Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ದೇಹದ ಕೊಲೆಸ್ಟ್ರಾಲ್ ನಿಯಂತ್ರಿಸಿ, ಆರೋಗ್ಯ ವೃದ್ಧಿಸಿ...
ಕೊಲೆಸ್ಟ್ರಾಲ್ ಕಡಿಮೆಗೊಳಿಸಲು ವೈದ್ಯರೂ ಒಪ್ಪುವ ಒಂದು ಸುಲಭ ವಿಧಾನವಿದೆ. ಬನ್ನಿ, ಇದು ಯಾವುದೆಂದು ಅರಿಯೋಣ....
ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಅಗತ್ಯಕ್ಕಿಂತ ಹೆಚ್ಚಾಗಲು ಕೆಲವಾರು ಕಾರಣಗಳಿವೆ. ಅತಿ ಹೆಚ್ಚು ತಿನ್ನುವುದು, ವ್ಯಾಯಾಮವಿಲ್ಲದಿರುವುದು, ಧೂಮಪಾನ, ಮದ್ಯಪಾನ, ಗುಟ್ಕಾ ಸೇವನೆ ಮೊದಲಾದವು ಕೊಬ್ಬಿನ ಮಟ್ಟಗಳನ್ನು ಏರುಪೇರುಗೊಳಿಸುತ್ತವೆ.
ಇಂದು ಕೊಲೆಸ್ಟ್ರಾಲ್ ಮಟ್ಟವನ್ನು ಅಳೆಯುವ ವಿಧಾನಗಳು ಇವೆ. ಕಡಿಮೆ ಮಾಡಲು ಗುಳಿಗೆಗಳೂ ಇವೆ. ಆದರೆ ಇದಕ್ಕೂ ಉತ್ತಮವಾದ ಮನೆಮದ್ದೊಂದು ಇದೆ ಎಂದು ನಿಮಗೆ ಇದಕ್ಕೂ ಮುನ್ನ ಗೊತ್ತಿತ್ತೇ? ಇಂದಿನ ಯುವಜನರಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗಲು ಸಿದ್ಧ ಆಹಾರಗಳು ನೇರವಾಗಿ ಕಾರಣವಾಗಿವೆ. ನೋಡಲು ಸುಂದರವಾಗಿರುವ ಈ ಆಹಾರಗಳಲ್ಲಿ ಅತಿ ಹೆಚ್ಚು ಸಕ್ಕರೆ, ಕೊಬ್ಬು ಮತ್ತು ಇತರ ಕಣಗಳಿದ್ದು ಇದರಿಂದ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಥಟ್ಟನೆ ಮೇಲೇರುತ್ತದೆ. ಬರೀ ಎರಡೇ ಎರಡು ವಾರದಲ್ಲಿ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ!
ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕೆಟ್ಟದೆಂದು ಏಕೆ ಅನ್ನಲಾಗುತ್ತದೆ? ವಾಸ್ತವವಾಗಿ ಇದರ ಪ್ರಮಾಣ ಒಂದು ಮಿತಿಯೊಳಗೆ ಇರಬೇಕು. ಇದಕ್ಕೂ ಹೆಚ್ಚಾದರೆ ಹೆಚ್ಚುವರಿ ಕೊಲೆಸ್ಟ್ರಾಲ್ ರಕ್ತನಾಳಗಳ ಒಳಗೆಲ್ಲಾ ಹರಿದು ಎಲ್ಲೆಲ್ಲಿ ನರ ಕವಲೊಡೆದಿದೆಯೋ, ತಿರುವಾಗಿದೆಯೋ, ಅಲ್ಲೆಲ್ಲಾ ಮೂಲೆಗಳಲ್ಲಿ ಅಂಟಿಕೊಂಡು ಬಿಡುತ್ತದೆ. ಖಳನಾಯಕ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಸಿಂಪಲ್ ಮನೆಮದ್ದು
ಅಷ್ಟೇ ಅಲ್ಲ, ದಿನಗಳೆದಂತೆ ಈ ದಾರಿಯಾಗಿ ಬರುವ ಇತರ ಕಣಗಳನ್ನೂ ಕೊಂಚಕೊಂಚವಾಗಿ ಅಂಟಿಸಿಕೊಳ್ಳುತ್ತಾ ಹೋಗುತ್ತದೆ. ಎಲ್ಲಿಯವರೆಗೆ ಅಂದರೆ ರಕ್ತನಾಳ ಪೂರ್ಣವಾಗಿ ಮುಚ್ಚುವವರೆಗೆ. ಇದರಿಂದ ರಕ್ತದ ಒತ್ತಡ ಹೆಚ್ಚುವುದು, ಹೃದಯ ಸಂಬಂಧಿ ತೊಂದರೆಗಳು ಹೆಚ್ಚುವುದು ಹಾಗೂ ಹೃದಯಾಘಾತದಂತಹ ಮಾರಕ ಪರಿಣಾಮಗಳೂ ಎದುರಾಗಬಹುದು. ಮೌನ ಕೊಲೆಗಾರ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಸರಳ ಸೂತ್ರ
ಆದ್ದರಿಂದ ಕೊಲೆಸ್ಟ್ರಾಲ್ ಮಟ್ಟ ಹೆಚ್ಚುತ್ತಿದ್ದಂತೆಯೇ ವೈದ್ಯರು ಕಟ್ಟುನಿಟ್ಟಿನ ಕ್ರಮ ಅನುಸರಿಸಲು ಸಲಹೆ ನೀಡುತ್ತಾರೆ. ಕೊಲೆಸ್ಟ್ರಾಲ್ ಕಡಿಮೆಗೊಳಿಸಲು ವೈದ್ಯರೂ ಒಪ್ಪುವ ಒಂದು ಸುಲಭ ವಿಧಾನವಿದೆ. ಬನ್ನಿ, ಇದು ಯಾವುದೆಂದು ಅರಿಯೋಣ...

ಅಗತ್ಯವಿರುವ ಸಾಮಾಗ್ರಿಗಳು
ಖರ್ಜೂರ: ಸುಮಾರು ಮೂರರಿಂದ ನಾಲ್ಕು ಬೀಜ ನಿವಾರಿಸಿದ್ದು
ಹಸಿಶುಂಠಿಯ ರಸ: ಎರಡು ಚಿಕ್ಕ ಚಮಚ

ಮಾಹಿತಿ #1
ಈ ಕೆಳಗೆ ವಿವರಿಸಿರುವ ಪೇಯವನ್ನು ನಿಯಮಿತವಾಗಿ ಕುಡಿಯುತ್ತಾ ನಿಮ್ಮ ಜೀವನಕ್ರಮವನ್ನು ಕೊಂಚ ಬದಲಿಸಿ ಕೊಂಚ ವ್ಯಾಯಾಮ ಮತ್ತು ಅನಾರೋಗ್ಯಕರ ಆಹಾರಗಳನ್ನು ವರ್ಜಿಸಿದರೆ ಇದು ನಿಜಕ್ಕೂ ಪರಿಣಾಮಕಾರಿಯಾಗಿದೆ. ಅಲ್ಲದೇ ಎಣ್ಣೆ, ಕೊಬ್ಬು, ಜಿಡ್ಡು ಹೆಚ್ಚಿರುವ ಯಾವುದೇ ಆಹಾರಗಳನ್ನು ಸರ್ವಥಾ ಸೇವಿಸಬಾರದು.

ಮಾಹಿತಿ #2
ಖರ್ಜೂರದಲ್ಲಿ ಹಲವಾರು ಪೋಷಕಾಂಶಗಳು ಹಾಗೂ ಉತ್ತಮ ಪ್ರಮಾಣದ ಕರಗದ ನಾರು ಇದೆ. ಈ ಪೋಷಕಾಂಶಗಳು ರಕ್ತದಲ್ಲಿ ಸೇರಿ ಕಟ್ಟಿಕೊಂಡಿದ್ದ ಜಿಡ್ಡನ್ನು ಸಡಿಲಗೊಳಿಸಿ ದೇಹದಿಂದ ವಿಸರ್ಜಿಸಲು ನೆರವಾಗುತ್ತವೆ.

ಮಾಹಿತಿ #3
ಕೊಲೆಸ್ಟ್ರಾಲ್ ಕಡಿಮೆಗೊಳಿಸಲು ಹಸಿಶುಂಠಿ ಅತ್ಯುತ್ತಮವಾಗಿದೆ. ಅಲ್ಲದೇ ಹಸಿಶುಂಠಿಯ
ಖಾರಗುಣಕ್ಕೆ ಕಾರಣವಾದ ಕೆಲವು ಆಮ್ಲಗಳು ದೇಹದ ರಕ್ತನಾಳಗಳಿಗೆ ಪ್ರಚೋದನೆ ನೀಡಿ ಕೊಬ್ಬನ್ನು ಸಂಗ್ರಹಿಸುವ ಸಾಮರ್ಥ್ಯವನ್ನು ಕಡಿಮೆ ಮಾಡುತ್ತವೆ.

ಈ ವಿಧಾನನ್ನು ಅನುಸರಿಸುವ ಬಗೆ...
ಹಂತ 1
ಮೇಲೆ ತಿಳಿಸಿದ ಎರಡೂ ಸಾಮಾಗ್ರಿಗಳನ್ನು ಮಿಕ್ಸಿಯ ಚಿಕ್ಕ ಜಾರಿನಲ್ಲಿ ಹಾಕಿ ಕೊಂಚ ಉಗುರುಬೆಚ್ಚನೆಯ ನೀರಿನೊಂದಿಗೆ ನಯವಾಗಿ ಕಡೆಯಿರಿ. ಬಳಿಕ ಈ ನೀರನ್ನು ಸ್ವಚ್ಛ ಬಟ್ಟೆಯಲ್ಲಿ ಹಿಂಡಿ ನೀರನ್ನು ಸಂಗ್ರಹಿಸಿ.

ಹಂತ 2
ಪ್ರತಿ ರಾತ್ರಿಯ ಊಟದ ಬಳಿಕ ಈ ನೀರನ್ನು ದಿನದ ಅಂತಿಮ ಆಹಾರವಾಗಿ ಸೇವಿಸಿ ಮಲಗಿ. ಈ ವಿಧಾನವನ್ನು ಕನಿಷ್ಠ ಎರಡು ತಿಂಗಳಾದರೂ ಅನುಸರಿಸಿ. ಒಂದು ವೇಳೆ ನಿಮಗೆ ಜಠರದಲ್ಲಿ ಆಮ್ಲೀಯತೆಯ ತೊಂದರೆ ಇದ್ದರೆ ಖರ್ಜೂರದ ಪ್ರಮಾಣವನ್ನು ಕೊಂಚ ಕಡಿಮೆಗೊಳಿಸಿ.



Click it and Unblock the Notifications
