ಕುತ್ತಿಗೆ ನೋವು ಶಮನಕ್ಕೆ-ಸರಳವಾದ ಐದು ವ್ಯಾಯಮಗಳು

By: manu
Subscribe to Boldsky

ಇಂದು ಹೆಚ್ಚಿನ ಉದ್ಯೋಗಗಳಲ್ಲಿ ದಿನದ ಸತತ ಏಳೆಂಟು ಘಂಟೆ ಅಥವಾ ಇದಕ್ಕೂ ಹೆಚ್ಚು ಕಾಲ ಕುಳಿತುಕೊಂಡೇ ಕೆಲಸ ಮಾಡಬೇಕಾಗಿ ಬರುತ್ತದೆ. ಕುಳಿತು ಕೆಲಸ ಮಾಡುವವರಿಗೆ ಕೊಂಚ ಕುತ್ತಿಗೆಯನ್ನು ಬಗ್ಗಿಸುವುದು ಅನಿವಾರ್ಯ. ಕುತ್ತಿಗೆ ನೋವಿಂದ ಮುಕ್ತಿ ಪಡೆಯಲು ಹೀಗೆ ಮಾಡಿ

ಪ್ರತಿದಿನವೂ ಕೊಂಚವೇ ಬಗ್ಗಿರುವ ಕುತ್ತಿಗೆ ದಿನಕಳೆದಂತೆ ನಿಧಾನವಾಗಿ ನೋವು ಕೊಡಲು ಪ್ರಾರಂಭಿಸುತ್ತದೆ. ಒಂದು ವೇಳೆ ಈ ನೋವು ಸತತವಾಗಿದ್ದರೆ ಇದರ ಬಗ್ಗೆ ಕಾಳಜಿ ವಹಿಸಿ ಸೂಕ್ತ ಚಿಕಿತ್ಸೆ ಪಡೆಯುವುದು ಅಗತ್ಯ. ಆದರೆ ಜಾಣತನದ ಕ್ರಮವೆಂದರೆ ಈ ನೋವು ಉಲ್ಬಣಗೊಳ್ಳಲು ಬಿಡದೇ ಇರುವುದು. ಕುತ್ತಿಗೆ, ಸೊಂಟ ನೋವು ನಿವಾರಣೆಗೆ-'ಭಾರಧ್ವಾಜಾಸನ'

ಕೆಲವು ಸರಳ ಸೆಳೆತದ ವ್ಯಾಯಾಮಗಳನ್ನು ಅನುಸರಿಸುವ ಮೂಲಕ ಈ ನೋವನ್ನು ಬರದಂತೆ ಮಾಡಿಕೊಳ್ಳಬಹುದು. ಬನ್ನಿ, ಕುತ್ತಿಗೆ ನೋವು ಈಗಾಗಲೇ ಪ್ರಾರಂಭವಾಗಿದ್ದರೂ ನೋವು ಹೆಚ್ಚಿಸಲು ಬಿಡದೇ ಕಡಿಮೆ ಮಾಡುವ ಈ ಸರಳ ವ್ಯಾಯಾಮಗಳು ಯಾವುವು ಎಂಬುದನ್ನು ನೋಡೋಣ....  

ಕುತ್ತಿಗೆಯನ್ನು ತಿರುಗಿಸುವುದು

ಕುತ್ತಿಗೆಯನ್ನು ತಿರುಗಿಸುವುದು

ಮೊದಲು ದೀರ್ಘವಾದ ಉಸಿರೆಳೆದುಕೊಂಡು ಎಡಕ್ಕೆ ಕುತ್ತಿಗೆಯನ್ನು ಎಷ್ಟು ಸಾಧ್ಯವೋ ಅಷ್ಟು ಎಡಕ್ಕೆ ತಿರುಗಿಸಿ ಕೆಲವು ಸೆಕೆಂಡು ಹಾಗೇ ಇರಿಸಿ ಬಳಿಕ ನಿಧಾನವಾಗಿ ಬಲಗಡೆಗೆ ಸಾಧ್ಯವಾದಷ್ಟು ತಿರುಗಿಸಿ ನಂತರ ನಡುವಿಗೆ ತಂದು ಉಸಿರು ಬಿಡಿ. ಈ ವಿಧಾನವನ್ನು ಸುಮಾರು ಐದು ಬಾರಿ ಪುನರಾವರ್ತಿಸಿ. ಈಗ ತಾನೇ ನೋವು ಪ್ರಾರಂಭವಾಗಿದೆ ಎಂದು ಅನ್ನಿಸಿದಾದ ಈ ವ್ಯಾಯಾಮವನ್ನು ಯಾವುದೇ ಹೊತ್ತಿನಲ್ಲಿ, ಕಛೇರಿಯಲ್ಲಿ ಕೆಲಸದ ಸಮಯದಲ್ಲಿಯೂ ನಿರ್ವಹಿಸಬಹುದು.

ಕುತ್ತಿಗೆಯನ್ನು ಬಗ್ಗಿಸುವುದು

ಕುತ್ತಿಗೆಯನ್ನು ಬಗ್ಗಿಸುವುದು

ದೀರ್ಘವಾಗಿ ಉಸಿರೆಳೆದುಕೊಂಡು ಮುಂದಕ್ಕೆ ಮುಖವನ್ನು ಬಗ್ಗಿಸಿ. ನಿಮ್ಮ ಗದ್ದ ಎದೆಗೆ ತಾಕುವಷ್ಟು ಬಾಗಿ. ಇದೇ ಭಂಗಿಯಲ್ಲಿ ಕುತ್ತಿಗೆಯನ್ನು ಪಕ್ಕಕ್ಕೆ ಬಾಗಿಸಿ ಭುಜವನ್ನು ಎತ್ತದೇ ಬಲಕಿವಿಯನ್ನು ಬಲಭುಜಕ್ಕೆ ತಾಕಿಸಲು ಯತ್ನಿಸಿ. ಇದೇ ರೀತಿ ಎಡಕಿವಿಯನ್ನು ಎಡಭುಜಕ್ಕೆ ತಾಕಿಸಲು ಯತ್ನಿಸಿ ಬಳಿಕ ಕುತ್ತಿಗೆ ನೆಟ್ಟಗಾಗಿಸಿ ಉಸಿರು ಬಿಡಿ. ಈ ವಿಧಾನವನ್ನು ಐದು ಬಾರಿ ಪುನರಾವರ್ತಿಸಿ.

ನಿಂತು ಕುತ್ತಿಗೆಯನ್ನು ನೀಳವಾಗಿಸುವುದು

ನಿಂತು ಕುತ್ತಿಗೆಯನ್ನು ನೀಳವಾಗಿಸುವುದು

ಎರಡೂ ಪಾದಗಳು ಕೊಂಚ ದೂರವಿರುವಂತೆ ಕಾಲುಗಳನ್ನು ಅಗಲಿಸಿ ನಿಂತುಕೊಳ್ಳಿ. ಈಗ ಪೂರ್ಣ ಉಸಿರೆಳೆದುಕೊಂಡು ಬಲಗಿವಿಯನ್ನು ಬಲಭುಜಕ್ಕೆ ತಾಗಿಸಲು ಯತ್ನಿಸಿ. ಇದೇ ರೀತಿ ಎಡಗಿವಿಯನ್ನು ಎಡಭುಜಕ್ಕೆ ತಾಕಿಸಲು ಯತ್ನಿಸಿ. ಈ ಕ್ರಮವನ್ನು ಆರೇಳು ಬಾರಿ ಪುನರಾವರ್ತಿಸಿ. ನೋವು ಉಂಟಾಗಿದ್ದರೆ ಈ ಕ್ರಮದಿಂದ ತಕ್ಷಣವೇ ಕಡಿಮೆಯಾಗುತ್ತದೆ.

ಹಿಂದಕ್ಕೆ ವಾಲಿ ಕುತ್ತಿಗೆಗೆ ಸೆಳೆತ ನೀಡುವುದು

ಹಿಂದಕ್ಕೆ ವಾಲಿ ಕುತ್ತಿಗೆಗೆ ಸೆಳೆತ ನೀಡುವುದು

ನಿಂತ ಭಂಗಿಯಲ್ಲಿ ನಿಮ್ಮ ಎರಡೂ ಹಸ್ತಗಳನ್ನು ಬೆನ್ನ ಹಿಂದೆ ತಂದು ಮೊದಲು ಬಲಮಣಿಕಟ್ಟನ್ನು ಎಡಹಸ್ತದಿಂದ ಗಟ್ಟಿಯಾಗಿ ಹಿಡಿದುಕೊಳ್ಳಿ. ಈಗ ನಿಮ್ಮ ಭುಜಗಳು ಕೊಂಚವೇ ಮುಂದಕ್ಕೆ ಬಾಗಿರುತ್ತವೆ. ಈಗ ಬಲಗಿವಿಯನ್ನು ಬಲಭುಜಕ್ಕೆ ತಾಗಿಸಲು ಯತ್ನಿಸಿ ಹಾಗೂ ಎಡಗಿವಿಯನ್ನು ಎಡಕ್ಕೆ ತಾಕಿಸಲು ಯತ್ನಿಸಿ. ಈಗ ಕೈಗಳನ್ನು ಬದಲಾಯಿಸಿ ಇದೇ ಕ್ರಮವನ್ನು ನಾಲ್ಕಾರು ಬಾರಿ ಪುನರಾವರ್ತಿಸಿ. ಈ ಕ್ರಮದಿಂದಲೂ ಕುತ್ತಿಗೆ ನೋವು ಶೀಘ್ರವಾಗಿ ಕಡಿಮೆಯಾಗುತ್ತದೆ.

ಕೈಗಳನ್ನು ಹಿಂದೆ ಕಟ್ಟಿಕೊಂಡು ಸೆಳೆತ ನೀಡುವುದು

ಕೈಗಳನ್ನು ಹಿಂದೆ ಕಟ್ಟಿಕೊಂಡು ಸೆಳೆತ ನೀಡುವುದು

ಕುರ್ಚಿಯಲ್ಲಿ ಆರಾಮವಾಗಿ ಕುಳಿತು ಎರಡೂ ಕೈಗಳ ಬೆರಳುಗಳನ್ನು ತಲೆಯ ಹಿಂಭಾಗದಲ್ಲಿ ಬೆಸೆಯಿರಿ. ಈಗ ಕೈಗಳಿಂದ ಕುತ್ತಿಗೆಯನ್ನು ಮುಂದಕ್ಕೆ ಬಾಗಿಸಲು ಹಾಗೂ ಕುತ್ತಿಗೆಯನ್ನು ಹಿಂದಕ್ಕೆಳೆದುಕೊಳ್ಳಲು ಯತ್ನಿಸಿ. ಎರಡೂ ಶಕ್ತಿಗಳು ಒಂದಕ್ಕೊಂದು ಸರಿಯಾಗಿರುವಂತೆ ಕೆಲವು ಸೆಕೆಂಡುಗಳ ಕಾಲ ಇರಿ ಬಳಿಕ ಸಡಿಲವಾಗಿಸಿ. ಇದು ತಲೆನೋವು ಬಂದಾಗ ಅನುಸರಿಸಲು ಉಪಯುಕ್ತವಾದ ವ್ಯಾಯಾಮವಾಗಿದೆ.

 
English summary

These Neck Stretches Help Ease Neck Pain Instantly

Are you in a job where you need to sit and work continuously for about 7-8 hours? Then for sure neck pain is your constant companion. If neck pain is troubling you every other day, then you need to get it checked immediately. For conditions like this the best way to get rid of the pain is to try a few simple stretches. In this article we will be explaining about a few stretches to treat neck pain. Here are a few stretches that help to get rid of neck pain quickly. Take a look.
Please Wait while comments are loading...
Subscribe Newsletter