For Quick Alerts
ALLOW NOTIFICATIONS  
For Daily Alerts

ಆರೋಗ್ಯದ ದೃಷ್ಟಿಯಿಂದ ನವರಾತ್ರಿಯ ಸಮಯದಲ್ಲಿ ಈ ಆಹಾರಗಳಿಂದ ದೂರವಿರಿ

By Arshad
|

ಹಿಂದೂ ಧರ್ಮೀಯರಿಗೆ ನವರಾತ್ರಿಯ ಸಮಯ ಅತಿ ಪವಿತ್ರವಾದ ಅವಧಿಯಾಗಿದ್ದು ಒಟ್ಟು ಒಂಬತ್ತು ದಿನಗಳ ಕಾಲ ಆಚರಿಸಲಾಗುತ್ತದೆ. ಈ ಒಂಬತ್ತೂ ದಿನಗಳಂದು ಮನೆ ಮನೆಯಲ್ಲಿ ಸಂಭ್ರಮ ತುಳುಕಾಡುತ್ತದೆ. ಮಹಿಳಾ ಶಕ್ತಿಯ ಪ್ರತೀಕವಾಗಿರುವ ದುರ್ಗಾಮಾತೆಗೆ ಪೂಜೆ ಸಲ್ಲಿಸಿ ವೇದಘೋಷ ಮೊಳಗಿಸುತ್ತಾ ಪ್ರಸಾದವನ್ನು ಹಂಚುತ್ತಾ ಧಾರ್ಮಿಕ ವಿಧಿಗಳನ್ನು ನಿರ್ವಹಿಸಲಾಗುತ್ತದೆ. ಮನೆ ಮನೆಯಲ್ಲಿ ಸಿಹಿತಿಂಡಿಗಳು, ವಿವಿಧ ಭಕ್ಷ್ಯಗಳನ್ನು ತಯಾರಿಸಿ ಸವಿಯಲಾಗುತ್ತದೆ.

ಈ ಸಂದರ್ಭದಲ್ಲಿ ಮಹಿಳೆಯರೂ ಪುರುಷರಷ್ಟೇ ಬಲಿಷ್ಠರು ಎಂಬುದನ್ನು ಪ್ರಸ್ತುತಪಡಿಸಲಾಗುತ್ತದೆ. ದೇಶದ ವಿವಿಧ ರಾಜ್ಯಗಳಲ್ಲಿ ಈ ಹಬ್ಬದ ಆಚರಣೆಯ ವಿಧಿಗಳಲ್ಲಿ ಕೊಂಚ ವ್ಯತ್ಯಾಸವಿರಬಹುದು. ವಾಸ್ತವವಾಗಿ ಈ ಪೂಜೆಯನ್ನು ವರ್ಷದಲ್ಲಿ ಎರಡು ಬಾರಿ, ಅಂದರೆ ಮೊದಲು ಚೈತ್ರ ಮಾಸದಲ್ಲಿ (ಸುಮಾರು ಏಪ್ರಿಲ್-ಮೇ) ಹಾಗೂ ಎರಡನೆಯದಾಗಿ ಶರದ್ ಮಾಸದಲ್ಲಿ (ಅಕ್ಟೋಬರ್-ನವೆಂಬರ್) ಆಚರಿಸಲಾಗುತ್ತದೆ.

ನವರಾತ್ರಿ ವಿಶೇಷ: ನವದುರ್ಗೆಯರಿಗೆ 'ನವ ನೈವೇದ್ಯ'

ಹಬ್ಬದ ದಿನಗಳಲ್ಲಿ ಹೊಸ ಬಟ್ಟೆ ಧರಿಸಿ ಬೆಳಗ್ಗಿನ ವಿಶೇಷ ಪೂಜೆಗಳಲ್ಲಿ ಭಾಗವಹಿಸುವುದು, ಅಗರಬತ್ತಿಗಳನ್ನು ಹಚ್ಚಿ ವಾತಾವರಣವನ್ನು ಸುಗಂಧಮಯವಾಗಿಸುವುದು ಮೊದಲಾದವು ನವರಾತ್ರಿಯ ಅವಧಿಯ ಸಾಮಾನ್ಯ ವಿಧಿಗಳಾಗಿವೆ. ಹಿಂದೂ ಧರ್ಮೀಯರಿಗೆ ನವರಾತ್ರಿಯ ಪೂಜೆ ವಿಶೇಷ ಮಹತ್ವ ಪಡೆದಿದ್ದು ಈ ಅವಧಿಯಲ್ಲಿ ಮನೆಯಿಂದ ಕೇಡುಗಳನ್ನು ಹೊರಗಿಡುವಂತೆ ಹೋಮ ಹವನಗಳನ್ನು ನಡೆಸಲಾಗುತ್ತದೆ. ಎಲ್ಲಾ ಮನೆಯಲ್ಲಿಯೂ ಹಬ್ಬದ ಊಟವೇ ಆಗಿರುವುದರಿಂದ ಹಾಗೂ ಮಹಿಳೆಯರು ಹೆಚ್ಚಿನ ಅಸ್ಥೆ ವಹಿಸಿ ರುಚಿರುಚಿಯಾಗಿ ವಿವಿಧ ಭಕ್ಷ್ಯಗಳನ್ನು ತಯಾರಿಸುವುದರಿಂದ ಎಲ್ಲರೂ ಮನದಣಿಯೆ ಊಟ ಮಾಡುತ್ತಾರೆ.


ವ್ರತ ಪಾಲಿಸುವಾಗ ಆರ್ಯುವೇದ ಗುಣದ ಈ ಆಹಾರ ತಿನ್ನಿ

ಹಲವೆಡೆ ಬಾಡೂಟಗಳೂ ಇರುತ್ತವೆ. ಆದರೆ ಹಬ್ಬದ ಸಂಭ್ರಮದಲ್ಲಿ ಕೊಂಚ ಹೆಚ್ಚೇ ಹೊಟ್ಟೆಗೆ ಸೇರುವ ಈ ಭಾರೀ ಆಹಾರಗಳು ಆ ಕ್ಷಣಕ್ಕೆ ಜಿಹ್ವಾಚಾಪಲ್ಯವನ್ನು ತಣಿಸಿದರೂ ದೇಹಕ್ಕೆ ಒಳ್ಳೆಯದಕ್ಕಿಂತ ಹಾನಿ ಮಾಡುವುದೇ ಹೆಚ್ಚು. ಹಬ್ಬದ ಅಡುಗೆಗಳು ಎಷ್ಟೇ ಪ್ರಬಲ ಆಕರ್ಷಣೆ ಒದಗಿಸಿದರೂ ಕೆಲವು ಆಹಾರಗಳನ್ನು ಮಾತ್ರ ಕಡ್ಡಾಯವಾಗಿ ದೂರವಿಡುವುದೇ ಆರೋಗ್ಯಕ್ಕೆ ಉತ್ತಮ. ಬನ್ನಿ, ಆಕರ್ಷಣೀಯವಾಗಿದ್ದರೂ ಬೇಡ ಎನ್ನಬೇಕಾದ ಆಹಾರಗಳು ಯಾವುವು ಎಂಬುದನ್ನು ನೋಡೋಣ...

ಹುರಿದ ತಿಂಡಿಗಳಿಗೆ ಬೇಡ ಎನ್ನಿ

ಹುರಿದ ತಿಂಡಿಗಳಿಗೆ ಬೇಡ ಎನ್ನಿ

ಕೊಲೆಸ್ಟ್ರಾಲ್, ಅಧಿಕ ರಕ್ತದೊತ್ತಡ, ಥೈರಾಯ್ಡ್ ಗ್ರಂಥಿಯ ತೊಂದರೆ, ರಕ್ತದಲ್ಲಿ ಹೆಚ್ಚಿನ ಸಕ್ಕರೆ ಮೊದಲಾದ ಕಾಯಿಲೆಗಳು ಅನುವಂಶೀಯವಾಗಿ ಬರುವ ಸಹಿತ ಅನಾರೋಗ್ಯಕರ ಆಹಾರ ಸೇವನೆಯ ಮೂಲಕವೂ ಬರುತ್ತವೆ. ವಿಶೇಷವಾಗಿ ಎಣ್ಣೆಯಲ್ಲಿ ಹುರಿದಿರುವ ತಿಂಡಿಗಳು, ಬರ್ಗರ್, ಪಿಜ್ಜಾ, ಸಾಸೇಜ್, ಫ್ರೆಂಚ್ ಫ್ರೈ ಮೊದಲಾದ ಸಂಸ್ಕರಿತ ಆಹಾರಗಳು ವಿಶೇಷವಾಗಿ ಯುವಜನತೆಯ ಇಂದಿನ ಆಯ್ಕೆಯಾಗಿದೆ. ಆದರೆ ಹಬ್ಬದ ಸಂಭ್ರಮ ಆರೋಗ್ಯವಿದ್ದರಲ್ಲವೇ ಚೆಂದ. ಈ ಆಹಾರಗಳನ್ನು ತಿಂದು ಹೊಟ್ಟೆ ಕೆಡಿಸಿಕೊಂಡರೆ ಹಬ್ಬದ ಸಂಭ್ರಮ ಮಂಕಾಗಬಹುದು. ಅಲ್ಲದೇ ಇವು ಸಿದ್ಧರೂಪದಲ್ಲಿ ಸಿಗುವ ಕಾರಣ ಅಲ್ಪಕಾಲದಲ್ಲಿಯೇ ತಿನ್ನಲು ಲಭ್ಯವಾಗುವುದು ಯುವಜನತೆ ಇಷ್ಟಪಡಲು ಇನ್ನೊಂದು ಕಾರಣ. ಯಾವುದೇ ಕಾರಣಕ್ಕೂ ಈ ಆಹಾರಗಳಿಗೆ ಬೇಡ ಎನ್ನುವ ಮೂಲಕವೇ ಆರೋಗ್ಯವನ್ನು ಕಾಪಾಡಲು ಸಾಧ್ಯ.

ಹಣ್ಣುಗಳನ್ನು ಸೇವಿಸಿ

ಹಣ್ಣುಗಳನ್ನು ಸೇವಿಸಿ

ಆದರೆ ಕೆಲವು ಆಹಾರಗಳು ನಿಮ್ಮ ಆರೋಗ್ಯವನ್ನು ಕಾಪಾಡಲು ನೆರವಾಗುತ್ತವೆ. ನವರಾತ್ರಿಯ ಒಂಭತ್ತು ದಿನಗಳಲ್ಲೂ ತಯಾರಿಸುವ ಕೆಲವು ಮನೆಯಲ್ಲಿಯೇ ತಯಾರಿಸಿದ ಆರೋಗ್ಯಕರ ಅಡುಗೆಗಳು, ವಿಶೇಷವಾಗಿ ಸಸ್ಯಾಹಾರಿ ಅಡುಗೆಗಳು, ಹಣ್ಣು ಮತ್ತು ಸಕ್ಕರೆಯ ಬದಲಿಗೆ ಬೆಲ್ಲದಲ್ಲಿ ತಯಾರಿಸಿದ ಸಾಂಪ್ರಾದಾಯಿಕ ಸಿಹಿತಿನಿಸುಗಳು ಆರೋಗ್ಯಕರವಾಗಿವೆ. ಹಸಿರು ಎಲೆಗಳು ಮತ್ತು ತರಕಾರಿಗಳನ್ನು ಬಳಸಿ ತಯಾರಿಸಿದ ಆಹಾರದಲ್ಲಿ ಹೆಚ್ಚಿನ ಕಾರ್ಬೋಹೈಡ್ರೇಟುಗಳಿದ್ದು ವಯಸ್ಕರಿಗೂ ಸೂಕ್ತವಾಗಿದೆ. ಆದ್ದರಿಂದ ಈ ನವರಾತ್ರಿಯ ಸಂಭ್ರಮದಲ್ಲಿ ಹುರಿದ ಸಮೋಸಾ, ಪಕೋಡಗಳ ಬದಲಿಗೆ ಹಣ್ಣುಗಳು, ರಾಯ್ತಾ, ಹಾಲು ಮೊದಲಾದವುಗಳನ್ನು ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ.

ಎಣ್ಣೆಯ ತಿನಿಸುಗಳನ್ನು ಆದಷ್ಟೂ ಕಡಿಮೆ ಮಾಡಿ

ಎಣ್ಣೆಯ ತಿನಿಸುಗಳನ್ನು ಆದಷ್ಟೂ ಕಡಿಮೆ ಮಾಡಿ

ಒಂದು ವೇಳೆ ನಿಮ್ಮ ಆರೋಗ್ಯ ಉತ್ತಮ ಹಾಗೂ ಚಟುವಟಿಕೆಯಿಂದಿರಬೇಕೆಂದಿದ್ದರೆ ಎಣ್ಣೆಯ ತಿನಿಸುಗಳಿಂದ ದೂರವಿರಿ. ಬರೆಯ ನವರಾತ್ರಿಯ ಸಮಯದಲ್ಲಿ ಮಾತ್ರವಲ್ಲ, ವರ್ಷದ ಎಲ್ಲಾ ದಿನಗಳಲ್ಲೂ! ಏಕೆಂದರೆ ಎಣ್ಣೆಯಲ್ಲಿರುವ ಸಂತುಲಿತ ಕೊಬ್ಬು ನೇರವಾಗಿ ರಕ್ತಕ್ಕೆ ಧಾವಿಸಿ ದೇಹದಲ್ಲೆಲ್ಲಾ ತುಂಬಿಕೊಂಡು ತೂಕವನ್ನು ಹೆಚ್ಚಿಸುವುದು ಮಾತ್ರವಲ್ಲದೇ ನರಗಳ ಒಳಗಿನ ಕವಲು ತಿರುವುಗಳಿರುವಲ್ಲೆಲ್ಲಾ ಅಂಟಿಕೊಂಡು ರಕ್ತಸಂಚಾರಕ್ಕೆ ಅಡ್ಡಿಯುಂಟುಮಾಡುತ್ತವೆ. ಇದು ಹೃದಯದ ಆಘಾತಕ್ಕೆ ಪ್ರಮುಖ ಕಾರಣವಾಗಿದೆ. ಆದ್ದರಿಂದ ನಿಮ್ಮ ಹೃದಯ ಆರೋಗ್ಯಕರವಾಗಿರಬೇಕೆಂದು ನೀವು ಬಯಸುತ್ತಿದ್ದರೆ ಹಾಗೂ ತೂಕ ಇಳಿಸಲೂ ಬಯಸುತ್ತಿದ್ದರೆ ಎಣ್ಣೆಯ ತಿನಿಸುಗಳ ಮೋಹವನ್ನು ತ್ಯಜಿಸಿ. ಹಬ್ಬದ ವಿಶೇಷ ಸಂದರ್ಭದಲ್ಲಿ ತಯಾರಿಸಿದ ಪೂರಿ, ಚಪಾತಿಗಳ ಬದಲಿಗೆ ಎಣ್ಣೆಯಿಲ್ಲದೇ ತಯಾರಿಸಿದ ಇಡಿಯ ಗೋಧಿಯ ಹಿಟ್ಟಿನ ಚಪಾತಿ, ಅಕ್ಕಿ ರೊಟ್ಟಿ, ಹಸಿರು ಎಲೆ ಹಾಗೂ ತರಕಾರಿಗಳು, ಹಾಲು, ಮೊಸರು ಮೊದಲಾದವುಗಳನ್ನು ಹೆಚ್ಚು ಹೆಚ್ಚು ಸೇವಿಸಿ. ಈ ನವರಾತ್ರಿ ಮಾತ್ರವಲ್ಲ ಮುಂಬರುವ ಎಲ್ಲಾ ನವರಾತ್ರಿಗಳಲ್ಲಿಯೂ ನಿಮ್ಮ ಆರೋಗ್ಯ ಉತ್ತಮವಾಗಿರಲಿ.

ನಿಗದಿತ ಪ್ರಮಾಣ

ನಿಗದಿತ ಪ್ರಮಾಣ

ಪೂಜೆಯ ಅವಧಿಯಲ್ಲಿ ನಮಗೆ ಪ್ರಸಾದದ ರೂಪದಲ್ಲಿ ಕೆಲವಾರು ಸಿಹಿತಿನಿಸುಗಳು ಲಭ್ಯವಾಗುತ್ತವೆ. ಅತ್ಯಂತ ರುಚಿಯಾಗಿರುವ ಈ ಸಿಹಿತಿನಿಸುಗಳನ್ನು ತಿನ್ನದೇ ಇರಲು ಸಾಧ್ಯವೇ ಇಲ್ಲ. ನವರಾತ್ರಿಯ ಸಂದರ್ಭದಲ್ಲಿ ನಾವು ಭೇಟಿ ನೀಡುವ ಬಂಧು ಮಿತ್ರರ ಮನೆಯಲ್ಲಿಯೂ ಹಬ್ಬದ ಸಿಹಿತಿನಿಸುಗಳನ್ನು ಒಂದೊಂದಾಗಿ ತಿನ್ನುತ್ತಾ ದಿನದ ಕಡೆಯಲ್ಲಿ ಭಾರೀ ಪ್ರಮಾಣದಲ್ಲಿ ಸಿಹಿತಿಂಡಿಗಳನ್ನು ತಿಂದಿರುತ್ತೇವೆ. ಅದರಲ್ಲೂ ತುಪ್ಪದಲ್ಲಿ ಮಾಡಿದ ಲಡ್ಡು, ಬೆಣ್ಣೆ ಲೇಪಿಸಿದ ಪರೋಟ ಮೊದಲಾದವು ಎಲ್ಲರ ನೆಚ್ಚಿನ ಆಯ್ಕೆಯಾಗಿದ್ದು ಎಲ್ಲರೂ ಚಪ್ಪರಿಸಿಕೊಂಡು ತಿನ್ನುತ್ತಿರುವಾಗ ನಮಗೆ ಬೇಡ ಎನ್ನಲೇ ಸಾಧ್ಯವಾಗದು. ಆದರೆ ಆರೋಗ್ಯ ಉಳಿಯಬೇಕು ಎಂದಿದ್ದರೆ ನೀವು ಸೇವಿಸುವ ಈ ಸಿಹಿ ಹಾಗೂ ವಿಶೇಷ ತಿಂಡಿಗಳ ಪ್ರಮಾಣವನ್ನು ನಿಗದಿಗೊಳಿಸಲೇ ಬೇಕು. ಎಲ್ಲಕ್ಕೂ ಉತ್ತಮವೆಂದರೆ ದಿನದಲ್ಲಿ ಏನೇನು ತಿಂದಿರಿ ಎಂಬುದನ್ನು ಒಂದು ಪಟ್ಟಿ ಮಾಡಿ ಕ್ಯಾಲೋರಿಗಳನ್ನು ಲೆಕ್ಕ ಹಾಕಿ. ಈ ಮೂಲಕ ಸಂತುಲಿತ ಪ್ರಮಾಣದ ಸಿಹಿತಿಂಡಿಗಳನ್ನು ಸೇವಿಸಿ ಹಬ್ಬದ ಸಂಭ್ರಮವನ್ನು ಹೆಚ್ಚಿಸಲು ಸಾಧ್ಯ.

ಸಕ್ಕರೆಯ ಸೇವನೆಯನ್ನು ಕಡಿಮೆ ಮಾಡಿ

ಸಕ್ಕರೆಯ ಸೇವನೆಯನ್ನು ಕಡಿಮೆ ಮಾಡಿ

ಪೂಜೆಯಲ್ಲಿ ಪ್ರಸಾದ ಅವಿಭಾಜ್ಯ ಅಂಗವಾಗಿದೆ. ಅಲ್ಲದೇ ಪ್ರಸಾದ ನೀಡುವಾಗ ಬೇಡ ಎನ್ನಬಾರದು. ಪ್ರಸಾದವನ್ನು ಸಾಮಾನ್ಯವಾಗಿ ಸಿಹಿತಿಂಡಿಗಳ ರೂಪದಲ್ಲಿಯೇ ತಯಾರಿಸುತ್ತದೆ.ಸಿಹಿತಿಂಡಿಗಳನ್ನು ಪೂಜಾಸ್ಥಳದಲ್ಲಿಡುವ ಮೂಲಕ ದೇವರನ್ನು ತೃಪ್ತಿಪಡಿಸಬಹುದು ಎಂದು ಹೇಳಲಾಗುತ್ತದೆ. ಆದರೆ ಈ ಸಿಹಿತಿಂಡಿಗಳು ವಿಶೇಷವಾಗಿ ಮಧುಮೇಹಿಗಳಿಗೆ ವಿಷವಾಗಿದೆ. ಇತರರಿಗೂ ಅತಿ ಹೆಚ್ಚಿನ ಸಕ್ಕರೆ ಇರುವ ಈ ತಿಂಡಿಗಳು ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ಥಟ್ಟನೇ ಏರಿಸುವ ಮೂಲಕ ಆರೋಗ್ಯಕ್ಕೆ ಮಾರಕವಾಗಿವೆ. ಆದ್ದರಿಂದ ಪ್ರಸಾದವನ್ನು ಮಿತಪ್ರಮಾಣದಲ್ಲಿ ಸೇವಿಸುವ ಮೂಲಕ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡಬಹುದು.

ಸೋಡಾಗಳನ್ನು ಸೇವಿಸಬೇಡಿ

ಸೋಡಾಗಳನ್ನು ಸೇವಿಸಬೇಡಿ

ಇಂದು ಸೋಡಾ ಹಾಗೂ ಬುರುಗುಬರುವ ಲಘುಪಾನೀಯಗಳು ಹಬ್ಬದ ದಿನದ ಊಟದ ಅವಿಭಾಜ್ಯ ಅಂಗವಾಗಿಬಿಟ್ಟಿವೆ. ಮದ್ಯಾಹ್ನದ ಊಟ,ಸಂಜೆಯ ಚಹಾ ಮೊದಲಾದ ಸಂದರ್ಭಗಳಲ್ಲಿ ಲಘುಪಾನೀಯದ ಸೇವನೆ ಸಾಮಾನ್ಯವಾಗಿದೆ.ಈ ಪಾನೀಯಗಳಲ್ಲಿ ಅತಿಹೆಚ್ಚು ಸಕ್ಕರೆ ಇರುತ್ತದೆ ಹಾಗೂ ನಮ್ಮ ದೇಹಕ್ಕೆ ಬೇಡವಾಗಿರುವ ಇಂಗಾಲದ ಡೈ ಆಕ್ಸೈಡ್ ಅನ್ನು ಕರಗಿಸಲಾಗಿರುತ್ತದೆ. ಅಲ್ಲದೇ ಇದರಲ್ಲಿರುವ ಆಮ್ಲೀಯತೆ ಹಲ್ಲುಗಳನ್ನೂ ಕರಗಿಸುವಷ್ಟು ಪ್ರಬಲವಾಗಿದೆ. ಇದರಲ್ಲಿರುವ ಕೃತಕ ಸಿಹಿಕಾರಕಗಳಲ್ಲಿ ಯಾವುದೇ ಪೋಷಕಾಂಶಗಳಿಲ್ಲ ಹಾಗೂ ಜೀರ್ಣಕ್ರಿಯೆಯನ್ನೂ ಕೆಡಿಸುತ್ತದೆ. ಆದ್ದರಿಂದ ನವರಾತ್ರಿಯ ಸಂದರ್ಭದಲ್ಲಿ ಮನೆಯಲ್ಲಿಯೇ ತಯಾರಿಸಿದ ಆರೋಗ್ಯಕರ ಲಸ್ಸಿ ಹಾಗೂ ಹಣ್ಣಿನ ರಸಗಳನ್ನು ಸೇವಿಸುವ ಮೂಲಕ ಹಬ್ಬದ ಸಂಭ್ರಮವನ್ನು ಸಾಂಪ್ರಾದಾಯಿಕ ವಿಧಾನದಲ್ಲಿ ಸಂಭ್ರಮಿಸುವ ಜೊತೆಗೇ ಆರೋಗ್ಯವನ್ನೂ ಉಳಿಸಿಕೊಳ್ಳಬಹುದು.

ಸೋಡಾಗಳನ್ನು ಸೇವಿಸಬೇಡಿ

ಸೋಡಾಗಳನ್ನು ಸೇವಿಸಬೇಡಿ

ನವರಾತ್ರಿ ಹಿಂದೂ ಧರ್ಮಿಯರಿಗೆ ವಿಶೇಷ ಹಬ್ಬವಾಗಿದ್ದು ಈ ಹಬ್ಬವನ್ನು ಉತ್ತಮ ಆರೋಗ್ಯ ಹಾಗೂ ದೈಹಿಕ ಶಕ್ತಿಯೊಂದಿಗೆ ಆಚರಿಸುವ ಜೊತೆಗೇ ಅನಾರೋಗ್ಯವನ್ನು ಆಹ್ವಾನಿಸದಿರುವುದೇ ನಿಜವಾದ ಆಚರಣೆಯಾಗಿದೆ. ಒಂದು ವೇಳೆ ನೀವು ಈಗಾಗಲೇ ಕೆಲವು ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದರೆ, ಉದಾಹರಣೆಗೆ ಅಧಿಕ ರಕ್ತದೊತ್ತಡ, ಮಧುಮೇಹ ಮೊದಲಾದವುಗಳಿಗೆ ಔಷಧಿಗಳನ್ನು ಸೇವಿಸುತ್ತಿದ್ದರೆ ಹಬ್ಬದ ಸಂಭ್ರಮದಲ್ಲಿ ಇವನ್ನು ಮರೆಯದೇ ಸೇವಿಸುವುದು ಅಗತ್ಯವಾಗಿದೆ. ಈ ಕ್ರಮಗಳನ್ನು ಅನುಸರಿಸುವ ಮೂಲಕ ಆರೋಗ್ಯವನ್ನು ಉಳಿಸಿಕೊಳ್ಳಬಹುದು ಮಾತ್ರವಲ್ಲ, ದಿನವಿಡೀ ಚಟುವಟಿಕೆಯಿಂದ ಇರಲೂ ನೆರವಾಗುತ್ತದೆ.

English summary

Foods You Must Avoid During Navratri

Navratri is an auspicious occasion of the Hindus. The nine-day festival is celebrated with traditional rituals, by fasting, by sharing prasad and chanting Vedic prayers to Goddess Durga-the epitome of woman power. In this puja, women are portrayed as powerful as men in implementing good over evil. People all over the Hindu community celebrate it as Durga Puja or Navratri based on their state and culture.
X
Desktop Bottom Promotion