ದೇಹದ ತೂಕ ಇಳಿಸಲು ಪರ್ಫೆಕ್ಟ್ ಟಿಪ್ಸ್-ಪ್ರಯತ್ನಿಸಿ ನೋಡಿ

By: Jaya subramanya
Subscribe to Boldsky

ಇಂದಿನ ಕಾಲದಲ್ಲಿ ತೂಕ ಇಳಿಕೆ ಎಂಬುದು ಸವಾಲಿನ ವಿಷಯವಾಗಿ ಪರಿಣಮಿಸಿದೆ. ಆಧುನಿಕ ಜೀವನ ಪದ್ಧತಿ ಮಾನವ ಜೀವನಕ್ಕೆ ಅತ್ಯುತ್ತಮ ಕೊಡುಗೆಯನ್ನು ನೀಡಿದ್ದರೂ ಜೊತೆಗೆ ಕೊಬ್ಬು, ಸ್ಥೂಲಕಾಯತೆ ಎಂಬ ಶಾಪವನ್ನು ನೀಡಿದೆ. ಅತಿಯಾದ ಬಾಯಿ ಚಪಲದಿಂದ ಇಂದು ನಾವು ಕಣ್ಣಿಗೆ ಕಂಡದ್ದನ್ನೆಲ್ಲಾ ಬಾಯಿಗೆ ತುರುಕಿ ನಮ್ಮ ಹೊಟ್ಟೆಯನ್ನು ಕಸದ ತೊಟ್ಟಿಯನ್ನಾಗಿಸಿಕೊಂಡಿದ್ದೇವೆ.

ತೂಕ ಇಳಿಸುವ ಹುನ್ನಾರಕ್ಕೆ ಇಳಿದು ಅದರಲ್ಲೂ ಸೋಲನ್ನು ಕಂಡುಕೊಂಡು ನಮ್ಮ ಜೀವನ ಹೀಗೆಯೇ ಇರಲಿ ಡಯೆಟ್ ಬೇಡ, ವ್ಯಾಯಾಮ ಬೇಡ ಇದ್ದಷ್ಟು ದಿನ ತಿಂದುಂಡು ಇರೋಣ ಎಂಬುದಾಗಿ ನಿರ್ಧರಿಸಿ ನಿಮ್ಮ ತೂಕ ಇಳಿಸುವ ಛಲಕ್ಕೆ ಎಳ್ಳು ನೀರು ಬಿಡುತ್ತೀರಿ. ಆದರೆ ತಿಂದುಂಡು ಬದುಕುವುದಕ್ಕೆ ಬದಲಾಗಿ, ಜೀವಿಸುವುದಕ್ಕಾಗಿ ತಿನ್ನಬೇಕೆಂಬ ಪಾಠವನ್ನು ಅರಿತುಕೊಳ್ಳೋಣ.

weight loss

ಆರೋಗ್ಯವೇ ಭಾಗ್ಯ ಎಂದಾಗಿರುವುದರಿಂದ ಅಧಿಕ ಸ್ಥೂಲಕಾಯತೆಯಿಂದಾಗಿ ನೀವು ಕೇಳರಿಯದ ರೋಗಗಳ ದಾಸರಾಗುವುದು ಖಂಡಿತ. ಆದ್ದರಿಂದ ಇಂದಿನ ಲೇಖನದಲ್ಲಿ ನಾವು ತೂಕ ಇಳಿಸುವುದಕ್ಕೆ ಸಹಕಾರಿಯಾಗಿರುವ ನೈಸರ್ಗಿಕ ಜ್ಯೂಸ್ ಒಂದನ್ನು ಪರಿಚಯಿಸುತ್ತಿದ್ದೇವೆ. ಈ ಜ್ಯೂಸ್ ಅನ್ನು ಬಲಬೇಗನೇ ನಿಮಗೆ ತಯಾರಿಸಬಹುದಾಗಿದ್ದು ಹೆಚ್ಚುವರಿ ಖರ್ಚುಮಾಡಬೇಕಾದ ಅಗತ್ಯ ಕೂಡ ಇಲ್ಲ.

carrot juice

ತಾಜಾ ಕ್ಯಾರೆಟ್ ಜ್ಯೂಸ್ ½ ಲೋಟ

ಸೇಬಿನ ತಿರುಳು - 1/2 ಲೋಟ

ಶುಂಠಿ ರಸ - 1 ಚಮಚ

ನಿತ್ಯವೂ ಇದನ್ನು ಸೇವಿಸುವುದರಿಂದ ಇದು ನಿಮ್ಮ ತೂಕವನ್ನು ಇಳಿಸುವುದರ ಜೊತೆಗೆ ಸುಂದರ ಕಾಯವನ್ನು ನಿಮಗೆ ನೀಡುತ್ತದೆ. ಈ ಜ್ಯೂಸ್ ಅನ್ನು ಸೇವಿಸುವುದರ ಜೊತೆಗೆ ಒಂದು ನಿರ್ದಿಷ್ಟ ಸಮಯದಲ್ಲಿ ವ್ಯಾಯಾಮವನ್ನು ಅನುಸರಿಸಬೇಕು. ಈ ಹಣ್ಣುಗಳ ರಸದಲ್ಲಿ ಉತ್ಕರ್ಷಣ ನಿರೋಧಿ ಅಂಶಗಳಿದ್ದು, ಹೇರಳ ಪ್ರೋಟೀನ್ ಅನ್ನು ಇವುಗಳು ಒಳಗೊಂಡಿವೆ.

Apple Juice

ಮಾಡುವ ವಿಧಾನ

*ಮೇಲೆ ತಿಳಿಸಿದ ಹಣ್ಣುಗಳ ರಸವನ್ನು ಮಿಕ್ಸಿಯಲ್ಲಿ ಸಮಪ್ರಮಾಣದ ನೀರನ್ನು ಬೆರೆಸಿಕೊಂಡು ಸಿದ್ಧಪಡಿಸಿ

*ಪ್ರತೀದಿನ ಬೆಳಗ್ಗೆ ಉಪಹಾರಕ್ಕಿಂತ ಮುನ್ನು ಒಂದು ತಿಂಗಳ ಕಾಲ ಸೇವಿಸಿ.

English summary

Natural Juice That Aids In Quick Weight Loss 1

Have you had enough experience with your constant weight gain that seems to have no solution? Do you feel that you have tried every diet tip out there that promises to help you lose weight? Well, many of us go through the same frustration every day. Losing weight is definitely not a simple thing to achieve for anyone, be it laymen or even celebrities!
Subscribe Newsletter