For Quick Alerts
ALLOW NOTIFICATIONS  
For Daily Alerts

ಹರಳೆಣ್ಣೆಯಿಂದ ಸಾಕಷ್ಟು ಲಾಭಗಳಿವೆ, ಇದನ್ನು ನಿರ್ಲಕ್ಷಿಸಬೇಡಿ

ಹಿಂದೆ ಹರಳೆಣ್ಣೆ ಎಂದರೆ ಎತ್ತಿನಗಾಡಿಯ ಕೀಲುಗಳಿಗೆ ಹಾಕಲು ಅಥವಾ ತಲೆಗೆ ಮತ್ತು ಮಲಬದ್ದತೆಗೆ ಔಷದಿಯ ರೂಪದಲ್ಲಿ ಬಳಸಲಾಗುತ್ತಿತ್ತು. ಎತ್ತಿನ ಗಾಡಿಯ ಎಣ್ಣೆ ಎಂಬ ಕಾರಣಕ್ಕೇ ಹೆಚ್ಚಿನವರು ಹರಳೆಣ್ಣೆಯನ್ನು ಉಪಯೋಗಿಸದೇ ಮೂಲೆಗುಂಪಾಗಿಸಿದ್ದಾರೆ.

By Manu
|

ಮುಖ ಸಿಂಡರಿಸಿಕೊಂಡವರನ್ನು 'ಹರಳೆಣ್ಣೆ ಕುಡಿದವರಂತೆ' ಎಂಬ ಉಪಮೇಯವನ್ನು ಉಪಯೋಗಿಸುವುದನ್ನು ಬಹಳಷ್ಟು ಕೃತಿಗಳಲ್ಲಿ ನೋಡಬಹುದು. ಸಾಮಾನ್ಯವಾಗಿ ಹಿಂದೆ ಹರಳೆಣ್ಣೆ ಎಂದರೆ ಎತ್ತಿನಗಾಡಿಯ ಕೀಲುಗಳಿಗೆ ಹಾಕಲು ಅಥವಾ ತಲೆಗೆ ಮತ್ತು ಮಲಬದ್ಧತೆಗೆ ಔಷಧಿಯ ರೂಪದಲ್ಲಿ ಬಳಸಲಾಗುತ್ತಿತ್ತು. ಎತ್ತಿನ ಗಾಡಿಯ ಎಣ್ಣೆ ಎಂಬ ಕಾರಣಕ್ಕೇ ಹೆಚ್ಚಿನವರು ಹರಳೆಣ್ಣೆಯನ್ನು ಉಪಯೋಗಿಸದೇ ಮೂಲೆಗುಂಪಾಗಿಸಿದ್ದಾರೆ. ಸ್ಟ್ರೆಚ್ ಮಾರ್ಕ್ ಸಮಸ್ಯೆಗೆ, ಹರಳೆಣ್ಣೆ-ಆಲೂಗಡ್ಡೆ ಪ್ಯಾಕ್

ವಾಸ್ತವವಾಗಿ ಹರಳೆಣ್ಣೆ ಹಲವು ರೀತಿಯಲ್ಲಿ ಆರೋಗ್ಯಕ್ಕೆ ಪೂರಕವಾಗಿದೆ. ಅದರಲ್ಲೂ ಔಷಧಿಗಳು ವಾಸಿ ಮಾಡಲಾಗದಂತಹ ಕೆಲವು ವ್ಯಾಧಿಗಳನ್ನು ಈ ಹರಳೆಣ್ಣೆ ಸುಲಭವಾಗಿ ಗುಣಪಡಿಸುತ್ತದೆ. ಹರಳೆಣ್ಣೆ ಬೋಳು ತಲೆಯಲ್ಲಿ ಕೂದಲು ಮೂಡಿಸುವುದೇ?

ಚರ್ಮದ ಕಂದು ಕಲೆ, ಸೊಂಟನೋವು, ಉಳುಕಿದ ಹಿಮ್ಮಡಿ ಮೊದಲಾದವುಗಳಿಗೆ ಹರಳೆಣ್ಣೆ ಅತ್ಯುತ್ತಮವಾಗಿದೆ. ಇದನ್ನು ಇನ್ನೂ ಹಲವಾರು ಗುಣಗಳನ್ನು ಕೆಳಗೆ ವಿವರಿಸಲಾಗಿದೆ...

ಸೊಂಟ ನೋವಿದ್ದರೆ....

ಸೊಂಟ ನೋವಿದ್ದರೆ....

ವಾರಕ್ಕೊಮ್ಮೆ ಹರಳೆಣ್ಣೆಯಿಂದ ಕೆಳಬೆನ್ನನ್ನು ಮಸಾಜ್ ಮಾಡುತ್ತಾ ಬಂದರೆ ಸೊಂಟನೋವು ಕಡಿಮೆಯಾಗುತ್ತದೆ.

ಧ್ವನಿ ಗಡುಸಾಗಿದ್ದರೆ

ಧ್ವನಿ ಗಡುಸಾಗಿದ್ದರೆ

ಧ್ವನಿ ಗಡುಸಾಗಿದ್ದರೆ ಗಂಟಲಿಗೆ ಪ್ರತಿದಿನ ಮೂರು ತಿಂಗಳುಗಳ ಕಾಲ ಹರಳೆಣ್ಣೆ ಸವರಿಕೊಳ್ಳುತ್ತಾ ಇದ್ದರೆ ಧ್ವನಿಪೆಟ್ಟಿಗೆಯ ಗಂಟು ಕರಗಿ ಗಡಸು ಅಥವಾ ಬಿದ್ದು ಹೋದ ಧ್ವನಿ ಇಲ್ಲವಾಗುತ್ತದೆ.

ಕಿವಿಮೊರೆತದ ತೊಂದರೆ

ಕಿವಿಮೊರೆತದ ತೊಂದರೆ

ಕಿವಿಮೊರೆತದ ತೊಂದರೆ ಇದ್ದರೆ ಒಂದು ತಿಂಗಳ ಕಾಲ, ಪ್ರತಿದಿನ ನಿಮ್ಮ ಊಟದಲ್ಲಿ ಆರರಿಂದ ಎಂಟು ಹನಿ ಹರಳೆಣ್ಣೆ ಸೇರಿಸಿ ಸೇವಿಸಿದರೆ ಕಡಿಮೆಯಾಗುತ್ತದೆ.

ಹೊಟ್ಟೆಯ ಸಮಸ್ಯೆಗೆ

ಹೊಟ್ಟೆಯ ಸಮಸ್ಯೆಗೆ

ಹೊಟ್ಟೆ ಅತಿ ಕ್ರಿಯಾಶೀಲವಾದರೆ (ಅಥವಾ ಗುಡುಗುಡು ಸದ್ದು ಬಂದರೆ) ಕೊಂಚ ಹರಳೆಣ್ಣೆಯನ್ನು ಆಹಾರದ ಮೂಲಕ ಸೇವಿಸಿದರೆ ಕಡಿಮೆಯಾಗುತ್ತದೆ.

ಚರ್ಮದ ತೊಂದರೆಗಳಿಗೆ....

ಚರ್ಮದ ತೊಂದರೆಗಳಿಗೆ....

ನರಹುಲಿ (wart), ಆಣಿ ಮೊದಲಾದ ಚರ್ಮದ ತೊಂದರೆಗಳಿಗೆ ಸತತವಾಗಿ ಒಂದು ತಿಂಗಳ ಕಾಲ ಹರಳೆಣ್ಣೆ ಹಚ್ಚಿದರೆ ನಿವಾರಣೆಯಾಗುತ್ತದೆ. ಅಲ್ಲದೆ ಚರ್ಮದ calcification or calcium deposit (ಕ್ಯಾಲ್ಸಿಯಂ ಪ್ರಮಾಣ ಹೆಚ್ಚಾಗಿ ಪ್ರಕಟಗೊಳ್ಳುವುದು) ತೊಂದರೆ ಕಂಡುಬಂದರೆ ಹರಳೆಣ್ಣೆಯಿಂದ ನಿತ್ಯವೂ ಮಸಾಜ್ ಮಾಡಿದರೆ ಕ್ರಮೇಣ ಕಡಿಮೆಯಾಗುತ್ತದೆ.

ಗೊರಕೆಯ ನಿಯಂತ್ರಣಕ್ಕೆ

ಗೊರಕೆಯ ನಿಯಂತ್ರಣಕ್ಕೆ

ಗೊರಕೆಯ ತೊಂದರೆ ಇದ್ದರೆ ಕೆಳಹೊಟ್ಟೆಗೆ ಎರಡು ವಾರಗಳ ಕಾಲ ಹರಳೆಣ್ಣೆಯಿಂದ ಮಸಾಜ್ ಮಾಡುವ ಮೂಲಕ ಕಡಿಮೆಯಾಗುತ್ತದೆ.

ಜೇನ್ನೊಣ ಕಚ್ಚಿದಾಗ....

ಜೇನ್ನೊಣ ಕಚ್ಚಿದಾಗ....

ಜೇನ್ನೊಣ ಕಚ್ಚಿದ ಬಳಿಕ ಆಗುವ ಉರಿಯನ್ನು ಕಡಿಮೆ ಮಾಡಲು ಹರಳೆಣ್ಣೆ ಹಚ್ಚಿದರೆ ಸಾಕು.

ಕೂದಲ ಆರೈಕೆಗೆ....

ಕೂದಲ ಆರೈಕೆಗೆ....

ಕೂದಲ ಬೆಳವಣಿಗೆಗೆ ಶಾಂಪೂ ಮಾಡಿಕೊಳ್ಳುವ ಮೊದಲು ಕೂದಲಿಗೆ ಹರಳೆಣ್ಣೆ ಹಚ್ಚಿ ಇಪ್ಪತ್ತು ನಿಮಿಷದ ಬಳಿಕ ಶಾಂಪೂ ಹಾಕಿ ತೊಳೆದುಕೊಂಡರೆ ಉತ್ತಮ ಪರಿಣಾಮ ಪಡೆಯಬಹುದು.

ಮದ್ಯಪಾನದಿಂದ ಮುಕ್ತಿ ಪಡೆಯಲು

ಮದ್ಯಪಾನದಿಂದ ಮುಕ್ತಿ ಪಡೆಯಲು

ಮದ್ಯಪಾನದಿಂದ ಮುಕ್ತಿ ಪಡೆಯಲು ರೋಗಿಗೆ ಆಹಾರದಲ್ಲಿ ಕೊಂಚ ಹರಳೆಣ್ಣೆ ಸೇರಿಸುತ್ತಾ ಇದ್ದರೆ ಪರಿಣಾಮ ಕಂಡುಬರುತ್ತದೆ. ಪುರುಷರೇ ವಯಸ್ಸು ಮೂವತ್ತಾಯಿತೇ?, ಮದ್ಯಪಾನ ಬಿಟ್ಟು ಬಿಡಿ!

ವೃದ್ಧಾಪ್ಯನಿಯಂತ್ರಣಕ್ಕೆ!

ವೃದ್ಧಾಪ್ಯನಿಯಂತ್ರಣಕ್ಕೆ!

ಹರಳೆಣ್ಣೆಯಿಂದ ಚರ್ಮವನ್ನು ಆಗಾಗ ಮಸಾಜ್ ಮಾಡಿಕೊಳ್ಳುತ್ತಾ ಇದ್ದರೆ ವೃದ್ಧಾಪ್ಯವನ್ನು ದೂರವಾಗಿಸಬಹುದು.

 ಗರ್ಭಿಣಿಯರಿಗೆ ಆರೈಕೆಗೆ

ಗರ್ಭಿಣಿಯರಿಗೆ ಆರೈಕೆಗೆ

ಗರ್ಭಿಣಿಯರು ತಮ್ಮ ಗರ್ಭಾವಸ್ಥೆಯ ಕಡೆಯ ಎರಡು ತಿಂಗಳಲ್ಲಿ ಕೊಂಚ ಹರಳೆಣ್ಣೆಯನ್ನು ಉಬ್ಬಿದ ಹೊಟ್ಟೆಯ ಭಾಗಕ್ಕೆ ಸವರಿಕೊಳ್ಳುತ್ತಾ ಇದ್ದರೆ ಹೆರಿಗೆಯ ಬಳಿಕ ಹೊಟ್ಟೆಯಲ್ಲಿ ಸೆಳೆತದ ಗುರುತುಗಳು (stretch marks) ಅತ್ಯಂತ ಕಡಿಮೆಯಾಗುತ್ತವೆ.

ಗಾಯದ ಸಮಸ್ಯೆಗೆ

ಗಾಯದ ಸಮಸ್ಯೆಗೆ

ಗಾಯ, ಜಜ್ಜಿದ, ಅಥವಾ ಚಿಕ್ಕಪುಟ್ಟ ಚರ್ಮ ತರಚಿದ ಸ್ಥಳದ ಮೇಲೆ ಕೊಂಚ ಹರಳೆಣ್ಣೆ ಸವರಿದರೆ ಬೇಗನೇ ಗುಣವಾಗುತ್ತದೆ. ಅಲ್ಲದೆ ನಡೆಯುವಾಗ ಕಾಲು ಉಳುಕಿದರೆ ತಕ್ಷಣ ಹರಳೆಣ್ಣೆ ಹಚ್ಚಿ ಇಡಿಯ ರಾತ್ರಿ ಹಾಗೇ ಬಿಟ್ಟರೆ ಬೆಳಿಗ್ಗೆದ್ದಾಗ ನೋವು ಇರುವುದಿಲ್ಲ. ಗಾಯದ ಸಮಸ್ಯೆಗೆ ಸರಳ ಪರಿಹಾರಗಳು

English summary

Castor Oil Uses The Benefits of Using This Simple Home Remedy

Castor oil demonstrates efficacy in treatments where every other remedy fails to succeed. Use it to get rid of brown spots on the skin, relieve lower back pain, heal sprained ankle and treat other similar ailments.
X
Desktop Bottom Promotion