For Quick Alerts
ALLOW NOTIFICATIONS  
For Daily Alerts

ಜ್ವರ ಬಂದರೆ ಆಸ್ಪತ್ರೆಗೆ ಹೋಗಬೇಡಿ! ಅಡುಗೆ ಮನೆಯಲ್ಲಿಯೇ ಇದೆ ಮನೆಮದ್ದುಗಳು

By Arshad
|

ಜ್ವರ ಬರುವುದು ನಮಗಾರಿಗೂ ಬೇಕಾಗಿಲ್ಲ. ಆದರೆ ಬೇಡದ ಅತಿಥಿಯಂತೆ ಇದು ತಪ್ಪದೇ ಪ್ರತಿ ಮಳೆಗಾಲದಲ್ಲಿ ಮನೆಯಲ್ಲೊಬ್ಬರಿಗಾದರೂ ಬಂದೇ ಬರುತ್ತದೆ. ವಾಸ್ತವವಾಗಿ ಜ್ವರವೆಂದರೆ ವ್ಯಾಧಿಯಲ್ಲ, ಬದಲಿಗೆ ನಮ್ಮ ರೋಗ ನಿರೋಧಕ ಶಕ್ತಿ ಉಪಯೋಗಿಸುವ ಒಂದು ವ್ಯವಸ್ಥೆ. ದೇಹವನ್ನು ಪ್ರವೇಶಿಸಿ ಧಾಳಿ ಎಸಗಲು ಸಿದ್ಧರಾಗುತ್ತಿರುವ ಸೂಕ್ಷ್ಮಜೀವಿಗಳು ಹೆಚ್ಚಿನ ತಾಪಮಾನದಲ್ಲಿ ಬದುಕಲಾರವು. ಆದ್ದರಿಂದ ದೇಹದ ತಾಪಮಾನ ಹೆಚ್ಚಿಸಿ ಇವುಗಳನ್ನು ಕೊಲ್ಲುವುದೇ ಜ್ವರ.

ಜ್ವರ ಬಂದಾಗ ತಿನ್ನಬೇಕಾದ ಆಹಾರಗಳಿವು

ದೇಹದ ತಾಪಮಾನ ಏರಿಸಬೇಕಾದರೆ ದೇಹ ಅನಿವಾರ್ಯವಾಗಿ ಇತರ ಕೆಲಸಗಳಿಗೆ ಶಕ್ತಿ ಮತ್ತು ರಕ್ತಪೂರೈಕೆಯನ್ನು ಕಡಿಮೆ ಮಾಡಬೇಕಾದುದರಿಂದಲೇ ಜ್ವರ ಇದ್ದರೆ ವಿಶ್ರಾಂತಿ ಪಡೆಯಲು ವೈದ್ಯರು ಸಲಹೆ ಮಾಡುತ್ತಾರೆ. ಜ್ವರವನ್ನು ಇಳಿಸಬೇಕೆಂದರೆ ದೇಹದಲ್ಲಿರುವ ಕ್ರಿಮಿಗಳನ್ನು ಆದಷ್ಟು ಬೇಗನೇ ಕೊಲ್ಲಬೇಕು.

ತುಂಬಾ ಜ್ವರ ಇದೆಯೇ? ಹಾಗಾದರೆ ಈ ಆಹಾರಗಳನ್ನು ಸೇವಿಸಬೇಡಿ

ಈ ಕೆಲಸವನ್ನು ಕೆಲವು ಮನೆಮದ್ದುಗಳು ಸಮರ್ಥವಾಗಿ ಮಾಡಿ ಮುಗಿಸುವ ಮೂಲಕ ಜ್ವರ ಶೀಘ್ರವಾಗಿ ಇಳಿಯಲು ನೆರವಾಗುತ್ತವೆ. ಬನ್ನಿ, ಇವುಗಳಲ್ಲಿ ಕೆಲವು ಸುಲಭವಾದ ಆದರೆ ಪ್ರಬಲವಾದ ಮನೆಮದ್ದುಗಳ ಬಗ್ಗೆ ಅರಿಯೋಣ....

ಜ್ವರಕ್ಕಾಗಿ ಬೆಳ್ಳುಳ್ಳಿ

ಜ್ವರಕ್ಕಾಗಿ ಬೆಳ್ಳುಳ್ಳಿ

ಒಂದೆರಡು ಎಸಳು ಬೆಳ್ಳುಳ್ಳಿಯ ಸಿಪ್ಪೆ ಸುಲಿದು ಜಜ್ಜಿ ನುಣ್ಣಗಾಗಿಸಿ. ಈ ಪ್ರಮಾಣವನ್ನು ಕೊಂಚ ಬಿಸಿ ನೀರಿನೊಂದಿಗೆ ನೇರವಾಗಿ ನುಂಗಿಬಿಡಿ. ಬೆಳ್ಳುಳ್ಳಿಯ ರುಚಿ ಹೆಚ್ಚಿನವರಿಗೆ ಇಷ್ಟವಾಗದ ಕಾರಣ ನೀರಿನೊಂದಿಗೆ ಸಾಧ್ಯವಾಗದೇ ಇದ್ದರೆ ಸಾಮಾನ್ಯ ತಾಪಮಾನದಲ್ಲಿರುವ ಮೊಸರಿನೊಂದಿಗೆ ಬೆರೆಸಿ ನುಂಗಿ. ಈ ವಿಧಾನದಿಂದ ಸಾಮಾನ್ಯ ಹಾಗೂ ಫ್ಲೂ ಜ್ವರ ಶೀಘ್ರವೇ ಕಡಿಮೆಯಾಗುತ್ತದೆ. ಬೆಳ್ಳುಳ್ಳಿಯಲ್ಲಿರುವ ಆಲಿಸಿನ್ ಎಂಬ ಪೋಷಕಾಂಶಕ್ಕೆ ಸೂಕ್ಷ್ಮಜೀವಿ ಪ್ರತಿರೋಧಕ

ಶಕ್ತಿ ಇರುವ ಕಾರಣ ದೇಹದಲ್ಲಿ ಆಶ್ರಯ ಪಡೆದಿದ್ದ ಕ್ರಿಮಿಗಳೆಲ್ಲಾ ಶೀಘ್ರವೇ ಸಾಯುತ್ತವೆ. ಅಷ್ಟೇ ಅಲ್ಲ, ಕಟ್ಟಿಕೊಂಡಿದ್ದ ಮೂಗು ತೆರೆಯುತ್ತದೆ ಹಾಗೂ ಗಟ್ಟಿಯಾಗಿದ್ದ ಕಫವೂ ಸಡಿಲಗೊಂಡು ವಿಸರ್ಜಿಸಲ್ಪಡುತ್ತದೆ.

ಜ್ವರಕ್ಕೆ ಜೇನಿನ ಆರೈಕೆ

ಜ್ವರಕ್ಕೆ ಜೇನಿನ ಆರೈಕೆ

ಒಂದು ಚಿಕ್ಕ ಚಮಚ ಜೇನನ್ನು ದಿನದಲ್ಲಿ ಹಲವು ಬಾರಿ ನೇರವಾಗಿ ಸೇವಿಸುತ್ತಾ ಬನ್ನಿ. ವಿಶೇಷವಾಗಿ ಈ ಜ್ವರ ಪರಾಗದ ಅಲರ್ಜಿಯಿಂದ ಆಗಮಿಸಿದ್ದರೆ ಜೇನಿನಲ್ಲಿರುವ ಪೋಷಕಾಂಶಗಳು ಅದ್ಭುತವಾದ ಪರಿಹಾರ ಒದಗಿಸುತ್ತವೆ.

ಆಲೂಗಡ್ಡೆ

ಆಲೂಗಡ್ಡೆ

ಒಂದು ಹಸಿ ಆಲೂಗಡ್ಡೆಯನ್ನು ತೆಳುಬಿಲ್ಲೆಗಳಂತೆ ಕತ್ತರಿಸಿ ನಿಮ್ಮ ಕಾಲುಚೀಲದ ತಳಭಾಗದಲ್ಲಿ ನಾಲ್ಕಾರು ಬಿಲ್ಲೆಗಳನ್ನಿರಿಸಿ ಪಾದದ ಕೆಳಭಾಗದ ಗರಿಷ್ಠ ವಿಸ್ತಾರ ಈ ಬಿಲ್ಲೆಗಳ ಮೇಲೆ ಆವರಿಸುವಂತೆ ಧರಿಸಿಕೊಳ್ಳಿ. ರಾತ್ರಿ ಧರಿಸಿ ಬೆಳಗ್ಗೆದ್ದಾಗ ಸಾಮಾನ್ಯ ಮತ್ತು ಅಷ್ಟೇನೂ ಹೆಚ್ಚಿಲ್ಲದ ಜ್ವರ ಕಡಿಮೆಯಾಗಿರುತ್ತದೆ.

 ತುಳಸಿ ಎಲೆ

ತುಳಸಿ ಎಲೆ

ಒಂದು ಲೋಟ ನೀರನ್ನು ಕುದಿಸಿ ಇದರಲ್ಲಿ ಹತ್ತರಿಂದ ಹದಿನೈದು ತುಳಸಿ ಎಲೆಗಳನ್ನು ಹಾಕಿ. ಅರ್ಧ ಚಿಕ್ಕ ಚಮಚದಷ್ಟು ಒಣಶುಂಠಿಯ ಪುಡಿಯನ್ನು ಹಾಕಿ ಸುಮಾರು ಐದು ನಿಮಿಷ ಕುದಿಸಿ ಬಳಿಕ ಉರಿ ಆರಿಸಿ ಹಾಗೇ ತಣಿಯಲು ಬಿಡಿ. ಉಗುರುಬೆಚ್ಚಗಾದ ಬಳಿಕ ಸೋಸಿ ಈ ನೀರಿಗೆ ಒಂದು ಚಿಕ್ಕ ಚಮಚ ಜೇನು ಬೆರೆಸಿ. ಈ ನೀರನ್ನು ದಿನಕ್ಕೆ ಮೂರು ಲೋಟದಷ್ಟು ಬೆಳಿಗ್ಗೆ ಮಧ್ಯಾಹ್ನ ಹಾಗೂ ರಾತ್ರಿ ಕುಡಿಯಿರಿ. ತುಳಸಿಯಲ್ಲಿರುವ ಜ್ವರದ ವಿರುದ್ಧ ಹೋರಾಡುವ ಗುಣ ಜ್ವರವನ್ನು ಶೀಘ್ರವೇ ಇಳಿಸಲು ನೆರವಾಗುತ್ತದೆ.

ಜ್ವರವನ್ನು ಇಳಿಸಲು ಈ ಸಾಮಾಗ್ರಿಗಳೂ ಸಹಕಾರಿಯಾಗಿವೆ

ಜ್ವರವನ್ನು ಇಳಿಸಲು ಈ ಸಾಮಾಗ್ರಿಗಳೂ ಸಹಕಾರಿಯಾಗಿವೆ

ಚೆಕ್ಕೆ, ಹಸಿಶುಂಠಿ, ಲಿಂಬೆ, ಸೇಬಿನ ಶಿರ್ಕಾ ಹಾಗೂ ಅರಿಶಿನಗಳೂ ಜ್ವರವನ್ನು ಕಡಿಮೆಗೊಳಿಸಲು ಸಹಕರಿಸುತ್ತವೆ.

ಒಣದ್ರಾಕ್ಷಿ

ಒಣದ್ರಾಕ್ಷಿ

ಕೆಲವು ಒಣದ್ರಾಕ್ಷಿಗಳನ್ನು ಅರೆದು ಒಂದು ಲೋಟ ನೀರಿನಲ್ಲಿ ಹಾಕಿ ಕುದಿಸಿ. ಇದಕ್ಕೆ ಚಿಟಿಕೆಯಷ್ಟು ಸಕ್ಕರೆ ಹಾಕಿ ಮಿಶ್ರಣ ಮಾಡಿ ಬಿಸಿ ಬಿಸಿಯಾಗಿಯೇ ಕುಡಿಯಿರಿ. ಒಂದು ವೇಳೆ ಜ್ವರದೊಂದಿಗೆ ಗಂಟಲ ಕೆರೆತ, ಕೆಮ್ಮು ಸಹಾ ಇದ್ದರೆ ಈ ವಿಧಾನ ಉತ್ತಮವಾಗಿದೆ. ದ್ರಾಕ್ಷಿಯಲ್ಲಿರುವ ಫೈಟ್ರೋ ನ್ಯೂಟ್ರಿಯೆಂಟ್ ಅಥವಾ ಹೋರಾಡುವ ಪೋಷಕಾಂಶಗಳಿಗೆ ಪ್ರತಿಜೀವಕ ಶಕ್ತಿ ಇದೆ. ಇವು ವೈರಸ್ ಮೂಲಕ ಆವರಿಸಿದ್ದ ಜ್ವರವನ್ನು ಕಡಿಮೆಗೊಳಿಸಲು ಸೂಕ್ತವಾಗಿದೆ.

ಕೊತ್ತಂಬರಿ ಕಾಳಿನ ಟೀ ಮಾಡಿ ಕುಡಿಯಿರಿ

ಕೊತ್ತಂಬರಿ ಕಾಳಿನ ಟೀ ಮಾಡಿ ಕುಡಿಯಿರಿ

ಒಂದು ಲೋಟ ನೀರಿಗೆ ಒಂದು ದೊಡ್ಡಚಮಚ ಧನಿಯ ಕಾಳುಗಳನ್ನು ಹಾಕಿ ಕುದಿಸಿ. ಸುಮಾರು ಒಂದು ನಿಮಿಷ ಕುದಿಸಿದ ಬಳಿಕ ಉರಿ ಆರಿಸಿ ತಣಿಯಲು ಬಿಡಿ. ಪೂರ್ಣವಾಗಿ ತಣಿದ ಬಳಿಕ ಇದನ್ನು ಸೋಸಿ ಕೊಂಚ ಹಾಲು ಮತ್ತು ಸಕ್ಕರೆ ಬೆರೆಸಿ ಮತ್ತೊಮ್ಮೆ ಕೊಂಚವೇ ಬಿಸಿ ಮಾಡಿ ಕುಡಿಯಿರಿ. ಜ್ವರ ಹೆಚ್ಚಿದ್ದಾಗ ದಿನಕ್ಕೆ ಮೂರು ಲೋಟ ಕುಡಿಯಿರಿ. ಬಳಿಕವೂ ದಿನಕ್ಕೆರಡು ಲೋಟ ಕುಡಿಯುವ ಮೂಲಕ ಜ್ವರ ಮತ್ತೆ ಏರದಂತೆ ನೋಡಿಕೊಳ್ಳಬಹುದು.

ಇತರ ಕ್ರಮಗಳು

ಇತರ ಕ್ರಮಗಳು

ಜ್ವರವಿದ್ದಾಗ ದಿನವಿಡೀ ಬಾಯಾರಿಕೆ ಇರಲಿ ಇಲ್ಲದೇ ಇರಲಿ, ಸತತವಾಗಿ ಕುಡಿಯುತ್ತಲೇ ಇರಬೇಕು. ಇದರಿಂದ ಕಲ್ಮಶಗಳನ್ನು ಶೋಧಿಸಿ ಮೂತ್ರದ ಮೂಲಕ ಹೊರಹಾಕಲು ಸಾಧ್ಯವಾಗುತ್ತದೆ. ಬರೆಯ ನೀರಿನ ಜೊತೆಗೆ ಆಗಾಗ ವಿಟಮಿನ್ ಸಿ ಹೆಚ್ಚಿನ ಪ್ರಮಾಣದಲ್ಲಿರುವ ಹಣ್ಣುಗಳನ್ನು ಸೇವಿಸುವ ಮೂಲಕವೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಜ್ವರವನ್ನು ಶೀಘ್ರವೇ ಕಡಿಮೆ ಮಾಡಬಹುದು.

English summary

Here's How You Can Cure Fever At Home!

A fever is your body's way of defending itself though you may feel down when your body's temperature increases. In order to help your body in its war against the microscopic intruders, you can use some home remedies. Here are some very simple remedies that bring your fever down soon.
X