For Quick Alerts
ALLOW NOTIFICATIONS  
For Daily Alerts

ಈ ಬಾರಿಯ ದೀಪಾವಳಿ ಹಬ್ಬಕ್ಕೆ ಸ್ವಲ್ಪ ಸ್ವೀಟ್ಸ್ ಕಡಿಮೆ ತಿನ್ನಿ!!

By Arshad
|

ಸಂತೋಷಕ್ಕೂ ಸಿಹಿಗೂ ನಿಕಟ ಸಂಬಂಧವಿದೆ. ಸಿಹಿ ತಿಂದರೆ ಮನ ಮುದಗುಳ್ಳುತ್ತದೆ ಹಾಗೂ ಮನ ಸಂತೋಷಗೊಂಡಾಗ ಸಿಹಿ ತಿನ್ನಲು ಬಯಸುತ್ತೇವೆ. ಅದರಲ್ಲೂ ಸಿಹಿತಿಂಡಿಗಳು ಎದುರಿಗಿದ್ದಾಗ ಇವುಗಳನ್ನು ತಿನ್ನದ ಬಯಕೆ ಮೂಡದಿರಲು ಸಾಧ್ಯವೇ ಇಲ್ಲ. ಮಕ್ಕಳಿಗಂತೂ ಸಿಹಿ ಎಂದರೆ ಭಾರೀ ಇಷ್ಟ. ಆದರೆ ಇಂದು ಬಹುತೇಕ ಎಲ್ಲಾ ಸಿಹಿವಸ್ತುಗಳು ಸಕ್ಕರೆಯಿಂದ ತಯಾರಾಗಿದೆ... ಇನ್ನು ದೀಪಾವಳಿ ಹಬ್ಬದ ಸಮಯದಲ್ಲಂತೂ ಮನೆಯಲ್ಲಿ ಮಾಡಿದ ಸಿಹಿ ತಿನಿಸುಗಳಿಗಿಂತ, ಅಂಗಡಿಗಳಿಂದ ತರಿಸಿದ ಸ್ವೀಟ್ಸ್‌ಗಳಿಗೆಯೇ ಎಲ್ಲರೂ ಇಷ್ಟಪಡುತ್ತಾರೆ.

Sweets

ಆದರೆ ಒಂದು ವಿಷಯ ನೆನಪಿರಲಿ, ಸಕ್ಕರೆ ಅತಿ ಸಾಂದ್ರೀಕೃತ ಸಿಹಿವಸ್ತುವಾಗಿದ್ದು ಇದರ ಹೆಚ್ಚಿನ ಬಳಕೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಬಿಳಿ ಸಕ್ಕರೆಯಲ್ಲಿ ಪೋಷಕಾಂಶಗಳು ಅತಿ ಕಡಿಮೆ ಇದ್ದು ಅನಾರೋಗ್ಯಕರ ಹಾಗೂ ಕೊಬ್ಬು ಹೆಚ್ಚಿಸುವ ಅಂಶಗಳೇ ಹೆಚ್ಚಾಗಿವೆ. ಸಕ್ಕರೆಯ ಪ್ರಮಾಣವನ್ನು ಹಾಗೂ ಸಿಹಿವಸ್ತುವಿಗೆ ಬಳಸಲಾದ ಇತರ ಸಾಮಾಗ್ರಿಗಳನ್ನು ಅನುಸರಿಸಿ ಪ್ರತಿಯೊಂದೂ ಸಿಹಿವಸ್ತು ತನ್ನದೇ ಆದ ಅಪಾಯವನ್ನು ತಿನ್ನುವವರಿಗೆ ಒಡ್ಡುತ್ತದೆ. ಬನ್ನಿ, ಸಕ್ಕರೆಯ ಸೇವನೆಯ ಭಯಾನಕ ಪರಿಣಾಮವನ್ನು ನೋಡೋಣ...

ಮಧುಮೇಹದ ಸಾಧ್ಯತೆ ಹೆಚ್ಚಿಸುತ್ತದೆ
ಒಂದು ವೇಳೆ ನಿಮ್ಮ ವಂಶದಲ್ಲಿ ಮಧುಮೇಹ ಕಂಡುಬಂದಿದ್ದರೆ ನಿಮಗೂ ಮಧುಮೇಹ ಆವರಿಸುವ ಸಾಧ್ಯತೆ ಇದ್ದು ಸಕ್ಕರೆಯ ಸತತ ಸೇವನೆಯಿಂದ ಮಧುಮೇಹ ಮುಂದೆಂದೋ ಆವರಿಸಬಹುದಾಗಿದ್ದು ಈಗಲೇ ಆವರಿಸುವ ಸಾಧ್ಯತೆ ದಟ್ಟವಾಗಿರುತ್ತದೆ. ಕೇವಲ ಸಕ್ಕರೆ ಮಾತ್ರವಲ್ಲ, ಇತರ ಆಹಾರಕ್ರಮಗಳೂ ಇದಕ್ಕೆ ಕಾರಣವಾಗಬಹುದು. "The Journal of Nutrition, ಎಂಬ ವೈಜ್ಞಾನಿಕ ನಿಯತಕಾಲಿಕೆಯಲ್ಲಿ ಜೂನ್ 2007ರಲ್ಲಿ ಪ್ರಕಟವಾದ ವರದಿಯ ಪ್ರಕಾರ ದೇಹ ತಾಳಿಕೊಳ್ಳುವುದಕ್ಕಿಂತ ಹೆಚ್ಚಿನ ಸಕ್ಕರೆ (ಮಹಿಳೆಯರಿಗೆ 25 ಗ್ರಾಂ, ಪುರುಷರಿಗೆ 38ಗ್ರಾಂ) ಸೇವಿಸಿದರೆ ಇದು ಮಧುಮೇಹಕ್ಕೆ ಆಹ್ವಾನ ನೀಡಿದಂತೆ. ಅದರಲ್ಲೂ ಸಿಹಿವಸ್ತುಗಳನ್ನು ಇನ್ನಷ್ಟು ಸಿಹಿಯಾಗಿಸಲು ಸೇರಿಸಿರುವ ಸಿಹಿವಸ್ತುಗಳು ದೇಹಕ್ಕೂ ಅತಿ ಹೆಚ್ಚಾಗಿ ಬಾಧಿಸುತ್ತದೆ.

ಹಲ್ಲು ಹುಳುಕು
ಮಕ್ಕಳ ಹಲ್ಲು ಹುಳುಕಾದರೆ ಚಾಕಲೇಟು ಹೆಚ್ಚು ತಿಂದಿದ್ದಕ್ಕೇ ಹಲ್ಲು ಹುಳುಕಾಗಿದೆ ಎಂದು ನಾವೆಲ್ಲರೂ ನಿರ್ಧರಿಸಿಬಿಡುತ್ತೇವೆ. "Journal of the American Dental Association" ಎಂಬ ದಂತವೈದ್ಯ ನಿಯತಕಾಲಿಕೆಯಲ್ಲಿ 2002ರಲ್ಲಿ ಪ್ರಕಟವಾದ ವರದಿಯ ಪ್ರಕಾರ ಯಾವಾಗ ಸಕ್ಕರೆ ಹಲ್ಲುಗಳ ಸಂಪರ್ಕಕ್ಕೆ ಬರುತ್ತದೆಯೋ ಆಗ ಇದು ಹಲ್ಲುಗಳನ್ನು ಸವೆಸುತ್ತದೆ.


ಸಿಹಿತಿಂಡಿಗಳನ್ನು ತಿಂದ ಬಳಿಕ ಹಲ್ಲುಗಳ ಸಂಧುಗಳಲ್ಲಿ ಉಳಿಯುವ ತುಣುಕುಗಳಲ್ಲಿಯೂ ಸಕ್ಕರೆಯ ಅಂಶವಿದ್ದು ಇದು ಹಲ್ಲುಗಳನ್ನು ಕೊಳೆಸಲು ಪ್ರಮುಖ ಕಾರಣವಾಗಿದೆ. ಲಿಂಬೆಯ ಅಥವಾ ಫಾಸ್ಪರಿಕ್ ಆಮ್ಲದ ಅಂಶವಿರುವ ಬುರುಗು ಬರುವ ಪಾನೀಯಗಳಲ್ಲಿಯೂ ಹಲ್ಲುಗಳನ್ನು ಕರಗಿಸುವ ಶಕ್ತಿಯಿದೆ. ಹೀಗೆ ಕರಗುವ ಹಲ್ಲು ಶಾಶ್ವತವಾಗಿ ತನ್ನ ಅಂಶವನ್ನು ಕಳೆದುಕೊಳ್ಳುತ್ತಾ ಶಿಥಿಲವಾಗುತ್ತದೆ.

ಒಳ್ಳೆಯ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ
ನಮ್ಮ ದೇಹದಲ್ಲಿ ಎರಡು ರೀತಿಯ ಕೊಲೆಸ್ಟ್ರಾಲ್ ಗಳಿವೆ. ಒಂದು ಒಳ್ಳೆಯ ಅಥವಾ (HDL-high-density lipoprotein) ಹಾಗೂ ಕೆಟ್ಟ (LDL-low-density lipoprotein) ಕೊಲೆಸ್ಟ್ರಾಲ್. ಇವೆರಡೂ ಕೊಲೆಸ್ಟ್ರಾಲುಗಳ ಒಟ್ಟಾರೆ ಮಟ್ಟ ನಮ್ಮ ಆರೋಗ್ಯವನ್ನು ನಿರ್ಧರಿಸುತ್ತದೆ. ಉತ್ತಮ ಆರೋಗ್ಯಕ್ಕೆ ಕೆಟ್ಟದ್ದು ಕಡಿಮೆಯೂ ಹಾಗೂ ಒಳ್ಳೆಯದು ಹೆಚ್ಚಾಗಿಯೂ ಇರಬೇಕು. ಈ ಮಟ್ಟವನ್ನು ವ್ಯಾಯಾಮ, ಆಹಾರಕ್ರಮ ಹಾಗೂ ಜೀವನಶೈಲಿ ನಿರ್ಧರಿಸುತ್ತವೆ. "The Journal of the American Medical Association" ಎಂಬ ವೈದ್ಯಕೀಯ ನಿಯತಕಾಲಿಕೆಯ ಏಪ್ರಿಲ್ 2010ರ ಸಂಚಿಕೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ ಸಕ್ಕರೆಭರಿತ ಆಹಾರಗಳನ್ನು ಸೇವಿಸುವ ಮೂಲಕ ದೇಹದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುತ್ತದೆ.

ಮೌನ ಕೊಲೆಗಾರ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಸರಳ ಸೂತ್ರ


ಅಂದರೆ ಸಿಹಿವಸ್ತುಗಳನ್ನು ತಿಂದ ಬಳಿಕ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಅತಿ ಕಡಿಮೆ ಸಮಯದಲ್ಲಿ ಏರುತ್ತದೆ.ಜೂನ್ 2011ರ "The Journal of Nutrition"ನಿಯತಕಾಲಿಕೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ ಸ್ಥೂಲಕಾಯ ಹೆಚ್ಚಿಸುತ್ತದೆ. ತೂಕ ಇಳಿಸಬೇಕೆಂದರೆ ಗ್ಲೈಸೆಮಿಕ್ ಕೋಷ್ಟಕದಲ್ಲಿ ಕಡಿಮೆ ಮಾಪನ ಹೊಂದಿರುವ ಆಹಾರಗಳನ್ನೇ ಸೇವಿಸಬೇಕು. ಅಂದರೆ ತೂಕ ಇಳಿಸಬೇಕೆಂದರೆ ಸಕ್ಕರೆಯನ್ನು ಅನಿವಾರ್ಯವಾಗಿ ವರ್ಜಿಸಬೇಕಾಗುತ್ತದೆ.

Crohn's Disease (ಕರುಳುಳ ಒಳಗಿನ ಉರಿಯೂತ)
ಜಠರದಲ್ಲಿ ಆಹಾರ ಜೀರ್ಣಗೊಂಡ ಬಳಿಕ ಸಣ್ಣಕರುಳಿನಲ್ಲಿ ಹೆಚ್ಚಿನ ಜೀರ್ಣತೆ ಹಾಗೂ ಪೋಷಕಾಂಶಗಳನ್ನು ಹೀರಿಕೊಳ್ಳಲಾಗುತ್ತದೆ. ಬಳಿಕ ದೊಡ್ಡ ಕರುಳಿನಲ್ಲಿ ನೀರಿನಂಶವನ್ನು ಹೀರಿಕೊಂಡು ಕಲ್ಮಶಗಳನ್ನು ವಿಸರ್ಜಿಸಲಾಗುತ್ತದೆ. ಸಕ್ಕರೆ ಹೆಚ್ಚಿರುವ ಆಹಾರಗಳ ಸೇವನೆಯಿಂದ ಸಣ್ಣಕರುಳು ಹಾಗೂ ದೊಡ್ಡಕರುಳುಗಳಲ್ಲಿ ಉರಿಯೂತವುಂಟಾಗುವ ಸಾಧ್ಯತೆ ಹೆಚ್ಚು.


ಪರಿಣಾಮವಾಗಿ ಹೊಟ್ಟೆನೋವು, ಜ್ವರ, ಸತತ ಬೇಧಿ, ಹಸಿವಾಗದಿರುವುದು ಮೊದಲಾದ ತೊಂದರೆಗಳು ಎದುರಾಗಬಹುದು. University of Maryland Medical Center ಎಂಬ ವಿಶ್ವವಿದ್ಯಾಲಯ ಪ್ರಕಟಿಸಿರುವ ಪ್ರಕಾರ ಸಂತೃಪ್ತ ಕೊಬ್ಬು ಹಾಗೂ ಸಕ್ಕರೆಯ ಅಂಶಗಳು ಹೆಚ್ಚಾಗಿರುವ ಆಹಾರಗಳ ಸೇವನೆಯಿಂದ (ಇವೆರಡೂ ಸಿಹಿಪದಾರ್ಥಗಳಲ್ಲಿ ಯಥೇಚ್ಛವಾಗಿವೆ) ಕ್ರೋನ್ಸ್ ಕಾಯಿಲೆ ಆವರಿಸುವ ಸಾಧ್ಯತೆ ಅತ್ಯಧಿಕವಾಗಿರುತ್ತದೆ.

ಮೂಳೆಗಳ ದೃಢತೆ ಕಡಿಮೆ ಮಾಡುತ್ತದೆ
ಸತತವಾಗಿ ಸಿಹಿಗಳನ್ನು ಸೇವಿಸುವ ದುಷ್ಪರಿಣಾಮ ಮೂಳೆಗಳ ಮೇಲೆ ನೇರವಾಗಿ ಆಗುತ್ತದೆ. "Nutrition Reviews"ಎಂಬ ನಿಯತಕಾಲಿಕೆಯ ಜೂನ್ 2008ರಲ್ಲಿ ಪ್ರಕಟವಾದ ವರದಿಯ ಪ್ರಕಾರ ಸಕ್ಕರೆ ಹೆಚ್ಚಿರುವ ಆಹಾರಗಳ ಸೇವನೆಯಿಂದ ಮೂಳೆಗಳ ದೃಢತೆ ಕಡಿಮೆಯಾಗುತ್ತದೆ. ಪರಿಣಾಮವಾಗಿ ಚಿಕ್ಕಪುಟ್ಟ ಅಪಘಾತಗಳಲ್ಲಿ, ಮನೆಯಲ್ಲಿ ಚಿಕ್ಕದಾಗಿ ಜಾರಿಬಿದ್ದ ನೆಪವೇ ಮೂಳೆಗಳು ತುಂಡಾಗಲು ಕಾರಣವಾಗಬಹುದು. ಪರಿಣಾಮವಾಗಿ ನಿತ್ಯದ ಚಟುವಟಿಕೆಗಳೆಲ್ಲಾ ಏರುಪೇರಾಗಬಹುದು.

English summary

Diwali Special: Reasons Why Sugar is Bad For You

Added sugar is the single worst ingredient in the modern diet. It can have harmful effects on metabolism and contribute to all sorts of diseases. During Diwali celebrations are incomplete without sweets. Going from one house to the other, gorging on delicacies can throw your fitness goals off gear by a good few weeks. It can also lead to health problems if you suffer from conditions like diabetes, hypertension, etc. In order to put a stop to this, many opt for sugar-free sweets.
X
Desktop Bottom Promotion