For Quick Alerts
ALLOW NOTIFICATIONS  
For Daily Alerts

ಮಧುಮೇಹ, ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ- ನುಗ್ಗೆ ಸೊಪ್ಪು

By Super
|

ನುಗ್ಗೇಕಾಯಿಯನ್ನು ಸುಮಾರಾಗಿ ಸಾಂಬಾರ್‌ನಲ್ಲಿ ಬಳಸಲಾಗುತ್ತದೆ. ಆದರೆ ಸುಗ್ಗೆ ಸೊಪ್ಪು ಅಥವಾ ಎಲೆಗಳು? ಎಲೆಗಳೂ ಸಹಾ ಒಂದು ಉತ್ತಮ ಆಹಾರವಾಗಿದ್ದು ಹಲವು ತೊಂದರೆಗಳಿಗೆ ಸಮರ್ಥ ಔಷಧಿಯೂ ಆಗಿದೆ. ಇದು ರುಚಿಕರವೂ, ಹೆಚ್ಚಿನ ನಾರು ಹೊಂದಿರುವ ಸೊಪ್ಪೂ ಆಗಿರುವ ಕಾರಣ ದಕ್ಷಿಣ ಭಾರತದಲ್ಲಿ ಸಾಂಬಾರ್ ಅಥವಾ ದಾಲ್‌ನಲ್ಲಿ ಹೆಚ್ಚಾಗಿ ಉಪಯೋಗಿಸಲ್ಪಡುತ್ತದೆ.

ನುಗ್ಗೆಕಾಯಿಯಂತೆ ನುಗ್ಗೆ ಸೊಪ್ಪಿನಲ್ಲಿಯೂ ಹಲವಾರು ಆಂಟಿ ಆಕ್ಸಿಡೆಂಟುಗಳೂ ಮತ್ತು ಇತರ ಅಗತ್ಯ ಪೋಷಕಾಂಶಗಳೂ ಲಭ್ಯವಿದ್ದು ಮುಖ್ಯವಾಗಿ ರಕ್ತದಲ್ಲಿ ಕೊಲೆಸ್ಟ್ರಾಲ್ ಮಟ್ಟ ಕಡಿಮೆಗೊಳಿಸುವಲ್ಲಿ ಹಾಗೂ ಅಧಿಕ ರಕ್ತದ ಒತ್ತಡವನ್ನು ಕಡಿಮೆಗೊಳಿಸುವಲ್ಲಿ ನೆರವಾಗುತ್ತದೆ.

Fight diabetes and high cholesterol with drumstick leaves

ಆದರೆ ಹೇಗೆ ನೆರವಾಗುತ್ತದೆ ಎಂಬ ಪ್ರಶ್ನೆಗೆ ತಜ್ಞರು ನೀಡುವ ವಿವರಣೆ ಈ ರೀತಿಯಲ್ಲಿದೆ: ನುಗ್ಗೆ ಎಲೆಗಳು ಅಥವಾ ನುಗ್ಗೆ ಸೊಪ್ಪು (moringa oleifera) ಗಳಿಂದ ಪ್ರತ್ಯೇಕಿಸಲಾದ ರಸ ದೇಹದಲ್ಲಿ alpha-glucosidase ಮತ್ತು pancreatic alpha-amylase ಎಂಬ ಕಿಣ್ವಗಳು ಹೆಚ್ಚು ಪ್ರಮಾಣದಲ್ಲಿ ಬಿಡುಗಡೆಗೆ ನೆರವಾಗುತ್ತದೆ. ನುಗ್ಗೆಕಾಯಿ ಎಲೆಗಳ ಸೌಂದರ್ಯವರ್ಧಕ ಗುಣಗಳು

ಇವು ಮಧುಮೇಹಿಗಳ ರಕ್ತದಲ್ಲಿ ಅಧಿಕ ಪ್ರಮಾಣದಲ್ಲಿರುವ ಸಕ್ಕರೆಗೆ ವಿರುದ್ಧವಾಗಿ ಕೆಲಸ ಮಾಡುತ್ತವೆ (anti-hyperglycemia activity). ಪರಿಣಾಮವಾಗಿ ರಕ್ತ ಸಕ್ಕರೆಯನ್ನು ತಾಳಿಕೊಳ್ಳುವ ಶಕ್ತಿ (glucose tolerance) ಹೆಚ್ಚಿಸುತ್ತದೆ ಹಾಗೂ ರಕ್ತದಲ್ಲಿ ಥಟ್ಟನೇ ಅಧಿಕ ಪ್ರಮಾಣದ ರಕ್ತ ನುಗ್ಗದಿರುವಂತೆ ನೋಡಿಕೊಳ್ಳುತ್ತದೆ.

ಅಲ್ಲದೇ ನೈಟ್ರಿಕ್ ಆಮ್ಲದ ಪ್ರಮಾಣದಲ್ಲಿ ಗಣನೀಯವಾದ ಇಳಿಕೆ ಮತ್ತು ರಕ್ತದ ನೀರಿನಲ್ಲಿ (serum) ಗ್ಲೂಕೋಸ್ ಮಟ್ಟ ಕಡಿಮೆಗೊಳಿಸಿ ಇನ್ಸುಲಿನ್ ಮತ್ತು ಪ್ರೋಟೀನುಗಳನ್ನು ಹೆಚ್ಚಿಸುತ್ತದೆ. ಇದರಿಂದ ರಕ್ತದಲ್ಲಿ ಗ್ಲೂಕೋಸ್ ಮಟ್ಟ ಆರೋಗ್ಯಕರವಾಗಿರಲು ನೆರವಾಗುತ್ತದೆ.

ಕೊಲೆಸ್ಟ್ರಾಲ್ ಕಣಗಳು ಒಂದಕ್ಕೊಂದು ಅಂಟಿಕೊಳ್ಳುವ ಗುಣದಿಂದಲೇ 'ಕೆಟ್ಟ' ಎಂಬ ಪದವಿಯನ್ನು ಪಡೆದಿವೆ. ಅಂತೆಯೇ ಇವು ರಕ್ತದಲ್ಲಿ ಒಂದಕ್ಕೊಂದು ಅಂಟಿಕೊಂಡು ನರದ ತಿರುವು ಅಥವಾ ಕವಲಿನಲ್ಲಿ ಒತ್ತಡ ಕಡಿಮೆ ಇದ್ದೆಡೆ ಸಂಗ್ರಹವಾಗುತ್ತವೆ (cholesterol micellisation).

ನುಗ್ಗೆಸೊಪ್ಪಿನಲ್ಲಿರುವ ಪೋಷಕಾಂಶಗಳು ಈ ಸಂಗ್ರಹವನ್ನು ಸಡಿಲಗೊಳಿಸಿ ಪ್ರತಿ ಕಣಗಳು ಬಿಡಿಬಿಡಿಯಾಗುವಂತೆ ಮಾಡುವ ಮೂಲಕ ಕೆಟ್ಟ ಕೊಲೆಸ್ಟ್ರಾಲ್‌ನ ಪ್ರಮಾಣ ಕಡಿಮೆ ಮಾಡುತ್ತವೆ. ಇದರಿಂದ ರಕ್ತದಲ್ಲಿ ಒಟ್ಟು ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ ಮಟ್ಟ ಕಡಿಮೆಯಾಗುತ್ತದೆ ಮತ್ತು ಕರುಳಿನ ಮೂಲಕ ಇನ್ನಷ್ಟು ಕೊಲೆಸ್ಟ್ರಾಲ್ ಹೀರುವುದನ್ನೂ ತಡೆಯುತ್ತದೆ.

ಇದರ ಒಟ್ಟು ಪರಿಣಾಮವಾಗಿ ರಕ್ತದಲ್ಲಿ ಸಮಗ್ರ ಕೊಲೆಸ್ಟ್ರಾಲ್ ಮಟ್ಟ ಮಿತಿಯೊಳಗೇ ಇರುತ್ತವೆ. ಅಲ್ಲದೇ ಇದರಲ್ಲಿರುವ ಫೈಟೋ ಕೆಮಿಕಲ್ಸ್ ಮತ್ತು ಆಂಟಿ ಆಕ್ಸಿಡೆಂಟುಗಳು ಕೊಬ್ಬು ರಕ್ತನಾಳಗಳ ಒಳಗೆ ಸಂಗ್ರಹವಾಗುವ (atherosclerosis), ಅಧಿಕ ರಕ್ತದೊತ್ತಡ ಮತ್ತು ಇತರ ಸಂಬಂಧಿತ ಕಾಯಿಲೆಗಳಿಂದ ರಕ್ಷಣೆ ನೀಡುತ್ತದೆ. ಚೋಟುದ್ದ ನುಗ್ಗೆಯಲ್ಲಿದೆ ಲೆಕ್ಕಕ್ಕೆ ಸಿಗದ ಆರೋಗ್ಯ ಗುಣಗಳು

ನುಗ್ಗೆಸೊಪ್ಪಿನ ಬಳಕೆ ಹೇಗೆ?
ನುಗ್ಗೆಸೊಪ್ಪನ್ನು ದಂಟಿನಿಂದ ಬಿಡಿಬಿಡಿಯಾಗಿ ಬಿಡಿಸಿ ನೇರವಾಗಿ ಸಾಂಬಾರ್ ಅಥವಾ ದಾಲ್‌ಗಳಲ್ಲಿ ಇತರ ತರಕಾರಿಗಳೊಂದಿಗೆ ಸೇರಿಸಿ ಬೇಯಿಸಿ ತಿನ್ನಬಹುದು. ತಿಳಿಸಾರು, ಮಜ್ಜಿಗೆ ಹುಳಿ, ತಂಬುಳಿ, ಮೊದಲಾದ ರೂಪದಲ್ಲಿಯೂ ಸೇವಿಸಬಹುದು. ಇನ್ನೊಂದು ವಿಧಾನವೆಂದರೆ ಕೊಂಚ ಬೇಯಿಸಿದ ಎಲೆಗಳನ್ನು ಚಪಾತಿ ಹಿಟ್ಟಿನ ಜೊತೆಗೆ ಕಲಸಿ ಲಟ್ಟಿಸಿ ಪರೋಟಾ ಅಥವಾ ಚಪಾತಿಯ ರೂಪದಲ್ಲಿಯೂ ಸೇವಿಸಬಹುದು.

English summary

Fight diabetes and high cholesterol with drumstick leaves

Drumstick leaves render a unique taste and flavour to curries and dals/sambhars, and it is the reason why these dark green leafy vegetables are an integral part of South Indian cuisine. But what’s interesting is the fact that just like a drumstick, these leaves are also packed with antioxidants and other essential nutrients which help you keep your blood sugar and cholesterol under control.
X
Desktop Bottom Promotion