For Quick Alerts
ALLOW NOTIFICATIONS  
For Daily Alerts

  ಬೇಗನೇ ತೂಕ ಇಳಿಸಿಕೊಳ್ಳಬೇಕೆಂದರೆ ಇಂತಹ ಆಹಾರಗಳನ್ನು ಸೇವಿಸಿ...

  By Manu
  |

  ತೂಕ ಹೆಚ್ಚಳ ಇಂದು ಬಡವ-ಬಲ್ಲಿದ, ಚಿಕ್ಕವ-ದೊಡ್ಡವ, ಪುರುಷ-ಮಹಿಳೆ ಎಂಬ ಬೇಧಭಾವವಿಲ್ಲದೇ ಎಲ್ಲರನ್ನೂ ಆವರಿಸುತ್ತಿದೆ. ಸವಲತ್ತುಗಳು ಹೆಚ್ಚಾಗಿರುವ ಮೂಲಕ ಕಡಿಮೆಯಾಗಿರುವ ವ್ಯಾಯಾಮ ಒಂದು ಕಾರಣವಾದರೆ ಅರಿವಿಲ್ಲದೇ ನಮ್ಮ ಆಹಾರದ ಮೂಲಕ ದೇಹ ಪ್ರವೇಶಿಸುವ ಅನಾರೋಗ್ಯಕರ ಪೋಷಕಾಂಶಗಳ ಮಹಾಪೂರ ಇನ್ನೊಂದೆಡೆ. ಒಟ್ಟಾರೆ ಒಮ್ಮೆ ಸ್ಥೂಲಕಾಯ ಅಥವಾ ದೇಹದಲ್ಲಿ ತೂಕ ಹೆಚ್ಚಾಗಿ ಬಿಟ್ಟರೆ ಸಾಕು, ಹಿಂದಿರುಗಿ ಬರುವುದು ಬಹಳ ಕಷ್ಟ! ಆದರೆ ಅಸಾಧ್ಯವೇನಲ್ಲ.

  ಇದಕ್ಕೆ ಬೇಕಾಗಿರುವುದು ಕೊಂಚ ವ್ಯಾಯಮ ಹಾಗೂ ಆಹಾರ ಸೇವನೆಯಲ್ಲಿ ಮಿತಿ ಮತ್ತು ಸೇವಿಸುವ ಆಹಾರದಲ್ಲಿ ಬದಲಾವಣೆ ಇಷ್ಟೇ. ಮೊದಲೆರಡು ವಿಧಾನಗಳು ನಮ್ಮ ಮಾನಸಿಕ ಸ್ಥೈರ್ಯವನ್ನು ಅವಲಂಬಿಸಿದ್ದರೆ ಮೂರನೆಯದು ನಮ್ಮ ಆಯ್ಕೆಯನ್ನು ಅವಲಂಬಿಸಿದೆ. ಮುಖ್ಯವಾಗಿ ನಾವು ಸೇವಿಸುವ ಆಹಾರದಲ್ಲಿ ಅಗತ್ಯವಿರಬೇಕಾದ ಪೋಷಕಾಂಷಗಳು ತಕ್ಕಷ್ಟು ಪ್ರಮಾಣದಲ್ಲಿರಬೇಕೇ ವಿನಃ ಅತಿ ಹೆಚ್ಚಾಗಿ ಇರಬಾರದು. ಅದರಲ್ಲೂ ಕೆಲವೊಂದು ನೈಸರ್ಗಿಕ ಆಹಾರಗಳು ತೂಕ ಇಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ... ಮುಂದೆ ಓದಿ..

  ಚಹಾಕ್ಕೆ ಎರಡು ಚಮಚ ಜೇನು ತುಪ್ಪ ಹಾಕಿ ಸೇವಿಸಿ

  ಚಹಾಕ್ಕೆ ಎರಡು ಚಮಚ ಜೇನು ತುಪ್ಪ ಹಾಕಿ ಸೇವಿಸಿ

  ಚಹಾದೊಂದಿಗೆ ಸೇವಿಸಿ ಹಾಲಿಲ್ಲದ ಟೀ ಸೇವಿಸುವವರು ಕೊಂಚ ಲಿಂಬೆರಸವನ್ನು ಸೇರಿಸಿಕೊಳ್ಳುತ್ತಾರೆ. ಇದರೊಂದಿಗೆ ಕೊಂಚ ಜೇನನ್ನೂ ಸೇರಿಸಿ ನಿಮ್ಮ ದಿನದ ಎರಡು ಅಥವಾ ಮೂರು ಹೊತ್ತಿನ ಚಹಾ ಕಾಫಿಗಳ ಬದಲಿಗೆ ಈ ಆರೋಗ್ಯಕರ ಪೇಯವನ್ನು ಸೇವಿಸಿ. ಇದು ಆರೋಗ್ಯವನ್ನು ವೃದ್ಧಿಸುವ ಜೊತೆಗೇ ತೂಕವಿಳಿಸಲೂ ನೆರವಾಗುತ್ತದೆ.

  ಬಾದಾಮಿ

  ಬಾದಾಮಿ

  ಬಾದಾಮಿಯಲ್ಲಿ ಆರೋಗ್ಯಕರ ಕೊಲೆಸ್ಟ್ರಾಲ್ ಇದೆ. ದೇಹಕ್ಕೆ ಅಗತ್ಯವಾದ ಕೊಲೆಸ್ಟ್ರಾಲನ್ನು ಬಾದಾಮಿ ನೀಡುವುದರಿಂದ ಮತ್ತು ಇದರಲ್ಲಿನ ಫೈಬರ್ ನಿಂದ ದೇಹ ಚೈತನ್ಯದಿಂದಿರಲು ಸಹಕಾರಿಯಾಗಿರುತ್ತದೆ. ಬಾದಾಮಿ ತಿನ್ನುವುದರಿಂದ ಹೊಟ್ಟೆ ಬೊಜ್ಜೂ ಕರಗುತ್ತದೆ. ದಿನಕ್ಕೆ 10 ಬಾದಾಮಿ ತಿಂದರೆ ಸಾಕು.

  ಮೊಟ್ಟೆ

  ಮೊಟ್ಟೆ

  ಮೊಟ್ಟೆಯನ್ನು ಬ್ರೇಕ್ ಫಾಸ್ಟ್‌ಗೆ ಸೇವಿಸಿದರೆ ಒಳ್ಳೆಯದು. ಪೋಷಕಾಂಶಯುಕ್ತ ಆಹಾರವೂ ಆದ ಮೊಟ್ಟೆ ಹೊಟ್ಟೆಯಲ್ಲಿ ಮತ್ತು ಸೊಂಟದಲ್ಲಿರುವ ಬೊಜ್ಜನ್ನು ಕರಗಿಸುತ್ತದೆ. ತೂಕ ಕಳೆದುಕೊಳ್ಳಲು ಬ್ರೇಕ್ ಫಾಸ್ಟ್ ಬಿಡುವವರು ಮೊಟ್ಟೆ ತಿನ್ನುವುದರಿಂದ ಉಪಯೋಗ ಹೊಂದಬಹುದು. ಮೊಟ್ಟೆ ಹೆಚ್ಚಿನ ಕ್ಯಾಲೊರಿ ಕರಗಿಸುವುದರೊಂದಿಗೆ ಹಸಿವನ್ನು ನಿಯಂತ್ರಿಸುತ್ತದೆ. ಇದು ಬೊಜ್ಜನ್ನು ಕರಗಿಸಿ ಅದನ್ನು ಶಕ್ತಿಯನ್ನಾಗಿ ಮಾರ್ಪಾಡು ಮಾಡುತ್ತದೆ.

  ಸೌತೆಕಾಯಿ-ಕೊತ್ತಂಬರಿ ಸೊಪ್ಪಿನ ಜ್ಯೂಸ್

  ಸೌತೆಕಾಯಿ-ಕೊತ್ತಂಬರಿ ಸೊಪ್ಪಿನ ಜ್ಯೂಸ್

  ಒಂದು ಚಿಕ್ಕ ಸೌತೆ, ಒಂದು ಕಟ್ಟು ಕೊತ್ತಂಬರಿ ಸೊಪ್ಪು, ತುರಿದ ಅರ್ಧ ಇಂಚು ಶುಂಠಿ, ಒಂದು ಚಿಕ್ಕಚಮಚ ಲೋಳೆಸರದ ರಸ ಸೇರಿಸಿ ಮಿಕ್ಸಿಯಲ್ಲಿ ಕಡೆಯಿರಿ. ಇದಕ್ಕೆ ಕೆಲವು ಐಸ್ ತುಂಡುಗಳನ್ನು ಸೇರಿಸಿ ಮತ್ತಷ್ಟು ಕಡೆಯಿರಿ. ನಿಮಗೆ ಸೂಕ್ತವೆನಿಸುವಷ್ಟು ನೀರು ಸೇರಿಸಿ ಮಿಶ್ರಣ ಮಾಡಿ. ಇದಕ್ಕೆ ಅರ್ಧ ಲಿಂಬೆಯ ರಸ ಸೇರಿಸಿ ಕುಡಿಯಿರಿ. ಈ ಪೇಯ ಅತ್ಯಂತ ಸಮರ್ಥವಾದ ವಿಷನಿವಾರಕವಾಗಿದ್ದು ಹೊಟ್ಟೆಯ ಕೊಬ್ಬನ್ನು ಕರಗಿಸಲು ಉತ್ತಮವಾಗಿದೆ. ಉತ್ತಮ ಪರಿಣಾಮಕ್ಕಾಗಿ ದಿನಕ್ಕೊಂದು ಲೋಟ ಕುಡಿದರೆ ಸಾಕು

  ಬಾಳೆಹಣ್ಣಿನ ಜ್ಯೂಸ್

  ಬಾಳೆಹಣ್ಣಿನ ಜ್ಯೂಸ್

  ಒಂದು ಚೆನ್ನಾಗಿ ಕಳಿತ ಬಾಳೆಹಣ್ಣನ್ನು ಮಿಕ್ಸಿಯ ಬ್ಲೆಂಡರಿನಲ್ಲಿ ಹಾಕಿ ಇದಕ್ಕೆ ಕೊಂಚ ಐಸ್ ತುಂಡುಗಳು ಮತ್ತು ಅರ್ಧ ಕಪ್ ನೀರು ಹಾಕಿ ನೊರೆನೊರೆಯಾಗಿಸಿ ಕಡೆಯಿರಿ. ಈ ನೀರನ್ನು ತಣ್ಣಗಿರುವಂತೆಯೇ ಕುಡಿಯಿರಿ. ಬಾಳೆಹಣ್ಣಿನಲ್ಲಿರುವ ಪೊಟ್ಯಾಶಿಯಂ ಮತ್ತು ಕ್ಯಾಲ್ಸಿಯಂ ಲವಣಗಳು ನೀರಿನಲ್ಲಿ ಕರಗುತ್ತವೆ. ಈ ಪೇಯವನ್ನು ಕುಡಿಯುವ ಮೂಲಕ ಹಾಲು ಕುಡಿಯದೇ ಇದ್ದು ಹಾಲಿನ ಮೂಲಕ ಪಡೆಯಬಹುದಾದ ಪೋಷಕಾಂಶಗಳನ್ನು ಪಡೆದೂ ಕೊಬ್ಬಿಲ್ಲದೇ ಇರುವ ಕಾರಣ ತೂಕ ಇಳಿಸುವ ಪ್ರಕ್ರಿಯೆಗೆ ಹೆಚ್ಚಿನ ಬೆಂಬಲ ದೊರಕುತ್ತದೆ.

  ನೆಲ್ಲಿಕಾಯಿ ಜ್ಯೂಸ್

  ನೆಲ್ಲಿಕಾಯಿ ಜ್ಯೂಸ್

  ಚೆನ್ನಾಗಿ ತೊಳೆದ ನೆಲ್ಲಿಕಾಯಿಯ ಬೀಜವನ್ನು ನಿವಾರಿಸಿ ತಿರುಳನ್ನು ಮಿಕ್ಸಿಯಲ್ಲಿ ಹಾಕಿ ಕೊಂಚವೇ ನೀರಿನೊಡನೆ ಗೊಟಾಯಿಸಿ. ಬಳಿಕ ಸ್ವಚ್ಛವಾದ ಬಟ್ಟೆಯಲ್ಲಿ ಹಿಂಡಿ ರಸ ತೆಗೆಯಿರಿ. ಈ ರಸವನ್ನು ಹೆಚ್ಚಿನ ಪ್ರಮಾಣದಲ್ಲಿ ಶೇಖರಿಸಿ ಪ್ರತಿದಿನದ ಸೇವನೆಯಾಗಿ ಫ್ರಿಜ್ಜಿನಲ್ಲಿಡಿ. ಪ್ರತಿದಿನ ಬೆಳಿಗ್ಗೆ, ಅದರಲ್ಲೂ ಖಾಲಿಹೊಟ್ಟೆಯಲ್ಲಿ ಒಂದು ಲೋಟದಷ್ಟು ಒಂದು ಪ್ರಮಾಣ ನೆಲ್ಲಿಕಾಯಿ ರಸಕ್ಕೆ ಮೂರು ಪ್ರಮಾಣದಷ್ಟು ನೀರನ್ನು ಸೇರಿಸಿ ಕುಡಿಯಿರಿ. ಸಕ್ಕರೆ, ಬೆಲ್ಲ, ಜೇನು ಯಾವುದನ್ನೂ ಸೇರಿಸಬೇಡಿ.

  ಜೇನು ಮತ್ತು ದಾಲ್ಚಿನ್ನಿ

  ಜೇನು ಮತ್ತು ದಾಲ್ಚಿನ್ನಿ

  ಒಂದು ಕಪ್‎ನಷ್ಟು ಬಿಸಿ ನೀರಿಗೆ ಅರ್ಧ ಚಮಚ ದಾಲ್ಚಿನ್ನಿಯನ್ನು ಸೇರಿಸಿಕೊಳ್ಳಿ. ದೊಡ್ಡ ದೊಡ್ಡ ಭಾಗಗಳಿದ್ದರೆ ಅದನ್ನು ಬೇರ್ಪಡಿಸಿ. ಇದಕ್ಕೆ ಒಂದು ಚಮಚ ಜೇನು ಸೇರಿಸಿ. ಖಾಲಿ ಹೊಟ್ಟೆಗೆ ಈ ದ್ರಾವಣವನ್ನು ಸೇವಿಸಿ ನಂತರ ಅರ್ಧಗಂಟೆಯ ಬಳಿಕ ಬೆಳಗ್ಗಿನ ಉಪಹಾರ ಸೇವಿಸಿ.‎ ರಾತ್ರಿ ವೇಳೆಯಲ್ಲಿ ಕೂಡ ಇದನ್ನು ಜ್ಯೂಸ್‎ನಂತೆ ನಿಮಗೆ ಸೇವಿಸಬಹುದಾಗಿದೆ. ಇದರಿಂದ ನಿಮಗೆ ಚೆನ್ನಾಗಿ ನಿದ್ರೆ ಬರಲಿದ್ದು ಹೊಟ್ಟೆಯನ್ನು ಭರ್ತಿಮಾಡಲಿದೆ. ಇದು ಜೀರ್ಣಕ್ರಿಯೆಯನ್ನು ವೇಗಗೊಳಿಸಿ ಒತ್ತಡವನ್ನು ನಿವಾರಿಸಲಿದೆ. ಜಾಸ್ತಿ ತಿನ್ನುವ ಅಭ್ಯಾಸವಿದ್ದವರು ಇಲ್ಲವೇ ರಾತ್ರಿ ಚೆನ್ನಾಗಿ ತಿಂದು ಜೀರ್ಣಕ್ರಿಯೆ ಸಮಸ್ಯೆ ಎದುರಾಗಿದೆ ಎಂದಾದಲ್ಲಿ ಈ ಜೇನು ದ್ರಾವಣ ನಿಮಗೆ ಆರಾಮದಾಯಕವಾಗಿದೆ. ಇದು ನೇರ ಕಾರ್ಬೊಹೈಡ್ರೇಟ್ ಆಗಿದ್ದು ಇದರಲ್ಲಿರುವ ಜೀರ್ಣಕ್ರಿಯೆಗೆ ಸುಗಮವಾಗಿರುವ ಸಕ್ಕರೆಯನ್ನು ಒಳಗೊಂಡಿದೆ.

  ಮೂಸಂಬಿ ಜ್ಯೂಸ್

  ಮೂಸಂಬಿ ಜ್ಯೂಸ್

  ಮೂಸಂಬಿರಸದಲ್ಲಿರುವ ಸಿಟ್ರಿಕ್ ಆಮ್ಲ ಮತ್ತು ಇತರ ಆಮ್ಲಗಳು ದೇಹದಲ್ಲಿರುವ ವಿಷಕಾರಿ ವಸ್ತುಗಳನ್ನು ಹೊರಹಾಕಲು ಉತ್ತಮವಾಗಿವೆ, ಅಲ್ಲದೆ ದೇಹದ ಕೊಲೆಸ್ಟ್ರಾಲ್ ಮಟ್ಟಗಳನ್ನು ಆರೋಗ್ಯಕರ ಮಿತಿಗಳಲ್ಲಿಡುವ ಮೂಲಕ (ಉತ್ತಮ ಕೊಲೆಸ್ಟ್ರಾಲ್ ಹೆಚ್ಚಿಸುವುದು ಮತ್ತು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಗೊಳಿಸುವುದು) ದೇಹ ತೂಕವಿಳಿಸುವ ನಿಟ್ಟಿನಲ್ಲಿ ಉತ್ತಮವಾಗಿ ಸ್ಪಂದಿಸುತ್ತದೆ. ಪರಿಣಾಮವಾಗಿ ತೂಕವಿಳಿಸುವ ನಿಮ್ಮ ಪ್ರಯತ್ನಗಳು ಹೆಚ್ಚಿನ ಫಲ ನೀಡುತ್ತವೆ.

  ಲೋಳೆಸರದ ಜ್ಯೂಸ್

  ಲೋಳೆಸರದ ಜ್ಯೂಸ್

  ಲೋಳೆಸರದ ಕೋಡೊಂದನ್ನು ಮುರಿದು ಅದರ ಹೊರಗಿನ ಸಿಪ್ಪೆಯನ್ನು ಆಲುಗಡ್ಡೆಯ ಸಿಪ್ಪೆ ಸುಲಿದಂತೆ ಸುಲಿಯಿರಿ

  *ಸಿಪ್ಪೆಯಿಲ್ಲದ ಈ ಭಾಗವನ್ನು ಮಿಕ್ಸಿಯಲ್ಲಿ ಹಾಕಿ ಅರೆಯಿರಿ.

  *ಈ ಮಿಶ್ರಣವನ್ನು ಬಟ್ಟೆಯಲ್ಲಿ ಕೊಂಚ ನೀರಿನೊಂದಿಗೆ ಹಿಂಡಿ ರಸ ತೆಗೆದು ಒಂದು ಬಾಟಲಿಯಲ್ಲಿ ಸಂಗ್ರಹಿಸಿ ಈ ದ್ರವವನ್ನು ಬೆಳಿಗ್ಗೆ ಎದ್ದ ತಕ್ಷಣ ಅರ್ಧ ಕಪ್ ಸೇವಿಸಿ ಮತ್ತು ದಿನದ ಮೂರೂ ಹೊತ್ತಿನ ಊಟಕ್ಕೂ ಹದಿನೈದು ನಿಮಿಷ ಮೊದಲು ಸೇವಿಸಿ. ಸುಮಾರು ಎರಡು ವಾರಗಳವರೆಗೆ ಈ ವಿಧಾನವನ್ನು ಅನುಸರಿಸಿ.

  ನೆನಪಿಡಿ: ಫ್ರಿಜ್ಜಿನಲ್ಲಿಟ್ಟ ಲೋಳೆಸರ ಕೊಂಚ ಕಹಿಯಾಗುವುದರಿಂದ ಪ್ರತಿದಿನ ಹೊಸತಾದ ಕೋಡನ್ನು ಮುರಿದು ಒಂದು ಚಮಚ ತಿರುಳನ್ನು ಚಮಚದಲ್ಲಿ ಕೆರೆದು ಉಪಯೋಗಿಸಬಹುದು.

  ಹಸಿ ಪಪ್ಪಾಯಿ

  ಹಸಿ ಪಪ್ಪಾಯಿ

  ಹಸಿ ಪಪ್ಪಾಯಿಯನ್ನು ತುಂಬಾ ಸಣ್ಣ ತುಂಡುಗಳನ್ನಾಗಿ ಮಾಡಿಕೊಂಡು ಇತರ ಹಣ್ಣುಗಳೊಂದಿಗೆ ಬೆಳಿಗ್ಗಿನ ಉಪಹಾರಕ್ಕೆ ಸೇವಿಸಬಹುದು. ಇದರಿಂದ ತೂಕವನ್ನು ವೇಗವಾಗಿ ಕಳೆದುಕೊಳ್ಳಬಹುದು. ಹಸಿ ಪಪ್ಪಾಯಿಯು ಬೊಜ್ಜಿನ ಸಮಸ್ಯೆಗೆ ರಾಮಬಾಣವಾಗಿದೆ. ಗರ್ಭಿಣಿಯರಿಗೆ ಇದು ನಿಷಿದ್ಧ. ಒಂದು ವೇಳೆ ನಿಮಗೆ ಪಪ್ಪಾಯ ಹಣ್ಣು ಇಷ್ಟವಾಗಲ್ಲ ಎಂದಾದರೆ, ಪಪ್ಪಾಯಿಯ ಸ್ಮೂಥಿ ಮಾಡಿಕೊಂಡು ಕುಡಿಯಿರಿ. ಕೊಬ್ಬುರಹಿತವಾಗಿರುವ ಹಾಲನ್ನು ಬಳಸಿಕೊಂಡು ಪಪ್ಪಾಯಿ ಸ್ಮೂಥಿಯನ್ನು ಬಳಸಬಹುದು. ಸ್ಮೂಥಿಯು ಹಸಿವನ್ನು ನಿಯಂತ್ರಿಸಿ ದೇಹದಲ್ಲಿ ಹೆಚ್ಚುವರಿ ಕೊಬ್ಬು ಉತ್ಪತ್ತಿಯಾಗದಂತೆ ನೋಡಿಕೊಳ್ಳುತ್ತದೆ.

  ಜೇನು ತುಪ್ಪ ಬ್ರೆಡ್‌ಗೆ ಹಚ್ಚಿ ಸೇವಿಸಿ

  ಜೇನು ತುಪ್ಪ ಬ್ರೆಡ್‌ಗೆ ಹಚ್ಚಿ ಸೇವಿಸಿ

  ರಾತ್ರಿಯೂಟದಲ್ಲಿ ಅಧಿಕ ಕ್ಯಾಲೋರಿಗಳ ಆಹಾರದ ಬದಲಿಗೆ ಸರಳವಾದ ಈ ಹೊಸರುಚಿ ಸವಿಯಿರಿ. ಗೋಧಿಯ ಬ್ರೆಡ್ (whole wheat or brown bread) ನ ಎರಡು ತುಣುಕುಗಳನ್ನು ತೆಗೆದುಕೊಂಡು ಅದರಲ್ಲಿ ಒಂದು ತುಣುಕಿನ ಒಂದು ಬದಿಗೆ ಮಾತ್ರ ಒಂದು ಚಮಚದಷ್ಟು ಜೇನು ಸವರಿ ಒಂದರ ಮೇಲೊಂದಿಟ್ಟು ಸೇವಿಸಿ. ಬಳಿಕ ಸಾಕಷ್ಟು ನೀರು ಕುಡಿಯಿರಿ. ಬೇರೆ ಯಾವುದೇ ಆಹಾರವನ್ನು ಸೇವಿಸದಿರಿ. ಮಲಗುವ ಮುನ್ನ ಕೊಂಚ ದೂರ ಅಡ್ಡಾಡಿ ಬಳಿಕ ಪವಡಿಸಿ. ಇದರಿಂದ ರಾತ್ರಿಯ ಅನೈಚ್ಛಿಕ ಕಾರ್ಯಗಳಲ್ಲಿ ದೇಹಕ್ಕೆ ಅನಿವಾರ್ಯವಾಗಿ ಕರಗಿದ್ದ ಕೊಬ್ಬನ್ನು ಬಳಸಬೇಕಾಗಿ ಬರುವುದರಿಂದ ತೂಕ ನಿಧಾನವಾಗಿ ಕಡಿಮೆಯಾಗುತ್ತಾ ಹೋಗುತ್ತದೆ.

  ವೀಳ್ಯದೆಲೆ ಜಗಿಯಿರಿ

  ವೀಳ್ಯದೆಲೆ ಜಗಿಯಿರಿ

  ವೀಳ್ಯದೆಲೆಯನ್ನು ಜಗಿದಾಗ ಬಾಯಿಯಲ್ಲಿ ಜೊಲ್ಲು ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತದೆ. ಇದೇ ವೇಳೆಯಲ್ಲಿ ಜಠರಕ್ಕೆ ಸಿದ್ಧವಾಗಿರಲು ಮೆದುಳಿನಿಂದ ಸಂದೇಶ ಹೋಗುತ್ತದೆ. ಪರಿಣಾಮವಾಗಿ ಹೊಟ್ಟೆಹಸಿವು ಪ್ರಾರಂಭವಾಗುತ್ತದೆ . ಈ ದ್ರವವನ್ನು ನುಂಗಿದ ಬಳಿಕ ಹೊಟ್ಟೆಯಲ್ಲಿ ಈ ಮೊದಲು ಜೀರ್ಣಗೊಂಡಿದ್ದ ಆಹಾರದಲ್ಲಿದ್ದ ವಿಷಕಾರಿ ವಸ್ತುಗಳನ್ನು (ಆಯುರ್ವೇದದಲ್ಲಿ ಇದಕ್ಕೆ ಆಮ ಎಂದು ಕರೆಯುತ್ತಾರೆ) ಈ ದ್ರವ ಎದುರಿಸಿ ಹಾನಿಯಾಗುವುದನ್ನು ತಪ್ಪಿಸುತ್ತದೆ. ಜೊತೆಗೇ ಆಯುರ್ವೇದದಲ್ಲಿ ವಿವರಿಸಿರುವಂತೆ ಮೇಧ ಧಾತುವನ್ನು ಕರಗಿಸುತ್ತದೆ. ಈ ಮೇಧ ಧಾತು ಎಂದರೆ ನಮ್ಮ ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬು. ಕೊಬ್ಬು ಕರಗಿದಂತೆ ನಿಧಾನವಾಗಿ ಹೆಚ್ಚಿನ ತೂಕವೂ ಕಡಿಮೆಯಾಗುತ್ತಾ ಬರುತ್ತದೆ.

   

  English summary

  Simple Tips To Lose Weight In Just 10 Days

  Weight loss is perhaps the most elusive lifestyle concept to accomplish with most people unable to see palpable results due to many reasons. The probability of getting your regime all wrong is very high and inevitably, results aren't on par with expectation. In this article, we do not look at conventional weight loss techniques that do not produce quick results. Our focus here is on weight loss techniques that will help you lose weight in just one week. Read on to know these highly effective ways to lose weight in a a week.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more