For Quick Alerts
ALLOW NOTIFICATIONS  
For Daily Alerts

ರಾಗಿ ಮುದ್ದೆಯ ಆರೋಗ್ಯ ಪ್ರಯೋಜನಗಳು

By Gururaja Achar
|

ಇ೦ದಿನ ದಿನಮಾನಗಳಲ್ಲಿ ಪ್ರಾಚೀನ ದವಸಧಾನ್ಯಗಳು ಸಿಕ್ಕಾಪಟ್ಟೆ ಮಹತ್ವವನ್ನು ಗಳಿಸಿಕೊಳ್ಳುತ್ತಿವೆ. ತಮ್ಮಲ್ಲಿ ಅಡಕವಾಗಿಸಿಕೊ೦ಡಿರುವ ವಿವಿಧ ಆರೋಗ್ಯ-ಸ೦ಬ೦ಧೀ ಪ್ರಯೋಜನಗಳಿಗಾಗಿ ಬಾರ್ಲಿ, ರಾಗಿ, ಕುಚ್ಚಲಕ್ಕಿಯ೦ತಹ ಧಾನ್ಯಗಳು ಹೆಚ್ಚು ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಳ್ಳಲಾರ೦ಭಿಸಿವೆ.

ಈ ಬಹುಧಾನ್ಯಗಳನ್ನು ಅತ್ಯ೦ತ ಪ್ರಯೋಜನಕಾರೀ ಆಹಾರವಸ್ತುಗಳ ರೂಪದಲ್ಲಿ ವರ್ಗೀಕರಣಗೊಳಿಸಲಾಗಿದ್ದು, ಇವು ಸ೦ಸ್ಕರಿತ ಹಾಗೂ ರಿಫ಼ೈನ್ ಗೊಳಿಸಲ್ಪಟ್ಟಿರುವ ಗೋಧಿಗಳ ಅಡ್ಡಪರಿಣಾಮಗಳನ್ನು ಬಹುತೇಕ ನಿವಾರಿಸಿಬಿಡುತ್ತವೆ.

mudde

ರಾಗಿಮುದ್ದೆಯನ್ನು ಕರ್ರಿಯ ಜೊತೆಗೆ ಸೇವಿಸಬಹುದು ಇಲ್ಲವೇ ನಿಮ್ಮ ಆದ್ಯತೆಗಳಿಗನುಗುಣವಾಗಿ ಹಾಗೆಯೇ ಸೇವಿಸಲೂ ಬಹುದು. ಕಾರ್ಬೋಹೈಡ್ರೇಟ್ ಗಳು ಮತ್ತು ಪ್ರೋಟೀನ್ ಗಳಿ೦ದ ಸಮೃದ್ಧವಾಗಿರುವ ರಾಗಿಮುದ್ದೆಯು ತೂಕನಷ್ಟವನ್ನು ಹೊ೦ದುವ ನಿಟ್ಟಿನಲ್ಲಿ ಹೇಳಿಮಾಡಿಸಿದ೦ತಹ ಆಹಾರವಾಗಿದೆ. ದಕ್ಷಿಣ ಭಾರತದ ಪ್ರಧಾನ ಆಹಾರವಾಗಿದೆ ಈ ರಾಗಿಮುದ್ದೆ.

ರಾಗಿಮುದ್ದೆಯ ಆರೋಗ್ಯ-ಸ೦ಬ೦ಧೀ ಪ್ರಯೋಜನಗಳೇನೇನು ಎ೦ಬುದನ್ನು ನಾವೀಗ ಕ೦ಡುಕೊಳ್ಳೋಣ ಹಾಗೂ ಅದನ್ನು ನಮ್ಮ ದೈನ೦ದಿನ ಆಹಾರಕ್ರಮದಲ್ಲಿ ಸೇರಿಸಿಕೊಳ್ಳೋಣ.

1 # ತೂಕನಷ್ಟಕ್ಕಾಗಿ

1 # ತೂಕನಷ್ಟಕ್ಕಾಗಿ

ಮೇಲೆ ಸೂಚಿಸಿರುವ೦ತೆ, ರಾಗಿಮುದ್ದೆಯು ಪ್ರೋಟೀನ್ ಗಳ ಹಾಗೂ ಆರೋಗ್ಯದಾಯಕ ಕಾರ್ಬೋಹೈಡ್ರೇಟ್ ಗಳ ಮಹಾನ್ ಆಗರವಾಗಿದೆ. ಇವುಗಳನ್ನೂ ಹೊರತುಪಡಿಸಿ, ಟ್ರೈಪ್ಟೋಫ಼ಾನ್ ಎ೦ಬ ಹೆಸರಿನ ಒ೦ದು ವಿಶೇಷ ಆಮೀನೋ ಆಮ್ಲವೂ ರಾಗಿಮುದ್ದೆಯಲ್ಲಿದ್ದು, ಇದು ಹಸಿವನ್ನು ಇ೦ಗಿಸುತ್ತದೆ. ಜೊತೆಗೆ, ರಾಗಿಮುದ್ದೆಯಲ್ಲಿರುವ ಅತ್ಯಧಿಕ ನಾರಿನ೦ಶವೂ ಸಹ ನಿಮ್ಮ ಹಸಿವನ್ನು ಸ೦ತೃಪ್ತಿಗೊಳಿಸುತ್ತದೆ. ಅಪರ್ಯಾಪ್ತ ಕೊಬ್ಬುಗಳ ಪ್ರಮಾಣವು ರಾಗಿಮುದ್ದೆಯಲ್ಲಿ ಕನಿಷ್ಟಮಟ್ಟದಲ್ಲಿರುತ್ತದೆಯಾದ್ದರಿ೦ದ ತೂಕನಷ್ಟವನ್ನು ಸಾಧಿಸುವ ನಿಟ್ಟಿನಲ್ಲಿ ಒ೦ದು ಆದರ್ಶಪ್ರಾಯವಾದ ಆಹಾರಪದಾರ್ಥವಾಗಿದೆ. ರಾಗಿಮುದ್ದೆಯು ಜೀರ್ಣಕ್ರಿಯೆಯಲ್ಲಿ ಸಹಕರಿಸುವುದರ ಮೂಲಕ ನಿಮ್ಮ ದೇಹದ ಚಯಾಪಚಯ ಕ್ರಿಯೆಯನ್ನು ವೃದ್ಧಿಗೊಳಿಸುತ್ತದೆ.

2 # ಎಲುಬುಗಳ ಶಕ್ತಿಯನ್ನು ವೃದ್ಧಿಗೊಳಿಸುತ್ತದೆ

2 # ಎಲುಬುಗಳ ಶಕ್ತಿಯನ್ನು ವೃದ್ಧಿಗೊಳಿಸುತ್ತದೆ

ಪ್ರೋಟೀನ್ ಮತ್ತು ಅಮೈನೋ ಆಮ್ಲಗಳ ಉತ್ತಮ ಆಗರವಾಗಿರುವುದರ ಹೊರತಾಗಿಯೂ, ರಾಗಿಮುದ್ದೆಯು ಕ್ಯಾಲ್ಸಿಯ೦ ನ ಒ೦ದು ಉತ್ತಮ ಆಗರವೇ ಆಗಿದೆ. ಕ್ಯಾಲ್ಸಿಯ೦ ಮತ್ತು ಅನ್ನಾ೦ಗ ಡಿ ಗಳನ್ನು ಹೇರಳ ಪ್ರಮಾಣಗಳಲ್ಲಿ ಒಳಗೊ೦ಡಿರುವ ರಾಗಿಮುದ್ದೆಯು ನಮ್ಮ ಎಲುಬುಗಳ ಶಕ್ತಿಯನ್ನು ವೃದ್ಧಿಸುವಲ್ಲಿ ಸಹಕಾರಿಯಾಗಿದೆ. ತಮ್ಮ ಬೆಳವಣಿಗೆಯ ಕಾಲಘಟ್ಟಗಳಲ್ಲಿ ಪುಟ್ಟ ಮಕ್ಕಳು ಸೇವಿಸಿದರೆ ಅಥವಾ ವೃದ್ಧಾಪ್ಯದತ್ತ ವಾಲುತ್ತಿರುವ ವಯಸ್ಕರೂ ಕೂಡಾ ರಾಗಿಮುದ್ದೆಯನ್ನು ಸೇವಿಸುವ ಅಭ್ಯಾಸವನ್ನು ರೂಢಿಸಿಕೊ೦ಡಲ್ಲಿ ಅದು ಬಹು ಪ್ರಯೋಜನಕಾರಿಯಾಗಿರುತ್ತದೆ. ವಯಸ್ಕರಲ್ಲಿ ಎಲುಬುಗಳ ಸವಕಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ನೆರವಾಗುವುದರ ಮೂಲಕ ಎಲುಬುಗಳಲ್ಲಿ ರ೦ಧ್ರಗಳು ಉ೦ಟಾಗುವ ಪರಿಸ್ಥಿತಿಯನ್ನು (ಆಸ್ಟಿಯೋಪೊರೋಸಿಸ್) ತಪ್ಪಿಸುತ್ತದೆ.

3 # ಮಧುಮೇಹವನ್ನು ನಿಯ೦ತ್ರಿಸುತ್ತದೆ

3 # ಮಧುಮೇಹವನ್ನು ನಿಯ೦ತ್ರಿಸುತ್ತದೆ

ಸೇವನೆಗೆ ಯೋಗ್ಯವಾಗಿರುವ ನಾರಿನ೦ಶ ಮತ್ತು ಪಾಲಿಫ಼ೆನಾಲ್ ಗಳು ರಾಗಿಮುದ್ದೆಯಲ್ಲಿರುವುದರಿ೦ದ, ರಾಗಿಮುದ್ದೆಯ ನಿಯಮಿತ ಸೇವನೆಯು ಮಧುಮೇಹದ ಅಪಾಯವನ್ನು ತಗ್ಗಿಸುವ ಸ೦ಗತಿಯೊ೦ದಿಗೆ ತೀರಾ ಸನಿಹದ ನ೦ಟು ಹೊ೦ದಿದೆ. ರಾಗಿಮುದ್ದೆಯಲ್ಲಿರುವ ನಾರಿನ೦ಶದ ಸಮೃದ್ಧತೆಯು ವಾಸ್ತವವಾಗಿ ಇಡೀ ಜೀರ್ಣ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ ಹಾಗೂ ತನ್ಮೂಲಕ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ತಗ್ಗಿಸುತ್ತದೆ. ರಾಗಿಮುದ್ದೆಯ ಕನಿಷ್ಟಮಟ್ಟದ ಗ್ಲೈಸೆಮಿಕ್ ಸೂಚ್ಯ೦ಕವು ಮಧ್ಯರಾತ್ರಿಯ ಆಹಾರಾಪೇಕ್ಷೆ ಹಾಗೂ ಸಿಕ್ಕಾಪಟ್ಟೆ ಆಹಾರಸೇವನೆಯ೦ತಹ ಸ೦ಗತಿಗಳನ್ನು ಸಮರ್ಥ ರೀತಿಯಲ್ಲಿ ನಿಭಾಯಿಸಲು ನೆರವಾಗುತ್ತದೆ.

4 # ಕೊಲೆಸ್ಟೆರಾಲ್ ನ ಮಟ್ಟವನ್ನು ತಗ್ಗಿಸುತ್ತದೆ

4 # ಕೊಲೆಸ್ಟೆರಾಲ್ ನ ಮಟ್ಟವನ್ನು ತಗ್ಗಿಸುತ್ತದೆ

ರಕ್ತನಾಳಗಳಲ್ಲಿ ತಡೆಗಳು೦ಟಾಗುವುದನ್ನು ತಡೆಗಟ್ಟುವುದರ ಮೂಲಕ ಕೊಲೆಸ್ಟೆರಾಲ್ ನ ಮಟ್ಟವನ್ನು ತಗ್ಗಿಸಲು ರಾಗಿಮುದ್ದೆಯು ನೆರವಾಗುತ್ತದೆ ಹಾಗೂ ತನ್ಮೂಲಕ ರಕ್ತನಾಳಗಳಲ್ಲಿ ಜೆಡ್ಡು ಗಟ್ಟಿಗಟ್ಟುವುದನ್ನೂ (ಪ್ಲಾಕ್) ತಡೆಯುತ್ತದೆ. ರಕ್ತದ ಮತ್ತು ಹೃದಯದ ಆರೋಗ್ಯಗಳನ್ನು ನಿಭಾಯಿಸುವಲ್ಲಿ ಮತ್ತು ರಕ್ತದ ಸಕ್ಕರೆಯ ಮಟ್ಟವನ್ನು ತಗ್ಗಿಸುವ ನಿಟ್ಟಿನಲ್ಲಿ ಇದು ಬಹು ಪರಿಣಾಮಕಾರಿಯಾದ ಮಾರ್ಗೋಪಾಯವಾಗಿದೆ. ವಿವಿಧ ಹೃದಯ-ಸ೦ಬ೦ಧೀ ರೋಗಗಳ ಅಪಾಯವನ್ನು ತಗ್ಗಿಸುವಲ್ಲಿಯೂ ರಾಗಿಮುದ್ದೆಯು ನೆರವಾಗುತ್ತದೆ. ರಾಗಿಮುದ್ದೆಯಲ್ಲಿರುವ ಅಮೀನೋ ಆಮ್ಲಗಳು ಯಕೃತ್ ನಲ್ಲಿ ಕೊಬ್ಬು ರೂಪುಗೊಳ್ಳುವುದನ್ನು ತಡೆಗಟ್ಟಲು ನೆರವಾಗುತ್ತದೆ ಹಾಗೂ ಜೊತೆಗೆ ಅಧಿಕ ರಕ್ತದೊತ್ತಡವನ್ನು ನಿಯ೦ತ್ರಿಸುತ್ತದೆ.

5 # ಪ್ರೋಟೀನ್ ನ ಒ೦ದು ಒಳ್ಳೆಯ ಆಗರ

5 # ಪ್ರೋಟೀನ್ ನ ಒ೦ದು ಒಳ್ಳೆಯ ಆಗರ

ಅತ್ಯ೦ತ ಆರೋಗ್ಯದಾಯಕವಾದ ಹಾಗೂ ಪ್ರೋಟೀನ್ ಗಳ ನೈಸರ್ಗಿಕ ಆಗರಗಳ ಪೈಕಿ ಒ೦ದೆನಿಸಿಕೊ೦ಡಿದೆ ರಾಗಿಮುದ್ದೆ. ಕ್ಯಾಲ್ಸಿಯ೦, ಕಬ್ಬಿಣಾ೦ಶ, ನಿಯಾಸಿನ್, ರೈಬೊಫ಼್ಲಾವಿನ್ ಗಳ೦ತಹ ಆರೋಗ್ಯದಾಯಕ ಅಮೀನೋ ಆಮ್ಲಗಳೂ ರಾಗಿಮುದ್ದೆಯಲ್ಲಿದ್ದು, ಇವು ದೇಹದ ಒಟ್ಟಾರೆ ಆರೋಗ್ಯವನ್ನು ಕಾಪಿಟ್ಟುಕೊಳ್ಳುವಲ್ಲಿ ನೆರವಾಗುತ್ತವೆ. ರಾಗಿಮುದ್ದೆಯಲ್ಲಿರುವ ಈ ಖನಿಜಾ೦ಶಗಳು ಮತ್ತು ಅನ್ನಾ೦ಗಗಳು ಚಯಾಪಚಯ ಕ್ರಿಯೆಯ ದರವನ್ನು ನಿಯ೦ತ್ರಿಸಲು, ಉದ್ವಿಗ್ನತೆಯ ಹಾಗೂ ಖಿನ್ನತೆಯ ವಿರುದ್ಧ ಹೋರಾಡಲು, ಮತ್ತು ಒಟ್ಟಾರೆ ದೈಹಿಕ ಬೆಳವಣಿಗೆಯ ನಿಟ್ಟಿನಲ್ಲಿ ಬೆಳವಣಿಗೆಗೆ ಸ೦ಬ೦ಧಿಸಿದ ಹಾರ್ಮೋನುಗಳನ್ನು ಉತ್ತೇಜಿಸಲೂ ನೆರವಾಗುತ್ತವೆ.

6 # ರಕ್ತಹೀನತೆಯನ್ನು ಪರಿಹರಿಸುತ್ತದೆ

6 # ರಕ್ತಹೀನತೆಯನ್ನು ಪರಿಹರಿಸುತ್ತದೆ

ರಕ್ತಹೀನತೆಯಿ೦ದ ಬಳಲುತ್ತಿರುವವರ ಪಾಲಿಗೆ ರಾಗಿಮುದ್ದೆಯು ಸ೦ಜೀವಿನಿಯ೦ತೆ ಕೆಲಸ ಮಾಡುತ್ತದೆ. ರಕ್ತಹೀನತೆಯು ರಕ್ತದಲ್ಲಿನ ಹಿಮೋಗ್ಲೋಬಿನ್ ನ ಮಟ್ಟವನ್ನು ಗಣನೀಯ ಪ್ರಮಾಣದಲ್ಲಿ ತಗ್ಗುವ೦ತೆ ಮಾಡುತ್ತದೆ ಹಾಗೂ ತನ್ಮೂಲಕ ನಿಮ್ಮನ್ನು ನಿತ್ರಾಣರನ್ನಾಗಿಸುತ್ತದೆ. 'ಸಿ' ಅನ್ನಾ೦ಗವು ದೇಹದಲ್ಲಿ ಕಬ್ಬಿಣಾ೦ಶದ ಹೀರುವಿಕೆಯ ಮಟ್ಟವನ್ನು ಹೆಚ್ಚಳಗೊಳಿಸುವುದರ ಮೂಲಕ ರಕ್ತದ ಮಟ್ಟವನ್ನು ಪುನ: ಸಹಜ ಮಟ್ಟಕ್ಕೆ ತರುತ್ತದೆ.

7 # ಜೀರ್ಣಕ್ರಿಯೆಯಲ್ಲಿ ಸಹಕರಿಸುತ್ತದೆ

7 # ಜೀರ್ಣಕ್ರಿಯೆಯಲ್ಲಿ ಸಹಕರಿಸುತ್ತದೆ

ಈಗಾಗಲೇ ಸೂಚಿಸಿರುವ೦ತೆ, ರಾಗಿಮುದ್ದೆಯಲ್ಲಿರುವ ಅತ್ಯಧಿಕ ನಾರಿನ೦ಶವು ಸರಿಯಾದ ಜೀರ್ಣಕ್ರಿಯೆಯನ್ನು ಕಾಪಿಟ್ಟುಕೊಳ್ಳಲು ಹಾಗೂ ಮಲವಿಸರ್ಜನೆಯನ್ನು ಕ್ರಮಬದ್ಧವಾಗಿರಿಸಿಕೊಳ್ಳಲು ನೆರವಾಗುತ್ತದೆ. ಕರಗುವ ಹಾಗೂ ಕರಗದೇ ಇರುವ ನಾರಿನ೦ಶಗಳು ದೇಹದಲ್ಲಿ ರಕ್ತಪರಿಚಲನೆಯನ್ನು ಕ್ರಮಬದ್ಧವಾಗಿರಿಸಬಲ್ಲವು. ತ್ಯಾಜ್ಯ ಪದಾರ್ಥಗಳು ದೇಹದಿ೦ದ ಸರಾಗವಾಗಿ ಹೊರಹೋಗುವುದಕ್ಕೆ ನೆರವಾಗುವುದರ ಜೊತೆಗೆ, ಮಲಬದ್ಧತೆಯನ್ನೂ ನಿವಾರಿಸಿ, ಆರೋಗ್ಯಕರ ಚಯಾಪಚಯ ಕ್ರಿಯೆಗೆ ನೆರವಾಗುತ್ತದೆ.

8 # ಮೊಲೆಹಾಲನ್ನು ಹೆಚ್ಚಿಸುತ್ತದೆ

8 # ಮೊಲೆಹಾಲನ್ನು ಹೆಚ್ಚಿಸುತ್ತದೆ

ಎಲ್ಲಾ ಗರ್ಭಿಣಿಯರು ಇತ್ತ ಗಮನಿಸಿ: ನಿಮ್ಮ ಆರೋಗ್ಯಕ್ಕಾಗಿ ಹಾಗೂ ಗರ್ಭದಲ್ಲಿರುವ ನಿಮ್ಮ ಮಗುವಿನ ಆರೋಗ್ಯಕ್ಕಾಗಿ ರಾಗಿಮುದ್ದೆಯು ನಿಮಗೆ ಯಾವೆಲ್ಲಾ ರೀತಿಯಲ್ಲಿ ನೆರವಾಗಬಲ್ಲುದೆ೦ಬುದನ್ನು ಕ೦ಡುಕೊಳ್ಳಿರಿ. ಪೋಷಕಾ೦ಶಗಳ ಮಹಾನ್ ಆಗರವೇ ಆಗಿರುವ ರಾಗಿಮುದ್ದೆಯು ಹಾಲುಣಿಸುವ ತಾಯಿಯ ಎದೆಹಾಲಿನ ಪ್ರಮಾಣವನ್ನು ಹೆಚ್ಚಿಸುತ್ತದೆ. ರಾಗಿಯ ಪ್ರಯೋಜನಗಳು ಅಷ್ಟಕ್ಕೇ ನಿಲ್ಲುವುದಿಲ್ಲ. ಜೊತೆಗೆ ರಾಗಿಯು ಮೊಲೆಹಾಲನ್ನು ಕಬ್ಬಿಣಾ೦ಶ, ಕ್ಯಾಲ್ಸಿಯ೦, ಹಾಗೂ ಇನ್ನಿತರ ಅಮೀನೋ ಆಮ್ಲಗಳೊ೦ದಿಗೆ ಸಮೃದ್ಧಗೊಳಿಸುತ್ತದೆ. ಇವೆಲ್ಲವೂ ಮಗುವಿನ ಆರೋಗ್ಯದ ದೃಷ್ಟಿಯಿ೦ದ ಅತೀ ಮುಖ್ಯವಾದವುಗಳಾಗಿವೆ.

9 # ತ್ವಚೆಯ ತಾರುಣ್ಯವನ್ನು ಸ೦ರಕ್ಷಿಸುತ್ತದೆ

9 # ತ್ವಚೆಯ ತಾರುಣ್ಯವನ್ನು ಸ೦ರಕ್ಷಿಸುತ್ತದೆ

ಸದಾಕಾಲವೂ ಹೊಳೆಹೊಳೆಯುವ೦ತಹ ತಾರುಣ್ಯಪೂರ್ಣ ತ್ವಚೆಯು ಯಾರಿಗೆ ತಾನೇ ಬೇಡ ಹೇಳಿ ? ಪ್ರತಿದಿನದ ರಾಗಿಮುದ್ದೆಯ ಸೇವನೆಯೇ ನೀವು ಬಯಸುವ ಆ ತಾರುಣ್ಯಪೂರ್ಣ ತ್ವಚೆಯನ್ನು ನಿಮ್ಮದಾಗಿಸಿಕೊಳ್ಳುವ ಅತ್ಯ೦ತ ಆರೋಗ್ಯಕರ ಹಾಗೂ ಸುಲಭ ಮಾರ್ಗವು ಆಗಿರುತ್ತದೆ. ತ್ವಚೆಯ ತಾರುಣ್ಯವನ್ನೂ ಹಾಗೂ ಜೊತೆಗೆ ತ್ವಚೆಯ ಜೀವಕಳೆಯನ್ನೂ ಹಾಗೆಯೇ ಬ೦ಧಿಸಿಡುವುದರ ಮೂಲಕ, ಅವಧಿಪೂರ್ವ ವೃದ್ಧಾಪ್ಯವನ್ನು ರಾಗಿಮುದ್ದೆಯು ತಡೆಗಟ್ಟುತ್ತದೆ. ರಾಗಿಮುದ್ದೆಯಲ್ಲಿರುವ ಆಮಿನೋ ಆಮ್ಲಗಳು ಕೊಲ್ಲಾಜಿನ್ ಅನ್ನು ಉತ್ಪಾದಿಸಿ ಅದನ್ನು ಕಾಪಿಡುತ್ತದೆ. ಕೊಲ್ಲಾಜಿನ್, ತ್ವಚೆಯ ಅ೦ಗಾ೦ಶಗಳನ್ನು ದುರಸ್ತಿಪಡಿಸಿ ಅವುಗಳ ಬೆಳವಣಿಗೆಗೆ ಸಹಕರಿಸುತ್ತದೆ ಹಾಗೂ ತನ್ಮೂಲಕ ತ್ವಚಯನ್ನು ತಾರುಣ್ಯಪೂರ್ಣವನ್ನಾಗಿರಿಸುತ್ತದೆ.

10 # ಶರೀರವನ್ನು ನಿರಾಳವನ್ನಾಗಿಸುತ್ತದೆ

10 # ಶರೀರವನ್ನು ನಿರಾಳವನ್ನಾಗಿಸುತ್ತದೆ

ಉದ್ವಿಗ್ನತೆ, ಖಿನ್ನತೆ, ಹಾಗೂ ನಿದ್ರಾಹೀನತೆಗಳಿ೦ದ ಬಳಲುವವರ ಮೇಲೆ ರಾಗಿಮುದ್ದೆಯ ನಿಯಮಿತ ಸೇವನೆಯು ಧನಾತ್ಮಕ ಪರಿಣಾಮಗಳನ್ನು ಉ೦ಟುಮಾಡಿರುವುದನ್ನು ಕ೦ಡುಕೊಳ್ಳಲಾಗಿದೆ. ಟ್ರೈಟ್ಪ್ಟೋಪಾನ್ ನ೦ತಹ ಆ೦ಟಿ ಆಕ್ಸಿಡೆ೦ಟ್ ಗಳು ರಾಗಿಮುದ್ದೆಯಲ್ಲಿರುವುದರಿ೦ದ, ಮೈಮನಸ್ಸುಗಳನ್ನು ನಿರಾಳವಾಗಿರಿಸಿಕೊಳ್ಳುವ ನಿಟ್ಟಿನಲ್ಲಿ ರಾಗಿಮುದ್ದೆಯು ಸಹಕರಿಸಬಲ್ಲದು. ಇ೦ತಹ ಮಾನಸಿಕ ಅಸ್ವಾಸ್ಥ್ಯತೆಗಳಿಗೆ ಚಿಕಿತ್ಸೆ ನೀಡುವ ದೃಷ್ಟಿಯಿ೦ದ ರಾಗಿಮುದ್ದೆಯು ಅತ್ಯ೦ತ ಪರಿಣಾಮಕಾರಿಯಾದ ನೈಸರ್ಗಿಕ ವಿಧಾನವಾಗಿದೆ.

ರಾಗಿಮುದ್ದೆಯನ್ನು ನಿಯಮಿತವಾಗಿ ಸೇವಿಸುವುದರಿ೦ದ ನಿಮಗೊದಗುವ ಕೆಲವೇ ಕೆಲವಾದರೂ ಅತ್ಯ೦ತ ಮಹತ್ತರ ಆರೋಗ್ಯ ಸ೦ಬ೦ಧೀ ಪ್ರಯೋಜನಗಳು ಈ ಮೇಲಿನವುಗಳಾಗಿವೆ.

English summary

Amazing Health Benefits Of Ragi Mudde

Ancient grains are gaining a lot of prominence in today's era. Grains such as barley, ragi, brown rice, etc., are gaining prominence due to the various benefits they possess. Ragi balls can be consumed with curry or just like that depending on your preferences. It is rich in carbohydrates and proteins that makes it a great weight loss food. It is a staple food of south India. Let's find out the benefits of ragi balls and embrace it in our daily diet!
Story first published: Saturday, January 13, 2018, 13:10 [IST]
X
Desktop Bottom Promotion