Latest Updates
-
ಹುಟ್ಟುಹಬ್ಬದ ದಿನವೇ ಫ್ಯಾನ್ಸ್ಗೆ ಭರ್ಜರಿ ಗಿಫ್ಟ್ ಕೊಟ್ಟ ಧ್ರುವ ಸರ್ಜಾ: ಹೊಸ ಸಿನಿಮಾ 'ಕೆಮಿಸ್ಟ್ರಿ' ಅನೌನ್ಸ್! -
ಚೆನ್ನೈ-ಕೊಯಮತ್ತೂರಿನಲ್ಲಿ ಭಾರಿ ಮಳೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಮಾಡಿ ಈ ಸಿಂಪಲ್ ವರ್ಕ್ಔಟ್! -
ಬೆಂಗಳೂರು ಮಳೆ: ಟ್ರಾಫಿಕ್ ಜಾಮ್ ತಪ್ಪಿಸಿ ಸುರಕ್ಷಿತವಾಗಿ ಮನೆ ತಲುಪಲು ಇಲ್ಲಿದೆ ಸ್ಮಾರ್ಟ್ ಟ್ರಾವೆಲ್ ಪ್ಲಾನ್! -
ಡೆಂಗ್ಯೂ ಭೀತಿ: ನಿಮ್ಮ ಬಾಲ್ಕನಿಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಲು 10 ನಿಮಿಷದ ಸಿಂಪಲ್ ಟಿಪ್ಸ್! -
ಮುಂಬೈನಲ್ಲಿ ತೀವ್ರ ಬಿಸಿಲು: IMD ಯಿಂದ ಹಳದಿ ಎಚ್ಚರಿಕೆ; ಆರೋಗ್ಯ ಕಾಪಾಡಿಕೊಳ್ಳಲು ಈ ಮುನ್ನೆಚ್ಚರಿಕೆ ಅಗತ್ಯ! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ಅತಿ ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ 72 ಗಂಟೆಗಳ ಪ್ಲಾನ್ ಫಾಲೋ ಮಾಡಿ! -
ದೆಹಲಿ ವಾಯು ಮಾಲಿನ್ಯ: AQI ಏರಿಕೆ, ಹೊರಗೆ ಹೋಗುವ ಮುನ್ನ ಈ ಮಾಸ್ಕ್ ಧರಿಸುವುದು ಕಡ್ಡಾಯ! -
ವಿಶ್ವ ಶಿಕ್ಷಕರ ದಿನ: ಶಿಕ್ಷಕರಿಗೆ ಗೌರವ ಸಲ್ಲಿಸುವಾಗ ಪೋಷಕರು ಪಾಲಿಸಬೇಕಾದ ಶಿಷ್ಟಾಚಾರಗಳೇನು? -
ಕೇರಳ-ತಮಿಳುನಾಡು ಮಳೆ ಅಲರ್ಟ್: ನಿಮ್ಮ ಮನೆ ಮತ್ತು ಕಾರನ್ನು ಸುರಕ್ಷಿತವಾಗಿಡಲು ಈ 5 ತಕ್ಷಣದ ಕ್ರಮಗಳನ್ನು ಕೈಗೊಳ್ಳಿ! -
ಜಿಮ್ಗೆ ಹೋಗುವವರೇ ಎಚ್ಚರ! ಪ್ರೊಟೀನ್ ಸಪ್ಲಿಮೆಂಟ್ಸ್ ಮೇಲೆ FDA ದಾಳಿ, ನಕಲಿ ಉತ್ಪನ್ನ ಪತ್ತೆಹಚ್ಚುವುದು ಹೇಗೆ?
ಮಕ್ಕಳ ಬುದ್ಧಿ ಶಕ್ತಿ ಹೆಚ್ಚಲು ನೀಡಬೇಕಾದ ಆಹಾರಗಳು
ನಿಮ್ಮ ಮಕ್ಕಳು ಜೀನಸ್ ಆಗಬೇಕೆಂದು ಬಯಸುತ್ತಿದ್ದೀರಾ? ಹಾಗಾದರೆ ನೀವು ಮೊದಲು ಮಾಡಬೇಕಾದ ಕೆಲಸವೆಂದರೆ ಅವರ ಆಹಾರಕ್ರಮದ ಬಗ್ಗೆ ಗಮನ ಕೊಡುವುದು! ಮಕ್ಕಳಿಗೆ ಚಾಕಲೇಟ್, ಚಿಪ್ಸ್, ಐಸ್ ಕ್ರೀಮ್, ಫಾಸ್ಟ್ ಫುಡ್ಸ್ ಈ ರೀತಿಯ ಆಹಾರಗಳೇ ಇಷ್ಟವಾಗುವುದು. ಆರೋಗ್ಯಕರ ಆಹಾರವನ್ನು ಬಾಯಿಗೆ ತುರುಕಿದರೂ ತಿನ್ನುವುದಿಲ್ಲ, ಬೇಡದ ಆಹಾರಗಳನ್ನು ನಾವು ಕೊಡಿಸದಿದ್ದರೂ ಬೇಕೆಂದು ಹಠ ಮಾಡಿ ಅವರಿಗೆ ಅದನ್ನು ಕೊಡಿಸುವಂತೆ ಮಾಡುತ್ತಾರೆ.
ಮಕ್ಕಳ ಬ್ರೈನ್ (ಮಿದುಳು) ಶಾರ್ಪ್ ಆಗಲು ಕೆಲವೊಂದು ಪೋಷಕಾಂಶಗಳು ಅವಶ್ಯಕ. ಆದ್ದರಿಂದ ಅವರು ಇಷ್ಟಪಟ್ಟು ತಿನ್ನುವ ಆಹಾರಗಳ ಜೊತೆ ಈ ಆಹಾರಗಳನ್ನೂ ತಿನ್ನುವಂತೆ ಮಾಡಿದರೆ ಮಕ್ಕಳ ಮಿದುಳಿನ ಶಕ್ತಿ ವೃದ್ಧಿಯಾಗುವುದು:

ಮೊಟ್ಟೆ
ಇದರಲ್ಲಿರುವ ಅಂಶ ಮಕ್ಕಳ ಮಿದುಳಿನ ನರಗಳ ಶಕ್ತಿಯನ್ನು ವೃದ್ಧಿಸಿ, ಜ್ಞಾಪಕ ಶಕ್ತಿ ಹೆಚ್ಚುವಂತೆ ಮಾಡುತ್ತದೆ. ಮಕ್ಕಳ ಬ್ರೇಕ್ ಫಾಸ್ಟ್ ನ ಜೊತೆ ಒಂದು ಮೊಟ್ಟೆ ಕೊಡುವುದು ಒಳ್ಳೆಯದು.

ಮೊಸರು
ಮೊಸರು ಕೂಡ ಮಕ್ಕಳ ಮಿದುಳಿನ ಆರೋಗ್ಯವನ್ನು ವೃದ್ಧಿಸುತ್ತದೆ. ಬರೀ ಮೊಸರು ತಿನ್ನದಿದ್ದರೆ ಮೊಸರು ಬಳಸಿ ಅವರಿಗೆ ಇಷ್ಟವಾದ ಆಹಾರ ಮಾಡಿ ಕೊಡಿ.

ಓಟ್ ಮೀಲ್ಸ್
ಓಟ್ ಮೀಲ್ಸ್ ಅಷ್ಟೊಂದು ರುಚಿಕರವಲ್ಲದ ಕಾರಣ ಮಕ್ಕಳಿಗೆ ಇಷ್ಟವಾಗುವುದಿಲ್ಲ. ಅದಕ್ಕೆ ಅವರು ಇಷ್ಟ ಪಡುವ ಫ್ರೂಟ್ಸ್ ಹಾಕಿ ಅವರ ಬಾಯಿ ರುಚಿಗೆ ಇಷ್ಟವಾಗುವಂತೆ ಮಾಡಿಕೊಟ್ಟರೆ ಖಂಡಿತ ತಿನ್ನುತ್ತಾರೆ.

ಮೀನು
ಮೀನಿನಲ್ಲಿರುವ ಒಮೆಗಾ 3 ಕೊಬ್ಬಿನಂಶ ಮತ್ತು ವಿಟಮಿನ್ ಡಿ ಮಕ್ಕಳ ಮಿದುಳಿನ ಶಕ್ತಿ ವೃದ್ಧಿಸುವಲ್ಲಿ ತುಂಬಾ ಸಹಕಾರಿ.

ಹಾಲು
ಮಗುವಿಗೆ ದಿನದಲ್ಲಿ ಎರಡು ಲೋಟ ಹಾಲು ಕೊಡುವುದು ಅವಶ್ಯಕ. ಇದು ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಕಾರಿ.

ಸೇಬು
ಸೇಬು ಮಕ್ಕಳ ದೈಹಿಕ ಆರೋಗ್ಯ ವೃದ್ಧಿಸುವುದರ ಜೊತೆಗೆ ಬುದ್ಧಿ ಶಕ್ತಿ ಹೆಚ್ಚುವಲ್ಲಿಯೂ ಸಹಕಾರಿ.

ನಟ್ಸ್
ನಟ್ಸ್ ಮಕ್ಕಳ ಮಿದುಳಿನ ನರಗಳಿಗೆ ಅವಶ್ಯಕವಾದ ಪೋಷಕಾಂಶವನ್ನು ಒದಗಿಸುತ್ತದೆ.

ಅರಿಶಿಣ
ಅರಿಶಿಣ ಕಾಯಿಲೆಗಳ ವಿರುದ್ಧ ಹೋರಾಡುವುದು ಮಾತ್ರವಲ್ಲ, ಮಿದುಳಿನ ಆರೋಗ್ಯವನ್ನೂ ವೃದ್ಧಿಸುತ್ತದೆ.

ಮಾಂಸ
ಮಾಂಸದ ಆಹಾರಗಳು ಮಕ್ಕಳ ಮೂಳೆಗಳನ್ನು ಬಲವಾಗಿಸಿ ದೈಹಿಕವಾಗಿ ಬೆಳವಣಿಗೆಯಾಗಲು ಮತ್ತು ಮಿದುಳಿನ ಶಕ್ತಿ ವೃದ್ಧಿಸಲು ಸಹಾಯಮಾಡುತ್ತದೆ.



Click it and Unblock the Notifications
