For Quick Alerts
ALLOW NOTIFICATIONS  
For Daily Alerts

ಅಧಿಕ ನಿದ್ದೆ ಕೂಡ ಆರೋಗ್ಯಕ್ಕೆ ಮಾರಕವಾಗಬಹುದು!

|

ನಿದ್ದೆ ಯಾರಿಗೆ ತಾನೇ ಇಷ್ಟಾ ಇಲ್ಲ ಹೇಳಿ? ದುಡಿದ ಬಳಲಿದ ದೇಹಕ್ಕೆ, ಹಾಗೂ ದಣಿದ ಕಣ್ಣುಗಳಿಗೆ ಮತ್ತೆ ಹೊಸ ಚೈತನ್ಯ ತುಂಬುತ್ತಾಳೆ ಈ ನಿದ್ರಾ ದೇವಿ. ಭೂಮಿಯ ಮೇಲಿನ ಪ್ರತಿಯೊಂದು ಜೀವಿಗೂ ನಿದ್ದೆಬೇಕು. ನಿದ್ದೆಗೆಡುವುದರಿಂದ ಅನೇಕ ದೈಹಿಕ ಮತ್ತು ಮಾನಸಿಕ ತೊಂದರೆ ಕಟ್ಟಿಟ್ಟ ಬುತ್ತಿ ಎಂದು ನಮಗೆಲ್ಲಾ ತಿಳಿದಿದೆ.

ಹಾಗಾಂತ ನೀವು 8 ಗಂಟೆಗಳಿಂದ ಅಧಿಕ ಹೊತ್ತು ನಿದ್ದೆ ಮಾಡಿದರೆ ಖಂಡಿತ ಇದು ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವುಂಟಾಗುತ್ತದೆ ಎಂಬುದನ್ನು ಮಾತ್ರ ಮರೆಯಬೇಡಿ. ಅಧಿಕ ನಿದ್ದೆಯಿಂದ ಹಲವು ರೀತಿಯ ಅನಾರೋಗ್ಯಗಳು ನಿಮ್ಮನ್ನು ಕಾಡಬಲ್ಲವು.

ಹಾಗಾದರೆ ಅಧಿಕ ನಿದ್ದೆಯಿಂದ ಉಂಟಾಗುವ ಅಪಾಯಗಳೇನು? ಅಧ್ಯಯನಕಾರರ ಪ್ರಕಾರ ವಯಸ್ಕರು ಏಳು-ಎಂಟು ಗಂಟೆಗಳ ಕಾಲ ನಿದ್ದೆ ಮಾಡುವುದರಿಂದ ಸಾಮಾನ್ಯವಾದ ರೋಗಗಳಿಂದ ಪಾರಾಗಬಹುದಂತೆ, ಜೊತೆಗೆ ಇವರ ಆಯುಸ್ಸು ಸಹ ಅಧಿಕವಾಗಿರುತ್ತದೆ.ಆದರೆ ನೀವು ಹೆಚ್ಚು ನಿದ್ದೆ ಮಾಡಿದಲ್ಲಿ, ಮಧುಮೇಹ, ಸ್ಥೂಲ ಕಾಯ ಮತ್ತು ಹೃದ್ರೋಗದಂತಹ ಸಮಸ್ಯೆಗಳಿಗೂ ಸಹ ಸಿಕ್ಕಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ನಿದ್ದೆಯೆಂಬ ಅಮೂಲ್ಯ ವರಕ್ಕಿರುವ ಕರಾಮತ್ತೇನು?

ನಿದ್ರಾಹೀನತೆಯು ಹಲವಾರು ಸಮಸ್ಯೆಗಳನ್ನುಂಟು ಮಾಡುತ್ತದೆ ಎಂಬುದು ತಿಳಿದಿರುವ ವಿಚಾರವೇ, ಆದರೆ ಅಧಿಕ ನಿದ್ದೆಯನ್ನು ಮಾಡಿದರೂ ಸಹ ಅಡ್ಡ ಪರಿಣಾಮಗಳು ಉಂಟಾಗುತ್ತವೆ. ಬನ್ನಿ ಅಧಿಕ ನಿದ್ದೆಯಿಂದ ಉಂಟಾಗುವ ಅಡ್ಡ ಪರಿಣಾಮಗಳ ಕುರಿತು ತಿಳಿದುಕೊಳ್ಳೋಣ, ನಾವೇಕೆ ಏಳು-ಎಂಟು ಗಂಟೆಗಳಿಗಿಂತ ಅಧಿಕ ಸಮಯ ನಿದ್ದೆ ಮಾಡಬಾರದು ಎಂಬುದಕ್ಕೆ ಕಾರಣಗಳು ಇಲ್ಲಿವೆ.

ದೇಹದ ತೂಕ ಹೆಚ್ಚಾಗುವ ಸಂಭವ

ದೇಹದ ತೂಕ ಹೆಚ್ಚಾಗುವ ಸಂಭವ

ಯಾರು 9-10 ಗಂಟೆಗಳ ಕಾಲ ನಿದ್ದೆ ಮಾಡುತ್ತಾರೋ, ಅವರಿಗೆ ದೇಹದ ತೂಕ ಹೆಚ್ಚಾಗುವ ಸಾಧ್ಯತೆ ಶೇ.25% ಅಧಿಕವಾಗಿರುತ್ತದೆಯಂತೆ. ಅವರು ವಾರದೊಳಗೆ ಐದು ಕಿಲೋಗಳಷ್ಟು ದಪ್ಪಗಾಗುವ ಸಾಧ್ಯತೆಯು ಇರುತ್ತದೆಯಂತೆ. ಏಕೆಂದರೆ ಅವರು ತಮ್ಮ ಸಮಯವನ್ನು, ಸುಮ್ಮನೆ ಕಳೆಯುತ್ತಾರೆ. ಯಾವುದೇ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲ. ಹೀಗಾಗಿ ಅವರ ದೇಹವು ದಪ್ಪಗಾಗುತ್ತ ಹೋಗುತ್ತದೆ.

ಬೆನ್ನು ನೋವನ್ನು ತರುತ್ತದೆ

ಬೆನ್ನು ನೋವನ್ನು ತರುತ್ತದೆ

ಅಧಿಕ ನಿದ್ದೆಯು ಬೆನ್ನು ನೋವಿಗೆ ಕಾರಣವಾಗುತ್ತದೆ. ಅಧಿಕ ನಿದ್ದೆಯು ವಿಶ್ರಾಂತಿಗೆ ಸಮನಲ್ಲ. ಹೆಚ್ಚು ನಿದ್ದೆ ಮಾಡುವಾಗ ನೀವು ಭಂಗಿಗಳನ್ನು ಬದಲಿಸುತ್ತಾ ಇರುತ್ತೀರಿ. ಆಗ ನಿಮ್ಮ ಬೆನ್ನು ಮೂಳೆಯ ಮೇಲೆ ಇದರ ಪರಿಣಾಮಗಳು ಕಂಡು ಬರುತ್ತದೆ. ಇದರಿಂದ ಬೆನ್ನು ನೋವು ನಿಮಗೆ ಕಾಣಿಸಿಕೊಳ್ಳುತ್ತದೆ.

ತಲೆನೋವು ಬರಬಹುದು

ತಲೆನೋವು ಬರಬಹುದು

ಅಧಿಕ ನಿದ್ದೆಯು ತಲೆನೋವಿಗೆ ದಾರಿ ಮಾಡಿಕೊಡುತ್ತದೆ. ಒತ್ತಡದ ಪರಿಣಾಮವಾಗಿ ಕೆಲವರಿಗೆ ತಲೆನೋವು ಕಂಡು ಬರುತ್ತದೆ. ಆದರೆ ಸಂಶೋಧನೆಗಳ ಪ್ರಕಾರ ತಲೆದಿಂಬಿಗೆ ತಲೆ ಕೊಟ್ಟು 7 ಗಂಟೆಗಳಿಗೂ ಅಧಿಕ ಸಮಯ ನಿದ್ದೆ ಮಾಡುವುದರಿಂದ ಮೆದುಳಿನಲ್ಲಿ ನ್ಯೂರೋಟ್ರಾನ್ಸ್‌ ಮೀಟರ್‌ಗಳ ಮೇಲೆ ಪರಿಣಾಮ ಬೀರಿ, ತಲೆ ನೋವು ಬರುತ್ತದೆಯಂತೆ.

ಅಧಿಕ ಖಿನ್ನತೆಗೆ ದಾರಿ ಮಾಡಿಕೊಡುತ್ತದೆ

ಅಧಿಕ ಖಿನ್ನತೆಗೆ ದಾರಿ ಮಾಡಿಕೊಡುತ್ತದೆ

ಅಧಿಕ ಪ್ರಮಾಣದಲ್ಲಿ ನಿದ್ದೆ ಮಾಡುವುದರಿಂಅ ಖಿನ್ನತೆಯು ಬರುತ್ತದೆ. ಅದರಲ್ಲಿಯೂ ನೀವು ಔಷಧಿಗಳನ್ನು ಸೇವಿಸುವವರಾಗಿದ್ದಲ್ಲಿ, ಇದರ ಪರಿಣಾಮ ಮತ್ತಷ್ಟು ಹೆಚ್ಚಾಗಿರುತ್ತದೆ. ಆದ್ದರಿಂದ ನಿದ್ದೆ ಮಾಡಿ. ಅಧಿಕ ನಿದ್ದೆ ಮಾಡಬೇಡಿ. ಯಾವಾಗಲು ನಿದ್ದೆ ಮಾಡುವ ಬದಲಿಗೆ ವಿಶ್ರಾಂತಿಯನ್ನು ಪಡೆಯಿರಿ.

ಹೃದಯದ ಆರೋಗ್ಯಕ್ಕೆ ಒಳ್ಳೆಯದಲ್ಲ

ಹೃದಯದ ಆರೋಗ್ಯಕ್ಕೆ ಒಳ್ಳೆಯದಲ್ಲ

ಅಧಿಕ ನಿದ್ದೆ ಮಾಡುವುದರಿಂದ ಹೃದಯದ ಆರೋಗ್ಯ ಹದಗೆಡುತ್ತದೆ. ಎಂಟು ಗಂಟೆಗಳಿಗೂ ಅಧಿಕ ಕಾಲ ನಿದ್ದೆ ಮಾಡುವವರಲ್ಲಿ ಕರೋನರಿ ಹೃದ್ರೋಗಗಳು ಕಂಡು ಬರುತ್ತವೆ ಎಂದು ಸಂಶೋಧನೆಗಳು ತಿಳಿಸಿವೆ.

ಅಧಿಕ ವಯಸ್ಸಾದಂತೆ ಕಾಣುತ್ತದೆ

ಅಧಿಕ ವಯಸ್ಸಾದಂತೆ ಕಾಣುತ್ತದೆ

ಅಧಿಕ ಪ್ರಮಾಣದಲ್ಲಿ ನಿದ್ದೆ ಮಾಡುವುದರಿಂದ ನಿಮ್ಮ ಆಯುಸ್ಸು ಕ್ಷೀಣವಾಗುತ್ತದೆ. ಇದು ಅಲ್ಜೀಮರ್ ಕಾಯಿಲೆಯ ಪೂರ್ವ ಲಕ್ಷಣಗಳನ್ನು ನಿಮಗೆ ನೀಡುತ್ತದೆ. ಬಹುತೇಕ ಮಂದಿ ವಯಸ್ಸಾದವರು, ಮನೆಯಲ್ಲಿ ದಿನವಿಡೀ ವಿಶ್ರಾಂತಿ ತೆಗೆದುಕೊಳ್ಳಲಿ ಎಂದು ಬಯಸುತ್ತಾರೆ. ಆದರೆ ಅದು ಅವರ ಮೆದುಳಿಗೆ ಒಳ್ಳೆಯದಲ್ಲ. ನಿದ್ದೆ ಹದ್ದು ಬಸ್ತಿನಲ್ಲಿರಲಿ.

English summary

Risks Of Sleeping Too Much

If you love to sleep for more than 8 hours in a day, there could be something wrong with your health. There are a lot of negative health effects when one does not get enough sleep and on the other side oversleeping can be bad for us too. Take a look at why you should only sleep for 7 to 8 hours and not extend that 'beauty sleep'.
Story first published: Monday, June 1, 2015, 15:51 [IST]
X
Desktop Bottom Promotion