ಕಣ್ಣಿನ ರಕ್ಷಣೆ ರೆಪ್ಪೆಗಳು ಮಾಡಿದರೆ ರೆಪ್ಪೆಯ ರಕ್ಷಣೆ ನಿಮ್ಮ ಹೊಣೆ!

By: manu
Subscribe to Boldsky

ಕಣ್ಣು ಮನುಷ್ಯನ ಅತ್ಯಂತ ಸೂಕ್ಷ್ಮವಾದ ಅಂಗ. ಇದರ ಸಹಾಯದಿಂದಲೇ ನಾವು ಜಗತ್ತನ್ನು ಕಾಣುವುದು ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರವೇ. ಹಾಗಾಗಿ ಇದರ ಆರೋಗ್ಯ ಹಾಗೂ ಆರೈಕೆಯ ಬಗ್ಗೆ ಎಲ್ಲರೂ ಹೆಚ್ಚು ಕಾಳಜಿ ವಹಿಸುತ್ತಾರೆ. ಕಣ್ಣಿನ ರಕ್ಷಣೆಗೆ ಪ್ರತಿಕ್ಷಣವೂ ಸಿದ್ಧವಿರುವ ಇನ್ನೊಂದು ಅಂಗ ರೆಪ್ಪೆ. ಗಾಳಿಯಲ್ಲಿ ಬರುವ ಧೂಳು, ಕಸ ಹಾಗೂ ಇನ್ನಿತರ ತೊಂದರೆಗಳಿಗೆ ರೆಪ್ಪೆ ರಕ್ಷಣಾ ಕವಚದಂತೆ ನಿಲ್ಲುತ್ತದೆ. ಹಾಗಾಗಿ ಕಣ್ಣಿಗೆ ಕೊಡುವಷ್ಟೇ ಪ್ರಾಮುಖ್ಯತೆಯನ್ನು ಕಣ್ ರೆಪ್ಪೆಗಳಿಗೂ ನೀಡಬೇಕು. 

ಕಣ್ಣುಗಳ ಬಣ್ಣದಲ್ಲಿ ಏರುಪೇರಾದರೆ-ಖಂಡಿತ ಸಮಸ್ಯೆಯಿದೆ ಎಂದರ್ಥ!

ಕಣ್‍ರೆಪ್ಪೆಗಳಲ್ಲಿ ಊದಿಕೊಳ್ಳುವುದು, ಉರಿಯೂತ, ಕಣ್ಣಿನ ಸುತ್ತಲ ಅಂಗಾಂಶಗಳು ಊದಿಕೊಳ್ಳುವುದು, ತುರಿಕೆ ಸೇರಿದಂತೆ ಇನ್ನಿತರ ಸಮಸ್ಯೆಗಳು ರೆಪ್ಪೆಯ ಮೇಲ್ಭಾಗ ಮತ್ತು ಕೆಳಭಾಗದಲ್ಲಿ ಹೆಚ್ಚು ಪರಿಣಾಮಕಾರಿ ಪರಿಣಾಮವನ್ನು ಬೀರುವುದು. ಈಗಾಗಲೇ ಈ ರೀತಿಯ ಸಮಸ್ಯೆಗಳು ನಿಮಗೆ ಕಾಣಿಸಿಕೊಂಡಿರಬಹುದು. ಅಲ್ಲದೆ ಕಡಿಮೆಯಾಗಿರಬಹುದು. ಹಾಗಂತ ಇದು ಸಾಮಾನ್ಯ ವಿಚಾರವಲ್ಲ. ಇದರ ಬಗ್ಗೆ ನಿರ್ಲಕ್ಷ್ಯ ಮಾಡಿದರೆ ಅನೇಕ ತೊಂದರೆಗಳು ಉಂಟಾಗುವ ಸಾಧ್ಯತೆಗಳಿರುತ್ತವೆ. ಹಾಗಾದರೆ ಅವು ಯಾವವು ಎನ್ನುವುದರ ವಿವರಣೆ ಇಲ್ಲಿದೆ ನೋಡಿ... 

 ಸ್ಟೈ ಸೋಂಕು

ಸ್ಟೈ ಸೋಂಕು

ಕಣ್ ರೆಪ್ಪೆಯ ಗ್ರಂಥಿಯಲ್ಲಿ ಕಾಣಿಸಿಕೊಳ್ಳುವ ಒಂದು ಸೋಂಕು ಇದು. ಕಣ್ಣುಗುಡ್ಡೆಗಳ ತಳ ಭಾಗದಲ್ಲಿ ಕಂಡುಬರುವ ಕಣ್ಣೀರಿನ ಗ್ರಂಥಿಯಿಂದ ಸಾಮಾನ್ಯ ಸೋಂಕು ವಿವಿಧ ಭಾಗಗಳಲ್ಲಿ ತಗಲುತ್ತವೆ. ಸೋಂಕಿತ ಎಣ್ಣೆ ಗ್ರಂಥಿಯಿಂದ ಕಣ್ಣಿನ ರೆಪ್ಪೆಯೊಳಗೆ ಸ್ಟೈ ಸೋಂಕು ಉಂಟಾಗುತ್ತದೆ.

ಕಂಪ್ಯೂಟರ್‌ನಿಂದ ಕಣ್ಣು ಕಾಪಾಡಿ! ಈ ಮನೆಮದ್ದು ತಪ್ಪದೇ ಸೇವಿಸಿ..

ಚಾಲಾಜಿಯಾನ್

ಚಾಲಾಜಿಯಾನ್

ಇದು ಸಹ ಒಂದು ಬಗೆಯ ಸೋಂಕು. ಸ್ಟೈ ಸೋಂಕಿನಿಂದ ಕಣ್ಣಿನ ಒಂದು ತೈಲ ಗ್ರಂಥಿ ಮುಚ್ಚಿದಾಗ ಚಾಲಾಜಿಯಾನ್ ಸಂಭವಿಸುತ್ತದೆ. ಇದರಿಂದ ಕಣ್ಣಿನ ಹತ್ತಿರ ಮತ್ತು ರೆಪ್ಪೆಯ ಭಾಗದಲ್ಲಿ ಒಂದು ಬಗೆಯ ಉಬ್ಬು ಕಾಣಿಸಿಕೊಳ್ಳುತ್ತದೆ. ಇದು ಬೆಚ್ಚಗಿನ ಶಾಖ ನೀಡುವುದರಿಂದ ಚಾಲಾಜಿಯಾನ್ ಶಮನಗೊಳ್ಳುತ್ತದೆ.

ಅಲರ್ಜಿಗಳು

ಅಲರ್ಜಿಗಳು

ಕಣ್ ರೆಪ್ಪೆಗಳಲ್ಲಿ ನವೆ, ಕೆಂಪಾದ ಕಣ್ಣು ಮತ್ತು ಜಲಯುಕ್ತ ಕಣ್ಣುಗಳೊಂದಿಗೆ ಊದಿಕೊಂಡಿದ್ದರೆ ಅದು ಕಣ್ಣಿನ ಅಲರ್ಜಿ ಎಂದು ಪರಿಗಣಿಸಲಾಗುವುದು. ಧೂಳು, ಪರಾಗ ಹಾಗೂ ಇನ್ನಿತರ ಅಲರ್ಜಿಗಳು ಕಣ್ಣಿಗೆ ಕಿರಿಕಿರಿ ಉಂಟುಮಾಡುತ್ತವೆ. ಇವು ಕಣ್ಣು ರೆಪ್ಪೆಗಳನ್ನು ಊದಿಕೊಳ್ಳುವಂತೆ ಮಾಡಿ ನೋವುಂಟಾಗುತ್ತದೆ.

ಬಳಲಿಕೆ ಅಥವಾ ಆಯಾಸ

ಬಳಲಿಕೆ ಅಥವಾ ಆಯಾಸ

ಕಣ್ಣಿಗೆ ಹೆಚ್ಚು ಆಯಾಸ ಅಥವಾ ಬಳಲಿಕೆ ಉಂಟಾದಾಗ ಕಣ್ ರೆಪ್ಪೆಗಳ ಪಫಿ ಅಥವಾ ಊದಿಕೊಳ್ಳುವುದು. ರಾತ್ರಿವೇಳೆ ಕಣ್ಣಲ್ಲಿ ನೀರು ತುಂಬಿಕೊಂಡಿದ್ದರೆ ಮರು ದಿನ ಬೆಳಗ್ಗೆ ಕಣ್ಣಿನ ರೆಪ್ಪೆಗಳು ಊದಿಕೊಂಡಿರುವಂತೆ ಕಾಣುತ್ತವೆ.

ಅಳುವುದು

ಅಳುವುದು

ಅತಿಯಾಗಿ ಅಳುವುದು ಅಥವಾ ಗಂಟೆಗಳ ಕಾಲ ಕಣ್ಣಿನಲ್ಲಿ ನೀರು ತುಂಬಿಕೊಂಡಿದ್ದರೆ ರೆಪ್ಪೆಯಲ್ಲಿನ ರಕ್ತನಾಳ ಛಿದ್ರವಾಗುತ್ತವೆ. ಅಲ್ಲದೆ ಕಣ್ಣಿನ ಸುತ್ತಲಿನ ರಕ್ತ ಹರಿವಿನ ಹೆಚ್ಚಳದಿಂದ ಕಣ್ಣಿನಲ್ಲಿ ನೀರು ತುಂಬಿಕೊಳ್ಳುತ್ತದೆ.

ಕಾಸ್ಮೆಟಿಕ್ಸ್

ಕಾಸ್ಮೆಟಿಕ್ಸ್

ಕಾಸ್ಮೆಟಿಕ್ ಉತ್ಪನ್ನಗಳನ್ನು ಬಳಸುವುದರಿಂದ ಅವು ಕಣ್ಣಿನೊಳಗೆ ಪ್ರವೇಶಿಸುವ ಸಂಭವ ಇರುತ್ತದೆ. ಇದರಿಂದ ಕಣ್ಣಿನ ಸುತ್ತಲಿನ ಅಂಗಾಂಶಗಳಲ್ಲೂ ಕಿರಿಕಿರಿ ಉಂಟಾಗಿ ಉಬ್ಬಿಕೊಳ್ಳುತ್ತವೆ.

ಕಣ್ಣುಗಳ ಆರೋಗ್ಯಕ್ಕೆ ಇರಲಿ, ಎಂದಿಗೂ 'ಸ್ಪೆಷಲ್' ಆರೈಕೆ!

ಆರ್ಬಿಟಲ್ ಸೆಲ್ಯುಲೈಟಿಸ್

ಆರ್ಬಿಟಲ್ ಸೆಲ್ಯುಲೈಟಿಸ್

ಇದು ಕಣ್ ರೆಪ್ಪೆಯ ಅಂಗಾಂಶದ ಆಳದಲ್ಲಿ ಕಾಣಿಸಿಕೊಳ್ಳುವ ಸೋಂಕು. ತುಂಬಾ ನೋವನ್ನುಂಟುಮಾಡುವ ಈ ಸೋಂಕು ಬಹಳ ಬೇಗ ಹರಡುವುದು. ಈ ಭಾಗದಲ್ಲಿ ಉಂಟಾಗುವ ಚಿಕ್ಕ ಗಾಯದಿಂದಲೂ ಸಾಕಷ್ಟು ಬ್ಯಾಕ್ಟೀರಿಯಾಗಳು ಹರಡಿಕೊಳ್ಳುತ್ತವೆ.

ಗ್ರೇವ್ಸ್ ಡಿಸೀಸ್

ಗ್ರೇವ್ಸ್ ಡಿಸೀಸ್

ಈ ರೋಗವು ಎಂಡೋಕ್ರೈನ್ ಅಸ್ವಸ್ಥತೆಯಿಂದ ಕಾಣಿಸಿಕೊಳ್ಳುತ್ತದೆ. ಇದು ಥೈರಾಯ್ಡ್‍ಅನ್ನು ಹೆಚ್ಚಿಸುವ ಸಾಧ್ಯತೆ ಇದೆ. ಇದರಿಂದ ಕಣ್ಣಿನಲ್ಲಿ ಊತ ಹಾಗೂ ಉರಿಯೂತ ಕಾಣಿಸಿಕೊಳ್ಳುತ್ತವೆ.

ಹರ್ಪಿಸ್ ಸೋಂಕು

ಹರ್ಪಿಸ್ ಸೋಂಕು

ಇದು ಕಣ್ಣಿನ ಸುತ್ತಲೂ ಹರಡಿಕೊಳ್ಳುವ ಸೋಂಕು ಎನ್ನಬಹುದು. ಇದು ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಇದರಿಂದ ಕಣ್ಣು ಗುಲಾಬಿ ಬಣ್ಣಕ್ಕೆ ತಿರುಗುವುದು. ಇದರಿಂದ ಯಾವುದೇ ಗಾಯ ಉಂಟಾಗದು.

ಬ್ಲೆಫರಿಟಿಸ್

ಬ್ಲೆಫರಿಟಿಸ್

ಬ್ಯಾಕ್ಟೀರಿಯಾದಿಂದ ಉಂಟಾಗುವ ಬ್ಲೆಫರಿಟಿಸ್ ಒಂದು ಅಪಾಯಕಾರಿ ರೋಗ ಲಕ್ಷಣ. ಇದು ಕಣ್ಣು ಮತ್ತು ರೆಪ್ಪೆಯ ಸುತ್ತಲೂ ಕಾಣಿಸಿಕೊಳ್ಳುತ್ತದೆ. ಈ ಸೋಂಕು ತಾಗಿದರೆ ಎಣ್ಣೆಯುಕ್ತ ರೆಪ್ಪೆಗಳು ಮತ್ತು ರೆಪ್ಪೆಯ ಸುತ್ತಲೂ ಹೊಟ್ಟಿನಂತಿರುವ ಪದರಗಳು ಆವರಿಸಿಕೊಳ್ಳುತ್ತವೆ.

ಕಣ್ಣೀರಿನ ನಾಳ

ಕಣ್ಣೀರಿನ ನಾಳ

ನಿರ್ಬಂಧಿತ ಕಣ್ಣೀರಿನ ನಾಳದಿಂದ ಕಣ್ಣೀರು ಬರುವುದು ತಡೆಯುತ್ತವೆ. ಹೀಗಾಗಿ ಕಣ್ಣುಗಳು ಕೆಂಪಾಗಿ ನೋವು ಕಾಣಿಸಿಕೊಳ್ಳುತ್ತವೆ. ಜೊತೆಗೆ ರೆಪ್ಪೆಗಳು ಊದಿಕೊಂಡಿರುತ್ತವೆ.

ಸಡನ್ ಆಗಿ ಕಣ್ಣಿಗೆ ಗಾಯವಾದರೆ- ಪ್ರಥಮ ಚಿಕಿತ್ಸೆ ಹೀಗಿರಲಿ

ಗುಲಾಬಿ ಕಣ್ಣು

ಗುಲಾಬಿ ಕಣ್ಣು

ಕಣ್ಣುಗಳು ಗುಲಾಬಿ ಬಣ್ಣಕ್ಕೆ ತಿರುಗಿದರೆ ಇದನ್ನು ಕಾಂಜಕ್ಟಿವಾ ಉರಿಯೂತ ಎಂದು ಕರೆಯಲಾಗುತ್ತದೆ. ಇದರಿಂದ ರೆಪ್ಪೆಗಳು ಹಾಗೂ ಕಣ್ಣಿನ ಸುತ್ತಲ ಭಾಗ ನೋವಿನಿಂದ ಕೂಡಿರುತ್ತವೆ. ಇದಕ್ಕೆ ಬೆಚ್ಚಗಿನ ಶಾಖ ನೀಡಿದರೆ ನೋವು ಶಮನವಾಗುತ್ತದೆ.

ಕಣ್ಣಿಗೆ ಭಾದೆ ತರುವ ಕೆಂಗಣ್ಣು ರೋಗಕ್ಕೆ ಪರಿಹಾರವೇನು?

English summary

Top Causes Of Swollen Eyelids That You Need To Know About

Most of the causes of swollen eyelids are harmless, but sometimes minor problems can also turn out to be quite serious. If you have experienced swollen eyelids before, then it is safe to actually treat this condition at home. In this article, we have mentioned to you some of the top causes of swollen eyelids. So, read further to know more about the reasons for swollen eyelids.
Subscribe Newsletter