ಮಳೆಗಾಲದಲ್ಲಿ ಸಾಧ್ಯವಾದಷ್ಟು ಇಂತಹ ಹಣ್ಣುಗಳನ್ನು ಸರಿಯಾಗಿ ತಿನ್ನಿ!

By: Hemanth
Subscribe to Boldsky

ಹೊರಗಡೆ ಕವಿದಿರುವ ಕಾರ್ಮೋಡ, ಮನೆಯೊಳಗೆ ಕೂತಿರುವ ನಮ್ಮ ಮನಸ್ಸಿಗೂ ಇದೇ ಕಾರ್ಮೋಡ ಆವರಿಸಿರುವುದು. ಮಳೆಗಾಲದಲ್ಲಿ ತುಂಬಾ ಉದಾಸೀನ ಭಾವ ಕಾಡುತ್ತಿರುತ್ತದೆ. ಇಂತಹ ಸಮಯದಲ್ಲಿ ಯಾವುದೇ ಕೆಲಸ ಮಾಡಲು ಮನಸ್ಸು ಕೂಡ ಆಗುವುದಿಲ್ಲ. ಹೊರಗಡೆ ಮಳೆ ಬರುತ್ತಾ ಇದ್ದರೆ ಏನಾದರೂ ಬಿಸಿಬಿಸಿಯಾಗಿರುವುದನ್ನು ತಿನ್ನಬೇಕೆಂದು ಮನಸ್ಸು ಹೇಳುತ್ತಾ ಇರುತ್ತದೆ. ಬಿಸಿಬಿಸಿಯಾದ ತಿಂಡಿಯೊಂದಿಗೆ ದಿನದ ಆರಂಭ ಮಾಡಿದರೆ ಮನಸ್ಸು ಉಲ್ಲಾಸಿತವಾಗಿರುವುದು.

ಬೆಳಗ್ಗಿನ ಉಪಾಹಾರಕ್ಕೆ ಹಣ್ಣುಗಳನ್ನು ಸೇವಿಸಿದರೆ ಅದರಿಂದ ದೇಹವು ತುಂಬಾ ಆರಾಮ ಮತ್ತು ಆರೋಗ್ಯವಾಗಿರುವುದು. ಮಳೆಗಾಲದಲ್ಲಿ ದೇಹವು ಹಲವಾರು ಸೋಂಕು, ಅಲರ್ಜಿ ಮತ್ತು ಅಜೀರ್ಣ ಸಮಸ್ಯೆಯಿಂದ ಬಳುವುದು. ಇಂತಹ ಕಾಯಿಲೆಗಳ ವಿರುದ್ಧ ಹೋರಾಡಲು ದೇಹದಲ್ಲಿ ಪ್ರತಿರೋಧಕ ಶಕ್ತಿ ಹೆಚ್ಚಾಗಿರಬೇಕು. ಜೀರ್ಣಕ್ರಿಯೆ ಪ್ರಕ್ರಿಯೆ ಕೂಡ ಮಳೆಗಾಲದಲ್ಲಿ ಕಡಿಮೆ ಇರುವುದು.

ಅದ್ಭುತ ಆರೋಗ್ಯ ಗುಣ ಹೊಂದಿರುವ ಹಣ್ಣಿನ ಸಿಪ್ಪೆಗಳು

ಇಂತಹ ಸಮಯದಲ್ಲಿ ಸರಿಯಾದ ಆಹಾರ ಸೇವನೆ ಅತೀ ಅಗತ್ಯ. ಮಳೆಗಾಲದಲ್ಲಿ ಎಣ್ಣೆಯುಕ್ತ ಆಹಾರ, ಬೀದಿಬದಿ ಆಹಾರ ಮತ್ತು ಒಮ್ಮೆಲೇ ತಯಾರಿಸಿ ಇಟ್ಟಂತಹ ಆಹಾರ ಸೇವಿಸಿದರೆ ಅದರಿಂದ ಹೊಟ್ಟೆಗೆ ಸಮಸ್ಯೆಯಾಗಬಹುದು. ಮಳೆಗಾಲದಲ್ಲಿ ಸಿಗುವಂತಹ ಕೆಲವು ಹಣ್ಣುಗಳು ಕಾಯಿಲೆ ದೂರ ಮಾಡುವ ಗುಣ ಹೊಂದಿದೆ. ಮಳೆಗಾಲದಲ್ಲಿ ಸೇವಿಸುವ ಹಣ್ಣೂಗಳ ಬಗ್ಗೆ ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ.....

ಜಾಮೂನು

ಜಾಮೂನು

ಮಳೆಗಾಲದಲ್ಲಿ ಸೇವಿಸುವಂತಹ ಪ್ರಮುಖ ಹಣ್ಣುಗಳಲ್ಲಿ ಜಾಮೂನು ಪ್ರಮುಖವಾಗಿರುವಂತದ್ದಾಗಿದೆ. ಇದರಲ್ಲಿ ಕ್ಯಾಲರಿ ತುಂಬಾ ಕಡಿಮೆಯಿದೆ ಮತ್ತು ಕಬ್ಬಿನಾಂಶ, ಫಾಲಟೆ, ಪೊಟಾಶಿಯಂ ಮತ್ತು ವಿಟಮಿನ್ ನಂತಹ ಹಲವಾರು ಪೋಷಕಾಂಶಗಳಿವೆ. ಇದನ್ನು ಮಳೆಗಾಲದಲ್ಲಿ ಸೇವಿಸಬೇಕು.

ಲಿಚಿ

ಲಿಚಿ

ಮಳೆಗಾಲದಲ್ಲಿ ಸೇವಿಸಬಹುದಾದ ಮತ್ತೊಂದು ಪ್ರಮುಖ ಹಣ್ಣಿದಂರೆ ಲಿಚಿ. ಇದರಲ್ಲಿ ವಿಟಮಿನ್ ಸಿ ಸಮೃದ್ಧವಾಗಿರುವ ಕಾರಣದಿಂದ ದೇಹದಲ್ಲಿ ಪ್ರತಿರೋಧಕ ಶಕ್ತಿ ಶಕ್ತಿ ಹೆಚ್ಚಿಸಿ ದೇಹವನ್ನು ಬಲಿಷ್ಠವಾಗಿಸುವುದು. ಲಿಚಿಯಲ್ಲಿ ಆ್ಯಂಟಿಆಕ್ಸಿಡೆಂಟ್ ಸಮೃದ್ಧವಾಗಿದೆ. ಇದರಿಂದ ತೂಕ ಕಳೆದುಕೊಳ್ಳಲು ಸಾಧ್ಯವಾಗುವುದು.

ಪ್ಲಮ್ಸ್

ಪ್ಲಮ್ಸ್

ಇದು ದೇಹದಲ್ಲಿನ ಪ್ರತಿರೋಧಕ ಶಕ್ತಿಯನ್ನು ಸುಧಾರಿಸುವುದು. ಮಳೆಗಾಲದಲ್ಲಿ ಸಾಮಾನ್ಯವಾಗಿರುವ ಶೀತ ಮತ್ತು ಜ್ವರದಂತಹ ಸೋಂಕಿನಿಂದ ಇದು ದೇಹವನ್ನು ರಕ್ಷಿಸುವುದು.

ಚೆರ್ರಿ

ಚೆರ್ರಿ

ಮಳೆಗಾಲದಲ್ಲಿ ಹೆಚ್ಚಾಗಿ ಸಿಗುವ ಹಣ್ಣಾಗಿರುವ ಚೆರ್ರಿ ಸೋಂಕಿನ ವಿರುದ್ಧ ಹೋರಾಡಲು ನೆರವಾಗುವುದು. ಇದರಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ಮೆದುಳಿಗೆ ಶಮನ ನೀಡುವುದು ಮತ್ತು ಮೆದುಳಿಗೆ ವಿಶ್ರಾಂತಿ ನೀಡುವುದು.

ಪೀಚ್

ಪೀಚ್

ಮಳೆಗಾಲದಲ್ಲಿ ಸಿಗುವಂತಹ ಹಣ್ಣುಗಳಲ್ಲಿ ಒಂದಾಗಿರುವ ಪೀಚ್ ನಲ್ಲಿ ಕ್ಯಾಲರಿ ತುಂಬಾ ಕಡಿಮೆಯಿದೆ ಮತ್ತು ನಾರಿನಾಂಶವು ಹೆಚ್ಚಾಗಿದೆ. ಇದರಿಂದ ತೂಕ ಕಳೆದುಕೊಳ್ಳಲು ನೆರವಾಗುವುದು. ಇದರಲ್ಲಿರುವ ವಿಟಮಿನ್ ಸಿ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವುದು.

ದಾಳಿಂಬೆ

ದಾಳಿಂಬೆ

ದಾಳಿಂಬೆಯಲ್ಲಿ ಹಲವಾರು ರೀತಿಯ ಪೋಷಕಾಂಶಗಳಿವೆ. ಇದು ಮಳೆಗಾಲದಲ್ಲಿ ದೇಹದ ಪ್ರತಿರೋಧಕ ಶಕ್ತಿ ಹೆಚ್ಚಿಸುವುದು. ಇದರ ಬೀಜಗಳಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಇರುವ ಕಾರಣದಿಂದ ಇದನ್ನು ಸೇವಿಸುವುದು ದೇಹಕ್ಕೆ ತುಂಬಾ ಹಿತಕರ.

ಸೇಬು

ಸೇಬು

ದಿನಕ್ಕೊಂದು ಸೇಬು ಸೇವಿಸಿದರೆ ನೀವು ವೈದ್ಯರಿಂದ ದೂರವಿರಬಹುದು ಎನ್ನುವ ಮಾತಿದೆ. ಮಳೆಗಾಲದಲ್ಲಿ ಇದು ಹೆಚ್ಚಾಗಿ ಕಾರ್ಯನಿರ್ವಹಿಸುವುದು. ಮಳೆಗಾಲದಲ್ಲಿ ಕೆಲವು ತುಂಡು ಸೇಬು ಸೇವಿಸುವುದರಿಂದ ಹಲವಾರು ರೀತಿಯ ರೋಗಗಳಿಂದ ದೂರವಿರುವುದು. ಮಳೆಗಾಲದಲ್ಲಿ ಸೇಬು ಸೇವಿಸಿದರೆ ಹೆಚ್ಚಿನ ಲಾಭವಿದೆ.

ಬಾಳೆಹಣ್ಣು

ಬಾಳೆಹಣ್ಣು

ಬಾಳೆಹಣ್ಣಿನಲ್ಲಿ ವಿಟಮಿನ್ ಮತ್ತು ಖನಿಜಾಂಶಗಳು ಸಮೃದ್ಧವಾಗಿದೆ. ಮಳೆಗಾಲದಲ್ಲಿ ಬಾಳೆಹಣ್ಣು ಸೇವಿಸುವುದರಿಂದ ಇದು ಜೀರ್ಣಕ್ರಿಯೆ ಪ್ರಕ್ರಿಯೆಗೆ ತುಂಬಾ ನೆರವಾಗಲಿದೆ. ಬಾಳೆಹಣ್ಣನ್ನು ಹೆಚ್ಚಾಗಿ ಸೇವಿಸಿದರೆ ಅದರಿಂದ ಶೀತವಾಗುವ ಸಾಧ್ಯತೆಯಿದೆ.

ದಿನಕ್ಕೆರಡು ಬಾಳೆಹಣ್ಣು ಸೇವಿಸಿ, ವೈದ್ಯರಿಂದ ದೂರವಿರಿ!

ಪೀಯರ್ಸ್

ಪೀಯರ್ಸ್

ಮಳೆಗಾಲದಲ್ಲಿ ಸೋಂಕಿನ ವಿರುದ್ಧ ಹೋರಾಡಲು ದೇಹಕ್ಕೆ ಹೆಚ್ಚಿನ ಮಟ್ಟದ ವಿಟಮಿನ್ ಗಳ ಅಗತ್ಯವಿರುತ್ತದೆ. ಮಳೆಗಾಲದಲ್ಲಿ ವಾತಾವರಣದಲ್ಲಿ ಆರ್ದ್ರತೆ ಹೆಚ್ಚಾಗಿರುವ ಕಾರಣದಿಂದ ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಾಗಿರುವುದು. ಮಳೆಗಾಲದಲ್ಲಿ ಪೀಯರ್ಸ್ ಸೇವಿಸಿದರೆ ಅದರಿಂದ ದೇಹಕ್ಕೆ ತುಂಬಾ ಒಳ್ಳೆಯದು.

ಪಪ್ಪಾಯಿ

ಪಪ್ಪಾಯಿ

ಪಪ್ಪಾಯಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ದೇಹದಲ್ಲಿ ಪ್ರತಿರೋಧಕ ಶಕ್ತಿ ಹೆಚ್ಚು ಮಾಡಲು ವಿಟಮಿನ್ ಅತೀ ಅಗತ್ಯವಾಗಿ ಬೇಕು. ಇದು ರೋಗಗಳ ವಿರುದ್ಧ ಹೋರಾಡುವುದು. ಇದರಲ್ಲಿ ಇರುವಂತಹ ನಾರಿನಾಂಶವು ಜೀರ್ಣಕ್ರಿಯೆಗೂ ನೆರವಾಗುವುದು.

ದೇವತೆಗಳ ಹಣ್ಣು-ಪಪ್ಪಾಯಿ ಹಣ್ಣಿನಲ್ಲಿದೆ ಸೌಂದರ್ಯದ ಶಕ್ತಿ

English summary

Best Fruits To Eat During Monsoon

Monsoon season is the best time to sit back and eat something hot and crunchy. This is a season where you will feel lazy. Having a fruit basket ready will help you stay relaxed. During this season, our body gets constantly affected with allergies, infections and indigestion problems. Hence, we need to keep our body resistant against these diseases. Also, the humidity in the atmosphere will make the digestive system to go down.
Subscribe Newsletter