ಪರೀಕ್ಷಾ ಸಮಯದಲ್ಲಿ ಆಹಾರ ಕ್ರಮ ಹೀಗಿರಲಿ-'ನೆನಪಿನ ಶಕ್ತಿ' ಹೆಚ್ಚುತ್ತೆ

By: Arshad
Subscribe to Boldsky

ಯಾವುದೇ ವಿದ್ಯಾರ್ಥಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯಲು ಸ್ಮರಣಶಕ್ತಿಯೇ ಪ್ರಮುಖ ಪಾತ್ರ ವಹಿಸುತ್ತದೆ. ಈ ಹೊತ್ತಿನಲ್ಲಿ ಪುಸ್ತಕ, ಪ್ರಶ್ನೆ ಪತ್ರಿಕೆ, ಯಾವ ಪ್ರಶ್ನೆ ಪರೀಕ್ಷೆಗೆ ಬರಲಿದೆ, ಪೆನ್ನು ಮೊದಲಾದವೇ ವಿದ್ಯಾರ್ಥಿಯ ತಲೆಯಲ್ಲಿ ಓಡುತ್ತಿರುತ್ತವೆ. ಮಕ್ಕಳಿಗೆ ಪರೀಕ್ಷೆಯಾದರೂ ಇದರ ಹೆಚ್ಚು ಕಷ್ಟ ಪಾಲಕರಿಗೇ ಸರಿ. ಮಕ್ಕಳು ಸರಿಯಾಗಿ ಓದುತ್ತಿದ್ದಾರೋ ಇಲ್ಲವೋ, ಪರೀಕ್ಷೆಯ ಒತ್ತಡದಲ್ಲಿ ಸರಿಯಾಗಿ ಊಟ ಮಾಡುತ್ತಾರೋ ಇಲ್ಲವೋ ಎಂಬ ಆತಂಕವನ್ನು ಪ್ರತಿ ತಾಯಿಯೂ ಎದುರಿಸುತ್ತಾಳೆ. ಜ್ಞಾಪಕ ಶಕ್ತಿ ಹೆಚ್ಚಾಗಬೇಕೇ? ಹಾಗಾದರೆ ಇಲ್ಲಿದೆ ನೋಡಿ ಟಿಪ್ಸ್

ಇತರ ಸಮಯಕ್ಕಿಂತಲೂ ಮೆದುಳಿಗೆ ಹೆಚ್ಚಿನ ಶ್ರಮವನ್ನು ಪರೀಕ್ಷಾ ಸಮಯದಲ್ಲಿಯೇ ನೀಡಲಾಗುತ್ತದೆ ಎಂಬುವುದರಲ್ಲಿ ಎರಡು ಮಾತಿಲ್ಲ. ಆದರೆ ಮೆದುಳಿನ ಮೇಲೆ ಹೆಚ್ಚಿನ ಒತ್ತಡ ಹಾಕಿದ ಮಾತ್ರಕ್ಕೇ ಮೆದುಳಿನ ಕ್ಷಮತೆ ಹೆಚ್ಚುತ್ತದೆಯೇ? ಇದಕ್ಕೆ ಬೇರೆ ಮಾರ್ಗವಿಲ್ಲವೇ? ಒಂದು ವೇಳೆ ಈ ನಿಟ್ಟಿನಲ್ಲಿ ಇದುವರೆಗೆ ಯೋಚಿಸಿರದಿದ್ದರೆ ಈಗಲೂ ತಡವಾಗಿಲ್ಲ.   ಜ್ಞಾಪಕ ಶಕ್ತಿ ಹೆಚ್ಚಿಸಲು ಸರಳ ಸೂತ್ರ

ಮೆದುಳಿನ ಕ್ಷಮತೆಯನ್ನು ಹೆಚ್ಚಿಸುವ, ಚಿಂತನಾ ಸಾಮರ್ಥವನ್ನು ಚುರುಕುಗೊಳಿಸುವ ಕೆಲವಾರು ಆಹಾರಗಳಿದ್ದು ಇವು ಪರೀಕ್ಷಾ ಸಮಯದಲ್ಲಿ ಹೆಚ್ಚಿನ ಪ್ರಯೋಜನಕ್ಕೆ ಬರುತ್ತವೆ. ಮೆದುಳಿನ ಕಾರ್ಯಕ್ಷಮತೆ ಹೆಚ್ಚಲು ಹೆಚ್ಚಿನ ಆಮ್ಲಜನಕ ಹಾಗೂ ಹೆಚ್ಚಿನ ರಕ್ತಸಂಚಾರದ ಅಗತ್ಯವಿದ್ದು ಇದನ್ನು ಈ ಆಹಾರಗಳು ತಮ್ಮಲ್ಲಿರುವ ಪೋಷಕಾಂಶಗಳನ್ನು ಒದಗಿಸುವ ಮೂಲಕ ಪೂರೈಸುತ್ತವೆ.  ಮಕ್ಕಳ ಬುದ್ಧಿ ಶಕ್ತಿ ಹೆಚ್ಚಲು ನೀಡಬೇಕಾದ ಆಹಾರಗಳು

ಮೆದುಳನ್ನು ಚುರುಕುಗೊಳಿಸಲು ಸಮರ್ಥವಾಗಿರುವ ಕೆಲವು ಆಹಾರಗಳನ್ನು ಕೆಳಗೆ ಪಟ್ಟಿ ಮಾಡಲಾಗಿದ್ದು ಪರೀಕ್ಷಾ ಸಮಯದಲ್ಲಿ ಮಕ್ಕಳಿಗೆ ಇದು ಪೌಷ್ಟಿಕವೂ, ರುಚಿಕರವೂ ಆಗಿದ್ದು ಉತ್ತಮ ಅಂಕಗಳನ್ನು ಪಡೆಯಲು ಖಂಡಿತಾ ಸಹಾಯ ಮಾಡುತ್ತವೆ....   

ಮೊಟ್ಟೆ

ಮೊಟ್ಟೆ

ಮೆದುಳಿನ ಕಾರ್ಯವಿಧಾನದಲ್ಲಿ ಸಂಕೇತಗಳನ್ನು ರವಾನಿಸುವ ಮೂಲಭೂತ ನ್ಯೂರೋ ಟ್ರಾನ್ಸ್ ಮಿಟರ್ (fundamental neurotransmitters)ಗಳನ್ನು ಮೊಟ್ಟೆಯಲ್ಲಿರುವ ಕೋಲೀನ್ (choline) ಎಂಬ ಪೋಷಕಾಂಶ ನಿರ್ವಹಿಸುತ್ತದೆ. ಇದರ ಜೊತೆಗೇ ಮೊಟ್ಟೆಯಲ್ಲಿ ಇನ್ನೂ ಹಲವಾರು ಪೋಷಕಾಂಶಗಳಿವೆ. ವಿಶೇಷವಾಗಿ ಇದರಲ್ಲಿರುವ ಒಳ್ಳೆಯ ಕೊಲೆಸ್ಟ್ರಾಲ್ ಮೆದುಳಿನ ಕ್ಷಮತೆ ಹೆಚ್ಚಿಸುತ್ತದೆ. ದಿನಕ್ಕೆ ಒಂದು ಅಥವಾ ಎರಡು ಮೊಟ್ಟೆಗಳನ್ನು ತಿನ್ನುವ ಮೂಲಕ ಮಕ್ಕಳ ಆರೋಗ್ಯದ ಜೊತೆಗೆ ಪರೀಕ್ಷೆ ಎದುರಿಸಲೂ ನೆರವಾಗುತ್ತದೆ.

ಅಕ್ರೋಟು (Walnuts)

ಅಕ್ರೋಟು (Walnuts)

ಮೆದುಳಿನ ಕ್ಷಮತೆ ಹೆಚ್ಚಿಸಲು ನಿಸರ್ಗ ನೀಡಿರುವ ಅದ್ಭುತ ಆಹಾರವೆಂದರೆ ಅಕ್ರೋಟು. ಇದರಲ್ಲಿರುವ ಪೋಷಕಾಂಶಗಳು ಮೆದುಳಿಗೆ ಹೆಚ್ಚಿನ ಪೋಷಣೆಯನ್ನು ನೀಡಿ ಕ್ಷಮತೆಯನ್ನು ಹೆಚ್ಚಿಸಲು ನೆರವಾಗುತ್ತವೆ. ಅಲ್ಲದೇ ಇದರಲ್ಲಿರುವ ವಿಟಮಿನ್ ಇ, ಒಮೆಗಾ 3 ಕೊಬ್ಬಿನ ಆಮ್ಲ, ತಾಮ್ರ ಮತ್ತು ಮ್ಯಾಂಗನೀಸ್ ಗಳು ಮೆದುಳಿನ ಒತ್ತಡವನ್ನು ನಿರ್ವಹಿಸಲು ನೆರವಾಗುವ ಮೂಲಕ ಹೆಚ್ಚಿನದನ್ನು ನೀಡಲು ನೆರವಾಗುತ್ತವೆ. ದಿನಕ್ಕೆ ಒಂದು ಅಥವಾ ಎರಡು ಅಕ್ರೋಟು ತಿಂದರೂ ಇಡಿಯ ದಿನ ಮೆದುಳು ಚುರುಕಾಗಿರಲು ಸಾಧ್ಯವಾಗುತ್ತದೆ.

ಹಸಿರು ಎಲೆ ಮತ್ತು ತರಕಾರಿಗಳು

ಹಸಿರು ಎಲೆ ಮತ್ತು ತರಕಾರಿಗಳು

ಸಾಮಾನ್ಯವಾಗಿ ಮಕ್ಕಳು ಹಸಿ ಸೊಪ್ಪು ಮತ್ತು ತರಕಾರಿಗಳನ್ನು ಇಷ್ಟಪಡುವುದಿಲ್ಲ. ಆದರೆ ಪರೀಕ್ಷಾ ಸಮಯದಲ್ಲಿ ಹಸಿರು ತರಕಾರಿಗಳು ಮತ್ತು ಹಸಿಯಾಗಿ ತಿನ್ನಬಹುದಾದ ಹಸಿರು ಎಲೆ ಸೊಪ್ಪುಗಳು ಮೆದುಳಿಗೆ ಉತ್ತಮವಾಗಿವೆ. ಪರೀಕ್ಷಾ ಸಮಯದಲ್ಲಿ ಹೆಚ್ಚಿನ ಒತ್ತಡದ ಕಾರಣ ಮೆದುಳಿನ ಜೀವಕೋಶಗಳು ಘಾಸಿಗೊಳ್ಳುವುದನ್ನು ತಡೆಯುವ ಶಕ್ತಿ ಇದರಲ್ಲಿರುವ ವಿಟಮಿನ್ ಕೆ,ಫೋಲೇಟ್ ಮತ್ತು ಲ್ಯೂಟಿನ್ ನಂತಹ ಆಂಟಿ ಆಕ್ಸಿಡೆಂಟುಗಳಿಗಿವೆ (brain-protective antioxidants).

ಬೆಣ್ಣೆ ಹಣ್ಣು (Avocado)

ಬೆಣ್ಣೆ ಹಣ್ಣು (Avocado)

ಈ ಹಣ್ಣಿನ ತಿರುಳಿನಲ್ಲಿ ಅಸಂತುಲಿತ ಕೊಬ್ಬು ಹೆಚ್ಚಿನ ಪ್ರಮಾಣದಲ್ಲಿರುವ ಕಾರಣ ಈ ಹಣ್ಣಿನ ಸೇವನೆಯಿಂದ ಮೆದುಳಿನ ಸವೆತನ್ನು ತಡೆಯಬಹುದು. ತಜ್ಞರ ಪ್ರಕಾರ ಒಂದು ವಾರದಲ್ಲಿ ಎರಡು ಅಥವಾ ಮೂರು ಲೋಟ ಬೆಣ್ಣೆಹಣ್ಣಿನ ತಿರುಳಿನ ಜ್ಯೂಸ್ ಕುಡಿಯುವ ಮೂಲಕ ಮೆದುಳಿನ ಕ್ಷಮತೆಯನ್ನು ಹೆಚ್ಚಿಸಬಹುದು.

ಪಾಲಕ್ ಸೊಪ್ಪು/ಬಸಲೆ ಸೊಪ್ಪು

ಪಾಲಕ್ ಸೊಪ್ಪು/ಬಸಲೆ ಸೊಪ್ಪು

ಪರೀಕ್ಷಾ ಸಮಯದಲ್ಲಿ ಮೆದುಳಿನ ಕ್ಷಮತೆಯನ್ನು ಹೆಚ್ಚಿಸಲು ಪಾಲಕ್ ಸೊಪ್ಪಿನಲ್ಲಿರುವ ವಿಟಮಿನ್ ಕೆ, ಫೋಲೇಟ್ ಮತ್ತು ಲ್ಯೂಟಿನ್ ನಂತಹ ಆಂಟಿ ಆಕ್ಸಿಡೆಂಟುಗಳು (brain-protective antioxidants) ನೆರವಾಗುತ್ತವೆ. ಇದರೊಂದಿಗೆ ಪಾಲಕ್ ಸೊಪ್ಪಿನಲ್ಲಿರುವ ಅಪಾರ ಪ್ರಮಾನದ ಕಬ್ಬಿಣ ಹೆಚ್ಚಿನ ರಕ್ತವನ್ನು ಉತ್ಪಾದಿಸಲು ನೆರವಾಗುವ ಮೂಲಕ ಮೆದುಳಿಗೆ ಹೆಚ್ಚಿನ ರಕ್ತಪರಿಚಲನೆ ದೊರಕುವಂತೆ ಮಾಡುತ್ತದೆ. ಇದೇ ಕಾರಣಕ್ಕೆ ಪರೀಕ್ಷಾ ಸಮಯದಲ್ಲಿ ಸೇವಿಸಲು ಪಾಲಕ್ ಹಾಗೂ ಬಸಲೆ ಸೊಪ್ಪುಗಳು ಉತ್ತಮವಾದ ಆಹಾರವಾಗಿವೆ.

ಸಾಲ್ಮನ್ ಮೀನು (Wild salmon)

ಸಾಲ್ಮನ್ ಮೀನು (Wild salmon)

ಒಂದು ವೇಳೆ ಮಕ್ಕಳು ಮಾಂಸಾಹಾರ ಸೇವಿಸುವ ಕುಟುಂಬಕ್ಕೆ ಸೇರಿದ್ದರೆ ಮೆದುಳಿಗೆ ಸಾಲ್ಮನ್ ಮೀನಿಗಿಂತ ಉತ್ತಮವಾದ ಆಹಾರ ಇನ್ನೊಂದು ಇರಲಿಕ್ಕಿಲ್ಲ. ಇದರಲ್ಲಿರುವ ಒಮೆಗಾ 3 ಕೊಬ್ಬಿನ ಆಮ್ಲ- DHA(docosahexaenoic acid) ಮೆದುಳಿನ ಜೀವಕೋಶಗಳನ್ನು ಅತ್ಯುತ್ತಮ ಆರೋಗ್ಯದಲ್ಲಿರಿಸಲು ನೆರವಾಗುತ್ತದೆ. ಅಲ್ಲದೇ ಸ್ಮರಣಶಕ್ತಿಯನ್ನೂ ಹೆಚ್ಚಿಸುತ್ತದೆ. ಪರೀಕ್ಷಾ ಸಮಯದಲ್ಲಿ ಮಕ್ಕಳನ್ನು ಈ ಮೀನನ್ನು ತಿನ್ನುವಂತೆ ಒಲಿಸಿದರೆ ಹೆಚ್ಚಿನ ನೆರವು ದೊರಕುತ್ತದೆ.

ಕುಂಬಳ ಕಾಯಿಯ ಬೀಜಗಳು

ಕುಂಬಳ ಕಾಯಿಯ ಬೀಜಗಳು

ಕುಂಬಳ ಕಾಯಿಯ ಬೀಜಗಳನ್ನು ಒಣಗಿಸಿ ಸಿಪ್ಪೆ ಸುಲಿದ ತಿರುಳನ್ನು ಪರೀಕ್ಷಾ ಸಮಯದಲ್ಲಿ ಓದಿನ ನಡುವೆ ಪಡೆಯುವ ಪುಟ್ಟ ವಿರಾಮದಲ್ಲಿ ತಿನ್ನಲು ನೀಡುವ ಮೂಲಕ ಮೆದುಳಿನ ಕ್ಷಮತೆ ಹೆಚ್ಚಿಸಬಹುದು. ಇದರಲ್ಲಿರುವ ಸತು ಮೆದುಳಿನ ಕ್ಷಮತೆಯನ್ನು ಹೆಚ್ಚಿಸಲು ವಿಶೇಷ ಪಾತ್ರ ವಹಿಸುತ್ತದೆ. ಅಲ್ಲದೇ ಮೆದುಳಿನ ಒಟ್ಟಾರೆ ಆರೋಗ್ಯವನ್ನು ಹೆಚ್ಚಿಸಲೂ ನೆರವಾಗುತ್ತದೆ.

ಕಪ್ಪು ಚಾಕಲೇಟು

ಕಪ್ಪು ಚಾಕಲೇಟು

ಕೋಕೋ ಪುಡಿ ಹಾಗೂ ಕಪ್ಪು ಚಾಕಲೇಟಿನಲ್ಲಿ ಮೆದುಳಿನ ಜೀವಕೋಶಗಳು ಘಾಸಿಗೊಳ್ಳುವುದನ್ನು ತಡೆಯುವ ಶಕ್ತಿ ಇರುವ ಪಾಲಿಫಿನಾಲ್ ಎಂಬ ಪೋಷಕಾಂಶಗಳಿವೆ. ಕಪ್ಪು ಚಾಕಲೇಟು ತಿನ್ನುವ ಮೂಲಕ ಮೆದುಳಿನ ಸವೆತ ತಡೆಯುವುದು ಮಾತ್ರವಲ್ಲದೇ ಸ್ಮರಣ ಶಕ್ತಿಯನ್ನೂ ಹೆಚ್ಚಿಸುತ್ತದೆ.

ಕೊಬ್ಬರಿ ಎಣ್ಣೆ

ಕೊಬ್ಬರಿ ಎಣ್ಣೆ

ಮೆದುಳಿನಲ್ಲಿರುವ ನ್ಯೂರಾನ್ ಅಥವಾ ಸಂದೇಶವಾಹಕ ಜೀವಕೋಶಗಳ ಕ್ಷಮತೆಯನ್ನು ಹೆಚ್ಚಿಸುವ ಗುಣ ಕೊಬ್ಬರಿ ಎಣ್ಣೆಗಿದೆ. ಅಲ್ಲದೇ ದೇಹದಲ್ಲಿ ಕ್ಯಾನ್ಸರ್ ಉಂಟು ಮಾಡುವ ಫ್ರೀ ರಾಡಿಕಲ್ಸ್ ಎಂಬ ಕಣಗಳ ಉತ್ಪಾದನೆಗೆ ತಡೆಯೊಡ್ಡುವ ಮೂಲಕ ಮೆದುಳಿನ ಸವೆತವನ್ನು ನಿವರಿಸಿ ಕ್ಷಮತೆ ಹೆಚ್ಚಿಸಲು ನೆರವಾಗುತ್ತದೆ. ಪರೀಕ್ಷಾ ಸಮಯದಲ್ಲಿ ಆಹಾರದಲ್ಲಿ ಸಾಕಷ್ಟು ಕೊಬ್ಬರಿ ಎಣ್ಣೆ ಇರುವಂತೆ ನೋಡಿಕೊಳ್ಳುವ ಮೂಲಕ ಮಕ್ಕಳು ಉತ್ತಮ ಅಂಕಗಳನ್ನು ಪಡೆಯಲು ನೆರವಾಗಬಹುದು.

 
English summary

Exam Time: 10 Foods To Boost Your Brain Power

Here are some of the best foods to boost brain health, which must be had especially when the exam time is around. Take a look.
Please Wait while comments are loading...
Subscribe Newsletter