ಮದುವೆಯಾಗಿರುವ ಪುರುಷರು ಈ ಆಹಾರಗಳನ್ನು ತಿನ್ನಲೇಬೇಕು!

By: manu
Subscribe to Boldsky

ಮೊಬೈಲ್ ಖರೀದಿಸುವಾಗ ಹಲವಾರು ಸೈಟ್‌ಗಳಿಗೆ ಹೋಗಿ ಅದನ್ನು ಹೋಲಿಸಿಕೊಂಡು ಅತಿ ಉತ್ತಮವಾಗಿರುವುದನ್ನು ನಾವು ಆಯ್ಕೆ ಮಾಡುತ್ತೇವೆ. ಆದರೆ ತಿನ್ನುವಂತಹ ಆಹಾರದ ಬಗ್ಗೆ ತೀವ್ರ ನಿರ್ಲಕ್ಷ್ಯ ವಹಿಸುತ್ತೇವೆ! ಸಿಕ್ಕಿದೆಲ್ಲವನ್ನು ತಿಂದು ಆರೋಗ್ಯವನ್ನು ಕೆಡಿಸಿಕೊಳ್ಳುತ್ತೇವೆ. ನಮ್ಮ ಆಹಾರ ಕ್ರಮ ಸರಿಯಾಗಿದ್ದರೆ ಅದರಿಂದ ಒಳ್ಳೆಯ ಜೀವನ ಸಾಗಿಸಬಹುದು. ಪುರುಷರ ಆರೋಗ್ಯಕ್ಕೆ ಕ್ಯಾರೆಟ್ ಒಳ್ಳೆಯದು  

ಅದರಲ್ಲೂ ಮದುವೆಯಾಗಿರುವ ಪುರುಷರು ತಾವು ಸೇವಿಸುವ ಆಹಾರದ ಬಗ್ಗೆ ಜಾಗೃತೆ ವಹಿಸಬೇಕು. ಟೆಸ್ಟೊಸ್ಟಿರೊನ್ ಮಟ್ಟ, ಫಲವತ್ತತೆ, ಒಳ್ಳೆಯ ಭಾವನೆ ಮೂಡಲು ಆರೋಗ್ಯವು ತುಂಬಾ ಮುಖ್ಯ. ಪುರುಷರ ಆರೋಗ್ಯ ಸಪ್ತಾಹ: ಮಿಸ್ ಮಾಡದೇ ಓದಿ..!

ಮದುವೆಯಾಗಿರುವ ಪುರುಷರು ತಮ್ಮ ಆಹಾರ ಕ್ರಮವನ್ನು ಸರಿಯಾಗಿಟ್ಟುಕೊಂಡರೆ ಮುಂದೆ ಒಳ್ಳೆಯ ಜೀವನ ಹಾಗೂ ಬೇಗನೆ ಮಗುವನ್ನು ಪಡೆಯಬಹುದು... ಬನ್ನಿ ಪುರುಷರು ಯಾವ ಆಹಾರ ಸೇವಿಸಬೇಕು ಎಂದು ನೀವು ಈ ಲೇಖನ ಮೂಲಕ ತಿಳಿಯಿರಿ.... 

ಬೆಳ್ಳುಳ್ಳಿ

ಬೆಳ್ಳುಳ್ಳಿ

ಮದುವೆಯಾಗಿರುವಂತಹ ಪುರುಷರು ತಿನ್ನಲೇಬೇಕಾದ ಆಹಾರವೆಂದರೆ ಅಲಿಸಿನ್ ಅಂಶವನ್ನು ಹೊಂದಿರುವಂತಹ ಬೆಳ್ಳುಳ್ಳಿ. ಇದು ಜನನಾಂಗಕ್ಕೆ ರಕ್ತಸಂಚಾರವನ್ನು ಉತ್ತಮಪಡಿಸಿ ಲೈಂಗಿಕ ಕ್ರಿಯೆಯು ಉತ್ತಮವಾಗುವಂತೆ ಮಾಡುವುದು. ಅಲ್ಲದೆ ಬೆಳ್ಳುಳ್ಳಿಯಲ್ಲಿ ಉತ್ಕರ್ಷಣ (ಆಂಟಿ-ಆಕ್ಸಿಡೆಂಟ್ಸ್) ಸಮೃದ್ಧಿಯಾಗಿರುವುದರಿಂದ ಶರೀರದಿಂದ ಎಲ್ಲಾ ಜೀವಾಣುಗಳನ್ನು ತೆಗೆದುಹಾಕುತ್ತದೆ.ಅದರಲ್ಲಿ ಬಯೋಫ್ಲೇವನೋಯ್ಡ್ ಸಮೃದ್ಧಿಯಾಗಿರುವುದರಿಂದ ವೀರ್ಯಾಣು ಹೆಚ್ಚಿಸುತ್ತದೆ.

ಚಾಕಲೇಟ್

ಚಾಕಲೇಟ್

ಫಿನಲ್ ಎತಿಲಮೆನ್ ಎನ್ನುವ ಅಂಶವನ್ನು ಹೊಂದಿರುವಂತಹ ಚಾಕಲೇಟ್ ನ್ನು ತಿಂದರೆ ಅದರಿಂದ ದೇಹವು ಡೊಪಮೈನ್ ನ್ನು ಬಿಡುಗಡೆ ಮಾಡುತ್ತದೆ. ಇದರಿಂದ ಭಾವನೆಗಳು ಹೆಚ್ಚಾಗುತ್ತದೆ. ಡೊಪಮೈನ್ ಉದ್ರೇಕವನ್ನು ಹೆಚ್ಚಿಸಿ ನಿಮ್ಮಲ್ಲಿ ಉತ್ತಮ ಭಾವನೆಯನ್ನು ಉಂಟು ಮಾಡುತ್ತದೆ.

ಬಾಳೆಹಣ್ಣು

ಬಾಳೆಹಣ್ಣು

ಮದುವೆಯಾಗಿರುವ ಪುರುಷರು ಬಾಳೆಹಣ್ಣನ್ನು ತಿನ್ನಲೇಬೇಕು. ಇದರಲ್ಲಿ ಇರುವಂತಹ ಬಿ6, ಪೊಟಾಶಿಯಂ, ಕ್ಯಾಲ್ಸಿಯಂ ನಿಮ್ಮ ತುಂಬಾ ಬಲಿಷ್ಠವಾಗಿರಿಸುತ್ತದೆ. ಬಾಳೆಹಣ್ಣಿನಲ್ಲಿರುವ ಪೋಷಕಾಂಶಗಳು ಪ್ರೀತಿಯ ಹಾರ್ಮೋನುಗಳನ್ನು ಬಿಡುಗಡೆ ಮಾಡಿ ಕಾಮೋತ್ತೇಜನ ಮಾಡುತ್ತದೆ. ಸಿಪ್ಪೆಯ ಮೇಲೆ ಚುಕ್ಕೆ ಬಿದ್ದ ಬಾಳೆಹಣ್ಣಿನ ಅದ್ಭುತ ಪವರ್....

ಮಾವು ಮತ್ತು ಪಪ್ಪಾಯಿ ಹಣ್ಣುಗಳು

ಮಾವು ಮತ್ತು ಪಪ್ಪಾಯಿ ಹಣ್ಣುಗಳು

ಈ ಹಣ್ಣುಗಳ ಸಿಪ್ಪೆಯಲ್ಲಿ ಅಧಿಕವಾಗಿ ಬಯೋಫ್ಲವೊನೋಯಿಡ್ಸ್ ಮತ್ತು ಇತರ ಪೋಷಕಾಂಶಗಳಿವೆ. ಪುರುಷರು ತಮ್ಮ ಪೌಷ್ಟಿಕ ಅಗತ್ಯಗಳಿಗೆ ಈ ಹಣ್ಣುಗಳನ್ನು ಸೇವಿಸಬೇಕು. ಈ ಹಣ್ಣುಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಶಕ್ತಿಯನ್ನು ನೀಡುತ್ತದೆ. ದೇಹದಲ್ಲಿರುವ ಕೊಬ್ಬನ್ನು ಕರಗಿಸಬೇಕೇ? ಪಪ್ಪಾಯಿ ಹಣ್ಣು ತಿನ್ನಿ!

ಕೆಂಪು ಮಾಂಸ

ಕೆಂಪು ಮಾಂಸ

ಸಸ್ಯಾಹಾರಿಗಳು ಖಂಡಿತವಾಗಿಯೂ ಇದನ್ನು ಸೇವಿಸಲ್ಲ. ಆದರೆ ಮಾಂಸಹಾರಿಗಳು ಕೆಂಪು ಮಾಂಸ ಸೇವನೆ ಮಾಡಬೇಕು. ಇದರಲ್ಲಿರುವ ಎಲ್ ಕಾರ್ನಿಟೈನ್ ಅಂಶವು ಟೆಸ್ಟೊಸ್ಟಿರಾನ್ ಮಟ್ಟವನ್ನು ಹೆಚ್ಚಿಸುತ್ತದೆ. ಅತಿಯಾದ ಕೆಂಪು ಮಾಂಸದ ಸೇವನೆ-ಅಪಾಯ ಕಟ್ಟಿಟ್ಟ ಬುತ್ತಿ!

ಪಾಲಕ್

ಪಾಲಕ್

ಪಾಲಕ್‌ನಲ್ಲಿರುವಂತಹ ಫಾಲಿಕ್ ಆಮ್ಲವು ಕಾಮೋತ್ತೇಜನ ಹಾಗೂ ಫಲವತ್ತತೆಯನ್ನು ಅಧಿಕಗೊಳಿಸುವುದು. ಇದರಲ್ಲಿ ಇರುವಂತಹ ಮೆಗ್ನಿಶಿಯಂ ಅಂಶವು ರಕ್ತನಾಳಗಳಿಗೆ ತುಂಬಾ ಒಳ್ಳೆಯದು. ಆರೋಗ್ಯಕ್ಕೆ ಹಿತಕರವಾಗಿರುವ ಪಾಲಕ್ ಸೊಪ್ಪಿನ ಪ್ರಯೋಜನಗಳೇನು?

ವೆನಿಲ್ಲಾ

ವೆನಿಲ್ಲಾ

ವೆನಿಲ್ಲಾದ ಸುಗಂಧವು ಪುರುಷರಿಗೆ ತುಂಬಾ ಒಳ್ಳೆಯದು ಎಂದು ಹೊಸ ಅಧ್ಯಯನವೊಂದು ಹೇಳಿದೆ. ವೆನಿಲ್ಲಾದ ಸುವಾಸನೆಯು ಪುರುಷರಲ್ಲಿ ಉದ್ರೇಕವನ್ನು ಉಂಟು ಮಾಡಿ ಭಾವನೆಗಳನ್ನು ಕೆರಳಿಸುತ್ತದೆ ಎನ್ನಲಾಗಿದೆ.

ಹಸಿರು ಹೂ ಕೋಸು (ಬ್ರೊಕೋಲಿ)

ಹಸಿರು ಹೂ ಕೋಸು (ಬ್ರೊಕೋಲಿ)

ಇದು ಪಿತ್ತಜನಕಾಂಗದಲ್ಲಿ ಕೆಲವು ಕಿಣ್ವಗಳನ್ನು ಉತ್ಪಾದಿಸಿ ಕ್ಯಾನ್ಸರ್ ಕೋಶಗಳ ಪರಿಣಾಮಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅದರಲ್ಲಿ ವಿಟಮಿನ್ ಸಿ ಅಧಿಕವಾಗಿದ್ದು ಶರೀರಕ್ಕೆಶಕ್ತಿಕೊಟ್ಟು ರೋಗ ನಿರೋಧಕ ಶಕ್ತಿಯನ್ನು ವರ್ಧಿಸುತ್ತದೆ. ಇದು ಪುರುಷರಿಗೆ ಅತ್ಯುತ್ತಮ ಪೌಶ್ಟಿಕಾಂಶ ನೀಡುವ ಆಹಾರಗಳಲ್ಲಿ ಒಂದಾಗಿದೆ.

ಹಾಲು ಮತ್ತು ಹಾಲಿನ ಉತ್ಪನ್ನಗಳು

ಹಾಲು ಮತ್ತು ಹಾಲಿನ ಉತ್ಪನ್ನಗಳು

ಇವುಗಳಲ್ಲಿ ಕಾರ್ನಿಟೈನ್ (Carnitine) ಎಂಬ ಅಮೀನೋ ಆಮ್ಲ ಹೇರಳವಾಗಿದೆ.ಈ ಆಮ್ಲವು ಕೊಬ್ಬನ್ನು ಉಪಯೋಗಿಸಿ ಶರೀರಕ್ಕೆ ಶಕ್ತಿಯನ್ನು ಕೊಡುತ್ತದೆ. ಅದು ರಕ್ತ ಸಂಚಾಲನೆಯನ್ನು ವರ್ಧಿಸಿ ನಿಮ್ಮನ್ನು ಸದಾ ಸಕ್ರಿಯವಾಗಿ ಕಾರ್ಯನಿರತರನ್ನಾಗಿ ಮಾಡಲು ಸಹಾಯಮಾಡುತ್ತದೆ. ಹಾಲಿನ ಉತ್ಪನ್ನಗಳ ಸೇವನೆಯಿಂದ ಸ್ನಾಯು ಸೆಳೆತ ಮತ್ತು ದೌರ್ಬಲ್ಯಗಳನ್ನು ತಡೆಯುತ್ತದೆ. ಅದರಲ್ಲಿ ಕ್ಯಾಲ್ಸಿಯುಮ್ ಹೇರಳವಾಗಿರುವುದರಿಂದ ಮೂಳೆ ಆರೋಗ್ಯಕ್ಕೆ ಒಳ್ಳೆಯದು.

ರಾಗಿ

ರಾಗಿ

ರಾಗಿಯಲ್ಲಿ ಕ್ಯಾಲ್ಸಿಯುಂ ಅತ್ಯಂತ ಅಧಿಕವಾಗಿರುವುದರಿಂದ ಪುರುಷರಲ್ಲಿ ಅಸ್ಥಿರಂಧ್ರತೆ ಅಥವಾ ಅಸ್ಥಿಭಿದುರತೆ (Osteoporosis) ರೋಗವನ್ನು ತಡೆಗಟ್ಟಲು ಸಹಾಯಕಾರಿಯಾಗಿದೆ. ಅದರಲ್ಲಿ ತವರ (Zinc) ಅಧಿಕವಾಗಿದ್ದು ಪುರುಷ-ಫಲವತ್ತತೆಯ ಸಮಸ್ಯೆಗಳನ್ನು ತಡೆಗಟ್ಟುತ್ತದೆ. ಅದು ಮಧುಮೇಹರೋಗವನ್ನು ನಿಯಂತ್ರಿಸಿ ಬೊಜ್ಜು ದೇಹ ಬೆಳೆಯುವುದನ್ನು ತಡೆಗಟ್ಟುತ್ತದೆ. ಪುರುಷರಿಗೆ ತೆಗೆದುಕೊಳ್ಳಬೇಕಾದ ಆಹಾರಗಳಲ್ಲಿ ರಾಗಿಯು ಒಂದು ಅತ್ಯುತ್ತಮ ಆಹಾರವಾಗಿದೆ.ಬಿಸಿಬಿಸಿ ರಾಗಿ ಮುದ್ದೆ ಸವಿದವರೇ ಪುಣ್ಯವಂತರು...

 

 

English summary

Married Men Must Eat These foods!

Men may need to watch their diet after getting married. What you eat should be able to promote testosterone levels, fertility, good moods and also overall health. Even if you feel romantic, your body needs strength and vigour to implement those romantic plans. And you get all your energy from the food you eat. Good blood circulation and endurance are other factors that become very important in the life of a married man. Is your daily life giving you everything? Or else, include these foods...
Story first published: Thursday, April 13, 2017, 23:42 [IST]
Subscribe Newsletter