For Quick Alerts
ALLOW NOTIFICATIONS  
For Daily Alerts

  ಪುರುಷರು ಲೈಂಗಿಕ ಕ್ರಿಯೆಯಲ್ಲಿ ವಿಫಲವಾಗಲು ಕಾರಣವೇನು?

  By Arshad
  |

  ಸಂಬಂಧಗಳು ಜೀವನವನ್ನು ಸುಂದರವಾಗಿಸುತ್ತವೆ ಹಾಗೂ ದಾಂಪತ್ಯದಲ್ಲಿ ಲೈಂಗಿಕ ಕ್ರಿಯೆ ದಂಪತಿಗಳ ನಡುವಣ ಸಂಬಂಧವನ್ನು ಇನ್ನಷ್ಟು ಸುಂದರ ಹಾಗೂ ಗಟ್ಟಿಗೊಳಿಸುತ್ತದೆ. ಕೆಲವು ವ್ಯಕ್ತಿಗಳು ವಾದಿಸುವ ಪ್ರಕಾರ ಸಂಬಂಧಗಳು ಸುಂದರವಾಗಲು ಲೈಂಗಿಕ ಕ್ರಿಯೆಯೊಂದೇ ಅಗತ್ಯವಿಲ್ಲ, ಬದಲಿಗೆ ಇದು ಜೀವನದ ಒಂದು ಭಾಗ ಮಾತ್ರ. ಆದರೆ ಯಾವುದೇ ದಾಂಪತ್ಯ ಗಟ್ಟಿಗೊಳ್ಳಬೇಕಾದರೆ ಲೈಂಗಿಕ ಕ್ರಿಯೆಯೂ ಆರೋಗ್ಯಕರವಾಗಿರಬೇಕು. ಈ ಸಾಮರ್ಥ್ಯದಲ್ಲಿ ವಿಫಲವಾದರೆ ಸಂಬಂಧವೂ ಶಿಥಿಲಗೊಳ್ಳಬಹುದು.

  ಪುರುಷರ ಆತ್ಮಾಭಿಮಾನದ ಮಟ್ಟವನ್ನು ಅವರ ಲೈಂಗಿಕ ಸಾಮರ್ಥ್ಯ ನಿರ್ಧರಿಸುತ್ತದೆ. ಪುರುಷರ ಅಹಮ್ಮಿಕೆಗೆ ಯಾವುದೋ ಒಂದು ಕಡೆಯಿಂದ ಲೈಂಗಿಕ ಸಾಮರ್ಥ್ಯ ಕಾರಣವಾಗಿರುತ್ತದೆ ಹಾಗೂ ಯಾವಾಗ ಪೌರುಷ ಮೆರೆಯುತ್ತಾರೋ ಆಗ ಹೆಮ್ಮೆಯಿಂದ ಬೀಗುತ್ತಾರೆ ಹಾಗೂ ವಿಫಲಗೊಂಡರೆ ಖಿನ್ನತೆಗೆ ಒಳಗಾಗುತ್ತಾರೆ.

  ಪುರುಷರೇ ಎಚ್ಚರ, ನಿಮಗೂ ಇಂತಹ ಸಮಸ್ಯೆ ಇರಬಹುದು!

  ಅಷ್ಟಕ್ಕೂ ಪೌರುಷದ ಅಳತೆಗೋಲು ಯಾವುದು? ತಮ್ಮ ಸಂಗಾತಿಯನ್ನು ಗರ್ಭಿಣಿಯಾಗಿಸಲು ಸಮರ್ಥರಿರುವುದೇ? ಆಕೆ ಕಾಮಪರಾಕಾಷ್ಠೆ ಹೊಂದುವಂತೆ ಮಾಡುವುದೇ? ಕಾಮಪರಾಕಾಷ್ಠೆ ತಲುಪುವವರೆಗೂ ಉದ್ರೇಕವನ್ನು ತಡೆಹಿಡಿದಿಡಬಲ್ಲ ಸಾಮರ್ಥ್ಯವೇ? ಒಂದರ್ಥದಲ್ಲಿ ಇವೆಲ್ಲವೂ ಹೌದು. ಆದರೆ ಪುರುಷರ ಲೈಂಗಿಕ ಸಾಮರ್ಥ್ಯವನ್ನು ಕಡಿಮೆ ಮಾಡಲು ಯಾವ ಕಾರಣಗಳಿವೆ? ಲೈಂಗಿಕ ಕ್ರಿಯೆಯಲ್ಲಿ ವಿಫಲವಾಗಲು ಕಾರಣವೇನು? ಈ ಎಲ್ಲಾ ಪ್ರಶ್ನೆಗಳಿಗೆ ಕೆಳಗಿನ ಮಾಹಿತಿ ಸೂಕ್ತ ಉತ್ತರ ನೀಡಲಿದೆ...

  ಪ್ರದರ್ಶನದ ತಲ್ಲಣ

  ಪ್ರದರ್ಶನದ ತಲ್ಲಣ

  ಕಲಾವಿದರು ಹಾಗೂ ವೇದಿಕೆಯಲ್ಲಿ ಮಾತನಾಡುವ ವಾಗ್ಮಿಗಳಿಗೆ ಎದುರಾಗುವ 'ಸಭಾಕಂಪನ'ದಂತೆಯೇ ಕೆಲವು ವ್ಯಕ್ತಿಗಳು ಈ ಸಂದರ್ಭದಲ್ಲಿ ತಲ್ಲಣ ಅನುಭವಿಸುತ್ತಾರೆ. ಇದಕ್ಕೆ ಪ್ರಮುಖ ಕಾರಣವೆಂದರೆ ತಪ್ಪು ಗ್ರಹಿಕೆ ಹಾಗೂ ತಪ್ಪು ಮಾಹಿತಿಗಳನ್ನು ನಂಬಿಕೊಂಡು ಬಂದಿರುವುದು. ಕೆಲವು ಪುರುಷರು ಲೈಂಗಿಕ ಸಾಮರ್ಥವನ್ನು ತಮ್ಮ ಪೌರುಷದ ಅಳತೆಗೋಲನ್ನಾಗಿ ಪರಿಗಣಿಸಲಾಗುತ್ತದೆ ಎಂಬ ಆತಂಕದಲ್ಲಿರುತ್ತಾರೆ. ಅದರಲ್ಲೂ "ಆ ಹೊತ್ತಿನಲ್ಲಿ ವಿಫಲನಾದರೆ" ಎಂಬ ಭಯವೂ ಆವರಿಸಿದ್ದು ಈ ಭಯ ಸಮಯ ಹತ್ತಿರ ಬಂದಂತೆಲ್ಲಾ ಗಾಢವಾಗುತ್ತಾ ಹೋಗುತ್ತದೆ. ಇದರಿಂದ ಹೊರಬರಬೇಕಾದರೆ ಈ ದುಮ್ಮಾನವನ್ನು ಕಳೆದುಕೊಳ್ಳಬೇಕು ಹಾಗೂ ಸಂಗಾತಿಯೊಂದಿಗೆ ಮುಕ್ತವಾಗಿ ಬೆರೆತು ಮಾತನಾಡಿ ಒಬ್ಬರಿಗೊಬ್ಬರು ಪೂರಕವಾಗಿ ಪರಸ್ಪರ ಹಂಚಿಕೊಳ್ಳುವ ಪ್ರಯತ್ನ ಮಾಡಬೇಕು.

  ಧೂಮಪಾನ

  ಧೂಮಪಾನ

  ಧೂಮಪಾನದ ಜಾಹೀರಾತುಗಳಲ್ಲಿ ಸಿಗರೇಟು ಸೇದುವ ವ್ಯಕ್ತಿಯನ್ನು ಹೆಂಗಸರು ಹೆಚ್ಚು ಮೆಚ್ಚಿಕೊಳ್ಳುತ್ತಾರೆ ಎಂದು ಬಿಂಬಿಸಲಾಗುತ್ತದೆ. ಧೂಮಪಾನಿಗಳು ಸಹಾ ಇದೇ ಭ್ರಮೆಯಲ್ಲಿರುತ್ತಾರೆ. ಆದರೆ ವಾಸ್ತವವಾಗಿ ಇದರ ಪರಿಣಾಮ ಲೈಂಗಿಕ ಸಾಮರ್ಥ್ಯದ ಮೇಲೆ ನೇರವಾಗಿ ಆಗುವ ಮೂಲಕ ಈ ಮೂರಿಂಚಿನ ಸಿಗರೇಟಿಗೆ ಸೋಲುತ್ತಾರೆ. ಹೌದು, ಧೂಮಪಾನ ಶ್ವಾಸಕೋಶಗಳನ್ನು ಹಾಳುಗೆಡವುವ ಮೂಲಕ ಧೂಮಪಾನಿಯನ್ನು ನಿಧಾನವಾಗಿ ಕೊಲ್ಲುತ್ತದೆ ಹಾಗೂ ಇದು ನಿಮ್ಮೊಳಗಿನ ಪುರುಷನನ್ನೂ ಕೊಲ್ಲುತ್ತದೆ. ಒಂದು ವೇಳೆ ನಿಮ್ಮ ಸಾಮರ್ಥ್ಯ ಕುಂದಿದ್ದರೆ ಇದಕ್ಕಾಗಿಯಾದರೂ ಧೂಮಪಾನವನ್ನು ಬಿಡುವುದೇ ಒಳ್ಳೆಯದು. ಒಂದು ಸಂಶೋಧನೆಯಲ್ಲಿ ಕಂಡುಕೊಂಡ ಪ್ರಕಾರ ಧೂಮಪಾನಿ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆಯಲ್ಲಿ ಭಾರೀ ಇಳಿಕೆ ಹಾಗೂ ಉದ್ರೇಕಾವಸ್ಥೆಯ ಗುಣಮಟ್ಟದ ಮೇಲೂ ಪ್ರಭಾವ ಬೀರುತ್ತವೆ.

  ಮದ್ಯಪಾನ

  ಮದ್ಯಪಾನ

  ಯಾವಾಗ ಮದ್ಯಪಾನ ಆರೋಗ್ಯಕರ ಪ್ರಮಾಣಕ್ಕೆ ಮೀರಿತೋ ಆಗ ಇದು ಮೆದುಳಿನ ಕ್ಷಮತೆಯನ್ನು ಕುಂದಿಸುವುದು ಮಾತ್ರವಲ್ಲ ಲೈಂಗಿಕ ಶಕ್ತಿಯನ್ನೂ ಕುಂದಿಸುತ್ತದೆ ಹಾಗೂ ನಿಮ್ಮ ಸಂಗಾತಿಯ ಮನೋಭಾವವನ್ನೂ ತಗ್ಗಿಸಬಹುದು. ಮದ್ಯಪಾನದ ಬಳಿಕ ಪುರುಷರ ಲೈಂಗಿಕ ಸಾಮರ್ಥ್ಯ ಸಾಕಷ್ಟು ಕಡಿಮೆಯಾಗಿರುವುದು ಸಂಶೋಧನೆಗಳಿಂದ ಕಂಡುಬಂದಿದೆ.

  ಶೀಘ್ರಸ್ಖಲನ

  ಶೀಘ್ರಸ್ಖಲನ

  ದಂಪತಿಗಳ ನಡುವೆ ವಿರಸ ಮೂಡಿಸಲು ಈ ತೊಂದರೆ ಪ್ರಮುಖ ಪಾತ್ರ ವಹಿಸುತ್ತದೆ. ಈಗ ಈ ತೊಂದರೆಯನ್ನು ನಿವಾರಿಸಲು ಕೆಲವಾರು ವಿಧಾನಗಳು ಲಭ್ಯವಿದೆ. ಆದ್ದರಿಂದ ಸೂಕ್ತವಾದ ವಿಧಾನವನ್ನು ಅನುಸರಿಸಿ ಈ ತೊಂದರೆಗೆ ಸೂಕ್ತ ಪರಿಹಾರ ಕಂಡುಕೊಳ್ಳುವುದೇ ಉತ್ತಮ.

  ಶೀಘ್ರಸ್ಖಲನಕ್ಕೆ ಶಾಶ್ವತ ಪರಿಹಾರ; ಇವನ್ನು ಸೇವಿಸಿ

  ಅನುಭವದ ಕೊರತೆ ಅಥವಾ ಬಿಗಿಯಾದ ಮುಂದೊಗಲು

  ಅನುಭವದ ಕೊರತೆ ಅಥವಾ ಬಿಗಿಯಾದ ಮುಂದೊಗಲು

  ಈ ಅನುಭವವನ್ನು ಮೊದಲ ಬಾರಿ ಅನುಭವಿಸುತ್ತಿರುವ ಪುರುಷರು ವಿಚಿತ್ರ ಹಾಗೂ ಅಸಾಧ್ಯವಾದುದನ್ನೆಲ್ಲಾ ಕಲ್ಪಿಸಿಕೊಂಡಿದ್ದು ಇದನ್ನು ಸಾಕರಗೊಳಿಸಲು ಯತ್ನಿಸುವುದು ಮೊದಲ ವೈಫಲ್ಯಕ್ಕೂ ಕಾರಣವಾಗಬಹುದು. ಆದರೆ ನಿಧಾನವಾಗಿ ಇವರು ನಂಬಿದ್ದ ವಿಚಿತ್ರಗಳೆಲ್ಲಾ ಕೇವಲ ಕಾಲ್ಪನಿಕ ಹಾಗೂ ನಿಜವಾದ ವಿಧಾನಗಳನ್ನು ಅರಿತುಕೊಳ್ಳಲು ಕೊಂಚ ಕಾಲ ಬೇಕಾಗುತ್ತದೆ. ಕೆಲವು ಪುರುಷರಲ್ಲಿ ಮುಂದೊಗಲು ಬಿಗಿಯಾಗಿದ್ದು ಹಿಂದೆ ಸರಿಯಲು ಕಷ್ಟಕರವಾಗಿದ್ದು ಇದು ಸರಿಯಾದ ಲೈಂಗಿಕಕ್ರಿಯೆ ನಡೆಸಲು ಅಡ್ಡಿಯಾಗುತ್ತದೆ. ಈ ತೊಂದರೆ ಇರುವವರು ವೈದ್ಯರಲ್ಲಿ ಭೇಟಿ ನೀಡಿ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳುವುದು ಅಗತ್ಯ.

  ಟೆಸ್ಟೋಸ್ಟೆರೋನ್ ಕೊರತೆ

  ಟೆಸ್ಟೋಸ್ಟೆರೋನ್ ಕೊರತೆ

  ಮೂವತ್ತು ವರ್ಷಗಳ ಬಳಿಕ ಪುರುಷರ ದೇಹದಲ್ಲಿ ಟೆಸ್ಟಾಸ್ಟೆರಾನ್ ಎಂಬ ರಸದೂತದ ಪ್ರಮಾಣ ಕಡಿಮೆಯಾಗುತ್ತಾ ಹೋಗುತ್ತದೆ. ಈ ರಸದೂತ ಪುರುಷರ ದೇಹದ ಸ್ನಾಯುಗಳ ಗಡಸುತನಕ್ಕೆ ಪ್ರಮುಖ ಕಾರಣವಾಗಿದೆ ಹಾಗೂ ಲೈಂಗಿಕ ಶಕ್ತಿಯ ಹೆಚ್ಚಳಕ್ಕೂ ತನ್ನದೇ ಆದ ಪಾತ್ರ ವಹಿಸುತ್ತದೆ. ಈ ರಸದೂತದ ಕೊರತೆ ವಯಸ್ಸೇರಿದಂತೆಲ್ಲಾ ಕಡಿಮೆಯಾಗುತ್ತಾ ದೇಹದಾರ್ಢ್ಯತೆ ಕಡಿಮೆಯಾಗುತ್ತಾ ಹೋಗುತ್ತದೆ ಹಾಗೂ ಇದರ ಜೊತೆಜೊತೆಗೇ ಲೈಂಗಿಕ ಸಾಮರ್ಥ್ಯವೂ ಕುಂದುತ್ತದೆ.

  ಒತ್ತಡಭರಿತ ಜೀವನ

  ಒತ್ತಡಭರಿತ ಜೀವನ

  ಮಾನಸಿಕ ಒತ್ತಡ ಹಾಗೂ ಚಿತ್ತ ಚಾಂಚಲ್ಯ ಎರಡೂ ವಿಷದಷ್ಟೇ ಅಪಾಯಕಾರಿಯಾಗಿವೆ. ಇವುಗಳು ಲೈಂಗಿಕ ಶಕ್ತಿಯನ್ನು ಕುಂದಿಸಬಹುದು. ಒತ್ತಡ ರಹಿತ ಜೀವನ ಹಾಗೂ ಏಕಾಗ್ರತೆ ಮೂಲಕ ಜೀವನದಲ್ಲಿ ಹೆಚ್ಚಿನದನ್ನು ಸಾಧಿಸಲು ಸಾಧ್ಯವಿರುವಂತೆಯೇ ಲೈಂಗಿಕ ಶಕ್ತಿಯನ್ನೂ ವೃದ್ದಿಸುತ್ತದೆ.

  ಉದ್ರೇಕ ವೈಫಲ್ಯ

  ಉದ್ರೇಕ ವೈಫಲ್ಯ

  ಪುರುಷರ ಶಿಶ್ನ ಆತನ ಮೆದುಳಿನ ಸಂಕೇತಗಳಿಗನುಸಾರವಾಗಿ ಉದ್ರೇಕಗೊಳ್ಳುತ್ತದೆಯೋ ಹೊರತು ತಾನೇ ತಾನಾಗಿ ಆಗುವುದಿಲ್ಲ. ಒಂದು ವೇಳೆ ನಿಮ್ಮ ಅಣತಿಗೆ ಅನುಗುಣವಾಗಿ ಉದ್ರೇಕಗೊಳ್ಳದಿದ್ದರೆ ಇದಕ್ಕೆ ಉದ್ರೇಕ ವೈಫಲ್ಯವೆಂದು ಕರೆಯುತ್ತಾರೆ. ಹಾಗಾಗಿ ಅಗತ್ಯವಿರುವ ಸಮಯದಲ್ಲಿ ಉದ್ರೇಕ ಸಾಧ್ಯವಾಗದೇ ಹೋದಾಗ ಪುರುಷರು ಅತೀವವಾಗಿ ನೊಂದುಕೊಳ್ಳುತ್ತಾರೆ ಹಾಗೂ ತೀವ್ರ ಖಿನ್ನತೆಗೆ ಒಳಗಾಗುತ್ತಾರೆ. ಇದಕ್ಕೆ ವೈದ್ಯಕೀಯ ಕಾರಣಗಳಿರಬಹುದು. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಇದು ಮಾನಸಿಕ ಸ್ಥಿತಿಯೇ ಆಗಿರುತ್ತದೆ ಹಾಗೂ ತಮಗೆ ತಾವೇ ಸಹಾಯ ಮಾಡಿಕೊಳ್ಳುವ ಮೂಲಕ ಈ ಸ್ಥಿತಿಯಿಂದ ಹೊರಬರಬಹುದು. ನೆನಪಿಡಿ, ಲೈಂಗಿಕ ಉದ್ರೇಕ ಮಾನಸಿಕವಾಗಿ ಮೊದಲಾಗುತ್ತದೆ.

  ಕೆಲವು ಔಷಧಿಗಳ ಅಡ್ಡಪರಿಣಾಮ

  ಕೆಲವು ಔಷಧಿಗಳ ಅಡ್ಡಪರಿಣಾಮ

  ಕೆಲವು ಔಷಧಿಗಳ ಅಡ್ಡಪರಿಣಾಮದಿಂದ ಲೈಂಗಿಕ ಶಕ್ತಿ ಕುಂದುತ್ತದೆ. ಕೆಲವು ಪ್ರಮುಖ ಅನಾರೋಗ್ಯಗಳಿಗೆ ತೆಗೆದುಕೊಳ್ಳುವ ಔಷಧಿಗಳು ಕೆಲವು ಅಡ್ಡಪರಿಣಾಮಗಳನ್ನು ಒಡ್ಡಬಹುದು. ಒಂದು ವೇಳೆ ಅಸಾಮರ್ಥ್ಯ ಈ ಅಡ್ಡಪರಿಣಾಮಗಳಿಂದಾಗಿದ್ದರೆ ಈ ಔಷಧಿಗಳನ್ನು ವೈದ್ಯರು ತಿಳಿಸಿದ ಬಳಿಕ ನಿಲ್ಲಿಸಿದ ಕೆಲ ಸಮಯದ ಬಳಿಕ ಸರಿಹೋಗಬಹುದು. ಇದಕ್ಕೆ ವೈದ್ಯರ ಸಲಹೆ ಅಗತ್ಯ.

  ಕಾಯಿಲೆಯ ಪರಿಣಾಮಗಳು

  ಕಾಯಿಲೆಯ ಪರಿಣಾಮಗಳು

  ಮಧುಮೇಹ ಮೊದಲಾದ ಕೆಲವು ಕಾಯಿಲೆಗಳ ಪರಿಣಾಮಗಳಿಂದ ಪುರುಷರ ಲೈಂಗಿಕ ಶಕ್ತಿ ಕುಂದುತ್ತದೆ. ಅಲ್ಲದೇ, ಕೆಲವು ನರವ್ಯವಸ್ಥೆಯ ಸಂಬಂಧಿ ತೊಂದರೆಗಳೂ ಈ ನಿಃಶಕ್ತಿಗೆ ಕಾರಣವಾಗಬಹುದು. ಈ ವ್ಯಕ್ತಿಗಳು ವೈದ್ಯರ ಸಲಹೆ ಪಡೆಯಲೇಬೇಕು. ಹಾಸಿಗೆಯಲ್ಲಿ ಹೆಚ್ಚಿನ ಹೊತ್ತು ಉದ್ರೇಕವನ್ನು ಹಿಡಿದಿಟ್ಟುಕೊಳ್ಳಲು ಏನು ಮಾಡಬೇಕು? ಹೆಚ್ಚಿನ ಪುರುಷರು ಕೇಳುವ ಪ್ರಶ್ನೆ ಇದಾಗಿದೆ. ಇದಕ್ಕೆ ಉತ್ತರವನ್ನು ಪಡೆಯಲು ಶೀಘ್ರಸ್ಖಲನಕ್ಕೆ ಏನುಕಾರಣ ಎಂದು ಕಂಡುಕೊಳ್ಳುವ ಮೂಲಕ ಸ್ವತಃ ಉತ್ತರ ಪಡೆಯಬಹುದು. ಈ ಶಕ್ತಿಯನ್ನು ಹೆಚ್ಚಿಸಲು ನೈಸರ್ಗಿಕ ವಿಧಾನವನ್ನು ಅನುಸರಿಸುವ ಮೂಲಕ ಹಾಗೂ ವಯಾಗ್ರಾದಂತೆ ಕೆಲಸ ಮಾಡುವಂತಹ ಆಹಾರಗಳನ್ನು ಸೇವಿಸುವ ಮೂಲಕ ಈ ಶಕ್ತಿಯನ್ನು ಹೆಚ್ಚಿಸಬಹುದು.

   

  English summary

  Top Reasons For Poor Male Performance In Bed

  There are some people who would argue that sex is not the only thing that dictates the beauty of relationships. But quality of sex can sometimes make or break a relationship. Male performance in bed decides the self-esteem levels of the man. Sexual performance is somehow related to the male ego and this is why men feel powerful when they perform well and guilty when they fail on bed.
  Story first published: Monday, October 23, 2017, 15:30 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more