ಬಾರಿ ಸೇವಿಸಿ.

ಉಗುರು ಬೆಚ್ಚಗಿನ ನೀರು ಸರಿಯಾಗಿ ಕುಡಿಯಿರಿ

ಉಗುರು ಬೆಚ್ಚಗಿನ ನೀರು ಸರಿಯಾಗಿ ಕುಡಿಯಿರಿ

ನೀರನ್ನು ಕುಡಿಯಿರಿ ದೇಹವನ್ನು ತೇವಾಂಶದಿಂದ ಇಡಲು ನೀರು ಕುಡಿಯುವುದು ಅಗತ್ಯ. ಬಿಸಿಯಾದ ಪಾನೀಯಗಳು ಲೋಳೆಯ ಸ್ರವಿಸುವಿಕೆಯನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಬಹುದು. ಅಲ್ಲದೆ ಕೆಮ್ಮು ಇರುವಂತಹ ಸಮಯದಲ್ಲಿ ನೀವು ತಂಪಾದ ಆಹಾರವನ್ನು ತ್ಯಜಿಸಬೇಕು. ಇದು ಶ್ವಾಸಕೋಶದ ದಾರಿಯನ್ನು ಒಣಗಿಸುವುದು ಮತ್ತು ಇನ್ನಷ್ಟು ಸೋಂಕನ್ನು ಉಂಟು ಮಾಡುವುದು.

 ಜೇನು+ ಲವಂಗ+ ಚೆಕ್ಕೆ

ಜೇನು+ ಲವಂಗ+ ಚೆಕ್ಕೆ

* ಮೊದಲು ಬಾಣಲೆಯೊಂದರಲ್ಲಿ ಚಿಕ್ಕ ಉರಿಯಲ್ಲಿ ಲವಂಗ ಮತ್ತು ಚೆಕ್ಕೆಗಳನ್ನು ಸುಮಾರು ಎರಡರಿಂದ ಮೂರು ನಿಮಿಷ ಹುರಿಯಿರಿ. ಅಂದರೆ ಇದರಿಂದ ಕೊಂಚ ವಾಸನೆ ಸೂಸಲು ಪ್ರಾರಂಭವಾಗುವಷ್ಟು ಮಾತ್ರ. ಬಳಿಕ ತಕ್ಷಣವೇ ಗ್ರೈಂಡರಿನ ಚಿಕ್ಕ ಜಾರ್‌ನಲ್ಲಿ ಒಣದಾಗಿಯೇ ನುಣ್ಣನೆಯ ಪುಡಿಮಾಡಿ.

* ಈ ಪುಡಿಯನ್ನು ಒಂದು ಚಿಕ್ಕ ಬೋಗುಣಿಯಲ್ಲಿ ಜೇನಿನೊಂದಿಗೆ ಬೆರೆಸಿ ಚಿಕ್ಕ ಬಾಟಲಿಯಲ್ಲಿ ಸಂಗ್ರಹಿಸಿಟ್ಟುಕೊಳ್ಳಿ.

* ಕೆಮ್ಮಿದ್ದಾಗ ರಾತ್ರಿ ಮಲಗುವ ಮುನ್ನ ಮೂರು ಚಿಕ್ಕ ಚಮಚದಷ್ಟು ಸೇವಿಸಿ ಮಲಗಿ. ಕೆಮ್ಮು ಹೆಚ್ಚಿದ್ದರೆ ಬೆಳಗ್ಗಿನ ಉಪಾಹಾರದ ಬಳಿಕವೂ ಇಷ್ಟೇ ಪ್ರಮಾಣದಲ್ಲಿ ಸೇವಿಸಿ.

*ಕೆಮ್ಮು ಗುಣವಾಗಲು ಸುಮಾರು ಎರಡರಿಂದ ಮೂರು ದಿನ ಬೇಕಾಗಬಹುದು. ಆದರೂ ಇದರ ಬಳಿಕವೂ ಒಂದೆರಡು ದಿನ ಸೇವಿಸಿ. * ಈ ಸಿರಪ್ ಒಣಕೆಮ್ಮಿಗೆ ಮಾತ್ರವಲ್ಲ, ಕಫದ ಕೆಮ್ಮಿಗೂ ಸೂಕ್ತವಾಗಿದೆ.

* ಸಾಧ್ಯವಾದರೆ ಕೊಂಚ ಹೆಚ್ಚಿನ ಪ್ರಮಾಣದಲ್ಲಿ ತಯಾರಿಸಿ ಬಾಟಲಯಲ್ಲಿ ಸಂಗ್ರಹಿಸಿ ಕೆಮ್ಮು ಆಗುವ ಅನುಮಾನ ಬಂದ ತಕ್ಷಣ ಕೊಂಚ ಸೇವಿಸಿದರೆ ಇದು ಉಲ್ಬಣಿಸುವುದರಿಂದ ತಡೆಗಟ್ಟಬಹುದು.

English summary

Try tulsi leaves and honey to prevent cough

Winters have set in and most of us have already started to take out all the blankets and sweaters to fight cold. But one thing that most people are scared of during winters is cough. So rather than taking medications and rolling up your sleeves after you get cough and cold, why not be prepared beforehand. And what’s best than trying natural remedies, which are safe, effective and easily available to prevent cough? Here is a simple natural remedy for cough that has worked for me (and believe me even my parents follow this without fail when winters strike) as a preventive remedy for cough.
Please Wait while comments are loading...
Subscribe Newsletter