For Quick Alerts
ALLOW NOTIFICATIONS  
For Daily Alerts

ಸಿಕ್ಸ್ ಪ್ಯಾಕ್ ಮೈಕಟ್ಟು ಬೇಕೇ? ಇಂತಹ ಜ್ಯೂಸ್ ಮಾಡಿ ಕುಡಿಯಿರಿ

By Suhani B
|

ಹೆಚ್ಚಿನ ಯುವಕರು ಸಿನಿಮಾ ಹೀರೋಗಳ ಸಿಕ್ಸ್ ಪ್ಯಾಕ್ ನನ್ನು ಕಂಡು ಮಾರು ಹೋಗಿ ತಮಗೂ ಸಿಕ್ಸ್ ಪ್ಯಾಕ್ ಸದೃಢ ಶರೀರ ಬೇಕೆಂಬ ಕನಸು ಕಾಣುತ್ತಾರೆ. ಈಗೀಗ ಹೆಚ್ಚಿನವರು ಶರೀರದ ಸದೃಢತೆಗಾಗಿ ಜಿಮ್‌‌ಗೆ ಹೋಗುವುದು ಅಥವಾ ವ್ಯಾಯಾಮ ಶಾಲೆಗೆ ಹೋಗಿ ತಮ್ಮ ಸದೃಢ ಶರೀರದ ಆರೋಗ್ಯವನ್ನು ಕಾಪಾಡಲು ಬಯಸುತ್ತಾರೆ. ಎಲ್ಲರೂ ತಮ್ಮ ಆರೋಗ್ಯದ ಕಡೆ ಗಮನ ಕೊಡದೆ ಇದ್ದಲ್ಲಿ ಮುಂದೆ ಅನಾರೋಗ್ಯಕ್ಕೆ ತುತ್ತಾಗುವರು.

ಕೆಲವರಂತೂ ತಾನು ತುಂಬಾ ತೆಳ್ಳಗಿದ್ದೇನೆ ಎಂಬ ಭ್ರಮೆಯಿಂದ ಆರೋಗ್ಯದ ಕಡೆಗೆ ಗಮನ ಕೊಡದೆ ಯೋಗ ವ್ಯಾಯಾಮಗಳು ಶರೀರದ ತೂಕವನ್ನು ಇಳಿಸಲು ಮಾಡುವ ಕ್ರಿಯೆಯೆಂದು ನಂಬಿರುತ್ತಾರೆ. ಶರೀರದಲ್ಲಿ ದಪ್ಪ ಮತ್ತು ತೆಳ್ಳಗಿನ ಶರೀರವೆಂದು ವಿಭಾಗಿಸದೆ ಪ್ರತಿಯೊಬ್ಬರೂ ತಮ್ಮ ಆರೋಗ್ಯವನ್ನು ಕಾಪಾಡಲು ಪ್ರತಿದಿನ ವ್ಯಾಯಾಮ ಮಾಡುವುದು ಒಳ್ಳೆಯದು. ಯುವ ಜನಾಂಗ ಮತ್ತು ಮಧ್ಯಮ ವಯಸ್ಸಿನವರೂ ಕೂಡ ತನ್ನ ಶರೀರ ಆಕರ್ಷಕ ಮತ್ತು ಸದೃಢ ಮಾಂಸಖಂಡಗಳು ಬೇಕೆಂದು ಬಯಸುವವರೇ ಹೆಚ್ಚು.

banana juice

ಸಿಕ್ಸ್ ಪ್ಯಾಕ್ ಆ್ಯಬ್ಸ್ ಬೇಕೆಂದು ಇತ್ತೀಚಿನ ಯುವಕರಲ್ಲಿ ನಡವಳಿಕೆಯಾಗಿದೆ. ಈ ರೀತಿ ಮಾಂಸಖಂಡಗಳನ್ನು ಸದೃಢವಾಗಿರಲು ಸದೃಢವಾದ ಮಾಂಸಖಂಡಗಳನ್ನು ನಮ್ಮ ಶರೀರದಲ್ಲಿ ಬೆಳಸಿಕೊಳ್ಳಲು ಡಯಟ್ ಹಾಗೂ ವ್ಯಾಯಾಮ ಅತೀ ಮುಖ್ಯ. ಇವುಗಳಲ್ಲಿ ಯಾವುದಾದರೂ ಮೂರು ಅಂಶಗಳು ಇಲ್ಲವಾದಲ್ಲಿ ನೀವು ಸದೃಢ ಶರೀರವನ್ನು ಬೆಳೆಸುವುದರಲ್ಲಿ ವೈಫಲ್ಯ ಹೊಂದುತ್ತೀರಿ.

ಸದೃಢ ಶರೀರವನ್ನು ಬೆಳೆಸುಕೊಳ್ಳಬೇಕಾದಲ್ಲಿ ನೀವು ಪ್ರೋಟಿನ್ ಯುಕ್ತ ಆಹಾರಗಳ ಸೇವನೆಯೊಂದಿಗೆ ವಿಶೇಷವಾಗಿ ಹೊಟ್ಟೆ ಭಾಗ ಸರಿಯಾದ ವ್ಯಾಯಾಮವನ್ನು ತರಬೇತುದಾರರ ಬಳಿ ಕಲಿತುಕೊಳ್ಳಬೇಕು. ಟೆಸ್ಟೋಸ್ಟೆರಾನ್ ಮಾಂಸಖಂಡಗಳಿಗೆ ಅಗತ್ಯ. ಹೆಚ್ಚಿನ ಯುವಜನರು ಸದೃಢ ಶರೀರವನ್ನು ಬೆಳೆಸಿಕೊಳ್ಳಲು ಸ್ಟಿರಾಯಿಡ್ ಮಾತ್ರೆಗಳನ್ನು ಸೇವಿಸುತ್ತಾರೆ. ಆದರೆ ಇದು ಆರೋಗ್ಯಕ್ಕೆ ತುಂಬಾ ಹಾನಿಕಾರ. ಸ್ವಾಭಾವಿಕವಾಗಿ ಕೊಬ್ಬು ಮಾಂಸಖಂಡಗಳನ್ನು ಪಡೆಯಲು ಈ ವಿಧಾನಗಳನ್ನು ಅನುಸರಿಸಿದಲ್ಲಿ ಸಿಕ್ಸ್ ಪ್ಯಾಕ್ ನನ್ನು ಪಡೆಯಲು ಅನುಕೂಲವಾಗುವುದು.

ಬೇಕಾಗುವ ಪದಾರ್ಥಗಳು
2 ಮೊಟ್ಟೆಯ ಬಿಳಿ ಭಾಗ
ಬಾಳೆಹಣ್ಣು -1
ಕಡಲೆಕಾಯಿ ಬೆಣ್ಣೆ -3 ಚಮಚ

ಮೇಲೆ ತಿಳಿಸಿರುವಂತಹ ವಿಧಾನಗಳನ್ನು ಒಂದು ದಿನವೂ ಬಿಡದೆ ಅನುಸರಿಸಿ ಸ್ವೀಕರಿಸಿದಲ್ಲಿ ವಿಷೇಷವಾಗಿ ಹೊಟ್ಟೆಯ ಮಾಂಸಖಂಡಗಳು ಚೆನ್ನಾಗಿ ಶರೀರದ ಇತರ ಮಾಂಸಖಂಡಗಳು ಸದೃಢವಾಗಲು ಪೂರಕವಾಗಿದೆ. ಇದರ ಜೊತೆಯಲ್ಲಿ ದಿನಕ್ಕೆ ಒಂದು ಗಂಟೆ ಜಿಮ್‌ನಲ್ಲಿ ವ್ಯಾಯಾಮ ಮತ್ತು ವಿಶೇಷ ವಾಗಿ ಹೊಟ್ಟೆಯ ಭಾಗದ ವ್ಯಾಯಾಮಕ್ಕೆ ಗಮನ ಹರಿಸಬೇಕು.

ಹೇರಳ ವಿಟಮಿನ್‌ಗಳಿರುವ ಬೇಳೆಕಾಳು, ಚಿಕನ್ ,ಚನ್ನ ಇತ್ಯಾದಿ ಸೇವನೆ ಬೊಜ್ಜು ನಿವಾರಕ ಆಹಾರಗಳಿಂದ ದೂರವಿರುವುದು ಒಳಿತು. ಇವುಗಳಲ್ಲಿ ಹೇರಳವಾಗಿ ಮೊಟ್ಟೆಯ ಬಿಳಿ ಭಾಗ ,ಬಾಳೆಹಣ್ಣು ಇತ್ಯಾದಿ ಅಧಿಕ ಪ್ರೋಟೀನ್ ಗಳು ಮತ್ತು ಪೊಟ್ಯಾಷಿಯಂಗಳಿವೆ ಪ್ರೋಟೀನ್ ಯುಕ್ತ ಆಹಾರ ಮಾಂಸಖಂಡಗಳ ಪದರಗಳ ಬೆಳವಣಿಗೆಗೆ ಮತ್ತು ಪೊಟ್ಯಾಷಿಯಂ ಶಕ್ತಿದಾಯಕವಾಗಿದೆ. ಇದರ ಜೊತೆ ಕೆನೆ ರಹಿತ ಹಾಲು ಸೇವನೆ ಒಳ್ಳೆಯದು.

ಮಾಡುವ ವಿಧಾನ
ಈ ಮೇಲೆ ತಿಳಿಸಿರುವಂತಹ ಪದಾರ್ಥಗಳನ್ನು ಹದಗೊಳಿಸಿ
* ಚೆನ್ನಾಗಿ ಮಿಶ್ರಣ ಮಾಡಿರಿ
*.ಈ ಮಿಶ್ರಣವನ್ನು ಒಂದು ಗ್ಲಾಸ್ ಹಾಲಿನೊಂದಿಗೆ ಹಾಕಿ ಚೆನ್ನಾಗಿ ಬೆರಸಿ
* ಇದನ್ನು ನಿಮ್ಮ ವ್ಯಾಯಾಮದ ನಂತರ ಅಥವಾ ಮೊದಲು ದಿನ ನಿತ್ಯ ಸೇವಿಸಿ.

English summary

Natural Protein Drink To Attain 6-Pack Abs In 3 Months!

If you are someone who dreams of attaining an attractive, muscular figure, just like one of your favourite celebrities, then, it shows that you are definitely interested in being fit and healthy! These days, more and more people are hitting the gyms or taking up other kinds of workout regimes, in order to attain fit bodies and keep themselves healthy.
Story first published: Monday, July 24, 2017, 18:21 [IST]
X
Desktop Bottom Promotion