For Quick Alerts
ALLOW NOTIFICATIONS  
For Daily Alerts

ಧೂಮಪಾನ ಬಿಟ್ಟರೆ-ಶ್ವಾಸಕೋಶದ ಕ್ಯಾನ್ಸರ್ ಬಲು ದೂರ!

By Hemanth
|

ಕ್ಯಾನ್ಸರ್ ಎನ್ನುವ ಮಹಾಮಾರಿ ಹಲವಾರು ಜೀವಗಳನ್ನು ಬಲಿ ತೆಗೆದುಕೊಂಡಿದೆ. ಕ್ಯಾನ್ಸರ್‌ಗೆ ಚಿಕಿತ್ಸೆಯಿದ್ದರೂ ಅದನ್ನು ಪತ್ತೆ ಹಚ್ಚುವಾಗ ವಿಳಂಬವಾದರೆ ಅಥವಾ ಬಡವರನ್ನು ಇದು ಕಾಡಿದರೆ ಆಗ ಪ್ರಾಣಬಲಿ ಖಚಿತ. ಹೆಚ್ಚಿನ ಸಂದರ್ಭದಲ್ಲಿ ಹಣದ ಕೊರತೆಯಿಂದಾಗಿ ಬಡವರು ಪ್ರಾಣ ಕಳಕೊಳ್ಳಬೇಕಾಗುತ್ತದೆ. ಆದರೆ ಮೊದಲ ಹಂತದಲ್ಲಿಯೇ ಕ್ಯಾನ್ಸರ್ ಅನ್ನು ಪತ್ತೆ ಹಚ್ಚಿದರೆ ಚಿಕಿತ್ಸೆ ಸಾಧ್ಯವಾಗುತ್ತದೆ. ಶ್ವಾಸಕೋಶದ ಕ್ಯಾನ್ಸರ್-ನೀವು ತಿಳಿಯಲೇ ಬೇಕಾದ ಸತ್ಯಾಸತ್ಯತೆ

ಕ್ಯಾನ್ಸರ್ ಅನ್ನು ಮೆಟ್ಟಿ ನಿಂತು ಸಾಧನೆ ಮಾಡಿದಂತಹ ಕ್ರಿಕೆಟಿಗ ಯುವರಾಜ್ ಸಿಂಗ್, ಸೈಕ್ಲಿಸ್ಟ್ ಲ್ಯಾನ್ಸ್ ಆರ್ಮ್ ಸ್ಟ್ರಾಂಗ್, ಬಾಲಿವುಡ್ ನಟಿ ಲೀಸಾ ರೇ ಮೊದಲಾದವರು ನಮ್ಮ ಮುಂದಿದ್ದಾರೆ. ನಮ್ಮ ಜೀವನಶೈಲಿಯಿಂದಾಗಿಯೇ ಕೆಲವೊಂದು ಕ್ಯಾನ್ಸರ್ ಗಳು ಬರುತ್ತದೆ.

ಇದರಲ್ಲಿ ಧೂಮಪಾನದಿಂದ ಬರುವಂತಹ ಶ್ವಾಸಕೋಶದ ಕ್ಯಾನ್ಸರ್. ಆದರೆ ಧೂಮಪಾನ ಮಾಡದವರಿಗೂ ಶ್ವಾಸಕೋಶದ ಕ್ಯಾನ್ಸರ್ ಬರುತ್ತದೆ ಎಂದು ನೀವು ಪ್ರಶ್ನಿಸಿದರೆ ಇದು ಸರಿ. ಯಾಕೆಂದರೆ ಇಂದಿನ ಕಲುಷಿತ ವಾತಾವರಣದಲ್ಲಿ ಪ್ರತಿಯೊಂದು ವಿಷವೂ ನಮ್ಮ ದೇಹದೊಳಗೆ ಸೇರಿಕೊಳ್ಳುವ ಕಾರಣದಿಂದ ಶ್ವಾಸಕೋಶದ ಕ್ಯಾನ್ಸರ್ ಬರಬಹುದು. ಶ್ವಾಸಕೋಶದ ಕ್ಯಾನ್ಸರ್‌ನ ಆರಂಭಿಕ ಲಕ್ಷಣಗಳು

ಆದರೆ ಧೂಮಪಾನಿಗಳಿಗೆ ಶ್ವಾಸಕೋಶದ ಕ್ಯಾನ್ಸರ್, ಬರುವ ಸಾಧ್ಯತೆ ಹೆಚ್ಚು. ಹಾಗಾಗಿ ಕ್ಯಾನ್ಸರ್ ಬರದಂತೆ ತಡೆದರೆ ತುಂಬಾ ಒಳ್ಳೆಯದು. ಶ್ವಾಸಕೋಶದ ಕ್ಯಾನ್ಸರ್‌ನ ಅಪಾಯಗಳು ಮತ್ತು ಅದನ್ನು ತಡೆಗಟ್ಟುವುದು ಹೇಗೆ ಎಂದು ತಿಳಿಯಲು ಬೋಲ್ಡ್ ಸ್ಕೈ ನಿಮಗೆ ನೆರವಾಗಲಿದೆ. ಈ ಲೇಖನ ಓದುತ್ತಾ ಸಾಗಿ....

ಶ್ವಾಸಕೋಶದ ಕ್ಯಾನ್ಸರ್‌ಗೆ ಧೂಮಪಾನವೇ ಕಾರಣ

ಶ್ವಾಸಕೋಶದ ಕ್ಯಾನ್ಸರ್‌ಗೆ ಧೂಮಪಾನವೇ ಕಾರಣ

ಶೇಕಡಾ 250ರಷ್ಟು ಶ್ವಾಸಕೋಶದ ಕ್ಯಾನ್ಸರ್ ಬರುವ ಸಾಧ್ಯತೆ ಇರುವುದು ಧೂಮಪಾನದಿಂದಾಗಿ. ನೀವು ಧೂಮಪಾನ ಮಾಡುತ್ತಾ ಇದ್ದರೆ ಶ್ವಾಸಕೋಶದ ಕ್ಯಾನ್ಸರ್‌ನ ಅಪಾಯ ಹೆಚ್ಚು.

ಕಲುಷಿತ ವಾತಾವರಣ

ಕಲುಷಿತ ವಾತಾವರಣ

ಕಲುಷಿತ ವಾತಾವರಣದಲ್ಲಿ ವಾಸವಾಗಿರುವುದು ಮತ್ತೊಂದು ಕಾರಣವಾಗಿದೆ. ನೀವು ವಾಸಿಸುವಂತಹ ಪ್ರದೇಶದಲ್ಲಿ ಗಾಳಿಯಲ್ಲಿ ಹೊಗೆಯು ಹೆಚ್ಚಾಗಿದ್ದರೆ ಆಗ ಶ್ವಾಸಕೋಶದ ಕ್ಯಾನ್ಸರ್ ಬರುವ ಸಾಧ್ಯತೆ ಇದೆ.

ಮದ್ಯಪಾನ ತ್ಯಜಿಸಿ

ಮದ್ಯಪಾನ ತ್ಯಜಿಸಿ

ಮದ್ಯಪಾನದ ಮೂಲಕ ಕೇವಲ ಯಕೃತ್ ಮಾತ್ರವಲ್ಲ ಶ್ವಾಸಕೋಶವೂ ಹಾಳಾಗುತ್ತದೆ. ಶ್ವಾಸಕೋಶದ ಕ್ಯಾನ್ಸರ್ ಎದುರಾಗಿರುವವರಲ್ಲಿ ಧೂಮಪಾನಿಗಳಾರದೇ ಕೇವಲ ಹೆಚ್ಚಿನ ಮದ್ಯ ಸೇವಿಸುವ ಅಭ್ಯಾಸದವರೂ ಇರುವುದು ಈ ಸಾಧ್ಯತೆಗೆ ಪುಷ್ಟಿ ನೀಡಿದೆ.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಶ್ವಾಸಕೋಶದ ಕ್ಯಾನ್ಸರ್ ಬರದಂತೆ ತಡೆಯಲು ಹಸಿ ಬೆಳ್ಳುಳ್ಳಿ ಅತೀ ಪರಿಣಾಮಕಾರಿ ವಿಧಾನವಾಗಿದೆ. ವಾರದಲ್ಲಿ ಮೂರು ದಿನವಾದರೂ ಹಸಿ ಬೆಳ್ಳುಳ್ಳಿಯನ್ನು (ಬರೀ ಒಂದು ಎಸಳು ಖಾಲಿ ಹೊಟ್ಟೆಗೆ) ತಿಂದರೆ ಶ್ವಾಸಕೋಶದ ಕ್ಯಾನ್ಸರ್ ಬರುವ ಸಾಧ್ಯತೆ ಶೇ. 42ರಷ್ಟು ಕಡಿಮೆಯಾಗುತ್ತದೆ ಎಂದು ಸಂಶೋಧನೆಯಲ್ಲಿ ತಿಳಿಸಲಾಗಿದೆ. ಈ ಮನೆಮದ್ದನ್ನು ಪ್ರಯತ್ನಿಸುವ ಮೊದಲು ವೈದ್ಯರನ್ನು ಬೇಟಿ ಮಾಡಿ

ಬೆಳ್ಳುಳ್ಳಿ ಬಹಳ ಒಳ್ಳೆಯದು....

ಬೆಳ್ಳುಳ್ಳಿ ಬಹಳ ಒಳ್ಳೆಯದು....

ಧೂಮಪಾನಿಯಾಗಿದ್ದು, ಹಸಿ ಬೆಳ್ಳುಳ್ಳಿ ತಿನ್ನುತ್ತಾ ಇದ್ದರೆ ಶೇ.29ರಷ್ಟು ಕ್ಯಾನ್ಸರ್ ಬರುವ ಅಪಾಯ ತಪ್ಪಿಸಬಹುದು. ವ್ಯಾಯಾಮ ಮತ್ತು ಗ್ರೀನ್ ಟೀ ಗಿಂತ ಹೆಚ್ಚಾಗಿ ದಿನನಿತ್ಯ ಆಹಾರ-ಪದಾರ್ಥಗಳಲ್ಲಿ ಬೆಳ್ಳುಳ್ಳಿ ಸೇವಿಸಿ. ಬೆಳ್ಳುಳ್ಳಿಯಲ್ಲಿರುವ ಅಲಿಸಿನ್ ಮತ್ತು ಸಲ್ಫರ್ ಇದಕ್ಕೆ ಕಾರಣವಾಗಿದೆ. ಒಂದೆರಡು ಹಸಿ ಬೆಳ್ಳುಳ್ಳಿಯನ್ನು ಜಜ್ಜಿಕೊಂಡು ಎರಡು ನಿಮಿಷ ಕಾಲ ಹಾಗೆ ಬಿಡಿ. ತದನಂತರ ನಿಮ್ಮ ಆಹಾರ

ಪದಾರ್ಥಗಳಿಗೆ ಸೇರಿಸಿ... ಜಜ್ಜಿದ ಬೆಳ್ಳುಳ್ಳಿಯು ಹೆಚ್ಚು ಪರಿಣಾಮಕಾರಿಯಾಗಲು ಎರಡು ನಿಮಿಷ ಗಾಳಿಯಲ್ಲಿ ಬಿಡುವುದು ಅಗತ್ಯ.

ಗ್ರೀನ್ ಟೀ(ಹಸಿರು ಚಹಾ) ಸೇವನೆ

ಗ್ರೀನ್ ಟೀ(ಹಸಿರು ಚಹಾ) ಸೇವನೆ

ಗ್ರೀನ್ ಟೀ(ಹಸಿರು ಚಹಾ) ಸೇವನೆ ಮಾಡುವುದರಿಂದ ಕೂಡ ಶೇ.17ರಿಂದ 18ರಷ್ಟು ಅಪಾಯವನ್ನು ತಪ್ಪಿಸಬಹುದು. ನೆನಪಿಡಿ ದಿನನಿತ್ಯ ವ್ಯಾಯಮ ಮಾಡಿಕೊಂಡು ಗ್ರೀನ್ ಟೀ ಕುಡಿಯಿರಿ.

ನಿಯಮಿತವಾಗಿ ವ್ಯಾಯಾಮ

ನಿಯಮಿತವಾಗಿ ವ್ಯಾಯಾಮ

ಅಪಾಯ ತಪ್ಪಿಸಲು ನೀವು ನಿಯಮಿತವಾಗಿ ವ್ಯಾಯಾಮ ಮಾಡುತ್ತಾ ಇರಬೇಕು. ಇದರಿಂದ ಕ್ಯಾನ್ಸರ್ ಬರುವ ಸಾಧ್ಯತೆಯನ್ನು ಶೇ.15ರಷ್ಟು ತಪ್ಪಿಸಬಹುದು.

English summary

How To Reduce The Risk Of Lung Cancer

Did you think that only smokers are at a risk of suffering lung cancer? Well, whether you smoke or not, you might be breathing in toxic fumes if you are living in a polluted city. And yes, smoking habit raises the risk at an alarming rate! And smokers raise the risk of passive smoke
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more