For Quick Alerts
ALLOW NOTIFICATIONS  
For Daily Alerts

ಸ್ಟ್ರೆಚ್ ಮಾರ್ಕ್ ಸಮಸ್ಯೆಗೆ, ಹರಳೆಣ್ಣೆ-ಆಲೂಗಡ್ಡೆ ಪ್ಯಾಕ್

By Manu
|

ಹೆರಿಗೆಯಾದ ಬಳಿಕ ನಿಮ್ಮ ನೆಚ್ಚಿನ ಹಲವಾರು ಉಡುಗೆಗಳಿಗೆ ವಿದಾಯ ಹೇಳಬೇಕಾಗಿ ಬರುತ್ತದೆ. ಹೊಸ ವಿನ್ಯಾಸದ ಬಟ್ಟೆಗಳನ್ನು ಕೊಳ್ಳುವ ಮನಸ್ಸಿದ್ದರೂ ಅನಿವಾರ್ಯವಾಗಿ ಕೊಳ್ಳದೇ ಬೇಸರ ಪಟ್ಟು ಕೊಳ್ಳುವಂತಾಗುತ್ತದೆ. ಇದಕ್ಕೆ ಕಾರಣ? ಸೊಂಟದ ಮತ್ತು ಕೆಳಹೊಟ್ಟೆಯಲ್ಲಿ ಮೂಡಿರುವ ಹೆರಿಗೆಯ ಸೆಳೆತಗುರುತುಗಳು (stretch marks). ಇದನ್ನು ಮುಚ್ಚಿಕೊಳ್ಳಲು ಎಷ್ಟು ಪ್ರಯತ್ನಿಸಿದರೂ ಎಲ್ಲಾದರೂ ಧಾವಂತದಲ್ಲಿ ಕೆಳಗೆ ಸರಿದರೆ? ಸರಿದು ಈ ಗುರುತುಗಳು ಕಾಣುವಂತಾದರೆ? ಎಂಬ ದುಗುಡದಿಂದ ಹೆಚ್ಚಿನವರು ಸೀರೆಯನ್ನೂ ಉಡಲು ಹೋಗುವುದಿಲ್ಲ. ಬದಲಿಗೆ ಇಡಿಯ ದೇಹವನ್ನು ಆವರಿಸುವ ಕುರ್ತಾ, ಸಲ್ವಾರ್ ಮೊದಲಾದವುಗಳನ್ನೇ ತೊಡುತ್ತಾರೆ.

ಈ ಗುರುತುಗಳನ್ನು ಮರೆಮಾಚುವುದರಿಂದ ಗುರುತುಗಳೇನೂ ಕಡಿಮೆಯಾಗುವುದಿಲ್ಲವಲ್ಲ? ಗರ್ಭಾವಸ್ಥೆಯಲ್ಲಿ ಸೆಳೆತದೊಂಡ ಕೆಳಹೊಟ್ಟೆಯ ಚರ್ಮ ಹಿಸಿದ ಪರಿಣಾಮವಾಗಿ ಮೂಡಿದ ಈ ಗುರುತುಗಳು ಇಲ್ಲಿ ಮಾತ್ರವಲ್ಲ, ತೊಡೆ, ನಿತಂಬ, ಸೊಂಟದ ಪಕ್ಕವೂ ಕಾಣಿಸಿಕೊಳ್ಳಬಹುದು.

DIY Potato And Castor Oil Skin Pack To Reduce Stretch Marks

ಕೇವಲ ಗರ್ಭಾವಸ್ಥೆ ಮಾತ್ರ ಇದಕ್ಕೆ ಕಾರಣವಲ್ಲ, ಸ್ಥೂಲಕಾಯದಿಂದಲೂ ಈ ಸ್ಥಿತಿ ಬರಬಹುದು. ಅತಿ ಕಡಿಮೆ ಸಮಯದಲ್ಲಿ ಅತಿ ಹೆಚ್ಚು ತೂಕ ಪಡೆದುಕೊಂಡವರಲ್ಲಿಯೂ ಈ ಗುರುತುಗಳು ಕಾಣಿಸಿಕೊಳ್ಳುತ್ತವೆ. ಕಾರಣ ಯಾವುದೇ ಇರಲಿ, ಈ ಗುರುತುಗಳನ್ನು ಹೊಂದಲು ಯಾರೂ ಇಷ್ಟಪಡುವುದಿಲ್ಲ. ಈ ಗುರುತುಗಳನ್ನು ತೋರಿಸಿಕೊಳ್ಳಲೂ ಹೆಚ್ಚಿನವರಿಗೆ ಮುಜುಗರವೆನಿಸುತ್ತದೆ. ಇದು ಇವರಲ್ಲಿ ಆತ್ಮವಿಶ್ವಾಸವನ್ನೇ ಕುಂದಿಸುತ್ತವೆ. ಸ್ಟ್ರೆಚ್ ಮಾರ್ಕ್ಸ್ ಬೀಳಲು ಕಾರಣ ಮತ್ತು ಪರಿಹಾರ

ಈ ಗುರುತುಗಳನ್ನು ನಿವಾರಿಸಲು ಕೆಲವಾರು ವಿಧಾನಗಳು ಲಭ್ಯವಿದ್ದರೂ ವೃತ್ತಿಪರ ವಿಧಾನಗಳು ದುಬಾರಿಯೂ, ಕೆಲವು ಅಡ್ಡಪರಿಣಾಮಗಳನ್ನು ಹೊಂದಿರುವಂತಹದ್ದೂ ಆಗಿವೆ. ಇದಕ್ಕೆ ನೈಸರ್ಗಿಕ ವಿಧಾನಗಳೇ ಹೆಚ್ಚು ಸೂಕ್ತ. ಕೊಂಚ ನಿಧಾನವಾಗಿ ಪರಿಣಾಮ ಬೀರುತ್ತದೆ ಎಂಬ ಒಂದೇ ಕಾರಣದ ಹೊರತಾಗಿ ಇದನ್ನು ಬಳಸದೇ ಇರಲು ಬೇರೆ ಕಾರಣಗಳಿಲ್ಲ. ಇದರಲ್ಲಿ ಒಂದು ಫಲಪ್ರದ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ. ಕೇವಲ ಆಲೂಗಡ್ಡೆ ಮತ್ತು ಹರಳೆಣ್ಣೆಯನ್ನು ಬಳಸಿ ತಯಾರಿಸುವ ಈ ಲೇಪನ ಈ ಗುರುತುಗಳನ್ನು ಯಾವುದೇ ಅಡ್ಡಪರಿಣಾಮಗಳಿಲ್ಲದೇ ನಿವಾರಿಸಲು ಸಮರ್ಥವಾಗಿದೆ.

DIY Potato And Castor Oil Skin Pack To Reduce Stretch Marks

ಅಗತ್ಯವಿರುವ ಸಾಮಾಗ್ರಿಗಳು:

*ಹರಳೆಣ್ಣೆ: ಒಂದು ದೊಡ್ಡಚಮಚ

*ಆಲೂಗಡ್ಡೆಯ ರಸ: ಎರಡು ದೊಡ್ಡ ಚಮಚ

ಇವೆರಡು ದ್ರವಗಳನ್ನು ಮಿಶ್ರಣಗೊಳಿಸಿ ಚರ್ಮದ ಮೇಲೆ ಹಚ್ಚಿದಾಗ ಆಲೂಗಡ್ಡೆಯಲ್ಲಿರುವ ಪಿಷ್ಟ ಚರ್ಮದಲ್ಲಿ ಕೊಲ್ಯಾಜೆನ್ ಎಂಬ ಕಣದ ಬೆಳವಣಿಗೆಗೆ ನೆರವಾಗುತ್ತದೆ. ಇದು ಚರ್ಮದಲ್ಲಿ ಸೆಳೆತವನ್ನು ಹೆಚ್ಚಿಸಿ ದೂರವಾಗಿದ್ದ ಚರ್ಮದ ಜೀವಕೋಶಗಳನ್ನು ಹತ್ತಿರ ತರುತ್ತದೆ.

ಅಷ್ಟೇ ಅಲ್ಲದೇ ಈ ಮಿಶ್ರಣದಲ್ಲಿರುವ ಆಂಟಿ ಆಕ್ಸಿಡೆಂಟುಗಳು ಘಾಸಿಗೊಂಡಿದ್ದ ಜೀವಕೋಶಗಳ ಬೆಳವಣಿಗೆಗೆ ಅಗತ್ಯವಾದ ಶಕ್ತಿ ಮತ್ತು ಪೋಷಣೆಯನ್ನು ನೀಡುತ್ತವೆ. ಇದರಿಂದ ಒತ್ತಡದ ಮೂಲಕ ದೂರದೂರವಾಗಿದ್ದ ಚರ್ಮದ ಜೀವಕೋಶಗಳು ಹತ್ತಿರ ಬರುತ್ತವೆ. ಈ ಮಿಶ್ರಣದಲ್ಲಿ ಉತ್ತಮ ಪ್ರಮಾಣದಲ್ಲಿರುವ ವಿಟಮಿನ್ ಇ ಜೀವಕೋಶಗಳನ್ನು ರಿಪೇರಿ ಮಾಡಲು ಸಮರ್ಥವಾಗಿದ್ದು ನಿಧಾನವಾಗಿ ಸೆಳೆತದ ಗುರುತುಗಳನ್ನು ನಿವಾರಿಸಲು ಸಹಕರಿಸುತ್ತದೆ. ಹೆರಿಗೆ ನಂತರ ಸ್ಟ್ರೆಚ್ ಮಾರ್ಕ್ಸ್ ನಿವಾರಣೆ ಹೇಗೆ?

ಈ ಮಿಶ್ರಣವನ್ನು ತಯಾರಿಸುವ ವಿಧಾನ:

DIY Potato And Castor Oil Skin Pack To Reduce Stretch Marks

*ಆಲೂಗಡ್ಡೆಯ ರಸವನ್ನು ಹೀರಲು: ಒಂದು ದೊಡ್ಡ ಅಥವಾ ಎರಡು ಚಿಕ್ಕ ಆಲೂಗಡ್ಡೆಗಳನ್ನು ಚೆನ್ನಾಗಿ ತೊಳೆದು ಸಿಪ್ಪೆ ಸಹಿತವಾಗಿ ಬ್ಲೆಂಡರಿನಲ್ಲಿ ಕಡೆದು ತೆಳುವಾದ ಬಟ್ಟೆಯಲ್ಲಿ ಹಿಂಡಿದರೆ ರಸ ಒಸರುತ್ತದೆ.

*ಒಂದು ದೊಡ್ಡಚಮಚ ಹರಳೆಣ್ಣೆ ಮತ್ತು ಎರಡು ದೊಡ್ಡಚಮಚ ಆಲುಗಡ್ಡೆ ರಸವನ್ನು ಚೆನ್ನಾಗಿ ಮಿಶ್ರಣ ಮಾಡಿ.

*ಈ ಮಿಶ್ರಣವನ್ನು ಸೆಳೆತದ ಗುರುತುಗಳಿರುವಲ್ಲಿ ತೆಳ್ಳನಾಗಿ ಹಚ್ಚಿ ಸುಮಾರು ಮೂವತ್ತು ನಿಮಿಷ ಹಾಗೇ ಬಿಡಿ.

*ಬಳಿಕ ಉಗುರುಬೆಚ್ಚನೆಯ ನೀರಿನಿಂದ ಮತ್ತು ಸೌಮ್ಯ ಸೋಪು ಬಳಸಿ ತೊಳೆದುಕೊಳ್ಳಿ.

*ಒಂದು ವೇಳೆ ಸೊಂಟದ ಬದಿಗಳಲ್ಲಿ ಏಕಕಾಲದಲ್ಲಿ ಹಚ್ಚಲು ಸಾಧ್ಯವಿಲ್ಲದಿದ್ದರೆ ಮೊದಲು ಬಲಬದಿಗೆ ಹಚ್ಚಿ ತೊಳೆದುಕೊಂಡ ಬಳಿಕ ಎಡಬದಿಗೆ ಹಚ್ಚಿಕೊಳ್ಳಬಹುದು.

English summary

DIY Potato And Castor Oil Skin Pack To Reduce Stretch Marks

You enter a trendy clothing store and see a few really pretty crop tops, you get excited and think of buying them, but then one thought stops you - stretch marks! Having stretch marks can prevent you from confidently wearing clothes that show off your midriff or thighs. No matter how much you try and convince yourself that it is not a big issue, you can't help feeling self-conscious about it.Try this potato juice and castor oil skin pack that helps in reducing stretch marks; and the best part is, it can be made right at home!
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more