ಆಯುರ್ವೇದ ಟಿಪ್ಸ್: ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಸರಳ ಮನೆಮದ್ದು

By: Hemanth
Subscribe to Boldsky

ಕೆಲವರು ಮಾಂಸಹಾರ ಮತ್ತು ಎಣ್ಣೆಯುಕ್ತ ಆಹಾರವನ್ನು ಸೇವನೆ ಮಾಡಲು ತುಂಬಾ ಹೆದರುತ್ತಾರೆ. ಕಾರಣವೇನೆಂದು ಕೇಳಿದರೆ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ ಎನ್ನುವ ಉತ್ತರ ಬರುತ್ತದೆ. ಕೊಲೆಸ್ಟ್ರಾಲ್ ಸಮಸ್ಯೆ ಹೆಚ್ಚಿನವರನ್ನು ಕಾಡುತ್ತಾ ಇರುತ್ತದೆ. ಇದರಿಂದ ಹಲವಾರು ರೋಗಗಳು ಬರುತ್ತದೆ. ಕೇವಲ ಬೊಜ್ಜು ಹೊಂದಿರುವ ದೇಹದವರಿಗೆ ಮಾತ್ರ ಕೊಲೆಸ್ಟ್ರಾಲ್ ಬರುತ್ತದೆ ಎಂದು ಭಾವಿಸಬೇಡಿ. ದೇಹದ ಕೊಲೆಸ್ಟ್ರಾಲ್ ನಿಯಂತ್ರಿಸಿ, ಆರೋಗ್ಯ ವೃದ್ಧಿಸಿ...  

Cholesterol

ಯಾಕೆಂದರೆ ಸಪೂರ ದೇಹದವರಲ್ಲೂ ಕೊಲೆಸ್ಟ್ರಾಲ್ ಸಮಸ್ಯೆ ಕಾಣಿಸಬಹುದು. ದೇಹದ ರಕ್ತನಾಳಗಳಲ್ಲಿ ಇರುವಂತಹ ಕೊಬ್ಬನ್ನು ಕೊಲೆಸ್ಟ್ರಾಲ್ ಎನ್ನಲಾಗುತ್ತದೆ. ಕೆಲವೊಂದು ಹಾರ್ಮೋನುಗಳು ಉತ್ಪಾದನೆ ಮತ್ತು ದೇಹದ ಕಾರ್ಯಚಟುವಟಿಕೆಗೆ ಕೊಲೆಸ್ಟ್ರಾಲ್ ತುಂಬಾ ಮುಖ್ಯವಾಗಿರುತ್ತದೆ. ಆದರೆ ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವು ಸಾಮಾನ್ಯಕ್ಕಿಂತ ಹೆಚ್ಚಾದರೆ ಆಗ ಹಲವಾರು ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಮಧುಮೇಹ, ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ- ನುಗ್ಗೆ ಸೊಪ್ಪು

ಕೊಲೆಸ್ಟ್ರಾಲ್ ಮಟ್ಟವು ಹೆಚ್ಚಾದರೆ ಹೃದಯದಲ್ಲಿ ಹಲವಾರು ಸಮಸ್ಯೆಗಳು ಉಂಟಾಗಬಹುದು. ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು ಆರೋಗ್ಯಕರ ಜೀವನ ನಡೆಸುವುದು ಮುಖ್ಯ.

ಈ ಲೇಖನದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು ಜೀವನ ಸಾಗಿಸಲು ಆಯುರ್ವೇದಿಕ್ ಔಷಧಿಯನ್ನು ನಿಮಗೆ ಹೇಳಿಕೊಡಲಿದ್ದೇವೆ. ಇದನ್ನು ತಿಳಿದುಕೊಂಡು ಆರೋಗ್ಯಕರ ಜೀವನ ಸಾಗಿಸಿ.

ಈರುಳ್ಳಿಯಲ್ಲಿ ಅಲ್ಲಿಯಮ್ ಎನ್ನುವ ಕಿಣ್ವವು ಸಮೃದ್ಧವಾಗಿದೆ. ಇದು ದೇಹದಲ್ಲಿ ಅತಿಯಾಗಿರುವ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವುದು. ಮೌನ ಕೊಲೆಗಾರ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಸರಳ ಸೂತ್ರ

ತೆಂಗಿನ ಎಣ್ಣೆಯಲ್ಲಿ ಒಮೆಗಾ-3 ಕೊಬ್ಬಿನಾಮ್ಲವಿದೆ. ಇದು ರಕ್ತನಾಳಗಳಲ್ಲಿ ಅತಿಯಾಗಿರುವ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವುದು. 

Onion
 

ಬೇಕಾಗುವ ಸಾಮಗ್ರಿಗಳು

ಈರುಳ್ಳಿ ರಸ 3 ಚಮಚ

ತೆಂಗಿನ ಎಣ್ಣೆ 1 ಚಮಚ   ಅಚ್ಚರಿ ಲೋಕಕ್ಕೆ ತಳ್ಳುವ ಕೊಬ್ಬರಿ ಎಣ್ಣೆಯ ಕಮಾಲ್..!    

coconut oil
 

ಔಷಧಿ ತಯಾರಿಸುವ ವಿಧಾನ

*ಒಂದು ಕಪ್‌ನಲ್ಲಿ ಹೇಳಿದಷ್ಟು ಪ್ರಮಾಣದ ಸಾಮಗ್ರಿಗಳನ್ನು ಹಾಕಿಕೊಳ್ಳಿ.

*ಈಗ ಎರಡನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.

*ಈ ಔಷಧಿಯನ್ನು ಪ್ರತೀ ದಿನ ಬೆಳಿಗ್ಗೆ ಲಘು ಉಪಹಾರದ ಬಳಿಕ ಮೂರು ತಿಂಗಳ ಕಾಲ ಸೇವಿಸಿ.

English summary

Ayurvedic Remedy To Reduce Cholesterol In A Month!

it is important to ensure that you lead a healthy lifestyle to keep your cholesterol levels under control. Here is a amazingly simple ayurvedic remedy that can help reduce the cholesterol levels in your body; have a look!
Story first published: Wednesday, February 1, 2017, 23:14 [IST]
Subscribe Newsletter