ಹದಿಹರೆಯದಲ್ಲಿ ಸ್ಥೂಲಕಾಯ-ಇದುವೇ ಕರುಳಿನ ಕ್ಯಾನ್ಸರ್‌ಗೆ ಮೂಲ!

Posted By: Deepu
Subscribe to Boldsky

ನಿಮ್ಮ ಮಕ್ಕಳು ಸಾಮಾನ್ಯಕ್ಕಿರುವುದಕ್ಕಿಂತಲೂ ಹೆಚ್ಚು ತೂಕವನ್ನು ಹೊಂದಿದ್ದಾರೆಯೇ? ಹಾಗಾದರೆ ಎಚ್ಚರಿಕೆ, ಇವರು ವಯಸ್ಕರಾದ ಬಳಿಕ ಕರುಳಿನ ಕ್ಯಾನ್ಸರ್ ಆವರಿಸುವ ಸಾಧ್ಯತೆ ಇತರರಿಗಿಂತ ಅತಿ ಹೆಚ್ಚಾಗಿರುತ್ತದೆ ಎಂದು ಸಂಶೋಧನೆಯೊಂದು ಎಚ್ಚರಿಸಿದೆ. ವಿಶೇಷವಾಗಿ ದೊಡ್ಡಕರುಳು ಹಾಗೂ ಮಲದ್ವಾರ (rectum) ನ ಕ್ಯಾನ್ಸರ್ ಆವರಿಸುವ ಸಾಧ್ಯತೆ ಅತಿ ಹೆಚ್ಚಾಗಿರುತ್ತದೆ. ಈ ಭಾಗದ ಕ್ಯಾನ್ಸರ್ ವಿಶ್ವದ ಎಲ್ಲಾ ಕ್ಯಾನ್ಸರ್‌ಗಳಲ್ಲಿ ಅತಿ ಹೆಚ್ಚು ಆವರಿಸುವ ಕಾಯಿಲೆಗಳಲ್ಲಿ ಮೂರನೆಯ ಸ್ಥಾನ ಪಡೆದಿದೆ.

Colon Cancer

ಈ ರೋಗ ಆವರಿಸಿದ ರೋಗಿಗಳ ಹಿನ್ನೆಲೆಯ ಅಂಕಿಅಂಶಗಳನ್ನು ಅಧ್ಯಯನಕ್ಕೆ ಒಳಪಡಿಸಿದ ಬಳಿಕ ಈ ವ್ಯಕ್ತಿಗಳು ಏಳು ವರ್ಷದ ಬಾಲಕರಿದ್ದಾಗ ಇವರ ಬಿಎಂಐ (ಬಾಡಿ ಮಾಸ್ ಇಂಡೆಕ್ಸ್ ಅಥವಾ ಎತ್ತರಕ್ಕೆ ಅನುಗುಣವಾಗಿರಬೇಕಾದ ತೂಕ) 17.88 kg/m2 ಕ್ಕೂ ಹೆಚ್ಚಿದ್ದು ಯುವಕರಾಗಿದ್ದಾಗ ಇವರ ಬಿಎಂಐ ಸಾಮಾನ್ಯ ಅಂದರೆ 25.0 kg/m2 ಕ್ಕೂ ಕಡಿಮೆ ಇದ್ದರೂ ಈ ವ್ಯಕ್ತಿಗಳು ಎಲ್ಲಾ ವಯಸ್ಸಿನಲ್ಲಿ ಸೂಕ್ತ ಬಿಎಂಐ ಹೊಂದಿದ್ದ ವ್ಯಕ್ತಿಗಳಿಗಿಂತ ಹೆಚ್ಚಿನ ಕರುಳಿನ ಕ್ಯಾನ್ಸರ್ ಆವರಿಸುವ ಸಾಧ್ಯತೆ ಹೊಂದಿರುವುದು ಕಂಡುಬಂದಿದೆ.  ಕ್ಯಾನ್ಸರ್‌ ರೋಗದ ಬೆಚ್ಚಿ ಬೀಳಿಸುವ ಗುಣಲಕ್ಷಣಗಳು

ಇನ್ನೊಂದು ಅರ್ಥದಲ್ಲಿ ಹೇಳಬೇಕೆಂದರೆ ಬಾಲಕರಾಗಿದ್ದಾಗ ಸ್ಥೂಲದೇಹ ಹೊಂದಿದ್ದು ಯುವಕರಾದ ಬಳಿಕ ತೆಳ್ಳಗಾದರೂ ಈ ವ್ಯಕ್ತಿಗಳು ನಡುವಯಸ್ಸು ದಾಟಿದ ಬಳಿಕ ಕರುಳಿನ ಕ್ಯಾನ್ಸರ್ ಹೊಂದುವ ಸಾಧ್ಯತೆ ಹೆಚ್ಚಿರುತ್ತದೆ. ಆದರೆ ಬಾಲಕರಾಗಿದ್ದಾಗಲೇ ತಮ್ಮ ತೂಕವನ್ನು ಸಾಮಾನ್ಯ ಮಟ್ಟಕ್ಕೆ ಇಳಿಸಿ ಯುವಕರಾದ ಬಳಿಕವೂ ಸೂಕ್ತ ತೂಕವನ್ನು ಕಾಪಾಡಿಕೊಂಡು ಹೋದವರಲ್ಲಿ ಸಹಾ ಕರುಳಿನ ಕ್ಯಾನ್ಸರ್ ಆವರಿಸುವ ಸಾಧ್ಯತೆ ಕಡಿಮೆಯಾಗಿರುತ್ತದೆ.

Colon Cancer

ಆದರೆ ಇಡಿಯ ಬಾಲ್ಯವನ್ನು ಸ್ಥೂಲಕಾಯದೊಂದಿಗೇ ಕಳೆದ ಬಾಲಕರಲ್ಲಿ ಈ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ಡೆನ್ಮಾರ್ಕ್‌ನ ಬಿಸ್ಪೆಜರ್ಗ್ ಅಂಡ್ ಫ್ರೆಡ್ರಿಕ್ಸ್ಬರ್ಗ್ ಆಸ್ಪತ್ರೆಯ ವೈದ್ಯರಾದ ಡಾ. ಬ್ರಿಟ್ ವ್ಯಾಂಗ್ ಜೆನ್ಸನ್ ರವರು ತಿಳಿಸಿದ್ದಾರೆ. ಆದರೆ, ಬಾಲ್ಯದಲ್ಲಿ ಸ್ಥೂಲಕಾಯರಾಗಿದ್ದು ಯವಕರ ಬಳಿಕವೂ ಸ್ಥೂಲಕಾಯವನ್ನು ಮುಂದುವರೆಸಿಕೊಂಡು ಹೋದ ವ್ಯಕ್ತಿಗಳಿಗೆ ಈ ಸಾಧ್ಯತೆ ಇನ್ನಷ್ಟು ಹೆಚ್ಚಿರುತ್ತದೆ.

ಆದ್ದರಿಂದ ಬಾಲ್ಯದಿಂದಲೇ ತೂಕವನ್ನು ನಿಯಂತ್ರಿಸಿಕೊಳ್ಳುವಂತೆ ನೋಡಿಕೊಳ್ಳುವುದು ತುಂಬಾ ಅಗತ್ಯವಾಗಿದೆ ಎಂದು ಜೆನ್ಸನ್ ರವರು ತಿಳಿಸುತ್ತಾರೆ. ಪೋರ್ಚುಗಲ್ ನಲ್ಲಿರುವ European Congress on Obesity (ECO) ಎಂಬ ಸಂಸ್ಥೆಗೆ ನೀಡಲಾಗಿರುವ ವರದಿಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲಾಗಿದೆ.  

ಶ್ವಾಸಕೋಶದ ಕ್ಯಾನ್ಸರ್-ನೀವು ತಿಳಿಯಲೇ ಬೇಕಾದ ಸತ್ಯಾಸತ್ಯತೆ

ಈ ವಿಷಯದ ಬಗ್ಗೆ ನಡೆಸಿದ ಅಧ್ಯಯನದಲ್ಲಿ ಡೆನ್ಮಾರ್ಕ್ ನಲ್ಲಿ 1939 ಮತ್ತು 1959ರ ನಡುವೆ ಜನಿಸಿದ 61,000 ವ್ಯಕ್ತಿಗಳ ಆರೋಗ್ಯದ ಅಂಕಿ ಅಂಶಗಳನ್ನು ಕಲೆಹಾಕಲಾಗಿತ್ತು. ಇದರ ಮೂಲಕ ಬಾಲ್ಯಾವಸ್ಥೆಯ ಬಿಎಂಬಿ ಮತ್ತು ನಡುವಯಸ್ಸು ದಾಟಿದ ಬಳಿಕ ಆವರಿಸಿದ ಕರುಳಿನ ಕ್ಯಾನ್ಸರ್ ಹೇಗೆ ಒಂದಕ್ಕೊಂದು ಪೂರಕವಾಗಿದೆ ಎಂಬುದನ್ನು ಸಾದರಪಡಿಸಲಾಗಿದೆ.

Overweight

ಈ ವ್ಯಕ್ತಿಗಳು ನಲವತ್ತು ವಯಸ್ಸು ದಾಟಿದ ಬಳಿಕ ನಿಯಮಿತವಾಗಿ ಇವರ ಆರೋಗ್ಯದ ಅಂಕಿ ಅಂಶಗಳನ್ನು ಕಲೆಹಾಕುತ್ತಾ ಬರಲಾಗಿದ್ದು ಈಗ ಕರುಳಿನ ಕ್ಯಾನ್ಸರ್‌ನ ಬಗ್ಗೆ ವಿವರಗಳು ದೃಢಪಟ್ಟಿದೆ. ಇದೇ ಪ್ರಕಾರ ಇನ್ನೂ ಯಾವ ಕಾಯಿಲೆಗಳು ಹಾಗೂ non-communicable diseases ಅಂದರೆ ಯಾವುದೇ ಸೋಂಕಿನಿಂದಲ್ಲದೇ ಅಥವಾ ಯಾರಿಂದಲೂ ಹರಡಲ್ಪಡದೇ ನಿಧಾನವಾಗಿ ಉಲ್ಬಣಗೊಳ್ಳುವ ಖಾಯಿಲೆಗಳ ಬಗ್ಗೆಯೂ ಸಂಶೋಧನೆಯನ್ನು ಮುಂದುವರೆಸಲಾಗುವುದು ಎಂದು ಜೆನ್ಸನ್ ರವರು ತಿಳಿಸಿದ್ದಾರೆ. 

ಕ್ಯಾನ್ಸರ್‌ನ್ನು ಮಟ್ಟ ಹಾಕುವ ತಾಕತ್ತು-'ಹಲಸಿನ ಹಣ್ಣಿನಲ್ಲಿದೆ'!

For Quick Alerts
ALLOW NOTIFICATIONS
For Daily Alerts

    English summary

    How Being Overweight Cause Colon Cancer Risk

    Is your son overweight? Beware, he may be at an increased greater risk of developing colon (bowel) cancer in adulthood as compared to his slimmer friends, researchers have warned. A cancer of the colon or rectum, located at the digestive tract's lower end is the third most common cancer in the world.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more