ಕಿಡ್ನಿ ಕಲ್ಲುಗಳನ್ನು ಹೊರಹಾಕುವ ಹಳ್ಳಿಗಾಡಿನ ಮನೆಮದ್ದು!

By: Hemanth
Subscribe to Boldsky

ದೇಹದ ಪ್ರಮುಖ ಅಂಗವಾಗಿರುವ ಕಿಡ್ನಿಯು ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕಿ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಆದರೆ ಕಿಡ್ನಿಯ ಕಾರ್ಯಚಟುವಟಿಕೆಗಳಿಗೆ ತೊಂದರೆ ಉಂಟುಮಾಡುವುದೆಂದರೆ ಅದು ಕಿಡ್ನಿಯ ಕಲ್ಲುಗಳು. ಕಿಡ್ನಿಯಲ್ಲಿ ಕಲ್ಲುಗಳ ನಿರ್ಮಾಣವಾದರೆ ಅದು ದೇಹಕ್ಕೂ ತೀವ್ರವಾದ ನೋವನ್ನು ನೀಡುವುದು.  

Kidney
 

ಕಿಡ್ನಿ ಕಲ್ಲುಗಳನ್ನು ತುಂಬಾ ಪರಿಣಾಮಕಾರಿಯಾಗಿ ತೆಗೆದುಹಾಕುವಂತಹ ಅನಾದಿ ಕಾಲದ ಮನೆಮದ್ದಿನ ಬಗ್ಗೆ ಇಂದಿನ ಲೇಖನದಲ್ಲಿ, ನಿಮಗೆ ಪ್ರಸ್ತುತಪಡಿಸುತ್ತೇವೆ.... ಸಾಮಾನ್ಯವಾಗಿ ಕಿಡ್ನಿಯು ನೈಸರ್ಗಿಕವಾಗಿ ಮೂತ್ರದ ಪಿಎಚ್ ಮಟ್ಟವನ್ನು ಕಾಪಾಡುವುದರಿಂದ ಕಿಡ್ನಿಯನ್ನು ಆರೋಗ್ಯಕಾರಿ ಹಾಗೂ ಸುರಕ್ಷಿತವಾಗಿಡುವುದು ತುಂಬಾ ಮುಖ್ಯವಾಗಿದೆ.   ಕಿಡ್ನಿ ಕಲ್ಲು ಕರಗಿಸುವ, ಹಿತ್ತಲ ಗಿಡದ ಮದ್ದು

ಕಿಡ್ನಿ ತುಂಬಾ ದುರ್ಬಲವಾದಾಗ ಅದು ದೇಹದಲ್ಲಿನ ಕಲ್ಮಶವನ್ನು ಹೊರಹಾಕಲು ವಿಫಲವಾಗುತ್ತದೆ. ಇದರಿಂದ ಕಿಡ್ನಿಯಲ್ಲಿ ಕಲ್ಮಶವು ತುಂಬಿಕೊಂಡು ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಕಿಡ್ನಿಯಲ್ಲಿ ಕಲ್ಮಶವು ತುಂಬುವುದರಿಂದ ಕಿಡ್ನಿಯಲ್ಲಿ ಕಲ್ಲುಗಳು ನಿರ್ಮಾಣವಾಗುವುದು. ಕಿಡ್ನಿಯಲ್ಲಿರುವ ಕಲ್ಲುಗಳನ್ನು ನೈಸರ್ಗಿಕವಾಗಿ ಹೊರಹಾಕಲು ಬಯಸುವಿರಾದರೆ 300 ವರ್ಷಕ್ಕೂ ಹಳೆದಾದ ಈ ಮನೆಮದ್ದನ್ನು ಪ್ರಯತ್ನಿಸಿ ನೋಡಿ... 

Lime
 

ಮನೆಮದ್ದು ತಯಾರಿಸಲು ಬೇಕಾಗುವ ಸಾಮಗ್ರಿಗಳು

*ಲಿಂಬೆರಸ 2 ಚಮಚ

*ಆಲಿವ್ ತೈಲ 1 ಚಮಚ

*ದಾಳಿಂಬೆ ಜ್ಯೂಸ್ ½ ಕಪ್

ಈ ಮನೆಮದ್ದು ಕಿಡ್ನಿಯ ಕಲ್ಲುಗಳನ್ನು ಕಡಿಮೆ ಮಾಡಿ ಬಳಿಕ ಅದು ಹೊರಹೋಗುವಂತೆ ಮಾಡುವುದು. ಇದರಿಂದ ನಿಮಗೆ ಯಾವುದೇ ಶಸ್ತ್ರಚಿಕಿತ್ಸೆ ಮಾಡಬೇಕೆಂದಿಲ್ಲ.

ಅಸಿಡಿಟಿ ಉಂಟುಮಾಡಲು ಆಹಾರದಿಂದ ದೂರವಿರಬೇಕು ಮತ್ತು ದೇಹಕ್ಕೆ ಹೆಚ್ಚು ನೀರಿನಾಂಶವನ್ನು ನೀಡಬೇಕು. ಕಿಡ್ನಿಯಲ್ಲಿ ಕಲ್ಲುಗಳು ಇದ್ದಾಗ ಆಗಾಗ ವೈದ್ಯರನ್ನು ಭೇಟಿಯಾಗುವುದು ತುಂಬಾ ಅಗತ್ಯ. 

pomogranate
 

ಲಿಂಬೆರಸ, ದಾಳಿಂಬೆ ಜ್ಯೂಸ್ ಮತ್ತು ಆಲಿವ್ ತೈಲದ ಮಿಶ್ರಣವು ರಕ್ತನಾಳಗಳ ಮೂಲಕ ಕಿಡ್ನಿಯನ್ನು ತಲುಪುವುದು. ಇದು ಕಿಡ್ನಿಯಲ್ಲಿರುವ ಕಲ್ಮಶ ಮತ್ತು ವಿಷಕಾರಿ ಅಂಶಗಳನ್ನು ತುಂಬಾ ಪರಿಣಾಮಕಾರಿಯಾಗಿ ಹೊರಹಾಕುವುದು.

ಇದರಲ್ಲಿರುವ ಆಮ್ಲೀಯ ಗುಣವು ನೈಸರ್ಗಿಕವಾಗಿ ಕಿಡ್ನಿಯಿಂದ ಕಲ್ಲುಗಳನ್ನು ಸಣ್ಣದು ಮಾಡಿ ಅಂತಿಮವಾಗಿ ಮೂತ್ರದ ಮೂಲಕವಾಗಿ ಇದನ್ನು ಹೊರಹಾಕುವುದು.       ಮನೆ ಔಷಧ: ಕಿಡ್ನಿ ಕಲ್ಲಿನ ಸಮಸ್ಯೆಗೆ ಶಾಶ್ವತ ಪರಿಹಾರ    

Olive oil
 

ಮನೆಮದ್ದು ತಯಾರಿಸುವ ಹಾಗೂ ಬಳಸುವ ವಿಧಾನ

*ಒಂದು ಕಪ್‌ಗೆ ಹೇಳಿದಷ್ಟು ಪ್ರಮಾಣದ ಸಾಮಗ್ರಿಗಳನ್ನು ಹಾಕಿಕೊಳ್ಳಿ.

*ಇದನ್ನು ಸರಿಯಾಗಿ ಮಿಶ್ರಣ ಮಾಡಿ.

*ಮನೆಮದ್ದು ಈಗ ಸೇವಿಸಲು ಸಜ್ಜಾಗಿದೆ.

*ಉತ್ತಮ ಫಲಿತಾಂಶವನ್ನು ಪಡೆಯಲು ಪ್ರತೀ ದಿನ ಉಪಹಾರಕ್ಕೆ ಮೊದಲು ಇದನ್ನು ಸೇವಿಸಿ.

 ಸೂಚನೆ: ಈ ಮನೆಮದ್ದನ್ನು ಪ್ರಯತ್ನಿಸುವ ಮೊದಲು, ಒಮ್ಮೆ ವೈದ್ಯರ ಸಲಹೆಯನ್ನೂ ಪಡೆದುಕೊಳ್ಳಿ

English summary

Ancient home remedy to remove kidney stones

Kidneys are organs located at the back of your pelvis and they carry on important functions like eliminating the waste from your body in the form of urine. Also, maintaining the natural pH balance of the urine is another function of the kidneys. So, one must make sure that they take all the measures to keep their kidneys healthy and safe.
Story first published: Friday, December 16, 2016, 23:37 [IST]
Please Wait while comments are loading...
Subscribe Newsletter