Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಅತಿಯಾದ ಮೇಕಪ್ ಕೂಡ ತ್ವಚೆಗೆ ಶತ್ರುವಾಗಬಹುದು
ಸೌಂದರ್ಯ ಎಂಬುದು ಹೆಣ್ಣಿಗೆ ಭೂಷಣ. ಅಲಂಕಾರ ಪ್ರಿಯಳೂ ಆಗಿರುವ ನಾರಿಯ ಸಹಜ ಸೌಂದರ್ಯವನ್ನು ಇಮ್ಮಡಿಗೊಳಿಸುವುದು ಸೌಂದರ್ಯ ಪ್ರಸಾಧನಗಳಾಗಿವೆ. ಕಣ್ಣಿಗೆ ಕಣ್ಣುಗಪ್ಪು, ತುಟಿಗೆ ತೆಳುವಾಗಿ ಲೇಪಿಸಿದ ಲಿಪ್‌ಸ್ಟಿಕ್, ಮುಖದಲ್ಲಿ ಮಿರುಗುವ ಕಾಂಪ್ಯಾಕ್ಟ್ ಮೆರುಗು, ಐ ಲ್ಯಾಶಸ್ ಹೀಗೆ ಆಧುನಿಕ ಸ್ತ್ರೀಯರ ಸೌಂದರ್ಯ ಕವಾಟ ತೆರೆದುಕೊಂಡು ಹೋಗುತ್ತದೆ.
ಈ ರೀತಿಯ ಅಲಂಕಾರ ವಿಧಾನಗಳನ್ನು ಆಧುನಿಕ ಸ್ತ್ರೀಯರು ಅನುಸರಿಸಿದರೆ ನಮ್ಮ ಹಿಂದಿನವರೂ ಅಲಂಕಾರಕ್ಕೆ ಹೆಚ್ಚು ಪ್ರಾಮುಖ್ಯ ನೀಡುತ್ತಿದ್ದರು. ಈಗಿನಂತೆ ನವೀನ ಪ್ರಸಾಧನಗಳು ಆ ಕಾಲದಲ್ಲಿ ಬಳಕೆಯಲ್ಲಿಲ್ಲದಿದ್ದರೂ ಕಣ್ಣು ಕಪ್ಪು, ಪುಡಿ ಕುಂಕುಮದ ಮೆರುಗು ಹೆಣ್ಣಿನ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತಿತ್ತು. ಅವರ ಸೌಂದರ್ಯ ತೊಳೆದಿಟ್ಟ ಕನ್ನಡಿಯಂತಿತ್ತು. ಅಂದರೆ ದಿನದಿಂದ ದಿನಕ್ಕೆ ಮೆರುಗನ್ನು ಪಡೆದುಕೊಳ್ಳುತ್ತಿತ್ತು.
ಆದರೆ ಇಂದಿನ ಯವಜನತೆ ಮಾರುಕಟ್ಟೆಯಲ್ಲಿ ದೊರೆಯುವ ನಾನಾ ಬಗೆಯ ರಾಸಾಯನಿಕ ಸೌಂದರ್ಯವರ್ಧಕ ಮೊರೆ ಹೋಗಿ ತಮ್ಮ ತ್ವಚೆಯ ಕಾಂತಿಯನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಆದರೆ ಮೇಕಪ್ ಕುರಿತು ಸರಿಯಾದ ಕಾಳಜಿವಹಿಸದಿದ್ದರೆ ಈ ಸಂಗಾತಿಯೇ ನಿಮ್ಮ ಶತ್ರು ಆಗುವುದರಲ್ಲಿ ಸಂಶಯವಿಲ್ಲ! ಮೇಕಪ್ ಕಿಟ್ ಅನ್ನು ವ್ಯವಸ್ಥಿತವಾಗಿರಿಸಲು ಟಾಪ್ ಸಲಹೆಗಳು
ಹೌದು ಇತ್ತೀಚಿನ ದಿನಗಳಲ್ಲಿ ಮೇಕಪ್ ಇಲ್ಲದೆ ಯಾರೂ ಕೂಡ ಹೊರ ಹೊರಡುವುದಿಲ್ಲ, ಯಾವುದೇ ಕಾರ್ಯಕ್ರಮ, ಅಥವಾ ಮದುವೆ ಸಮಾರಂಭಕ್ಕೆ ಹೋಗಬೇಕಾದರೂ ಕೂಡ ಸಾಕಷ್ಟು ಬಾರಿ ಕನ್ನಡಿ ಮುಂದೆ ನಿಂತು ಮೇಕಪ್‌ನ ಮೊರೆಹೋಗುತ್ತಾರೆ, ಅದರಲ್ಲೂ ಹುಡುಗಿಯರಂತೂ ಕೇಳುವುದೇಬೇಡ, ಆದರೆ ಇದರ ಪರಿಣಾಮ ಮಾತ್ರ ನೇರವಾಗಿ ನಿಮ್ಮ ತ್ವಚೆಯ ಮೇಲೆ ಬೀಳುತ್ತದೆ. ಇಂತಹ ಮೇಕಪ್ ಸಾಕಷ್ಟು ಸಮಯ ಹಚ್ಚಿಕೊಂಡಿರುವುದರಿಂದ ರಾಸಾಯನಿಕ ವಸ್ತುಗಳು ಮುಖವನ್ನು ಹಾಳು ಮಾಡಿಬಿಡುತ್ತವೆ. ಹಾಗಾಗಿ ಮೇಕಪ್ ಅನ್ನು ಆದಷ್ಟು ಬೇಗ ಸ್ವಚ್ಛಮಾಡಿಕೊಳ್ಳುವುದನ್ನು ಮಾತ್ರ ಮರೆಯಬೇಡಿ..ಬನ್ನಿ ಮೇಕಪ್ ಅನ್ನು ನೈಸರ್ಗಿಕವಾಗಿ ನಿವಾರಿಸುವುದು ಹೇಗೆ ಎಂಬುದನ್ನು ತಿಳಿಸಿದ್ದೇವೆ ಮುಂದೆ ಓದಿ...

ಮಸ್ಕರಾವನ್ನು ನೀರಿನಲ್ಲಿ ತೊಳೆಯುವುದು
ಮಸ್ಕರಾವನ್ನು ನೀರಿನಲ್ಲಿ ತೊಳೆಯುವುದರಿಂದ ಅದು ಕಣ್ಣಿಗೆ ಹೋಗಬಹುದು. ಆದ್ದರಿಂದ ನೀರಿನಲ್ಲಿ ತೊಳೆಯಬೇಡಿ. ಆಲೀವ್ ಎಣ್ಣೆಯಲ್ಲಿ ಹತ್ತಿಯನ್ನು ನೆನೆಸಿ ಕಣ್ಣಿನ ರೆಪ್ಪೆಯನ್ನು ಒರೆಸಿ. ಈ ರೀತಿ ಮಾಡುವುದರಿಂದ ಸಂಪೂರ್ಣವಾಗಿ ಮಸ್ಕರಾವನ್ನು ಕಣ್ಣಿನಿಂದ ತೆಗೆಯಬಹುದು.
ಮೇಕಪ್ ವೈಪ್ಸ್ ಬಳಕೆ
ಮೇಕಪ್ ತೆಗೆಯಲು ವೈಪ್ಸ್ ಮಾತ್ರ ಬಳಸುವುದರಿಂದ ಮುಖದಲ್ಲಿ ಕಲೆ, ಮೊಡವೆಗಳಾಗಿ ಮುಖ ಹಾನಿಯಾಗುವ ಸಂಭವವಿರುತ್ತದೆ. ಮೇಕಪ್ ಸಂಪೂರ್ಣವಾಗಿ ತೊಳೆಯಲು ವೈಪ್ಸ್ ಸಾಕಾಗುವುದಿಲ್ಲ. ವೈಪ್ಸ್ ಉಪಯೋಗಿಸುವುದರಿಂದ ಮುಖದ ರಂದ್ರಗಳಲ್ಲಿ ಮೇಕಪ್ ಸೇರಿಕೊಂಡುಬಿಡುವ ಸಂಭವವಿರುತ್ತದೆ.ಆದ್ದರಿಂದ ಡೀಪ್ ಕ್ಲೀನ್ ಮಾಡಲು ಮೊದಲು ಕ್ಲೀನ್ಸರ್ ಉಪಯೋಗಿಸುವುದು ಸೂಕ್ತ.
ತಣ್ಣೀರಿನಲ್ಲಿ ಮುಖ ತೊಳೆಯುವುದು
ಕ್ಲೀನ್ಸರ್ ನಲ್ಲಿ ಮುಖ ತೊಳೆದ ನಂತರ ಹದವಾದ ಬಿಸಿ ನೀರಿನಲ್ಲಿ ಮುಖ ತೊಳೆಯಿರಿ. ತಣ್ಣೀರಿನಲ್ಲಿ ಮುಖ ತೊಳೆಯುವುದರಿಂದ ಮುಖದ ರಂದ್ರಗಳು ಮುಚ್ಚಿಕೊಂಡು ಮೇಕಪ್ ಒಳಗೆ ಹೋಗಿ ಮೊಡವೆಗಳಾಗುತ್ತವೆ
ನೈಸರ್ಗಿಕ ಪರಿಹಾರ
ಮೇಕಪ್ ತೆಗೆಯಲು ನೈಸರ್ಗಿಕ ಅಂಶವೆಂದರೆ ಮೊದಲು ತಣ್ಣಗಿನ ನೀರಿನಿಂದ ಮುಖ ತೊಳೆದುಕೊಂಡು ಹಾಲು ಅಥವಾ ಮೊಸರನ್ನು ಹತ್ತಿಯ ಸಹಾಯದಿಂದ ಮುಖಕ್ಕೆ ಹಚ್ಚಿ ಕೆಲ ನಿಮಿಷದ ನಂತರ ಉಗುರುಬೆಚ್ಚಗಿನ ನೀರಿನಲ್ಲಿ ತೊಳೆದುಕೊಂಡರೆ ತ್ವಚೆ ತಾಜಾ ಆಗಿ, ಮೇಕಪ್ ಒಂದಿಷ್ಟೂ ಉಳಿಯದೆ ಹೋಗುತ್ತದೆ.



Click it and Unblock the Notifications

