ಇಂತಹ ಅಭ್ಯಾಸ ನಿಮಗೂ ಇದ್ದರೆ, ನಿದ್ದೆಯ ಸಮಸ್ಯೆ ಕಾಡಲಿದೆ!

By: Hemanth
Subscribe to Boldsky

ದೇಹಕ್ಕೆ ಆಹಾರದಷ್ಟೇ ಅಗತ್ಯವಾಗಿ ನಿದ್ರೆ ಕೂಡ ಬೇಕಾಗುತ್ತದೆ. ನಿದ್ರಾಹೀನತೆಯಿದ್ದರೆ ಅದು ಮತ್ತಷ್ಟು ಸಮಸ್ಯೆಯನ್ನು ಉಂಟುಮಾಡಬಹುದು ಮತ್ತು ಅನಾರೋಗ್ಯ ತರಬಹುದು. ಪ್ರತಿಯೊಬ್ಬರು ರಾತ್ರಿಯಾದ ಕೂಡಲೇ ನಿದ್ರೆ ಮಾಡಲು ಹಾಸಿಗೆ ಮೇಲೆ ಬೀಳುತ್ತಾರೆ. ಆದರೆ ಪ್ರತಿಯೊಬ್ಬರಿಗೂ ನಿದ್ರಾದೇವಿಯು ಒಲಿಯುವುದಿಲ್ಲ. ಅಧಿಕ ನಿದ್ದೆ ಕೂಡ ಆರೋಗ್ಯಕ್ಕೆ ಮಾರಕವಾಗಬಹುದು!

ಹಾಸಿಗೆಯಲ್ಲಿ ಎಷ್ಟೇ ಒರಲಾಡಿದರೂ ನಿದ್ರೆ ಮಾತ್ರ ಬರುವುದಿಲ್ಲ. ನಿದ್ರಾಹೀನತೆಯಿಂದಾಗಿ ಹಲವಾರು ರೋಗಗಳು ನಮ್ಮನ್ನು ಕಾಡಲು ಶುರು ಮಾಡುತ್ತದೆ. ದೇಹಕ್ಕೆ ಆಹಾರದಷ್ಟೇ ನಿದ್ರೆಯೂ ಅತ್ಯಗತ್ಯವಾಗಿದೆ. ಮದ್ಯಪಾನ, ಧೂಮಪಾನ, ಒತ್ತಡ ಮತ್ತು ಜೀವನ ಶೈಲಿ ನಿಮ್ಮ ನಿದ್ರಾಹೀನತೆಗೆ ಅಥವಾ ನಿದ್ದೆ ಬರದೇ ಇರಲು ಪ್ರಮುಖ ಕಾರಣವಾಗಿರಬಹುದು. ಹಾಗಾದರೆ ಬನ್ನಿ ಯಾವೆಲ್ಲಾ ಕಾರಣಗಳಿಂದಾಗಿ ನಿದ್ರಾಹೀನತೆ ಉಂಟಾಗುತ್ತದೆ ಎಂದು ಈ ಲೇಖನದ ಮೂಲಕ ತಿಳಿದುಕೊಳ್ಳುವ....  

ಅತಿಯಾದ ಒತ್ತಡ....

ಅತಿಯಾದ ಒತ್ತಡ....

ನೀವು ಅತಿಯಾದ ಒತ್ತಡದಲ್ಲಿ ಇದ್ದರೆ ಆಗ ನಿಮಗೆ ಸರಿಯಾಗಿ ನಿದ್ರೆ ಮಾಡಲು ಸಾಧ್ಯವಾಗದು. ಒತ್ತಡದಿಂದ ನಿಮಗೆ ನಿದ್ರೆ ಬರುವುದಿಲ್ಲ. ಒಂದು ವೇಳೆ ಬಂದರೂ ಅದು ಸಂಪೂರ್ಣವಾಗಿರುವುದಿಲ್ಲ. ಸರಳ ವ್ಯಾಯಾಮ, ಧ್ಯಾನ ಮತ್ತು ಯೋಗದಿಂದ ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ.

ವ್ಯಾಯಮದ ಕೊರತೆ

ವ್ಯಾಯಮದ ಕೊರತೆ

ನೀವು ಸರಿಯಾಗಿ ವ್ಯಾಯಾಮ ಮಾಡುತ್ತಾ ಇದ್ದೀರಾ? ಹಾಗಾದರೆ ಸರಿಯಾಗಿ ವ್ಯಾಯಾಮ ಮಾಡಿದರೆ ನಿಮಗೆ ರಾತ್ರಿ ವೇಳೆ ನಿದ್ರೆಗೆ ಯಾವುದೇ ಸಮಸ್ಯೆಯಾಗದು. ವ್ಯಾಯಾಮ ಬೇಗನೆ ನಿದ್ರೆ ಬರಲು ಮತ್ತು ಸರಿಯಾಗಿ ನಿದ್ರೆ ಮಾಡಲು ನೆರವಾಗುವುದು.

ಲೈಂಗಿಕ ಕ್ರಿಯೆ

ಲೈಂಗಿಕ ಕ್ರಿಯೆ

ಸರಿಯಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳದೆ ಇರುವ ವ್ಯಕ್ತಿಗಳು ರಾತ್ರಿ ವೇಳೆ ನಿದ್ರೆ ಮಾಡಲು ಒದ್ದಾಡುತ್ತಾರೆ ಎಂದು ಅಧ್ಯಯನಗಳು ಹೇಳಿವೆ. ಲೈಂಗಿಕ ಕ್ರಿಯೆಯಿಂದ ನಿಮ್ಮ ಮನಸ್ಸು ಮತ್ತು ದೇಹಕ್ಕೆ ಆರಾಮ ಸಿಗುವುದು ಮಾತ್ರವಲ್ಲದೆ ಒಳ್ಳೆಯ ನಿದ್ರೆ ಕೂಡ ಬರುವುದು...

ಹಗಲಿನಲ್ಲಿ ನಿದ್ರಿಸುವುದು

ಹಗಲಿನಲ್ಲಿ ನಿದ್ರಿಸುವುದು

ನಿಮಗೆ ಹಗಲಿನಲ್ಲಿ ನಿದ್ರಿಸುವ ಅಭ್ಯಾಸವಿದ್ದರೆ 20 ನಿಮಿಷಕ್ಕಿಂತ ಹೆಚ್ಚು ನಿದ್ರಿಸಬೇಡಿ. 20 ನಿಮಿಷಕ್ಕಿಂತ ಹೆಚ್ಚು ಮಲಗಿದರೆ ರಾತ್ರಿ ವೇಳೆ ನಿಮಗೆ ನಿದ್ರೆ ಬರುವುದಿಲ್ಲ.

ಭೀತಿ ಉಂಟುಮಾಡುವ ಕಥೆಗಳು

ಭೀತಿ ಉಂಟುಮಾಡುವ ಕಥೆಗಳು

ಭೀತಿ ಉಂಟುಮಾಡುವ ಟಿವಿ ಕಾರ್ಯಕ್ರಮಗಳನ್ನು ನೋಡುವ ಮತ್ತು ಪುಸ್ತಕವನ್ನು ಓದುವ ಅಭ್ಯಾಸವಿದ್ದರೆ ನೀವು ಮತ್ತೆ ಯೋಚಿಸಬೇಕು. ಇದರಿಂದ ನಿಮಗೆ ಬೇಗ ನಿದ್ರೆ ಬರುವುದು ತಪ್ಪುತ್ತದೆ.

ಕೆಫಿನ್ ಸೇವನೆ

ಕೆಫಿನ್ ಸೇವನೆ

ನಿಮಗೆ ಕೆಫಿನ್ ಸೇವನೆ ಅಭ್ಯಾಸವಾಗಿದ್ದರೆ ರಾತ್ರಿ ವೇಳೆ ನಿದ್ರೆ ಬರುವುದು ಕಷ್ಟವಾಗುತ್ತದೆ. ಇದರಿಂದ ಕೆಫಿನ್ ಸೇವನೆ ಕಡಿಮೆ ಮಾಡಿ. ಕೆಫಿನ್ ಸೇವನೆ ಅತಿಯಾದರೆ ನಿದ್ರಾಭಂಗತೆ ಉಂಟಾಗುವುದು.

ಕೋಣೆಯ ತಾಪಮಾನ

ಕೋಣೆಯ ತಾಪಮಾನ

ಬೇಗನೆ ನಿದ್ರೆ ಬರಲು ನೀವು ಕೋಣೆಯ ತಾಪಮಾನವನ್ನು ಮೊದಲು ಪರೀಕ್ಷಿಸಿಕೊಳ್ಳಿ. ಒಳ್ಳೆಯ ನಿದ್ರೆ ಬರಲು ಕೋಣೆಯ ತಾಪಮಾನವನ್ನು ಸರಿಯಾಗಿಟ್ಟುಕೊಳ್ಳಿ.

 
English summary

Do You Know That These Things Might Be Killing Your Sleep?

Many people struggling with sleeplessness spend a lot of time in bed unsuccessfully attempting to sleep. This may cause problems throughout the day, like tiredness, too little energy, difficulty in concentration and frustration. Today in this article we shall discuss certain things that you may not realise are the reasons for your sleeplessness. Read on to know how these factors can affect your quality and quantity of sleep.
Story first published: Thursday, January 19, 2017, 23:19 [IST]
Please Wait while comments are loading...
Subscribe Newsletter