For Quick Alerts
ALLOW NOTIFICATIONS  
For Daily Alerts

ಕುತ್ತಿಗೆ, ಸೊಂಟ ನೋವು ನಿವಾರಣೆಗೆ-'ಭಾರಧ್ವಾಜಾಸನ'

By Vani nayak
|

ಇತ್ತೀಚಿನ ದಿನಗಳಲ್ಲಿ ನಮ್ಮಲ್ಲಿ ಸಾಕಷ್ಟು ಮಂದಿಗೆ ಸೊಂಟ ನೋವು ಹಾಗು ಕುತ್ತಿಗೆ ನೋವು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿ ಬಿಟ್ಟಿದೆ. ವಯಸ್ಸಾದವರಲ್ಲಿ ಅಷ್ಟೇ ಅಲ್ಲದೇ ಮಧ್ಯೆ ವಯಸ್ಕರಲ್ಲಿ ಹಾಗು ಹರೆಯದವರಲ್ಲಿಯೂ ಕೂಡ ಸೊಂಟ ನೋವು, ಕತ್ತು ನೋವು ಕಾಣಿಸಿಕೊಳ್ಳುತ್ತಿದೆ. ಬದಲಾದ ಜೀವನ ಶೈಲಿ, ಕಾರ್ಯ ವೈಖರಿ, ವ್ಯಾಯಮ ಇಲ್ಲದ ದಿನಚರಿ ಎಲ್ಲವೂ ಇಂಥ ಸಮಸ್ಯೆಗೆ ಕಾರಣವಾಗಿವೆ.

Bharadvajasana (Bharadvaja's twist ) For Lower Back & Neck Pain

ಪ್ರಾರಂಭದಲ್ಲಿ ಸಣ್ಣದಾಗಿ ನೋವು ಕಾಣಿಸಿಕೊಂಡರೂ, ದಿನ ಕಳೆದಂತೆ ನೋವು ಹೆಚ್ಚಾಗಿ ದಿನ ನಿತ್ಯದ ಕೆಲಸ ಕಾರ್ಯ ಮಾಡಿಕೊಂಡು ಹೋಗುವುದಕ್ಕೂ ಅಡ್ಡಿ ಮಾಡುತ್ತದೆ. ಇಂತಹ ಸಂದರ್ಭದಲ್ಲಿ ನಾವು ಸಾಧಾರಣನಾಗಿ ನೋವು ಶಮನಕ ಗುಳಿಗೆಯನ್ನು ತೆಗೆದುಕೊಳ್ಳುವುದರ ಮೂಲಕವೋ ಅಥವಾ ನೋವು ನಿವಾರಕ ಮುಲಾಮು, ಸ್ಪ್ರೇ ಉಪಯೋಗಿಸುವುದರ ಮೂಲಕವೋ ತಾತ್ಕಾಲಿಕ ಪರಿಹಾರವನ್ನು ಕಂಡುಕೊಳ್ಳಲು ಪ್ರಯತ್ನಸುತ್ತೇವೆ. ಮಂಡಿ-ಪಾದಗಳನ್ನು ಸದೃಢಗೊಳಿಸಲು ತಾಡಾಸನ ಅನುಸರಿಸಿ

ಶಾಶ್ವತವಾದ ಪರಿಹಾರಬೇಕಾಗಿದ್ದಲ್ಲಿ ಯೋಗಾಸನವನ್ನು ಅಭ್ಯಾಸ ಮಾಡುವುದು ಹೆಚ್ಚು ಸೂಕ್ತ. ಯೋಗಾಭ್ಯಾಸ ನಮ್ಮ ಪ್ರಾಚೀನ ಕಾಲದ ವ್ಯಾಯಾಮದ ಒಂದು ಭಾಗ. ಇತ್ತೀಚಿನ ದಿನಗಳಲ್ಲಿ ಇದು ವಿಶ್ವದಾದ್ಯಂತ ಹೆಚ್ಚು ಜನಪ್ರಿಯವಾಗುತ್ತಿದೆ. ಕೆಲವರು ಆರೋಗ್ಯದ ದೃಷ್ಟಿಯಿಂದಾಗುವ ಲಾಭಕ್ಕಾಗಿ ಅಭ್ಯಾಸ ಮಾಡುತ್ತಿದ್ದರೆ ಇನ್ನು ಕೆಲವರು ತಮ್ಮ ದೇಹದ ಸದೃಢತೆಯನ್ನು ಕಾಪಾಡಿಕೊಳ್ಳಲು ಯೋಗಾಭ್ಯಾಸವನ್ನು ಮಾಡುತ್ತಾರೆ.

ಭಾರಧ್ವಾಜಾಸನವು ಒಂದು ಸರಳವಾದ ಆಸನವಾಗಿದ್ದು, ಯಾರು ಬೇಕಾದರೂ ಅಭ್ಯಾಸ ಮಾಡಬಹುದಾಗಿದೆ. ಪ್ರಾರಂಭಿಕ ಹಂತದವರೂ ಕೂಡ ಮಾಡಬಹುದಾದ ಈ ಆಸನವನ್ನು ಅಭ್ಯಾಸ ಮಾಡುವುದರಿಂದ ಆರೋಗ್ಯದ ದೃಷ್ಟಿಯಿಂದ ಅನೇಕ ಪ್ರಯೋಜನಗಳಿವೆ. ಯಾರಲ್ಲಿ ಸೊಂಟ ನೋವು ಅಥವಾ ಕತ್ತು ನೋವಿನ ಸಮಸ್ಯೆ ಇದೆಯೋ ಅಂತಹವರಿಗೆ ಇದು ಉಪಯುಕ್ತವಾಗಿದೆ. ಈ ಕೆಳಗೆ ಭಾರಧ್ವಾಜಾಸನವನ್ನು ಮಾಡುವ ಕ್ರಮವನ್ನು ವಿವರಿಸಲಾಗಿದೆ. ಯೋಗ ಟಿಪ್ಸ್: ಬೆನ್ನು ನೋವಿನ ಸಮಸ್ಯೆಗೆ 'ಸುಖಾಸನ'

ಭಾರಧ್ವಾಜಾಸನವನ್ನು ಹಾಕಲು ಕ್ರಮಬದ್ಧವಾದ ವಿವರಣೆ:
1. ನೆಲದ ಮೇಲೆ ಕುಳಿತು, ನಿಮ್ಮ ಕಾಲುಗಳನ್ನು ಮುಂದಕ್ಕೆ ಚಾಚಿ.
2. ತೋಳುಗಳನ್ನು ಬದಿಯಲ್ಲೇ ಇರಿಸಿ.
3. ಮೊಣಕಾಲನ್ನು ಮಡಿಸಿ ಸೊಂಟದ ಬದಿಯಲ್ಲಿ ಇರಿಸಿ
4. ನಿಮ್ಮ ದೇಹದ ತೂಕ ನಿಮ್ಮ ಪೃಷ್ಠ ಭಾಗದ ಮೇಲಿರಿಸಬೇಕು.
5. ಬೆನ್ನು ಮೂಳೆಯನ್ನು ಹಿಗ್ಗಿಸಿ ಉಸಿರೆಳೆದುಕೊಳ್ಳಬೇಕು.


6. ಮೇಲಿನ ಕಾಂಡವನ್ನು ತಿರುಗಿಸಿ, ನಿಧಾನವಾಗಿ ಉಸಿರನ್ನು ಬಿಡಬೇಕು.
7. ನಿಮ್ಮ ಒಂದು ಕೈಯನ್ನು ನೆಲದ ಮೇಲಿಟ್ಟು, ಮತ್ತೊಂದನ್ನು ತೊಡೆಯ ಆಚೆ ಇರಿಸಬೇಕು.
8. ನಿಮ್ಮ ಬೆನ್ನೆಲಬನ್ನು ಸ್ವಲ್ಪವೇ ತಿರುಗಿಸಿ.
9. ನಿಮ್ಮ ತಲೆಯನ್ನು ತಿರುಗಿಸಿ, ಅದೇ ಭಂಗಿಯಲ್ಲಿ ಒಂದು ನಿಮಿಷ ಹಾಗೆಯೇ ಇರಬೇಕು.
10. ದೀರ್ಘವಾಗಿ ಉಸಿರೆಳೆದುಕೊಂಡು, ನಿಧಾನವಾಗಿ ಬಿಡಬೇಕು. ನಂತರ ಆ ಭಂಗಿಯಿಂದ ಹೊರಬರಬೇಕು.
11. ಇದೇ ಕ್ರಮವನ್ನು ಮತ್ತೊಂದು ಕಾಲಿಗೂ ಅನುಸರಿಸಬೇಕು. ಸ್ನಾಯುಗಳ ಬಲವರ್ಧನೆಗೆ- ಏಕ ಪಾದ ರಾಜಕಪೋತಾಸನ

ಭಾರಧ್ವಾಜಾಸನದಿಂದಾಗುವ ಇನ್ನಿತರ ಲಾಭಗಳು
*ಕಾರ್ಪಲ್ ಟನಲ್ ಲಕ್ಷಣ ಇರುವವರಿಗೆ ಅನುಕೂಲವಾಗಿದೆ.
*ಸೊಂಟದ ನೋವಿಂದ ಹೊರಬರಲು ನೆರವಾಗುತ್ತದೆ.
*ಒತ್ತಡವನ್ನು ಉಪಶಮನ ಮಾಡುತ್ತದೆ.
*ಪಚನ ಕಾರ್ಯಕ್ಕೆ ಸಹಾಯ ಮಾಡುತ್ತದೆ.
*ನಿರ್ವಿಶೀಕರಣಕ್ಕೆ ಎಣೆ ಮಾಡಿಕೊಡುತ್ತದೆ.
*ಬೆನ್ನು, ಭುಜ, ಸೊಂಟ ನೋವಿನಿಂದ ಪಾರಾಗಲು ಸಹಾಯ ಮಾಡುತ್ತದೆ. ಸುಖ ನಿದ್ರೆಗೆ ಮಾಡಬೇಕಾದ ಯೋಗಾಸನಗಳು

ಎಚ್ಚರಿಕೆ:

ಯಾರಿಗೆ ರಕ್ತದೊತ್ತಡದಲ್ಲಿ ಏರುಪೇರಿದೆಯೋ ಅಥವಾ ತಲೆ ನೋವಿನ ಸಮಸ್ಯೆ ಇದೆಯೋ ಈ ಭಾರಧ್ವಾಜಾಸನವನ್ನು ಮಾಡತಕ್ಕದ್ದಲ್ಲ. ಇದನ್ನು ತಜ್ಞರ ಸಲಹೆ ಸೂಚನೆಗಳ ಮೇಲೇ ಮಾಡತಕ್ಕದ್ದು.

English summary

Bharadvajasana (Bharadvaja's twist ) For Lower Back & Neck Pain

Bharadvajasana is one simple yoga asana, which has innumerable health benefits and can be done by all, including beginners. In case of such lower back and neck pain, Bharadvajasana is one of the best yoga asanas to be practised. Have a look at the step-wise procedure to perform Bharadvajasana.
X
Desktop Bottom Promotion