ಮನೆ ಔಷಧ: ಮಾತ್ರೆ ಇಲ್ಲದೇ ತಲೆನೋವು ಮಾಯ!

Posted By:
Subscribe to Boldsky

ದೇಹಕ್ಕೆ ಆಗುವ ಪ್ರತಿಯೊಂದು ನೋವು ಕೂಡ ಸಹಿಸಲು ಸಾಧ್ಯವಿಲ್ಲದ್ದು. ಅದರಲ್ಲೂ ತಲೆನೋವು ಕಾಣಿಸಿಕೊಂಡರೆ ಏನೂ ಬೇಡ ಎನ್ನುವಂತಹ ಭಾವನೆಯಾಗುತ್ತದೆ. ತಲೆನೋವು ಕಾಣಿಸಿಕೊಂಡವರಿಗೆ ಮಾತ್ರ ಅದರ ಒದ್ದಾಟ ಗೊತ್ತು. ತಲೆನೋವಿನಿಂದ ಹೊರಬರಲು ಹಲವಾರು ರೀತಿಯ ಮಾತ್ರೆ ಹಾಗೂ ಮಲಾಮ್‌ಗಳನ್ನು ಪ್ರಯೋಗಿಸುತ್ತೇವೆ. ಆದರೆ ಇದು ಸ್ವಲ್ಪ ಶಮನ ನೀಡಿದರೂ ಮತ್ತೆ ಮತ್ತೆ ತಲೆನೋವು ಬರುತ್ತಲೇ ಇರುತ್ತದೆ. ನೆಗಡಿ-ತಲೆನೋವಿಗೆಲ್ಲಾ ವೈದ್ಯರ ಹಂಗೇಕೆ? 

ಅಲ್ಲದೆ ಇದು ದೈನಂದಿನ ಚಟುವಟಿಕೆಗಳ ಮೇಲೂ ಪರಿಣಾಮ ಬೀರುತ್ತದೆ. ಇಂತಹ ತಲೆನೋವನ್ನು ನೈಸರ್ಗಿಕವಾಗಿ ಯಾವ ರೀತಿಯಿಂದ ನಿವಾರಿಸಬಹುದು ಎಂದು ಈ ಲೇಖನದ ಮೂಲಕ ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ. ಇದರಿಂದ ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ಆಗುವ ಅಡ್ಡಪರಿಣಾಮಗಳು ಕಡಿಮೆಯಾಗುವುದು.

ಪುದೀನಾ

ಪುದೀನಾ

ಪುದೀನಾ ಎಲೆಗಳನ್ನು ಕುದಿಸಿ ತಯಾರಿಸಿದ ಟೀ ಯನ್ನು ಬಿಸಿಬಿಸಿಯಾಗಿ ಕುಡಿಯುವ ಮೂಲಕ ತಲೆನೋವು ಮತ್ತು ಅರೆತಲೆನೋವು ಕಡಿಮೆಯಾಗುತ್ತದೆ. ಅಲ್ಲದೇ ಹೊಟ್ಟೆಯ ನೋವು, ಅಜೀರ್ಣತೆ, ವಾಕರಿಕೆ ಹಾಗೂ ವಾಯುಪ್ರಕೋಪವನ್ನೂ ಕಡಿಮೆಮಾಡುತ್ತದೆ.

ಪುದೀನಾ ಸೊಪ್ಪಿನ ಚಹಾ: ಸ್ವಾದದ ಜೊತೆಗೆ ಆರೋಗ್ಯದ ಭಾಗ್ಯ!

ಶುಂಠಿ

ಶುಂಠಿ

ಒಂದು ತುಂಡು ಶುಂಠಿಯನ್ನು ತೆಗೆದುಕೊಂಡು ಅದನ್ನು ಕತ್ತರಿಸಿಕೊಂಡು ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿ. ಇದಕ್ಕೆ ಒಂದು ಲೋಟ ನೀರು ಹಾಕಿಕೊಂಡು ಕುದಿಸಿ. ಇದನ್ನು ಸೋಸಿಕೊಂಡು ಚಹಾದಂತೆ ಕುಡಿಯಿರಿ. ಅಲ್ಲದೇ ಶುಂಠಿಯಿಂದ ಬರುವಂತಹ ಆವಿಯನ್ನು ತೆಗೆದುಕೊಂಡರೂ ಸಾಕು ತಲೆನೋವು ಕಡಿಮೆಯಾಗುವುದು. ಶುಂಠಿ ಚಹಾ- ಸ್ವಾದದ ಜೊತೆಗೆ ಆರೋಗ್ಯದ ಭಾಗ್ಯ!

ದಾಲ್ಚಿನ್ನಿ

ದಾಲ್ಚಿನ್ನಿ

ಸ್ವಲ್ಪ ದಾಲ್ಚಿನ್ನಿ ಹುಡಿಯನ್ನು ತೆಗೆದುಕೊಳ್ಳಿ. ಇದನ್ನು ನೀರಿನೊಂದಿಗೆ ಮಿಶ್ರಣ ಮಾಡಿ ಪೇಸ್ಟ್ ಮಾಡಿಕೊಳ್ಳಿ. ಬಳಿಕ ಹಣೆಗೆ ಹಚ್ಚಿಕೊಳ್ಳಿ. ಸುಮಾರು 15-20 ನಿಮಿಷ ಕಾಲ ಹಾಗೆ ಬಿಟ್ಟ ಬಳಿಕ ಉಗುರು ಬೆಚ್ಚಗಿನ ನೀರಿನಿಂದ ಇದನ್ನು ತೊಳೆಯಿರಿ. ಜೇನು ದಾಲ್ಚಿನ್ನಿ ಜೋಡಿ ಮಾಡಲಿದೆ ಕಮಾಲಿನ ಮೋಡಿ

ತುಳಸಿ

ತುಳಸಿ

ತುಳಸಿಯ ಎಣ್ಣೆಯನ್ನು ಹಣೆಗೆ ಹಚ್ಚಿಕೊಂಡರೆ ತಲೆಯ ಸ್ನಾಯುಗಳು ಆರಾಮಗೊಂಡು ತಲೆನೋವಿನಿಂದ ಪರಿಹಾರ ಸಿಗುತ್ತದೆ. ಅಲ್ಲದೇ ಇನ್ನೊಂದು ಪರಿಹಾರವೇನೆಂದರೆ ಕುದಿಯುತ್ತಿರುವ ನೀರಿಗೆ ಸ್ವಲ್ಪ ತುಳಸಿ ಎಲೆಗಳನ್ನು ಹಾಕಿಕೊಳ್ಳಿ, ತದನಂತರ ಇದನ್ನು 2-3 ನಿಮಿಷ ಕುದಿಯಲು ಬಿಡಿ. ಇದನ್ನು ಸೋಸಿಕೊಂಡು ಚಹಾದಂತೆ ಕುಡಿಯಿರಿ. ಬಹುಪಯೋಗಿ ಔಷಧಗಳ ಸಂಜೀವಿನಿ 'ತುಳಸಿ'

ಲವಂಗ

ಲವಂಗ

ಕೆಲವು ಹನಿ ಲವಂಗದ ಎಣ್ಣೆ ಮತ್ತು ಅಷ್ಟೇ ಪ್ರಮಾಣದ ತೆಂಗಿನ ಎಣ್ಣೆಯನ್ನು ಮಿಶ್ರಣ ಮಾಡಿಕೊಂಡು ಅದನ್ನು ಹಣೆಗೆ ಹಚ್ಚಿಕೊಂಡು, ಹದವಾಗಿ ಮಸಾಜ್ ಮಾಡಿಕೊಂಡರೆ ತಲೆನೋವು ಕೂಡಲೇ ಕಡಿಮೆಯಾಗುವುದು. ಆಹಾ...ಲವಂಗ ಚಹಾ, ಕಣ ಕಣದಲ್ಲೂ ಆರೋಗ್ಯದ ಶಕ್ತಿ!

ಕೊಬ್ಬರಿ ಎಣ್ಣೆ

ಕೊಬ್ಬರಿ ಎಣ್ಣೆ

ಸ್ವಲ್ಪ ಕೊಬ್ಬರಿ ಎಣ್ಣೆಯಿಂದ ಮಸಾಜ್ ಮಾಡಿ 15 ರಿಂದ 20 ನಿಮಿಷ ಕೊಬ್ಬರಿ ಎಣ್ಣೆಯಿಂದ ಮಸಾಜ್ ಮಾಡಿದರೆ ತಲೆನೋವು ಕಡಿಮೆಯಾಗುತ್ತದೆ. ಬೇಸಿಗೆಯ ಬಿಸಿಲಿಗೆ ತಲೆನೋವು ಬಂದಾಗ ಈ ರೀತಿ ಮಾಡಿದರೆ ಕೊಬ್ಬರಿ ಎಣ್ಣೆ ತಂಪು ನೀಡುವುದರ ಮೂಲಕ ತಲೆನೋವನ್ನು ಕಡಿಮೆ ಮಾಡುತ್ತದೆ. ಬೇಸಿಗೆಯ ಸುಡು ಬಿಸಿಲಿಗೆ ಕೊಬ್ಬರಿ ಎಣ್ಣೆ ಬಳಕೆಯ ಮಹತ್ವವೇನು?

ಬಿಸಿ ನೀರಿನಲ್ಲಿ ಪಾದಗಳನ್ನಿಡಿ

ಬಿಸಿ ನೀರಿನಲ್ಲಿ ಪಾದಗಳನ್ನಿಡಿ

ತಲೆನೋವು ಕಾಡುತ್ತಾ ಇದ್ದರೆ ಬಿಸಿ ನೀರಿನಲ್ಲಿ ಪಾದಗಳನ್ನು ಹಾಕಿಡಿ. 5-10 ನಿಮಿಷ ಕಾಲ ಕಾಲುಗಳನ್ನು ಬಿಸಿ ನೀರಿನಲ್ಲಿಡಿ. ಸಾಸಿವೆ ಹುಡಿಯನ್ನು ಇದಕ್ಕೆ ಹಾಕಿದರೆ ಬೇಗನೆ ಪರಿಹಾರ ಸಿಗುವುದು. ಮಾತ್ರೆಯ ಹಂಗಿಲ್ಲದೆ ಮೈಗ್ರೇನ್ ತಲೆನೋವು ನಿಯಂತ್ರಣಕ್ಕೆ!

ಲವಂಗ ಮತ್ತು ಹರಳುಪ್ಪಿನ ಪೇಸ್ಟ್

ಲವಂಗ ಮತ್ತು ಹರಳುಪ್ಪಿನ ಪೇಸ್ಟ್

ಇದು ತಲೆನೋವಿಗೆ ಪರಿಣಾಮಕಾರಿ ಮನೆ ಮದ್ದು.ನೀವು ಮಾಡಬೇಕಾದ್ದು ಇಷ್ಟೆ,ಲವಂಗ ಮತ್ತು ಹರಳುಪ್ಪು ಕುಟ್ಟಿ ಪುಡಿ ಮಾಡಿ,ಹಾಲಿನೊಂದಿಗೆ ಬೆರೆಸಿ ಪೇಸ್ಟ್ ತಯಾರಿಸಿ ಇಟ್ಟುಕೊಳ್ಳಿ.ಪೇಸ್ಟ್ ನಲ್ಲಿ ಇರುವ ಹರಳುಪ್ಪು ಹೈಗ್ರೋಸ್ಕೊಪಿಕ್ ಆಗಿರುವುದರಿಂದ ತಲೆಯಲ್ಲಿರುವ ದ್ರವವನ್ನು ತೆಗೆದು ತಲೆ ನೋವನ್ನು ಕಡಿಮೆ ಮಾಡುತ್ತದೆ.

English summary

Natural Ways To Get Rid Of A Headache Instantly

The reason for headaches are plenty. If you are stressed too much, or you are exposed to too much of heat or also if you have had too much of alcohol then the next morning you wake up with a bad headache. Here is a list of a few well known natural ways to get rid of a headache. Have a look.
Story first published: Saturday, April 8, 2017, 23:30 [IST]
Subscribe Newsletter