For Quick Alerts
ALLOW NOTIFICATIONS  
For Daily Alerts

ನೋಡಿ, ಹೀಗೆಲ್ಲಾ ಸಮಸ್ಯೆಗಳು ಕಂಡುಬಂದರೆ-ಕಿಡ್ನಿ ಸಮಸ್ಯೆವಿದೆ ಎಂದರ್ಥ!

By Jaya Subramanya
|

ನಮ್ಮ ದೇಹದ ಪ್ರತಿಯೊಂದು ಅಂಗಗಳೂ ಸರಿಯಾಗಿ ಕಾರ್ಯನಿರ್ವಹಿಸಿದಲ್ಲಿ ಮಾತ್ರವೇ ನಾವು ಆರೋಗ್ಯವಾಗಿರಲು ಸಾಧ್ಯ. ಅಂತೆಯೇ ದೇಹದ ಅಂಗಗಳಿಗೆ ಉಂಟಾಗುವ ಹಾನಿಯು ನಮ್ಮನ್ನು ದುರ್ಬಲರನ್ನಾಗಿಸುವ ಸಾಧ್ಯತೆ ಇದೆ ಜೊತೆಗೆ ನಮ್ಮನ್ನು ಸಾಯುವವರೆಗೆ ಪೀಡಿಸುತ್ತಲೇ ಇರುತ್ತದೆ. ಯಾವುದರಲ್ಲೂ ನಮಗೆ ಆಸಕ್ತಿ ಇಲ್ಲದಂತೆ ಈ ಅಂಗಗಳ ಹಾನಿ ದುಷ್ಪರಿಣಾಮವನ್ನು ಮಾಡಿಬಿಡುತ್ತದೆ. ಕಿಡ್ನಿ ಕಲ್ಲುಗಳನ್ನು ಹೊರಹಾಕುವ ಹಳ್ಳಿಗಾಡಿನ ಮನೆಮದ್ದು!

ಇಂದಿನ ಲೇಖನದಲ್ಲಿ ನಮ್ಮ ದೇಹದ ಪ್ರಮುಖ ಅಂಗೆವೆನಿಸಿರುವ ಕಿಡ್ನಿಗೆ ಉಂಟಾಗುವ ಹಾನಿಯ ಕುರಿತು ಚರ್ಚಿಸಲಿದ್ದೇವೆ. ಕಿಡ್ನಿ ವಿಫಲತೆಯ ಲಕ್ಷಣಗಳೇನು ಮತ್ತು ಈ ಲಕ್ಷಣಗಳು ಪ್ರಾರಂಭಗೊಳ್ಳುತ್ತಿದ್ದಂತೆ ನಾವು ಕೈಗೊಳ್ಳಬೇಕಾದ ಕ್ರಮಗಳೇನು ಎಂಬುದನ್ನು ಇಂದಿಲ್ಲಿ ತಿಳಿದುಕೊಳ್ಳೋಣ. ಬೀನ್ಸ್ ಆಕಾರದಲ್ಲಿ ಈ ಕಿಡ್ನಿಯು ನಮ್ಮ ದೇಹದಲ್ಲಿದ್ದು ರಕ್ತದಲ್ಲಿರುವ ವಿಷಕಾರಿ ಅಂಶಗಳನ್ನು ನಿವಾರಿಸಿ ರಕ್ತಪೂರೈಕೆಯನ್ನು ಮಾಡುವುದಾಗಿದೆ. ಕಿಡ್ನಿ ಕಲ್ಲುಗಳು- ಪ್ರತಿಯೊಬ್ಬರೂ ತಿಳಿಯಬೇಕಾದ ಸತ್ಯಸಂಗತಿಗಳು

ದೇಹದಲ್ಲಿರುವ ನೀರಿನ ನಿಯಂತ್ರಣವನ್ನು ಇದು ಮಾಡುತ್ತದೆ. ಹೆಚ್ಚುವರಿ ಕೊಲೆಸ್ಟ್ರಾಲ್ ಮತ್ತು ಕೊಬ್ಬಿರುವ ಆಹಾರ ಪದಾರ್ಥಗಳ ಸೇವನೆ ಕೂಡ ಕಿಡ್ನಿಗೆ ಮಾರಕವಾಗಬಹುದು. ಹಾಗಿದ್ದರೆ ನಿಮ್ಮ ಕಿಡ್ನಿ ಅಪಾಯದಲ್ಲಿದೆ ಎಂಬುದನ್ನು ಕಂಡುಕೊಳ್ಳುವ ಬಗೆ ಹೇಗೆ ಬನ್ನಿ ತಿಳಿದುಕೊಳ್ಳಿ....

 ತುರಿಕೆ ಮತ್ತು ಒಣ ಚರ್ಮ

ತುರಿಕೆ ಮತ್ತು ಒಣ ಚರ್ಮ

ದೇಹದಲ್ಲಿ ವಿಷಕಾರಿ ಅಂಶಗಳನ್ನು ಹೊರಹಾಕುವಲ್ಲಿ ಕಿಡ್ನಿ ಸಹಾಯ ಮಾಡುತ್ತದೆ. ಕೆಂಪು ರಕ್ತ ಕಣಗಳನ್ನು ಆರೋಗ್ಯಕರವಾಗಿಸುವ ಕಿಡ್ನಿ ಸರಿಯಾದ ಪೋಷಕಾಂಶಗಳನ್ನು ದೇಹದಲ್ಲಿ ಕಾಪಾಡುತ್ತದೆ ಖನಿಜಗಳನ್ನು ಸಮತೋಲನ ಮಾಡುತ್ತದೆ. ಖನಿಜಗಳ, ಪೋಷಕಾಂಶಗಳ ಅಸಮತೋಲನ ಮತ್ತು ರಕ್ತದಲ್ಲಿ ಹೆಚ್ಚು ತ್ಯಾಜ್ಯ ಸಂಗ್ರಹವಾದಾಗ ಇದು ಒಣ ಮತ್ತು ತುರಿಕೆ ಇರುವ ತ್ವಚೆಗೆ ಕಾರಣವಾಗುತ್ತದೆ. ಇದು ತ್ವಚೆಯ ಸೋಂಕುಗಳು ಮತ್ತು ಅಲರ್ಜಿಗೆ ಕಾರಣವಾಗುತ್ತದೆ. ಅಂತೆಯೇ ಕಿಡ್ನಿ ವೈಫಲ್ಯದ ಇತರ ಲಕ್ಷಣಗಳಾದ ಆಗಾಗ್ಗೆ ಮೂತ್ರ ವಿಸರ್ಜನೆ, ಬಾವು ಇದರ ಜೊತೆಗೆ ಉಂಟಾಗುತ್ತಿದೆ ಎಂದಾದಲ್ಲಿ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ.

ಆಯಾಸ

ಆಯಾಸ

ದೇಹಕ್ಕೆ ಆಮ್ಲಜನಕವನ್ನು ಪೂರೈಸುವ ಕೆಂಪು ರಕ್ತ ಕೋಶಗಳ ಉತ್ಪಾದನೆಗೆ ಜವಾಬ್ದಾರಿಯಗಿರುವ ಅರಿತ್ರೊಪೊಯಿಟಿನ್ ಹಾರ್ಮೋನ್‌ನ ಉತ್ಪಾದನೆಯನ್ನು ಕಿಡ್ನಿಗಳು ಮಾಡುತ್ತವೆ. ಕಿಡ್ನಿಯು ಈ ರೀತಿಯ ಕಾರ್ಯನಿರ್ವಹಣೆಯನ್ನು ನಿಲ್ಲಿಸಿದಾಗ ಆಯಾಸ ನಮ್ಮನ್ನು ಕಾಡುತ್ತದೆ. ಕಿಡ್ನಿ ಕಲ್ಲಿನ ಸಮಸ್ಯೆಗೆ ಗಿಡಮೂಲಿಕೆಗಳ ನಲ್ಮೆಯ ಆರೈಕೆ

ಉಸಿರಾಟ ತೊಂದರೆ

ಉಸಿರಾಟ ತೊಂದರೆ

ದ್ರವದಲ್ಲಿರುವ ತ್ಯಾಜ್ಯ ವಸ್ತುಗಳು ಶ್ವಾಸಕೋಶದಲ್ಲಿ ಸಂಗ್ರಹಗೊಂಡಾಗ, ದೇಹಕ್ಕೆ ಪೂರೈಕೆಯಾಗುವ ಆಮ್ಲಜನಕದ ಮೇಲೆ ಪರಿಣಾಮ ಬೀರುತ್ತದೆ. ಇದಕ್ಕೆಲ್ಲಾ ಕಾರಣ ಕಿಡ್ನಿಯಲ್ಲಿ ಕಂಡುಬರುವ ಸಮಸ್ಯೆ!

ಕೈಗಳು ಮತ್ತು ಪಾದಗಳ ಊದುವಿಕೆ

ಕೈಗಳು ಮತ್ತು ಪಾದಗಳ ಊದುವಿಕೆ

ದೇಹದಲ್ಲಿರುವ ದ್ರವವನ್ನು ಫಿಲ್ಟರ್ ಮಾಡುವಲ್ಲಿ ಕಿಡ್ನಿಯು ವಿಫಲಗೊಂಡಾಗ ದ್ರವವು ದೇಹದಲ್ಲಿ ಶೇಖರಗೊಂಡು ಪಾದಗಳು ಮತ್ತು ಕೈಗಳು ಊದುವಂತೆ ಮಾಡುತ್ತದೆ. ಅಂತೆಯೇ ದೇಹದ ಇತರ ಭಾಗದ ಮೇಲೂ ಇದು ಹಾನಿಯನ್ನು ಮಾಡಬಲ್ಲುದು.

ಮೂತ್ರದ ಸಮಸ್ಯೆ

ಮೂತ್ರದ ಸಮಸ್ಯೆ

ಕಿಡ್ನಿಯು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದಾಗ ಮೂತ್ರದ ಬಣ್ಣವನ್ನು ನೀವು ಪರಿಶೀಲನೆ ನಡೆಸಬೇಕಾಗುತ್ತದೆ. ನಿಮ್ಮ ಮೂತ್ರವು ಗಾಢ ವರ್ಣಕ್ಕೆ ತಿರುಗಿದೆ ಎಂದಾದಲ್ಲಿ ಕಿಡ್ನಿ ಸಮಸ್ಯೆ ಇದೆ ಎಂದಾಗಿದೆ.

ಹಸಿವು ಇಲ್ಲದಿರುವುದು

ಹಸಿವು ಇಲ್ಲದಿರುವುದು

ದೇಹದಲ್ಲಿರುವ ತ್ಯಾಜ್ಯಗಳನ್ನು ಕಿಡ್ನಿಯು ಫಿಲ್ಟರ್ ಮಾಡುವಲ್ಲಿ ವಿಫಲಗೊಂಡಾಗ ನಿಮಗೆ ಹಸಿವು ಕಾಣಿಸುವುದಿಲ್ಲ. ಅಂತೆಯೇ ಬಾಯಿಯಲ್ಲಿ ಕೆಟ್ಟ ವಾಸನೆ ಬರುತ್ತದೆ.

ತ್ವಚೆಯ ಉರಿ ಮತ್ತು ಒಣಗುವಿಕೆ

ತ್ವಚೆಯ ಉರಿ ಮತ್ತು ಒಣಗುವಿಕೆ

ದೇಹದಿಂದ ತ್ಯಾಜ್ಯ ವಸ್ತುಗಳು ಮತ್ತು ದ್ರವವನ್ನು ಹೊರಹಾಕುವಲ್ಲಿ ಕಿಡ್ನಿಯು ವಿಫಲಗೊಂಡಾಗ ಇದರಿಂದ ತ್ವಚೆಯಲ್ಲಿ ಹಲವಾರು ತೊಂದರೆಗಳು ಉಂಟಾಗುತ್ತದೆ. ತುರಿಕೆ ಮತ್ತು ಒಣಚರ್ಮ ನಿಮ್ಮದಾಗಿರುತ್ತದೆ.

English summary

If Your Kidney Is In Danger, Your Body Will Show These Signs

Keeping a check on the food that we eat is very important to keep the kidneys healthy. Consuming foods containing high cholesterol and fat are just one of the food types that can affect the kidneys. So here is a list of signs that show your kidney is in danger. Take a look.
X
Desktop Bottom Promotion