For Quick Alerts
ALLOW NOTIFICATIONS  
For Daily Alerts

ಪ್ರತಿದಿನ ಗ್ರೀನ್ ಟೀ ಸೇವಿಸಿದರೆ ಖಂಡಿತ ಮೋಸವಿಲ್ಲ..!

By Manu
|

ಕೆಲ ವರ್ಷಗಳ ಹಿಂದೆ ಟೀ ಎಂದರೆ ಅತಿ ನುಣ್ಣಗಿನ ಡಸ್ಟ್ ಟೀ ಒಂದೇ ಆಗಿತ್ತು. ದಿನಗಳೆದಂತೆ ವಿವಿಧ ಬಗೆಯ ಟೀಪುಡಿಗಳು ನಮ್ಮ ಅಡುಗೆಮನೆಯಲ್ಲಿ ಕೂಡ ಕಾರುಬಾರು ಶುರುಮಾಡಿಬಿಟ್ಟಿದೆ. ಇದನ್ನೆಲ್ಲಾ ಬಂಡವಾಳ ಮಾಡಿಕೊಂಡ ಕಂಪೆನಿಗಳು ಹಲವು ಬಗೆಯ ಟೀ ಪುಡಿಗಳನ್ನು ಮಾರುಕಟ್ಟೆಯಲ್ಲಿ ಪರಿಚಯಿಸಿ ಜನರನ್ನು ಆಕರ್ಷಿಸುತ್ತಿವೆ.. ವಿಷಕಾರಕಗಳನ್ನು ಸಂಹರಿಸುವ ಹಸಿರು ಚಹಾ

ಹಾಗಾಗಿ ಬ್ಲ್ಯಾಕ್ ಟೀ ಮತ್ತು ಹಾಲಿನ ಚಹಾ ಕೂಡ ಇಂತಹ ಚಹಾಗಳಿಂದಾಗಿ ಮೂಲೆಗುಂಪಾಗಿದೆ ಎಂಬುದು ನಂಬುವ ವಿಷಯವಾಗಿದೆ. ಅದರಲ್ಲೂ ಚಹಾ ಆಯ್ಕೆಯಲ್ಲಿ ಪೈಪೋಟಿ ನೀಡುವ ಹಸಿರು ಚಹಾ (ಗ್ರೀನ್ ಟೀ) ಶೀಘ್ರ ಸಮಯದಲ್ಲಿಯೇ ಮನೆಮಾತಾಗಿದೆ. ಇದರ ಸ್ವಾದಭರಿತ ಸುವಾಸನೆ ಕೇವಲ ಕುಡಿಯಲು ಮಾತ್ರವಲ್ಲ, ಆರೋಗ್ಯದ ಸಮಸ್ಯೆಗೆ, ಸೌಂದರ್ಯ ವೃದ್ಧಿಗೆ, ಹೀಗೆ ನಾನಾ ಸಮಸ್ಯೆಗಳಿಗೆ ತ್ವರಿತವಾಗಿ ಕಾರ್ಯನಿರ್ವಹಿಸುವುದರಿಂದ ಹಸಿರು ಟೀ ಮಾರುಕಟ್ಟೆಯಲ್ಲಿ ವ್ಯಾಪಕವಾಗಿ ಬೆಳೆಯತೊಡಗಿದೆ.

ಇತ್ತೀಚಿನವರೆಗೂ ನಮಗೆ ಅಪರಿಚಿತವಾಗಿದ್ದ ಹಸಿರು ಚಹಾ ಅಥವಾ ಗ್ರೀನ್ ಟೀ ಈಗ ಎಲ್ಲೆಡೆ ಲಭ್ಯವಾಗುತ್ತಿದೆ. ಇದಕ್ಕೆ ಇದರ ಆರೋಗ್ಯಕರ ಗುಣಗಳೇ ಕಾರಣ. ಚೀನಾದಲ್ಲಿ ಸಾವಿರಾರು ವರ್ಷಗಳಿಂದ ಕುಡಿಯುತ್ತಾ ಬಂದಿರುವ ಚೀನೀಯರ ಆರೋಗ್ಯದ ಗುಟ್ಟು ಈಗ ಎಲ್ಲರಿಗೂ ಗೊತ್ತಾಗುತ್ತಿದೆ. ಆರೋಗ್ಯದ ವಿಷಯದಲ್ಲಿ ಗ್ರೀನ್ ಟೀ ಎಂದಿಗೂ ಎವರ್ ಗ್ರೀನ್!

ಇದರ ಪೋಷಕಾಂಶಗಳು, ಅಂಟಿ ಆಕ್ಸಿಡೆಂಟ್‌ಗಳು (ಉತ್ಕರ್ಷಣ ನಿರೋಧಕ) ಮತ್ತು ಇತರ ಖನಿಜಗಳ ಪ್ರಮಾಣವನ್ನು ಪರಿಗಣಿಸಿದರೆ ಇದೊಂದು ಅತ್ಯುತ್ತಮವಾದ ಪೇಯ ಎನ್ನುವುದರಲ್ಲಿ ಎರಡು ಮಾತಿಲ್ಲ. ನಿಮ್ಮ ನಿತ್ಯದ ಪೇಯದ ಅಗತ್ಯವನ್ನು ಹಸಿರು ಚಹಾ ಮೂಲಕ ಪೂರೈಸಿಕೊಂಡು ಆರೋಗ್ಯವನ್ನು ವೃದ್ಧಿಸಿಕೊಳ್ಳಿ ಎಂಬ ಹಿತವಚನಕ್ಕೆ ಪೂರಕವಾದ ಕಾರಣಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ತಿಳಿದುಕೊಳ್ಳಿ..

ಪೋಷಕಾಂಶಗಳ ಆಗರ

ಪೋಷಕಾಂಶಗಳ ಆಗರ

ಹಸಿರು ಟೀ ನೋಡಲು ಮಾತ್ರ ಹಸಿರಾಗಿರದೆ ದೇಹವನ್ನೂ ಹಸಿರುಗೊಳಿಸಲು ಸಮೃದ್ಧವಾಗಿದೆ. ಇದರಲ್ಲಿರುವ ಫ್ಲೇವನಾಯ್ಡ್, ಕ್ಯಾಟೆಚಿನ್ ಎಂಬ ಪಾಲಿಫಿನಾಲು (polyphenols) ಗಳು ಪ್ರಬಲವಾದ ಆಂಟಿ ಆಕ್ಸಿಡೆಂಟುಗಳಂತೆ ಕೆಲಸ ಮಾಡುತ್ತವೆ. ಇದು ಜೀವಕೋಶಗಳ ಸವೆತ ತಡೆಯುವುದು ಮತ್ತು ಹೊರಪದರಗಳಿಗೆ ಬಲಿಷ್ಟತೆಯನ್ನು ನೀಡುವ ಕಾರಣ ಅತ್ಯಂತ ತಳಮಟ್ಟದಿಂದ ಆರೋಗ್ಯವನ್ನು ವೃದ್ಧಿಸುತ್ತದೆ.

ಬುದ್ಧಿಮತ್ತೆಯನ್ನು ಹೆಚ್ಚಿಸುತ್ತದೆ

ಬುದ್ಧಿಮತ್ತೆಯನ್ನು ಹೆಚ್ಚಿಸುತ್ತದೆ

ಬುದ್ಧಿಮತ್ತೆಗೆ ಚುರುಕು ಮುಟ್ಟಿಸಲು ಕೊಂಚವೇ ಪ್ರಮಾಣದ ಕೆಫೇನ್ ಬೇಕು. ಹಸಿರು ಟೀಯಲ್ಲಿ ಇದು ಅತ್ಯಂತ ಸಮರ್ಪಕ ಪ್ರಮಾಣದಲ್ಲಿರುವ ಕಾರಣ ಮೆದುಳಿನ ಕ್ಷಮತೆ ಹೆಚ್ಚಿಸಲು ಇದು ಹೊರಡಿರುವ ನ್ಯೂರಾನ್ ಗಳೆಂಬ ನರವ್ಯವಸ್ಥೆಯ ಕಣಗಳು ನೆರವಾಗುತ್ತವೆ. ಆದರೆ ಕಾಫಿಯಲ್ಲಿರುವ ಕೆಫೀನ್ ಆಗಾಧ ಪ್ರಮಾಣದಲ್ಲಿದ್ದು ಅಗತ್ಯಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಹದಂತೆ ಹರಿದು ಬರುವುದರಿಂದ ಒಳ್ಳೆಯದಕ್ಕಿಂತ ಕೆಡಕು ಮಾಡುವುದೇ ಹೆಚ್ಚು.

ಕೊಬ್ಬು ಕರಗಿಸಲು ನೆರವಾಗುತ್ತದೆ

ಕೊಬ್ಬು ಕರಗಿಸಲು ನೆರವಾಗುತ್ತದೆ

ಹಸಿರು ಟೀ ನಮ್ಮ ಪಚನಕ್ರಿಯೆ ಮತ್ತು ಜೀವರಾಸಾಯನಿಕ ಕ್ರಿಯೆಯನ್ನು ಸರಿಸುಮಾರು ಶೇಖಡಾ ನಾಲ್ಕರಷ್ಟು ಹೆಚ್ಚಿಸುತ್ತದೆ. ಈ ಹೆಚ್ಚುವರಿ ಕೆಲಸವನ್ನು ಪೂರೈಸಲು ದೇಹದಲ್ಲಿ ಶೇಖರವಾಗಿದ್ದ ಕೊಬ್ಬನ್ನು ಬಳಸಬೇಕಾಗಿ ಬರುತ್ತದೆ. ನಿತ್ಯದ ಹಸಿರು ಟೀ ಸೇವನೆಯಿಂದ ನಿಧಾನವಾಗಿಯಾದರೂ ಆರೋಗ್ಯಕರವಾಗಿ ಕೊಬ್ಬು ಕರಗುತ್ತದೆ.

ಕ್ಯಾನ್ಸರ್ ಬರದಂತೆ ತಡೆಯುತ್ತದೆ

ಕ್ಯಾನ್ಸರ್ ಬರದಂತೆ ತಡೆಯುತ್ತದೆ

ನಮ್ಮ ದೇಹದ ಎಲ್ಲಾ ಅಂಗಗಳ ಬೆಳವಣಿಗೆಗೆ ಒಂದು ಮಿತಿಯಿದೆ. ಆದರೆ ಕೆಲವು ಕೋಶಗಳು ಅನಿಯಂತ್ರಿತವಾಗಿ ಬೆಳವಣಿಗೆಯಾಗುವ ಮೂಲಕ ಕ್ಯಾನ್ಸರ್ ರೋಗವನ್ನು ಹುಟ್ಟುಹಾಕುತ್ತವೆ. ಈ ಬೆಳವಣಿಗೆಗೆ ಫ್ರೀ ರ್‍ಯಾಡಿಕಲ್ ಎಂಬ ಕಣಗಳು ಕಾರಣವೆಂದು ಇತ್ತೀಚೆಗೆ ತಿಳಿದುಬಂದಿದೆ. ಹಸಿರು ಟೀ ಯಲ್ಲಿರುವ ವಿವಿಧ ಆಂಟಿ ಆಕ್ಸಿಡೆಂಟುಗಳು ಈ ಕಣಗಳನ್ನು ಹಿಮ್ಮೆಟ್ಟಿಸಿ ಕ್ಯಾನ್ಸ್ರರ್ ತಗಲುವ ಸಂಭವವನ್ನು ಕಡಿಮೆಗೊಳಿಸುತ್ತವೆ.ವಿಶೇಷವಾಗಿ ಸ್ತನಕ್ಯಾನ್ಸರ್, ಕರುಳು ಕ್ಯಾನ್ಸರ್ ಮತ್ತು ಪ್ರಾಸ್ಟ್ರೇಟ್ ಗ್ರಂಥಿಯ ಕ್ಯಾನ್ಸರ್ ಬರದಂತೆ ಸಮರ್ಥವಾಗಿ ತಡೆಯುತ್ತದೆ ಎಂದು ತಿಳಿದುಬಂದಿದೆ.

ಕೆಟ್ಟ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ

ಕೆಟ್ಟ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ

ನಮ್ಮ ದೇಹದಲ್ಲಿ ಯಾವುದೋ ಮಾಯೆಯಿಂದ ಒಳಪ್ರವೇಶಿಸಿ ವಿಶೇಷವಾಗಿ ಹಲ್ಲು ಮತ್ತು ಗಂಟಲಿನೊಳಗೆ ಮನೆ ಮಾಡಿಕೊಂಡು ಹಬ್ಬ ಆಚರಿಸುತ್ತಿರುವ ವಿವಿಧ ಕೆಟ್ಟ ಬ್ಯಾಕ್ಟೀರಿಯಾಗಳನ್ನು ಕೊಲ್ಲುವಲ್ಲಿಯೂ ಹಸಿರು ಟೀ ಮಹತ್ವದ ಪಾತ್ರ ವಹಿಸುತ್ತದೆ.

ಮಧುಮೇಹ ಬರುವ ಸಾಧ್ಯತೆಯನ್ನು ದೂರವಾಗಿಸುತ್ತದೆ

ಮಧುಮೇಹ ಬರುವ ಸಾಧ್ಯತೆಯನ್ನು ದೂರವಾಗಿಸುತ್ತದೆ

ಮಧುಮೇಹಕ್ಕೆ ಅನುವಂಶೀಯ ಕಾರಣಗಳಿದ್ದು ಯಾವುದೇ ವಯಸ್ಸಿನಲ್ಲಿ ಬರಬಹುದು. ಅದರಲ್ಲೂ ಟೈಪ್-2 ವಿಧದ ಮಧುಮೇಹ ಚಿಕ್ಕವಯಸ್ಸಿನಲ್ಲಿಯೇ ಆವರಿಸುತ್ತದೆ. ನಿಯಮಿತ ಹಸಿರು ಟೀ ಸೇವನೆಯಿಂದ ಮಧುಮೇಹ ಆವರಿಸುವ ವಯಸ್ಸನ್ನು ಸಮರ್ಥವಾಗಿ ಮುಂದೂಡಬಹುದು. ಅಲ್ಲದೇ ಹಸಿರು ಟೀ ಸೇವನೆಯಿಂದ ಮಧುಮೇಹಿಗಳಲ್ಲಿಯೂ ಅಲ್ಪ ಪ್ರಮಾಣದಲ್ಲಿ ರಕ್ತದಲ್ಲಿರುವ ಗ್ಲೂಕೋಸ್ ಪ್ರಮಾಣ ಕಡಿಮೆಯಾಗಿರುವುದು ಕೆಲವು ಪ್ರಯೋಗಗಳಿಂದ ದೃಢಪಟ್ಟಿದೆ. ಆದರೆ ಇದು ಎಷ್ಟರ ಮಟ್ಟಿಗೆ ಮಧುಮೇಹಿಗಳಿಗೆ ಪ್ರಯೋಜನಕಾರಿ ಎಂಬುದನ್ನು ಮಾತ್ರ ಇನ್ನಷ್ಟೇ ಅರಿಯಬೇಕಿದೆ.

ತಲೆನೋವನ್ನು ನಿವಾರಿಸಲು

ತಲೆನೋವನ್ನು ನಿವಾರಿಸಲು

ಹಸಿರು ಚಹಾ ಹಸಿರು ಚಹಾ (ಗ್ರೀನ್ ಟೀ) ಯಲ್ಲಿ ಒಂದು ನಿರ್ಧಾರಿತ ಪ್ರಮಾಣದ ಕೆಫೀನ್ ಇದ್ದು ಇದು ಎಲ್ಲಾ ತರಹದ ತಲೆನೋವುಗಳನ್ನು ನಿವಾರಿಸಲು ಅತ್ಯಂತ ಸೂಕ್ತವಾದ ಪ್ರಮಾಣವಾಗಿದೆ. ಮುಂದೆ ಓದಿ

ತಲೆನೋವನ್ನು ನಿವಾರಿಸಲು

ತಲೆನೋವನ್ನು ನಿವಾರಿಸಲು

ಹಸಿರು ಟೀಯಲ್ಲಿ ಹಾಲಿಲ್ಲದೇ ಕೊಂಚವೇ ಸಕ್ಕರೆ ಸೇರಿಸಿ ಕುಡಿಯಬಹುದು ಅಥವಾ ಕೊಂಚ ಲಿಂಬೆರಸ ಸೇರಿಸುವುದರಿಂದ ರುಚಿ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕ್ಷಮತೆಯೂ ಹೆಚ್ಚುತ್ತದೆ.

 ನಿಮ್ಮ ಸೌಂದರ್ಯ ವರ್ಧಿಸಲು

ನಿಮ್ಮ ಸೌಂದರ್ಯ ವರ್ಧಿಸಲು

ಬಿಸಿನೀರಿನಲ್ಲಿ ಎರಡು ಅಥವಾ ಮೂರು ಹಸಿರು ಚಹಾ ಇರುವ ಚೀಲಗಳನ್ನು ಕೊಂಚಕಾಲ ಮುಳುಗಿಸಿ. ಬಳಿಕ ಈ ಚೀಲಗಳನ್ನು ಕತ್ತರಿಸಿ ಒಳಗಿನ ಟೀಪುಡಿಯನ್ನು ಒಂದು ಬೋಗುಣಿಯಲ್ಲಿ ಹಾಕಿ ಒಂದು ಚಿಕ್ಕ ಚಮಚ ಜೇನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಇನ್ನು ಈ ಲೇಪವನ್ನು ಮುಖ ಮತ್ತು ಗಂಟಲಿಗೆ ಹಚ್ಚಿ ಸುಮಾರು ಹದಿನೈದು ನಿಮಿಷಗಳವರೆಗೆ ನಯವಾಗಿ ಮಸಾಜ್ ಮಾಡಿ. ಬಳಿಕ ಉಗುರುಬೆಚ್ಚನಿಯ ನೀರಿನಿಂದ ತೊಳೆದುಕೊಳ್ಳಿ. ನಂತರ ಸೋಪು ಉಪಯೋಗಿಸಬೇಡಿ. ಇದರಿಂದ ಮುಖದ ಚರ್ಮ ಕಾಂತಿಯುತವಾಗಿ ಮತ್ತು ತಾಜಾತನದಿಂದ ಕೂಡಿರುತ್ತದೆ.

ದೇಹದ ಕೊಬ್ಬನ್ನು ಕರಗಿಸಲು

ದೇಹದ ಕೊಬ್ಬನ್ನು ಕರಗಿಸಲು

ದೇಹದ ಕೊಬ್ಬನ್ನು ಕರಗಿಸಲು ದೇಹದ ಕೊಬ್ಬನ್ನು ಕರಗಿಸಲು ನಿಮ್ಮ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿರಿಸುತ್ತಾ ದೇಹದಲ್ಲಿನ ಕಾರ್ಬೋಹೈಡ್ರೇಟ್ ಅನ್ನು ನಿಧಾನವಾಗಿ ಇದು ಹೊರಬಿಡುತ್ತದೆ. ನಿಮ್ಮ ದೇಹದ ಕೊಬ್ಬನ್ನು ಇದು ಸುಲಭವಾಗಿ ಕರಗಿಸುತ್ತದೆ. ಒಂದು ಕಪ್‌ನಷ್ಟು ನೀರಿಗೆ ಎರಡು ಹಸಿರು ಚಹಾ ಬ್ಯಾಗ್ ಸಾಕು. ಇದು ನಿಮ್ಮ ತೂಕವನ್ನು ಕರಗಿಸುತ್ತದೆ.

ಹೊಟ್ಟೆ ನೋವಿನ ಶಮನಕ್ಕಾಗಿ

ಹೊಟ್ಟೆ ನೋವಿನ ಶಮನಕ್ಕಾಗಿ

ಹೊಟ್ಟೆ ನೋವಿನ ಶಮನಕ್ಕಾಗಿ ಹೊಟ್ಟೆ ನೋವಿಗಾಗಿ ಹಾಲಿನ ಚಹಾದ ಬದಲಿಗೆ ಗ್ರೀನ್ ಟೀಯನ್ನು ಸೇವಿಸುವುದು ಹೊಟ್ಟೆ ನೋವನ್ನು ಹೋಗಲಾಡಿಸುತ್ತದೆ. ಅಷ್ಟೇ ಅಲ್ಲದೆ ಗ್ರೀನ್ ಟೀಯೊಂದಿಗೆ ಸಣ್ಣ ತುಂಡು ಶುಂಠಿಯನ್ನು ಬೆರೆಸಿ ಸೇವಿಸುವುದು ಆರೋಗ್ಯಕ್ಕೆ ಉತ್ತಮ.

ಹಸಿವನ್ನು ನಿಯಂತ್ರಿಸುತ್ತದೆ

ಹಸಿವನ್ನು ನಿಯಂತ್ರಿಸುತ್ತದೆ

ನಿಮ್ಮ ಹಸಿವಿನ ತುಡಿತವನ್ನು ಆದಷ್ಟು ಕಡಿಮೆ ಮಾಡಬೇಕೆಂಬ ಬಯಕೆ ನಿಮ್ಮದಾಗಿದ್ದಲ್ಲಿ ದಿನಪೂರ್ತಿ ಇದನ್ನು ಹೆಚ್ಚು ಸೇವಿಸಿ. ಊಟದ ಮುಂಚೆ ಒಂದು ಕಪ್‌ನಷ್ಟು ಹಸಿರು ಚಹಾವನ್ನು ನೀವು ಸೇವಿಸಿದಲ್ಲಿ ಹೆಚ್ಚು ಊಟ ಮಾಡಬೇಕೆನ್ನುವ ನಿಮ್ಮ ತುಡಿತ ನಿಯಂತ್ರಣದಲ್ಲಿರುತ್ತದೆ. ಊಟದ ನಂತರ ಕೂಡ ಒಂದು ಕಪ್‌ನಷ್ಟು ಹಸಿರು ಚಹಾವನ್ನು ಸೇವಿಸಿ ಇದು ನಿಮ್ಮ ಕ್ಯಾಲೋರಿಯನ್ನು ಕರಗಿಸುತ್ತದೆ.

ಚರ್ಮದ ಕಾಂತಿ ಹೆಚ್ಚಿಸಲು

ಚರ್ಮದ ಕಾಂತಿ ಹೆಚ್ಚಿಸಲು

ಒಂದು ಚಿಕ್ಕಚಮಚ ಮೊಸರಿಗೆ ಒಂದು ಚಿಕ್ಕಚಮಚ ಲಿಂಬೆಹಣ್ಣಿನ ರಸ ಸೇರಿಸಿ. (ಈಗ ತಾನೇ ಹಿಂಡಿದ ಲಿಂಬೆರಸ). ಇದಕ್ಕೆ ಒಂದರಿಂದ ಎರಡು ಚಿಕ್ಕ ಚಮಚ ಹಸಿರು ಟೀ ಕುದಿಸಿ ಸೋಸಿದ ನೀರನ್ನು ಬೆರೆಸಿ. ಈ ಲೇಪನವನ್ನು ಮುಖದ ಮೇಲೆ ನಯವಾಗಿ ಒಮ್ಮುಖವಾಗಿ ಹಚ್ಚಿರಿ. ಸುಮಾರು ಹದಿನೈದು ನಿಮಿಷ ಒಣಗಲು ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಸೋಪು ಉಪಯೋಗಿಸಬೇಡಿ.

English summary

Surprising Health Benefits Of Green Tea

Is green tea really a super food? Does it actually have great health benefits? Is it required for weight loss? The answer to all of these is yes. Green tea is the healthiest beverage that is loaded with ntioxidants and nutrients that have powerful effects on the body. Click on this slide show to know some benefits green tea can have in your life…
X
Desktop Bottom Promotion