Latest Updates
-
ಡೇಟಿಂಗ್ ಆ್ಯಪ್ ಬಳಕೆದಾರರೇ ಎಚ್ಚರ: ಈ ಕೆಫೆಗಳೇ ನಿಮ್ಮ ಜೇಬಿಗೆ ಕತ್ತರಿ! -
ದೆಹಲಿ-ಎನ್ಸಿಆರ್ ಬಿರುಗಾಳಿ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಹೀಗೆ ಮಾಡಿ -
AJIO ಮಿಡ್ನೈಟ್ ಮೇನಿಯಾ: ಸ್ನೀಕರ್ಸ್ ಮೇಲೆ ಭರ್ಜರಿ ಆಫರ್ ಪಡೆಯೋದು ಹೇಗೆ? -
ಹವಾಮಾನ ಇಲಾಖೆ ಎಚ್ಚರಿಕೆ: ಬಿರುಗಾಳಿ ಮಳೆಯಲ್ಲಿ ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ಸಂಬಂಧಗಳ ಆತಂಕ ಕಾಡ್ತಿದೆಯಾ? ನೆಮ್ಮದಿ ನೀಡುವ ಉಚಿತ ಸಹಾಯವಾಣಿಗಳು -
IMD ಮಳೆ ಮುನ್ಸೂಚನೆ: ಬಾಲ್ಕನಿ ಸುರಕ್ಷತೆಗೆ ಈ ಕ್ರಮಗಳನ್ನು ಪಾಲಿಸಿ -
ಆರೋಗ್ಯಕರ ಆಹಾರ ಪದ್ಧತಿ: ಬೇಸಿಗೆಯಲ್ಲಿ ಲವಲವಿಕೆಯಿಂದ ಇರಲು ಹೀಗೆ ಮಾಡಿ -
ಅನುಷ್ಕಾ ಶರ್ಮಾ ಸ್ಟೇಡಿಯಂ-ಕೋರ್ ಲುಕ್: ಕ್ರಿಕೆಟ್ ಸೀಸನ್ನ ಹೊಸ ಕ್ರೇಜ್ -
ಇಂದಿನ ರಾಶಿ ಭವಿಷ್ಯ: ನಿಮ್ಮ ಜೀವನದಲ್ಲಿ ಕಾದಿದೆ ಅಚ್ಚರಿಯ ಬದಲಾವಣೆ! -
ಅಹಮದಾಬಾದ್ ದೋಸೆ ಹಿಟ್ಟಿನ ಆತಂಕ: ನಿಮ್ಮ ಮಕ್ಕಳ ಆರೋಗ್ಯಕ್ಕೆ ಈ ಎಚ್ಚರಿಕೆ ಅಗತ್ಯ!
ಕ್ಯಾನ್ಸರ್ ರೋಗದ ಬೆಚ್ಚಿ ಬೀಳಿಸುವ ಗುಣಲಕ್ಷಣಗಳು
ಮಾರಣಾಂತಿಕ ಕಾಯಿಲೆಗಳ ಬಗ್ಗೆ ಈ ತಾಣದಲ್ಲಿ ನಿಮಗಾಗಿ ಅನೇಕ ಸಂಗತಿಗಳನ್ನು ಈ ಹಿಂದೆ ನೀಡಲಾಗಿದೆ. ಅದರಲ್ಲೂ ಕೆಲವು ಕಾಯಿಲೆಗಳನ್ನು ಗುಣಪಡಿಸಲು ಸಾಧ್ಯವಾಗದ ಅನೇಕ ಪ್ರಕರಣಗಳು ನಮ್ಮ ಕಣ್ಣು ಮುಂದಿವೆ. ಇವುಗಳಲ್ಲಿ ಹೆಚ್ಚು ಭಯಾನಕ ಹುಟ್ಟಿಸುವ ಮತ್ತು ಹೆಚ್ಚು ಘಾಸಿಗೊಳಿಸುವ ಕಾಯಿಲೆಯೆಂದರೆ ಕ್ಯಾನ್ಸರ್. ಕ್ಯಾನ್ಸರ್ ಬಗ್ಗೆ ಅನೇಕರಿಗೆ ತಿಳುವಳಿಕೆಯಿರುವುದಿಲ್ಲ. ಈ ನಿಟ್ಟಿನಲ್ಲಿ ಸರ್ಕಾರಗಳು, ಸಂಘ ಸಂಸ್ಥೆಗಳು ಮತ್ತು ಪ್ರಜ್ಞಾವಸ್ಥರು ಅನೇಕ ರೀತಿಯಲ್ಲಿ ಜನರಿಗೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ತಿಳುವಳಿಕೆ ಮೂಡಿಸುತ್ತಿದ್ದಾರೆ. ಕ್ಯಾನ್ಸರ್ ತಡೆಗಟ್ಟುವ ಡಯಟ್ ಪಾಲಿಸಲು ಬಯಸುವಿರಾ?
ಆದರೂ ಸಹ ಈ ಕಾಯಿಲೆಯ ತಿಳುವಳಿಕೆಯ ಕೊರತೆಯಿಂದ ಕ್ಯಾನ್ಸರ್ ನಂತಹ ಕಾಯಿಲೆಗಳಿಂದ ಅನೇಕರು ಬಳಲುತ್ತಿದ್ದಾರೆ. ಕ್ಯಾನ್ಸರ್ ಬರುವುದಕ್ಕಿಂತ ಮೊದಲೇ ಅದರ ಚಿಹ್ನೆಗಳಿಂದ ಜಾಗೃತರಾಗಿ ಅದನ್ನು ತಡೆಯಲು ಪ್ರಯತ್ನಿಸಬೇಕು. ನಮಗೆಲ್ಲರಿಗೂ ತಿಳಿದಂತೆ, ಧೂಮಪಾನದಿಂದ, ಹಾನಿಕಾರಕ ವಿಕರಣಗಳಿಂದ, ವಂಶವಾಹಿಯಿಂದ ಮತ್ತು ವಾತಾವರಣದ ಪರಿಣಾಮಗಳಿಂದ ಕ್ಯಾನ್ಸರ್ ಸಂಭವಿಸಲಿದ್ದು, ಈ ಪ್ರಕ್ರಿಯೆಗಳಿಂದ ದೂರವಿದ್ದಲ್ಲಿ ಕ್ಯಾನ್ಸರ್ ಸಂಭವದ ಪ್ರಮಾಣ ಕಡಿಮೆಯಾಗುತ್ತದೆ. ಆದರೆ ಈ ಕಾರಣಗಳೂ ಸಹ ಒಮ್ಮೊಮ್ಮೆ ನಮ್ಮ ಹಿಡಿತಕ್ಕೆ ಸಿಗದೆ ಅನಿಯಂತ್ರಿತವಾಗುತ್ತವೆ. ಆದ್ದರಿಂದ ಅಲ್ಪ ಪ್ರಮಾಣದಲ್ಲಿ ಮಾತ್ರ ತಡೆಯಲು ಪ್ರಯತ್ನಿಸಬಹುದು. ಕ್ಯಾನ್ಸರ್ ಮಹಾಮಾರಿಯನ್ನು ದೂರವಿಡುವ ಮಸಾಲೆಗಳು
ಹಾಗಾಗಿ ಇಂತಹ ಪರಿಸ್ಥಿತಿಯಲ್ಲಿ ಈ ರೋಗವನ್ನು ಹರಡದಂತೆ ತಡೆಯಲು ಮತ್ತು ನಿಯಂತ್ರಿಸಲು ಕೆಲವು ಪರಿಣಾಮಕಾರಿ ವಿಧಾನಗಳನ್ನು ಅನುಸರಿಸಬೇಕಾಗುತ್ತದೆ. ಇದಕ್ಕೆ ಮೊದಲಿಗೆ ಕಾಯಿಲೆಯ ಚಿಹ್ನೆ ಅಥವಾ ಗುಣಲಕ್ಷಣವನ್ನು ತಿಳಿಯುವುದು ಅತ್ಯಗತ್ಯ. ಹೌದು, ಕ್ಯಾನ್ಸರ್ ಪೀಡಿತರ ಕೆಲವು ಪ್ರಾಥಮಿಕ ಚಿಹ್ನೆ ಅಥವಾ ಗುಣಲಕ್ಷಣಗಳ ವಿವರಗಳನ್ನು ನಿಮಗಾಗಿ ಈ ಲೇಖನದಲ್ಲಿ ನೀಡಲಾಗಿದೆ. ಈ ಲಕ್ಷಣಗಳು ಕಂಡ ಕೂಡಲೇ ಸಂಬಂಧಿತ ಕ್ರಮಗಳನ್ನು ಅವಶ್ಯವಾಗಿ ಕೈಗೊಳ್ಳಬೇಕಾಗುತ್ತದೆ. ವಿವರಗಳಿಗೆ ಮುಂದೆ ಓದಿ...

ಕರುಳಿನ ಅಸಹಜ ಚಲನವಲನ
ದೀರ್ಘಕಾಲ ಬದಲಾಗದ ಮಲಬದ್ಧತೆ ಮತ್ತು ಅತಿಸಾರ ತೊಂದರೆಯಿದ್ದರೆ ಇದು ಕರುಳಿನ ಕ್ಯಾನ್ಸರ್ ಅಥವಾ ಕೊಲೊರೆಕ್ಟಲ್ ಕ್ಯಾನ್ಸರ್ ನ ಪ್ರಾರಂಭಿಕ ಲಕ್ಷಣಗಳು. ಇದರ ಹೊರತಾಗಿ ಮಲಮೂತ್ರದಲ್ಲಿ ರಕ್ತದ ಅಂಶಗಳು ಕಂಡುಬಂದಲ್ಲಿ ಕರುಳಿನ ಕ್ಯಾನ್ಸರ್ ಅಥವಾ ಕಿಡ್ನಿಯ ಕ್ಯಾನ್ಸರ್ ಎನ್ನಬಹುದು.

ಕಿಬ್ಬೊಟ್ಟೆಯಲ್ಲಿ ನೋವು
ಕಿಬ್ಬೊಟ್ಟೆಯಲ್ಲಿ ನೋವು ಅಥವಾ ಸಂಕಟವಿದ್ದಲ್ಲಿ ಹೊಟ್ಟೆಯ, ಕರುಳಿನ ಮತ್ತು ಅಂಡಾಶಯದ ಕ್ಯಾನ್ಸರ್‌ನ ಗುಣಲಕ್ಷಣಗಳು. ಕಿಬ್ಬೊಟ್ಟೆಯಲ್ಲಿ ಅನುಪಯುಕ್ತ ಮಾಂಸಗಡ್ಡೆಗಳು ಬೆಳೆದುಕೊಂಡು, ಹೆಚ್ಚು ನೋವುಂಟಾಗಿ ಹೊಟ್ಟೆಯ ಭಾಗವು ಒತ್ತಿದಂತಾಗುತ್ತದೆ.

ತಿನ್ನಲು ಮತ್ತು ನುಂಗಲು ತೊಂದರೆಯಾಗುತ್ತದೆ
ಇದು ತೀರಾ ಅಪರೂಪದ ಪ್ರಕರಣವಾಗಿದ್ದು, ಇದು ಕ್ಯಾನ್ಸರ್‌ನ ಕೊನೆಯ ಹಂತವನ್ನು ಸೂಚಿಸಲಿದ್ದು, ತಿನ್ನಲು ಮತ್ತು ನುಂಗಲು ತೊಂದರೆಯುಂಟಾಗಲಿದೆ, ಇದನ್ನು ಹೊಟ್ಟೆ ಅಥವಾ ಗಂಟಲ ಕ್ಯಾನ್ಸರ್ ಎನ್ನಬಹುದು

ಅತಿಯಾದ ಆಯಾಸ
ಕ್ಯಾನ್ಸರ್‌ನ ಭಾಗ ಅಥವಾ ಸಾಮಾನ್ಯ ಗುಣವೇ ಅತಿಯಾದ ಆಯಾಸ. ಇದರಿಂದ ಊಟ ಸೇವಿಸಲು ಅನೇಕ ಬಾರಿ ತೊಂದರೆಯಾಗುತ್ತದೆ. ಇದರಿಂದ ದೇಹಕ್ಕೆ ಪೌಷ್ಠಿಕಾಂಶದ ಕೊರತೆಯುಂಟಾಗಿ ಅತಿಯಾದ ಆಯಾಸಕ್ಕೆ ಕಾರಣವಾಗುತ್ತದೆ.

ವಾಕರಿಕೆ ಅಥವಾ ವಾಂತಿ
ಹೊಟ್ಟೆಯಲ್ಲಿ ಅನುಪಯುಕ್ತ ಮಾಂಸದ ಗೆಡ್ಡೆ ಉಂಟಾದರೆ ವಾಕರಿಕೆ ಅಥವಾ ವಾಂತಿಯ ಲಕ್ಷಣಗಳು ಕಾಣಿಸುತ್ತವೆ. ನೀವು ಸೇವಿಸುವ ಆಹಾರವು ಪೂರ್ಣವಾಗಿ ಒಳಹೋಗದೇ ಹಿಂದಕ್ಕೆ ಬರುವಂತಾಗಿ ವಾಕರಿಕೆ ಅಥವಾ ವಾಂತಿ ಸಂಭವಿಸಲು ಕಾರಣವಾಗುತ್ತದೆ.

ವಾತ ಅಥವಾ ಉಬ್ಬುವುದು
ವಾಯುವಿನ ತೊಂದರೆ ಅಥವಾ ಉಬ್ಬುವುದೂ ಸಹ ವಿವಿಧ ರೀತಿಯ ಕ್ಯಾನ್ಸರ್ ಗಳಾದ ಅಂಡಾಶಯದ ಕ್ಯಾನ್ಸರ್, ಕರುಳಿನ ಕ್ಯಾನ್ಸರ್ ಮತ್ತು ಕೊಲೊರೆಕ್ಟಲ್ ಕ್ಯಾನ್ಸರ್ ನ ಲಕ್ಷಣಗಳೇ ಆಗಿವೆ.



Click it and Unblock the Notifications








