For Quick Alerts
ALLOW NOTIFICATIONS  
For Daily Alerts

ಪುರುಷರ ಆರೋಗ್ಯಕ್ಕೆ ಕ್ಯಾರೆಟ್ ಒಳ್ಳೆಯದು

|

ನಿಮಗೆ ಗೊತ್ತೆ ದಿನವೂ ಸೇಬಿಗಿಂತ ಕ್ಯಾರೆಟ್ ತಿನ್ನಬೇಕು ಎನ್ನುವುದಕ್ಕೆ ಮಿಲಿಯನ್ ಗಟ್ಟಲೆ ಕಾರಣಗಳಿವೆ. ಗಂಡಸರಿಗೆ ಉಳಿದ ತರಕಾರಿಗಳಿಗಿಂತ ಕ್ಯಾರೆಟ್ ತಿನ್ನುವುದರಿಂದ ಹೆಚ್ಚು ಪ್ರಯೋಜನಗಳಿವೆ. ಯಾಕೆ ಅಂತ ಆಶ್ಚರ್ಯನಾ? ಕ್ಯಾರೆಟ್ ನಲ್ಲಿರುವ ಬೀಟಾ ಕ್ಯಾರೊಟೆನೆ ಗಂಡಸರ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ.
ಪರಿಣತರ ಪ್ರಕಾರ ಚಳಿಗಾಲದ ಈ ತರಕಾರಿಯನ್ನು ವಾರದಲ್ಲಿ ಕನಿಷ್ಟ ಎರಡು ಬಾರಿಯಾದರು ತಿನ್ನಬೇಕು. ಇದು ನಿಮ್ಮನ್ನು ಎಲ್ಲರೀತಿಯ ಅನಾರೋಗ್ಯದ ಸಮಸ್ಯೆಗಳಿಂದ ಮತ್ತು ರೋಗಗಳಿಂದ ದೂರವಿಡುತ್ತದೆ. ಕ್ಯಾರೆಟ್ ನಿಂದ ಗಂಡಸರ ಆರೋಗ್ಯಕ್ಕೆ ಯಾವ ಪ್ರಯೋಜನಗಳಿವೆ ಎನ್ನುವುದನ್ನು ಕೆಳಗೆ ಕೊಡಲಾಗಿದೆ.

ಕ್ಯಾರೆಟ್ ನ ಈ ಪ್ರಯೋಜನಗಳನ್ನು ಗಂಡಸರು ತಿಳಿದರಿಬೇಕು. 30 ವರ್ಷ ಮೇಲ್ಪಟ್ಟ ಗಂಡಸರು ತಮ್ಮ ಡಯೆಟ್ ನಲ್ಲಿ ಇದನ್ನು ಬಳಸಬೇಕು. ಯಾಕೆಂದರೆ ಈ ವಯಸ್ಸಿನಲ್ಲಿಯೇ ಅಲ್ಲವೆ ಫ್ಯಾಮಿಲಿ ಪ್ಲಾನಿಂಗ್ ಬಗ್ಗೆ ಅವರು ಯೋಚಿಸುವುದು!

ರಕ್ತ ಶುದ್ಧಿಕರಣ

ರಕ್ತ ಶುದ್ಧಿಕರಣ

ಗಂಡಸರಿಗೂ ರಕ್ತಶುದ್ಧಿಯ ಅವಶ್ಯಕತೆಯಿರುತ್ತದೆ! ಕ್ಯಾರೆಟ್ ಅನ್ನು ರುಬ್ಬಿ ಜ್ಯೂಸ್ ಮಾಡಿಕೊಂಡು ಕುಡಿಯುವುದು ಒಳ್ಳೆಯದು.

ವೀರ್ಯಾಣುಗಳನ್ನು ಹೆಚ್ಚಿಸುತ್ತದೆ

ವೀರ್ಯಾಣುಗಳನ್ನು ಹೆಚ್ಚಿಸುತ್ತದೆ

ಕ್ಯಾರೆಟ್ ವೀರ್ಯಾಣುಗಳ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಮಗುವಿನ ಬಗ್ಗೆ ಯೋಚಿಸುತ್ತಿರುವಲ್ಲಿ ಅಂಡೋತ್ಪತ್ತಿಯ ಸಮಯದಲ್ಲಿ ಹಸಿ ಕ್ಯಾರೆಟ್ ತಿನ್ನುವುದು ಒಳ್ಳೆಯದು.

ಜೀರ್ಣಕ್ರಿಯೆ

ಜೀರ್ಣಕ್ರಿಯೆ

ಕ್ಯಾರೆಟ್ ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ಅಜೀರ್ಣತೆಯಿಂದ ಬಳಲುತ್ತಿರುವ ಗಂಡಸರು ಪ್ರತಿ ದಿನ ಎರಡು ಬಾರಿ ಕೆಂಪು ಕ್ಯಾರೆಟ್ ತಿನ್ನುವುದು ಒಳ್ಳೆಯದು.

ಹೊಟ್ಟೆಯ ಸಮಸ್ಯೆಗಳು

ಹೊಟ್ಟೆಯ ಸಮಸ್ಯೆಗಳು

ಕ್ಯಾರೆಟ್ ಗಳು ಹೊಟ್ಟೆಯ ಸಮಸ್ಯೆಗಳಿಗೆ ರಾಮಬಾಣವಿದ್ದಂತೆ. ನಿಮಗೆ ಗ್ಯಾಸ್ಟ್ರಿಕ್ ಸಮಸ್ಯೆಯಿದ್ದರೆ ಕ್ಯಾರೆಟ್ ಇದನ್ನು ಪರಿಹಾರಿಸುತ್ತದೆ.

ಕೊಲೆಸ್ಟ್ರಾಲ್

ಕೊಲೆಸ್ಟ್ರಾಲ್

ಕ್ಯಾರೆಟ್ ನ ಅತ್ಯುತ್ತಮ ಉಪಯೋಗವೆಂದರೆ ಇದು ಕೊಲೆಸ್ಟ್ರಾಲ್ ನ ಮಟ್ಟವನ್ನು ಕಡಿಮೆಗೊಳಿಸುತ್ತದೆ. ಪ್ರತಿ ರಾತ್ರಿ ಊಟದ ನಂತರ ಕ್ಯಾರೆಟ್ ಜ್ಯೂಸ್ ಕುಡಿಯುವುದು ಒಳ್ಳೆಯದು.

ಕಣ್ಣುಗಳಿಗೆ ಒಳ್ಳೆಯದು

ಕಣ್ಣುಗಳಿಗೆ ಒಳ್ಳೆಯದು

ಕಣ್ಣುಗಳ ಸಮಸ್ಯೆಯಿರುವ ಗಂಡಸರಿಗೆ ಇದು ಒಳ್ಳೆಯದು. ಅದರಲ್ಲೂ ಕ್ಯಾಟರ್ಯಾಕ್ಟ್ ಮತ್ತು ಲಾಂಗ್ ಸೈಟೆಡ್ ನೆಸ್ ಇರುವವರಿಗೆ ಇದು ಬಹಳ ಒಳ್ಳೆಯದು.

ಹೃದಯವನ್ನು ಕಾಪಾಡುತ್ತದೆ

ಹೃದಯವನ್ನು ಕಾಪಾಡುತ್ತದೆ

ಹೃದಯದ ಸಮಸ್ಯೆಗಳಿಂದ ದೂರವಿರಿಸುತ್ತದೆ ಮತ್ತು ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.

ಹಲ್ಲುಗಳಿಗೆ ಒಳ್ಳೆಯದು

ಹಲ್ಲುಗಳಿಗೆ ಒಳ್ಳೆಯದು

ಕ್ಯಾರೆಟ್ ಎಲ್ಲ ರೀತಿಯ ದಂತ ಸಮಸ್ಯೆಗಳಿಂದ ದೂರವುಳಿಸುತ್ತದೆ. ಪರಿಣತರ ಪ್ರಕಾರ ಕ್ಯಾರೆಟ್ ಒಸಡಿನ ರೋಗ ಗುಣಪಡಿಸುತ್ತದೆ ಮತ್ತು ದುರ್ವಾಸನೆಯನ್ನು ತಡೆಗಟ್ಟುತ್ತದೆ.

ಸಂಧಿವಾತ

ಸಂಧಿವಾತ

ಒಂದು ವಯಸ್ಸಿನ ನಂತರ ಇದು ಗಂಡಸರು ಮತ್ತು ಹೆಂಗಸರಲ್ಲಿ ಸಾಮಾನ್ಯವಾದ ಸಮಸ್ಯೆ. ದಿನವೂ ಕ್ಯಾರೆಟ್ ತಿನ್ನುವುದರಿಂದ ಈ ಸಮಸ್ಯೆಯಿಂದ ದೂರವುಳಿಯಬಹುದು. ಇದರಲ್ಲಿ ವಿಟಮಿನ್ ಸಿಯಿದ್ದು ನಿಮ್ಮ ಮೂಳೆಗಳನ್ನು ಬಲಪಡಿಸುತ್ತದೆ.

ಕ್ಯಾನ್ಸರ್ ತಡೆಗಟ್ಟುತ್ತದೆ

ಕ್ಯಾನ್ಸರ್ ತಡೆಗಟ್ಟುತ್ತದೆ

ಕ್ಯಾನ್ಸರ್ ಇತ್ತೀಚೆಗೆ ನಮ್ಮ ಸಮಾಜದಲ್ಲಿ ಹೆಚ್ಚುತ್ತಿರುವ ಸಮಸ್ಯೆ. ಪ್ರತಿ ದಿನ ಕ್ಯಾರೆಟ್ ತಿನ್ನುವುದರಿಂದ ಈ ಸಮಸ್ಯೆಯಿಂದ ದೂರವುಳಿಯಬಹುದು.

ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ

ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ

ನಿಮ್ಮಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಿದ್ದರೆ ಬಹಳ ಬೇಗ ರೋಗಗಳಿಗೆ ತುತ್ತಾಗುವಿರಿ. ಕ್ಯಾರೆಟ್ ಗಳ ಸೇವನೆಯಿಂದ ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಮತ್ತು ಇವು ನಿಮ್ಮನ್ನು ಆರೋಗ್ಯವಾಗಿರಿಸುತ್ತದೆ.

ಮಧುಮೇಹ

ಮಧುಮೇಹ

ಮಧುಮೇಹವಿರುವವರು ಹಸಿ ಕ್ಯಾರೆಟ್ ತಿನ್ನುವುದರಿಂದ ತಮ್ಮ ರಕ್ತದಲ್ಲಿ ಇನ್ಸುಲಿನ್ ಮಟ್ಟವನ್ನು ಕಾಪಾಡಿಕೊಳ್ಳಬಹುದು.

ಮಲಬದ್ಧತೆ

ಮಲಬದ್ಧತೆ

ಮಲಬದ್ಧತೆಯ ಸಮಸ್ಯೆಯಿದ್ದು ಮಲವಿಸರ್ಜನೆಯಲ್ಲಿ ನೋವು ಮತ್ತು ಹೊಟ್ಟೆ ಹಿಂಡಿದಂತಾಗುವ ಸಮಸ್ಯೆಯಿಂದ ಕ್ಯಾರೆಟ್ ನಿಮ್ಮನ್ನು ಪಾರುಮಾಡುತ್ತದೆ.

ರಕ್ತದೊತ್ತಡ

ರಕ್ತದೊತ್ತಡ

ಕ್ಯಾರೆಟ್ ನಲ್ಲಿ ಪೊಟ್ಯಾಶಿಯಂ ಇರುತ್ತದೆ. ಇದು ರಕ್ತದೊತ್ತಡಕ್ಕೆ ಕಾರಣವಾಗುವ ಸೋಡಿಯಂನ ಮಟ್ಟವನ್ನು ನಿಯಂತ್ರಿಸುವಲ್ಲಿ ಸಹಕಾರಿ.

English summary

Health Benefits Of Carrots For Men

Did you know there are more than a million reasons why men should definitely eat a carrot a day instead of an apple. The health benefits of carrots for men is much more essential than other vegetables that are available in the market.
Story first published: Friday, December 6, 2013, 10:58 [IST]
X
Desktop Bottom Promotion