For Quick Alerts
ALLOW NOTIFICATIONS  
For Daily Alerts

ಕೇವಲ ಮೂರು ಖರ್ಜೂರ ತಿನ್ನಿರಿ, ದೇಹಕ್ಕೆ ಹಿಡಿದ ರೋಗ ಓಡಿಸಿ...!

ದಿನಕ್ಕೊಂದು ಸೇಬು ತಿನ್ನುವುದರಿಂದ ವೈದ್ಯರ ಅಗತ್ಯವೇ ಬೀಳದಷ್ಟು ಆರೋಗ್ಯ ಉತ್ತಮವಾಗುತ್ತದೆ ಎಂದು ಹೇಳುತ್ತಾರೆ. ಆದರೆ ಸೇಬು ಹಣ್ಣನ್ನು ಸೇವಿಸಲು ಆಗದಿದ್ದರೆ, ಇದರ ಲಾಭವನ್ನು ಒಂದೆರಡು ಖರ್ಜೂರಗಳನ್ನು ತಿನ್ನುವುದರಿಂದಲೂ ಪಡೆದುಕೊಳ್ಳಬಹುದು

By Divya
|

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವ ಗಾದೆ ಅದೆಷ್ಟೋ ಬಾರಿ ನಿಜ ಎನಿಸುತ್ತದೆ. ಈಗ ನೆನಪಾಗಿದ್ದು ಖರ್ಜೂರದ ವಿಷಯದಲ್ಲಿ. ನೋಡಲು ಬಹಳ ಚಿಕ್ಕದಾದ ಹಣ್ಣು. ಆದರೆ ಇದರ ಉಪಯೋಗ ಮಾತ್ರ ಮಹತ್ತರವಾದದ್ದು. ನೈಸರ್ಗಿಕವಾಗಿಯೇ ಅತ್ಯಂತ ಸಿಹಿ ಅಂಶದಿಂದ ಕೂಡಿರುವ ಈ ಹಣ್ಣು ಎಲ್ಲರ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತದೆ. ಕಾಂತಿಯುತ ತ್ವಚೆಗಾಗಿ ಖರ್ಜೂರದ ಫೇಸ್ ಪ್ಯಾಕ್

ಅತಿಹೆಚ್ಚು ನಾರಿನಂಶ(ಫೈಬರ್)ವನ್ನು ಒಳಗೊಂಡಿರುವ ಈ ಹಣ್ಣು ಜೀರ್ಣಾಂಗ ವ್ಯವಸ್ಥೆ ಹಾಗೂ ಕರುಳುಗಳು ಕ್ರಮಬದ್ಧವಾದ ಕಾರ್ಯನಿರ್ವಹಿಸುವಂತೆ ಮಾಡುತ್ತದೆ. ಪ್ರತಿದಿನ ಕೇವಲ ಮೂರು ಖರ್ಜೂರವನ್ನು ತಿಂದರೆ ಸಾಕು. ದೇಹಕ್ಕೆ ಅಗತ್ಯವಾದ ಜೀವಸತ್ವ, ವಿಟಮಿನ್ ಹಾಗೂ ನಾರಿನಂಶವನ್ನು ಒದಗಿಸುತ್ತದೆ. ಅಲ್ಲದೆ ರಕ್ತ ಹೀನತೆ, ರಕ್ತದೊತ್ತಡ, ಕೊಲೆಸ್ಟ್ರಾಲ್ ಸೇರಿದಂತೆ ಇನ್ನಿತರ ರೋಗಗಳನ್ನು ಸಮತೋಲನದಲ್ಲಿರುವಂತೆ ನೋಡಿಕೊಳ್ಳುತ್ತದೆ. ಗರ್ಭಿಣಿಯರು ಮರೆಯದೇ ತಿನ್ನಬೇಕಾದ ಹಣ್ಣು ಖರ್ಜೂರ...

ಪ್ರತಿದಿನ ಕೇವಲ ಮೂರು ಖರ್ಜೂರವನ್ನು ತಿಂದರೆ ಮಲಬದ್ಧತೆ, ಕರುಳಿನ ಅಸ್ವಸ್ಥತೆ, ಹೃದಯದ ತೊಂದರೆ, ಅತಿಸಾರ, ಕಿಬ್ಬೊಟ್ಟೆಯ ಕ್ಯಾನ್ಸರ್, ಲೈಂಗಿಕ ಸಮಸ್ಯೆಗಳು ದೂರವಾಗುತ್ತದೆ. ಈ ರೋಗಗಳ ನಿವಾರಣೆಯಲ್ಲಿ ಖರ್ಜೂರದ ಪಾತ್ರವೇನು ಎನ್ನುವುದನ್ನು ತಿಳಿಯಲು ಮುಂದೆ ಓದಿ...

ರಕ್ತದ ಪ್ರಮಾಣವನ್ನು ಹೆಚ್ಚಿಸುತ್ತದೆ

ರಕ್ತದ ಪ್ರಮಾಣವನ್ನು ಹೆಚ್ಚಿಸುತ್ತದೆ

ರಕ್ತಹೀನತೆಯಿಂದ ಬಳಲುತ್ತಿದ್ದವರು ಪ್ರತಿದಿನ ಖರ್ಜೂರವನ್ನು ತಿಂದರೆ ಸಮಸ್ಯೆ ಗುಣಮುಖವಾಗುತ್ತದೆ. ಪ್ರತಿ 100 ಗ್ರಾಂ ಖರ್ಜೂರದಲ್ಲಿ 0.90 ಗ್ರಾಂ ಕಬ್ಬಿಣಾಂಶ ಇದೆ. ಕೆಂಪು ರಕ್ತದ ಪ್ರಮಾಣವನ್ನು ಹೆಚ್ಚಿಸಿ ರಕ್ತಹೀನತೆಯ ಸೋಂಕನ್ನು ನಿವಾರಿಸುತ್ತದೆ ಎಂದು ಅಧ್ಯಯನವೊಂದು ದೃಢಪಡಿಸಿದೆ.

ಕಣ್ಣಿನ ಆರೋಗ್ಯಕ್ಕೆ

ಕಣ್ಣಿನ ಆರೋಗ್ಯಕ್ಕೆ

ಈ ಹಣ್ಣು ಕಣ್ಣಿನ ಆರೋಗ್ಯ ಹೆಚ್ಚಿಸುವ ವಿಟಮಿನ್ ಝೀಕ್ಸಾಥಿನ್ ಮತ್ತು ಲುಟೆಯಿನ್‍ಗಳನ್ನು ಒಳಗೊಂಡಿದೆ. ಈ ಎರಡು ವಿಟಮಿನ್‍ಗಳು ಕಣ್ಣಿನ ಮಕ್ಯುಲರ್ ಮತ್ತು ರೆಟಿನಲ್‍ನ ಆರೋಗ್ಯವನ್ನು ಕಾಪಾಡುತ್ತವೆ. ಅಲ್ಲದೆ ಅಕ್ಷಿಪಟಲಕ್ಕೆ ಉಂಟಾಗುವ ತೊಂದರೆಗಳನ್ನು ನಿಯಂತ್ರಿಸುತ್ತದೆ.

ಅತಿಸಾರದ ನಿಯಂತ್ರಣ

ಅತಿಸಾರದ ನಿಯಂತ್ರಣ

ಕ್ಯಾಲ್ಸಿಯಂ ಭರಿತ ಖರ್ಜೂರ ಅತಿಸಾರವನ್ನು ನಿಲ್ಲಿಸಲು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಪ್ರತಿದಿನ 3 ಖರ್ಜೂರವನ್ನು ನಿಯಮಿತವಾಗಿ ಸೇವಿಸಿದರೆ ಕರುಳಿನ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತವೆ.

ಮಲಬದ್ಧತೆ ನಿಲ್ಲುತ್ತದೆ

ಮಲಬದ್ಧತೆ ನಿಲ್ಲುತ್ತದೆ

ಪ್ರತಿದಿನ ಮಲಗುವ ಮುನ್ನ ಮೂರು ಖರ್ಜೂರವನ್ನು ಒಂದು ಗ್ಲಾಸ್ ನೀರಿನಲ್ಲಿ ನೆನೆಯಿಡಿ. ಬೆಳಗಾಗುವವರೆಗೆ ಅದು ತನ್ನ ರಸವನ್ನು ವಿರೇಚಕವಾಗಿ ಬಿಡುಗಡೆ ಮಾಡಿರುತ್ತದೆ. ಈ ನೀರಿನ ಮಿಶ್ರಣವನ್ನು ಕುಡಿದರೆ ಕರುಳಿನನ ಕಾರ್ಯನಿರ್ವಹಣೆಯು ಸರಾಗವಾಗುತ್ತದೆ. ಜೊತೆಗೆ ಮಲಬದ್ಧತೆಯು ಕಡಿಮೆಯಾಗುತ್ತದೆ.

ಪ್ರಸವಕ್ಕೆ ಸಹಕಾರಿ

ಪ್ರಸವಕ್ಕೆ ಸಹಕಾರಿ

ಹೆರಿಗೆಗೆ ಒಂದು ತಿಂಗಳು ಮುಂಚಿತವಾಗಿ ಪ್ರತಿದಿನ ಖರ್ಜೂರವನ್ನು ಸೇವಿಸಬೇಕು. ಹೀಗೆ ಮಾಡುವುದರಿಂದ ಹೆರಿಗೆಯ ನೋವು ಸರಾಗವಾಗುತ್ತದೆ. ಜೊತೆಗೆ ರಕ್ತಸ್ರಾವದ ತೀವ್ರತೆಯು ಕಡಿಮೆಯಾಗುತ್ತದೆ. ಜೊತೆಗೆ ಹೆಚ್ಚಿನ ಪ್ರಮಾಣದಲ್ಲಿ ಹಾಲು ಉತ್ಪಾದಿಸುತ್ತದೆ.

ತೂಕದಲ್ಲಿ ಸಮತೋಲನ

ತೂಕದಲ್ಲಿ ಸಮತೋಲನ

ಖರ್ಜೂರದಲ್ಲಿ ಆರೋಗ್ಯಕರ ಪೋಷಕಾಂಶಗಳು ತುಂಬಿರುತ್ತವೆ. ಖಾಲಿ ಹೊಟ್ಟೆಯಲ್ಲಿ ಖರ್ಜೂರವನ್ನು ತಿಂದರೆ ರಕ್ತದಲ್ಲಿನ ಸಕ್ಕರೆ ಮಟ್ಟವು ಸಮತೋಲನದಲ್ಲಿರುತ್ತದೆ. ಜೊತೆಗೆ ಕರುಳಿನ ಕೆಲಸವನ್ನು ನಿಯಂತ್ರಿಸುತ್ತದೆ. ದೇಹದಲ್ಲಿ ಈ ರೀತಿಯ ಬದಲಾವಣೆಯಾಗುವುದರಿಂದ ತೂಕದ ಬದಲಾವಣೆ ಉಂಟಾಗದು.

ಹೃದಯಕ್ಕೆ ಒಳ್ಳೆಯದು

ಹೃದಯಕ್ಕೆ ಒಳ್ಳೆಯದು

ಹೃದಯದ ಸಮಸ್ಯೆ ಹೊಂದಿರುವವರಿಗೆ ಪ್ರತಿ ದಿನ ಕರ್ಜೂರ ತಿನ್ನುವಂತೆ ಸಲಹೆ ನೀಡಲಾಗುತ್ತದೆ. ಅಲ್ಲದೆ ಪ್ರತಿದಿನ ಖರ್ಜೂರವನ್ನು ನೀರಿನಲ್ಲಿ ನೆನೆಹಾಕಿ, ಬೆಳಗ್ಗೆ ಅದನ್ನು ಖಾಲಿ ಹೊಟ್ಟೆಯಲ್ಲಿ ಕುಡಿದರೆ ಹೃದಯಾಘಾತವನ್ನು ತಡೆಗಟ್ಟಬಹುದು.

ರಕ್ತದೊತ್ತಡದ ನಿವಾರಣೆ

ರಕ್ತದೊತ್ತಡದ ನಿವಾರಣೆ

ಈ ಹಣ್ಣಿನಲ್ಲಿ ಕೆಮಿಕಲ್ ಮತ್ತು ಫ್ಯಾಟಿ ಆಸಿಡ್ ಇದೆ ಎನ್ನುವುದನ್ನು "ಕಾಂಪೊಸಿಶಿನ್ಸ್ ಆಫ್ ಡೇಟ್ ಪಾಮ್ ಫ್ರೂಟ್' ಅಧ್ಯಯನವು ದೃಢಪಡಿಸಿದೆ. 5-6 ಖರ್ಜೂರವು ಸುಮಾರು 80 ಮಿ.ಗ್ರಾಂ ಮೆಗ್ನೀಸಿಯಮ್‍ಅನ್ನು ಹೊಂದಿರುತ್ತದೆ. ಇವು ರಕ್ತನಾಳಗಳಲ್ಲಿ ರಕ್ತಸಂಚಾರ ಸರಾಗವಾಗಿ ಆಗುವಂತೆ ಮಾಡುತ್ತದೆ. ಪ್ರತಿದಿನ 370 ಮಿ.ಗ್ರಾಂ. ಮೆಗ್ನೀಸಿಯಮ್ ಸೇವಿಸುವುದರಿಂದ ರಕ್ತದೊತ್ತಡದ ಸ್ಥಿರತೆಯನ್ನು ಕಾಪಾಡಬಹುದು.

ಸ್ಟ್ರೋಕ್ ತಡೆಯುವುದು

ಸ್ಟ್ರೋಕ್ ತಡೆಯುವುದು

ಹೆಚ್ಚಿನ ಪ್ರಮಾಣದಲ್ಲಿ ಪೊಟ್ಯಾಸಿಯಮ್ ಹೊಂದಿದೆ. ಅಧಿಕ ಪ್ರಮಾಣದ ಪೊಟ್ಯಾಸಿಯಮ್ ಸೇವಿಸುವುದರಿಂದ ಸುಮಾರು ಶೇ.40 ರಷ್ಟು ಪಾಶ್ರ್ವವಾಯು ಆಗುವುದನ್ನು ನಿಯಂತ್ರಿಸಬಹುದು. ಈ ಅಂಶ ನರ ವ್ಯವಸ್ಥೆಯಲ್ಲಿ ರಕ್ತ ಸಂಚಲನ ಸರಾಗವಾಗುವಂತೆ ಮಾಡುತ್ತದೆ.

ಮೆದುಳಿಗೆ ಒಳ್ಳೆಯದು

ಮೆದುಳಿಗೆ ಒಳ್ಳೆಯದು

ಖರ್ಜೂರದಲ್ಲಿ ರಂಜಕವು ಸಮೃದ್ಧವಾಗಿರುವುದರಿಂದ ಮೆದುಳಿನ ಆರೋಗ್ಯವನ್ನು ಕಾಪಾಡುತ್ತದೆ. ಪ್ರತಿದಿನ 3 ಖರ್ಜೂರ ಸೇವಿಸುವುದರಿಂದ ಮೆದುಳಿಗೆ ಅಗತ್ಯವಿರುವ ಪೌಷ್ಟಿಕಾಂಶವನ್ನು ಇದು ಒದಗಿಸುತ್ತದೆ.

ಶಕ್ತಿ ಹೆಚ್ಚಿಸುವುದು

ಶಕ್ತಿ ಹೆಚ್ಚಿಸುವುದು

ಈ ಹಣ್ಣು ಫ್ರಕ್ಟೋಸ್, ಸುಕ್ರೋಸ್ ಮತ್ತು ಗ್ಲುಕೋಸ್ ನಂತಹ ನೈಸರ್ಗಿಕ ಸಕ್ಕರೆ ಅಂಶದಿಂದ ಭರಿತವಾಗಿದೆ. ಹಾಲಿನೊಂದಿಗೆ ಇದರ ತಿರುಳನ್ನು ಸೇರಿಸಿ ಕುಡಿಯುವುದರಿಂದ ದೇಹಕ್ಕೆ ಸಾಕಷ್ಟು ಶಕ್ತಿ ದೊರೆಯುತ್ತದೆ.

ಲೈಂಗಿಕ ಶಕ್ತಿ ಹೆಚ್ಚಿಸುತ್ತದೆ

ಲೈಂಗಿಕ ಶಕ್ತಿ ಹೆಚ್ಚಿಸುತ್ತದೆ

ಪ್ರತಿದಿನ ಒಂದು ಗ್ಲಾಸ್ ಹಾಲಿನಲ್ಲಿ ಖರ್ಜೂರವನ್ನು ನೆನೆಯಿಡಬೇಕು. ಬೆಳಗ್ಗೆ ನೆನೆಯಿಟ್ಟ ಹಾಲಿಗೆ ಏಲಕ್ಕಿ ಮತ್ತು ಜೇನು ತುಪ್ಪವನ್ನು ಸೇರಿಸಿ ಕುಡಿಯಬೇಕು. ಹೀಗೆ ಮಾಡುವುದರಿಂದ ಎಲ್ಲಾ ವಯಸ್ಸಿನವರ ಲೈಂಗಿಕ ಶಕ್ತಿ ಹೆಚ್ಚಾಗುವುದು.

ಕೂದಲ ಆರೋಗ್ಯಕ್ಕೆ

ಕೂದಲ ಆರೋಗ್ಯಕ್ಕೆ

ಪ್ರತಿದಿನ ಸುಮಾರು ಎರಡರಿಂದ ಮೂರು ಖರ್ಜೂರಗಳನ್ನು ತಿನ್ನುವ ಅಭ್ಯಾಸ ಮಾಡಿಕೊಂಡರೆ ಕೂದಲ ಬುಡಗಳು ದೃಢಗೊಳ್ಳುವ ಮೂಲಕ ಕೂದಲು ಉದುರುವ ಸಂಖ್ಯೆ ಕಡಿಮೆಯಾಗುತ್ತದೆ. ಇದರಲ್ಲಿರುವ ವಿಟಮಿನ್ ಬಿ ಕೂದಲ ಬುಡಕ್ಕೆ ಹೆಚ್ಚಿನ ಪೋಷಣೆ ನೀಡುವ ಮೂಲಕ ಕೂದಲಿಗೂ ಉತ್ತಮ ಪೋಷಣೆ ದೊರೆತು ಆರೋಗ್ಯಕರವಾಗುತ್ತದೆ. ಇದು ನಿಮ್ಮ ಕೂದಲನ್ನು ಉದ್ದ ಮತ್ತು ಆರೋಗ್ಯಕರವಾಗಿಸುತ್ತದೆ.

English summary

Things That Happen To Your Body If You Eat Three Dates A Day

The benefits of eating dates are wide and varied. They can solve a number of health problems like constipation, intestinal disorders, heart problems, anaemia, sexual dysfunctions, diarrhoea, abdominal cancer and several other conditions. So, eat three dates a day and be prepared to experience its numerous health benefits.
X
Desktop Bottom Promotion