For Quick Alerts
ALLOW NOTIFICATIONS  
For Daily Alerts

ನಿಯಮಿತವಾಗಿ ಗ್ರೀನ್ ಟೀ ಸೇವನೆ-ಆರೋಗ್ಯಕ್ಕೆ ಬಹಳ ಒಳ್ಳೆಯದು

By Arshad
|

ಇತ್ತೀಚಿನ ವರ್ಷಗಳಲ್ಲಿ ಹೊಸದಾಗಿ ಕೇಳಿಬರುತ್ತಿರುವ ಪೇಯವೆಂದರೆ ಹಸಿರು ಚಹಾ ಅಥವಾ ಗ್ರೀನ್ ಟೀ. ವಾಸ್ತವವಾಗಿ ಇದು ವಿವಿಧ ಎಲೆಗಳನ್ನು ಹಸಿಯಿದ್ದಾಗಲೇ ಒಣಗಿಸಿ ಮಾಡಿ ಬಳಿಕ ಕುದಿಸಿ ಟೀ ರೂಪದಲ್ಲಿ ಸೇವಿಸುವ ಕಾರಣ ಟೀ ಎಂಬ ಹೆಸರನ್ನು ನೀಡಲಾಗಿದೆಯೇ ಹೊರತು ಈ ಎಲೆಗಳು ಟೀ ಎಲೆಗಳಲ್ಲ. ಸ್ಲಿಮ್ ಮತ್ತು ಸುಂದರವಾಗಿರಲು ಗ್ರೀನ್ ಟೀ ಕುಡಿಯಿರಿ

ಈ ಟೀ ಸೇವನೆಯಿಂದ ಆರೋಗ್ಯಕ್ಕೆ ಹಲವು ರೀತಿಯ ಪ್ರಯೋಜನಗಳಿವೆ. ಹೊಸವರ್ಷದ ಸಂಕಲ್ಪಗಳಲ್ಲಿ ಯಾರಾದರೂ ಆರೋಗ್ಯವನ್ನು ಉತ್ತಮವಾಗಿಸುವೆ ಎಂಬ ಸಂಕಲ್ಪವನ್ನು ತೊಟ್ಟವರಿದ್ದರೆ ಇವರಿಗೆ ಹಸಿರು ಟೀ ಅಗತ್ಯವಿದೆ. ಪ್ರತಿದಿನ ಗ್ರೀನ್ ಟೀ ಸೇವಿಸಿದರೆ ಖಂಡಿತ ಮೋಸವಿಲ್ಲ..!

ನಿಯಮಿತವಾಗಿ ಹಸಿರು ಟೀ ಸೇವಿಸುತ್ತಾ ಬರುವ ಮೂಲಕ ಅಧಿಕ ರಕ್ತದೊತ್ತಡ ಕಡಿಮೆಯಾಗುವುದು, ಬೊಜ್ಜನ್ನು ಶೀಘ್ರವಾಗಿ ಕರಗಿಸುವುದು, ವಿವಿಧ ಆಂಟಿ ಆಕ್ಸಿಡೆಂಟುಗಳನ್ನು ಒದಗಿಸುವ ಮೂಲಕ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಮೊದಲಾದವು ಇದುವರೆಗೆ ಗೊತ್ತಿರುವ ಪ್ರಯೋಜನಗಳಾಗಿವೆ. ಆದರೆ ಪ್ರತಿದಿನ ಹಸಿರು ಟೀ ಕುಡಿಯುವ ಮೂಲಕ ಇನ್ನೂ ಹಲವಾರು ಪ್ರಯೋಜನಗಳಿವೆ. ಬನ್ನಿ, ಇವು ಯಾವುವು ಎಂಬುದನ್ನು ನೋಡೋಣ....


ಸತ್ಯಸಂಗತಿ #1

ಸತ್ಯಸಂಗತಿ #1

ಒಂದು ಕಪ್ ಹಸಿರು ಟೀ ಕುಡಿಯುವ ಮೂಲಕ ದೇಹದಲ್ಲಿ ಅಷ್ಟೇ ಪ್ರಮಾಣದ ನೀರು ಕುಡಿಯುವುದಕ್ಕಿಂತಲೂ ಹೆಚ್ಚಿನ ದ್ರವ ದೊರಕುತ್ತದೆ.

ಸತ್ಯಸಂಗತಿ #2

ಸತ್ಯಸಂಗತಿ #2

ಮದ್ಯಪಾನಿಗಳ ಯಕೃತ್ ಸದಾ ಹೆಚ್ಚು ಬಳಲಿರುತ್ತದೆ. ಏಕೆಂದರೆ ಮದ್ಯದ ಪ್ರಭಾವ ಯಕೃತ್‌ನ ಮೇಲೆ ಅತಿ ಹೆಚ್ಚಾಗಿರುತ್ತದೆ. ಅದರೆ ಹಸಿರು ಟೀ ಸೇವನೆಯಿಂದ ಈ ಬಳಲಿಕೆಯನ್ನು ಕಡಿಮೆಗೊಳಿಸಿ ಯಕೃತ್ ಗೆ ಮಾಡುವ ಹಾನಿಯನ್ನು ಕಡಿಮೆ ಮಾಡಬಹುದು. ಆದರೆ ಈ ವಿಧಾನದಿಂದ ಮದ್ಯ ಸೇವನೆಯ ಪ್ರಮಾಣವನ್ನು ಹೆಚ್ಚಿಸಬಹುದೆಂದು ಮದ್ಯಪಾನಿಗಳು ಭಾವಿಸಿದ್ದರೆ ಇದು ಖಂಡಿತಾ ತಪ್ಪು

ಸತ್ಯಸಂಗತಿ #3

ಸತ್ಯಸಂಗತಿ #3

ಒಂದು ಕಪ್ ಹಸಿರು ಟೀ ಸೇವನೆಯಿಂದ ಮನಸ್ಸಿನ ಮೇಲೆ ಉಂಟಾಗಿದ್ದ ಒತ್ತಡ ಕಡಿಮೆಯಾಗುತ್ತದೆ ಹಾಗೂ ಮೆದುಳಿನ ಕ್ಷಮತೆಯನ್ನು ಹೆಚ್ಚಿಸುತ್ತದೆ.

ಸತ್ಯಸಂಗತಿ #4

ಸತ್ಯಸಂಗತಿ #4

ನಿತ್ಯ ಒಂದು ಕಪ್ ಹಸಿರು ಟೀ ಸೇವನೆಯಿಂದ ದೇಹದ ಮೂಳೆಗಳು ಹೆಚ್ಚು ದೃಢವಾಗುತ್ತವೆ.

ಸತ್ಯಸಂಗತಿ #5

ಸತ್ಯಸಂಗತಿ #5

ಒಂದು ವೇಳೆ ಬಾಯಿಯಲ್ಲಿ ದುರ್ವಾಸನೆ ಇದ್ದರೆ ಸತತವಾಗಿ ಹಸಿರು ಟೀ ಸೇವನೆಯಿಂದ ಈ ದುರ್ವಾಸನೆ ಕಡಿಮೆಯಾಗುತ್ತಾ ಬರುತ್ತದೆ.

ಸತ್ಯಸಂಗತಿ #6

ಸತ್ಯಸಂಗತಿ #6

ಧೂಮಪಾನಿಗಳ ಶ್ವಾಸಕೋಶಗಳು ಹೆಚ್ಚು ಜರ್ಝರಿತವಾಗಿರುತ್ತವೆ. ಧೂಮಪಾನ ಬಿಟ್ಟು ಬದಲಿಗೆ ಹಸಿರು ಟೀ ಸೇವನೆ ಪ್ರಾರಂಭಿಸಿದರೆ ಶ್ವಾಸಕೋಶಗಳಿಗೆ ಆಗುವ ಹಾನಿ ಕನಿಷ್ಠವಾಗಿರುತ್ತದೆ.

ಸತ್ಯಸಂಗತಿ #7

ಸತ್ಯಸಂಗತಿ #7

ಹಸಿರು ಟೀ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುವ ಮೂಲಕ ಆರೋಗ್ಯ ವೃದ್ಧಿಸುತ್ತದೆ.

English summary

reasons-to-include-green-tea-to-your-list-of-new-year

We all know that green tea reduces high blood pressure, helps your body burn fat faster and offers anti-oxidants to your body. But there are more unknown benefits of drinking green tea every day. Here are they...
Story first published: Tuesday, January 3, 2017, 20:13 [IST]
X
Desktop Bottom Promotion