ಮೇಕಪ್ ಹಿಂದಿರುವ ಬೆಚ್ಚಿ ಬೀಳಿಸುವ ಭಯಾನಕ ಸತ್ಯ

By: Arshad
Subscribe to Boldsky

ಹೊರಗೆ ಹೋದಾಗ ಎದುರಿನವರಿಗೆ ಚೆನ್ನಾಗಿ ಕಾಣಿಸಿಕೊಳ್ಳಬೇಕೆಂಬ ಹಂಬಲ ಪುರುಷರಿಗಿಂತಲೂ ಮಹಿಳೆಯರಿಗೆ ಹೆಚ್ಚು. ಆದ್ದರಿಂದ ಹೆಚ್ಚಿನವರು ಕೊಂಚ ಮೇಕಪ್ ಮಾಡಿಕೊಂಡೇ ಹೋಗುವುದು ಸಾಮಾನ್ಯ. ಅತಿಯಾದ ಮೇಕಪ್ ಕೂಡ ತ್ವಚೆಗೆ ಶತ್ರುವಾಗಬಹುದು

ಒಂದು ಹಂತದವರೆಗೆ ಮೇಕಪ್ ಹಚ್ಚಿಕೊಳ್ಳುವುದು ತೊಂದರೆ ನೀಡದೇ ಇದ್ದರೂ, ಸತತವಾಗಿ ಹೆಚ್ಚಿನ ಸಮಯ ಮೇಕಪ್ ಧರಿಸಿಕೊಂಡೇ ಇರುವುದು, ವಾರದಲ್ಲಿ ಆರು ದಿನ ಕೆಲವೊಮ್ಮೆ ಏಳೂ ದಿನಗಳ ಕಾಲವೂ ಮೇಕಪ್ ಧರಿಸಿರಬೇಕಾದ ಅನಿವಾರ್ಯತೆ ಕೆಲವರಿಗಿದೆ. ಟೀವಿ, ಸಿನೇಮಾ, ನಾಟಕರಂಗದಲ್ಲಿ ವೃತ್ತಿಯಲ್ಲಿರುವ ಮಹಿಳೆಯರಿಗೆ ಇದು ಅನಿವಾರ್ಯ. ಮೇಕಪ್‌ ಉತ್ಪನ್ನಗಳಲ್ಲಿ ಅಡಗಿರುವ ಸೈಲೆಂಟ್ ಕಿಲ್ಲರ್...  

ಗೃಹಿಣಿಯರಲ್ಲಿಯೂ ಹಲವರಿಗೆ ದಿನವಿಡೀ ಮೇಕಪ್ ಧರಿಸಿಕೊಂಡೇ ಇರುವ ಅಭ್ಯಾಸವಿರುತ್ತದೆ. ಆದರೆ ಮೇಕಪ್ ನಿಂದ ಬಾಹ್ಯ ಸೌಂದರ್ಯ ಕೃತಕವಾಗಿ ವೃದ್ಧಿಗೊಂಡರೂ ಇದರ ಅಡಿಯಲ್ಲಿ ಮೇಕಪ್ ನಲ್ಲಿರುವ ಕೃತಕ ರಾಸಾಯನಿಕಗಳು ಸಹಜ ಸೌಂದರ್ಯ ಮತ್ತು ತ್ವಚೆಗೆ ಯಾವ ರೀತಿಯ ಹಾನಿಯಾಗುತ್ತದೆ ಎಂಬ ಮಾಹಿತಿಯನ್ನು ಕೆಳಗೆ ನೀಡಲಾಗಿದೆ.... 

ಮೂಳೆಗಳ ತೊಂದರೆ

ಮೂಳೆಗಳ ತೊಂದರೆ

ಮೇಕಪ್‌ಗೆ ಬಳಸುವ ಪ್ರಸಾದನದಲ್ಲಿ ಕೆನ್ನೆಗಳಿಗೆ ಕೆಂಪುಬಣ್ಣ ತರಿಸಲು ಕ್ಯಾಡ್ಮಿಯಂ ಎಂಬ ಧಾತುವನ್ನು ಬೆರೆಸಲಾಗುತ್ತದೆ ಎಂದು ಕಂಡುಕೊಳ್ಳಲಾಗಿದೆ. ಈ ಕ್ಯಾಡ್ಮಿಯಂ ಧಾತುಗಳು ಚರ್ಮದ ಸೂಕ್ಷ್ಮರಂಧ್ರಗಳಲ್ಲಿ ಇಳಿಯಬಲ್ಲಷ್ಟು ಸೂಕ್ಷ್ಮವಾಗಿದ್ದು ನೇರವಾಗಿ ಮೂಳೆಗಳಲ್ಲಿ ಹೀರಲ್ಪಡುತ್ತವೆ. ಇದರ ಸಾಂದ್ರತೆ ಹೆಚ್ಚುತ್ತಾ ಹೋದಂತೆ ಮೂಳೆಗಳು ಶಿಥಿಲವಾಗುತ್ತಾ ಹೋಗುತ್ತವೆ ಹಾಗೂ ಹಲವಾರು ಸೋಂಕುಗಳಿಗೆ ಸುಲಭವಾಗಿ ತುತ್ತಾಗುತ್ತದೆ.

ಕಿಡ್ನಿ ವೈಫಲ್ಯ

ಕಿಡ್ನಿ ವೈಫಲ್ಯ

ಕ್ಯಾಡ್ಮಿಯಂ ಒಂದು ವಿಷಕಾರಿ ಧಾತುವಾಗಿದ್ದು ಇದು ರಕ್ತದ ಮೂಲಕ ಮೂತ್ರಪಿಂಡಗಳಿಗೆ ತಲುಪಿ ಮೂತ್ರಪಿಂಡಗಳ ಕ್ಷಮತೆಯನ್ನು ಉಡುಗಿಸುತ್ತದೆ. ಕೆನ್ನೆ ಕೆಂಪಾಗಿಸುವ ಈ ಮೇಕಪ್‌ನಿಂದ ಕೃತಕವಾದ ಆಕರ್ಷಣೆ ಪಡೆದರೂ ಇದರಿಂದ ಮೂತ್ರಪಿಂಡವೇ ವಿಫಲಗೊಳ್ಳುವ ಅಪಾಯವಿದೆ.

ಸಂತಾನಹೀನತೆ

ಸಂತಾನಹೀನತೆ

ಮೇಕಪ್ ಪ್ರಸಾದನಗಳಲ್ಲಿ ಸೀಸದ ಅಂಶವೂ ಇದೆ. ಈ ಸೀಸ ಅಪಾಯಕಾರಿಯಾದ ಧಾತುವಾಗಿದ್ದು ಇದು ಹೊಗೆಯ ಮೂಲಕ ಸೇವಿಸಿದವರ ಆರೋಗ್ಯವನ್ನು ಹಾಳುಗೆಡವಬಲ್ಲುದು. ಇದೇ ಕಾರಣಕ್ಕೆ ಇಂದು ಪೆಟ್ರೋಲಿನಲ್ಲಿ ಸೀಸದ ಅಂಶ ನಿವಾರಿಸಿಯೇ (unleaded) ವಾಹನಗಳಿಗೆ ಒದಗಿಸಲಾಗುತ್ತದೆ.

ಸಂತಾನಹೀನತೆ

ಸಂತಾನಹೀನತೆ

ಹೀಗಿರುವಾಗ ಈ ಸೀಸವನ್ನು ಮೇಕಪ್ ಮೂಲಕ ಚರ್ಮಕ್ಕೆ ಮೆತ್ತಿಕೊಂಡಾಗ ಇದು ನೇರವಾಗಿ ದೇಹದೊಳಕ್ಕೆ ಪ್ರವೇಶ ಪಡೆದು ವಿಶೇಷವಾಗಿ ಮಹಿಳೆಯರಲ್ಲಿ ಹಾರ್ಮೋನುಗಳನ್ನು ಏರುಪೇರು ಮಾಡುತ್ತದೆ. ಇದರಿಂದ ಸಂತಾನಫಲತೆ ಕಡಿಮೆಯಾಗುವುದನ್ನು ಕಂಡುಕೊಳ್ಳಲಾಗಿದೆ.

ತಾರುಣ್ಯ ಪಡೆಯುವುದು ತಡವಾಗುತ್ತದೆ

ತಾರುಣ್ಯ ಪಡೆಯುವುದು ತಡವಾಗುತ್ತದೆ

ವಿಶೇಷವಾಗಿ ಹದಿಹರೆಯಕ್ಕೆ ಕಾಲಿಡುತ್ತಿರುವ ಹುಡುಗಿಯರು ಹೆಚ್ಚು ಮೇಕಪ್ ಧರಿಸುವ ಕಾರಣ ಅವರು ಯುವತಿಯರಾಗುವ ಸಮಯ ತಡವಾಗುತ್ತದೆ. ಅಂದರೆ ರಸಜ್ವಲೆಯರಾಗುವ ಕಾಲ ಮುಂದಕ್ಕೆ ಹೋಗುತ್ತದೆ.

ತಲೆಸುತ್ತುವಿಕೆ

ತಲೆಸುತ್ತುವಿಕೆ

ಉಗುರಿನ ಬಣ್ಣ, ಕೂದಲ ಕೃತಕ ಬಣ್ಣ ಮೊದಲಾದವುಗಳಲ್ಲಿ ಟೊಲೀನ್ (toluene) ಎಂಬ ರಾಸಾಯನಿಕಗಳಿವೆ. ಇವು ಕೆಲವರಿಗೆ ಅಲರ್ಜಿಕಾರಕವಾಗಿದ್ದು ರಕ್ತದಲ್ಲಿ ಬೆರೆತು ತಲೆಸುತ್ತುವಿಕೆ, ತಲೆ ತಿರುಗುವಿಕೆ, ವಾಂತಿಯಾಗುವಂತಹ ಅನುಭವ, ತಲೆನೋವು ಮೊದಲಾದವುಗಳನ್ನು ಹುಟ್ಟುಹಾಕುತ್ತದೆ.

ಕ್ಯಾನ್ಸರ್

ಕ್ಯಾನ್ಸರ್

ವಿಶೇಷವಾಗಿ ಲಿಪ್ ಸ್ಟಿಕ್, ಲಿಪ್ ಬಾಮ್, ಸನ್ ಸ್ಕ್ರೀನ್ ಲೋಷನ್ ಮೊದಲಾದ ಪ್ರಸಾದನಗಳಲ್ಲಿ ಬೆಂಜೋಫಿನೋನ್ (benzophenone) ಎಂಬ ರಾಸಾಯನಿಕವಿರುತ್ತದೆ. ಈ ರಾಸಾಯನಿಕಕ್ಕೆ ಸೂರ್ಯನ ಅತಿನೇರಳೆ ಕಿರಣಗಳನ್ನು ತಡೆಯುವ ಶಕ್ತಿ ಇದೆ ಎಂದು ಸಂಸ್ಥೆಗಳು ಹೇಳಿಕೊಳ್ಳುತ್ತವೆ. ಆದರೆ ಈ ರಾಸಾಯನಿಕ ಸೂರ್ಯನ ಹಾನಿಕಾರಕ ಕಿರಣಗಳನ್ನು ಒಂದೆಡೆ ತಡೆದರೂ ಇನ್ನೊಂದೆಡೆ ದೇಹದಲ್ಲಿ ಕ್ಯಾನ್ಸರ್ ಹುಟ್ಟಿಸಲು ಕಾರಣವಾಗುತ್ತದೆ.

 
English summary

Health hazards of using excess make up

If you are someone who loves to look your best on a daily basis and you use a lot of make up to enhance your looks, then you need to know that too much makeup use can harm your health! With the great array of makeup products available in the markets today, which promise to make you look amazing, it is rather hard to resist the temptation of wearing makeup on a daily basis.
Please Wait while comments are loading...
Subscribe Newsletter