For Quick Alerts
ALLOW NOTIFICATIONS  
For Daily Alerts

ಆಯುರ್ವೇದ ಟಿಪ್ಸ್: ತಿಂಗಳೊಳಗೆ ತೂಕ ಇಳಿಸಿಕೊಳ್ಳಲು ಸರಳ ಟಿಪ್ಸ್

By Manu
|

ಬೊಜ್ಜಿಗಾಗಿ ಆಯುರ್ವೇದ ಚಿಕಿತ್ಸೆ ಆರಂಭವಾಗುವುದು ದೇಹದಲ್ಲಿರುವ ಜೀವಾಣು ವಿಷವನ್ನು ಹೊರತೆಗೆಯುವುದರ ಮೂಲಕ. ಈ ಪ್ರಕ್ರಿಯೆಯನ್ನು ಅಮಾ' ಎಂದು ಕರೆಯಲಾಗುತ್ತದೆ ಮತ್ತು ಇದು ತೂಕ ಕಡಿಮೆ ಮಾಡುವ ಮೂಲಕ್ರಮ. ಒತ್ತಡದ ಜೀವನಶೈಲಿಯಲ್ಲಿ ಅಸ್ತವ್ಯಸ್ಥವಾಗಿರುವ ಆಹಾರ ಪದ್ಧತಿ, ಪರಿಸರ ಮಾಲಿನ್ಯ ಮತ್ತು ತೀವ್ರ ಒತ್ತಡದಿಂದಾಗಿ ಕ್ರೋಢೀಕರಣಗೊಂಡ ಕಲ್ಮಶದಿಂದಾಗಿ ನಮ್ಮ ದೇಹದಲ್ಲಿರುವ ಜೀವಾಣು ವಿಷಗಳಿಗೆ ಕಾರಣವಾಗಿದೆ. ನೀರಿನಲ್ಲಿ ಕರಗುವ ಜೀವಾಣು ವಿಷಗಳು ಮೂತ್ರ, ಮಲ ಮತ್ತು ಬೆವರಿನ ಮೂಲಕ ಸುಲಭವಾಗಿ ಹೊರಹೋಗುತ್ತದೆ.

ಆದರೆ ಇತರ ಕೆಲವು ಹಾಗೆ ಮಾಡಲು ವಿಫಲವಾಗುತ್ತದೆ. ಸರಿಯಾದ ಪಥ್ಯಕ್ರಮ ಮತ್ತು ವ್ಯಾಯಾಮದಿಂದ ಇಂತ ಜೀವಾಣು ವಿಷವನ್ನು ಹೊರಹಾಕಬಹುದು. ಆದಾಗ್ಯೂ ಕೊಬ್ಬಿನಲ್ಲಿ ಕರಗುವ ಜೀವಾಣು ವಿಷವನ್ನು ಸುಲಭವಾಗಿ ತೆಗೆಯಲು ಸಾಧ್ಯವಾಗದ ಕಾರಣ ಸಮಸ್ಯೆ ಆರಂಭವಾಗುತ್ತದೆ. ಈ ಕಲ್ಮಶಗಳು ಹೊಟ್ಟೆ, ಸೊಂಟ ಮತ್ತು ತೊಡೆಯಲ್ಲಿ ಕೊಬ್ಬಿನ ರೂಪದಲ್ಲಿ ಶೇಖರಣೆಯಾಗುತ್ತದೆ.

ನಿಮಗೆ ತೂಕ ಇಳಿಸಲು ಸಹಕಾರಿ ಈ 11 ವಿಧಾನಗಳು!

ಆಯುರ್ವೇದ ಚಿಕಿತ್ಸೆಯಲ್ಲಿ ಪ್ರಮುಖವಾಗಿ ಅಮಾ' ದೇಹದಲ್ಲಿರುವ ಜೀವಾಣು ವಿಷಗಳನ್ನು ಹೊರಹಾಕುತ್ತದೆ. ಕೊಬ್ಬಿನ ಕೋಶಗಳನ್ನು ಕುಗ್ಗಿಸುವ ಮೂಲಕ ಅದು ಪರಿಣಾಮಕಾರಿಯಾಗುತ್ತದೆ. ವಯಸ್ಸು ಹೆಚ್ಚಾದಂತೆ ಕೊಬ್ಬಿನ ಹೊರಹಾಕುವಿಕೆ ಅಧಿಕವಾಗುತ್ತದೆ. ಸತತವಾಗಿ ಈ ಚಿಕಿತ್ಸೆಯಿಂದಾಗಿ ದೇಹದಲ್ಲಿರುವ ಜೀವಾಣು ವಿಷಾಣುಗಳು ಮತ್ತು ಕಲ್ಮಶಗಳನ್ನು ಹೊರಹಾಕಲು ಸಾಧ್ಯವಾಗುತ್ತದೆ. ಇಷ್ಟು ಮಾತ್ರವಲ್ಲದೆ ಭವಿಷ್ಯದಲ್ಲಿ ಹೆಚ್ಚುವರಿ ತೂಕವನ್ನು ಪಡೆಯುವುದನ್ನು ಇದು ತಡೆಯುತ್ತದೆ.

ಊಟ ಕಡಿಮೆ ಮಾಡಿದರೆ, ತೂಕ ಕಡಿಮೆಯಾಗುವುದಿಲ್ಲ!

ಆಯುರ್ವೇದದಲ್ಲಿ ತಜ್ಞರು ರೋಗಿಗಳಿಗೆ ಹಣ್ಣು ಹಾಗೂ ತರಕಾರಿಯನ್ನು ಅಧಿಕ ಸೇವನೆ ಮಾಡುವಂತೆ ಸೂಚಿಸುತ್ತಾರೆ. ನೈಸರ್ಗಿಕ ಆಹಾರ ಮತ್ತು ಪೋಷಕಾಂಶಗಳು ಅಧಿಕವಾಗಿರುವ ಹಣ್ಣುಗಳು ಇದರಲ್ಲಿ ಮುಖ್ಯವಾದದ್ದು. ಆಯುರ್ವೇದದ ಮೂಲಕ ತೂಕ ಇಳಿಸಿಕೊಳ್ಳುವಾಗ ಸಂಸ್ಕರಿಸಿದ ಮತ್ತು ಸಂರಕ್ಷಿಸಿದ ಆಹಾರವನ್ನು ತ್ಯಜಿಸಬೇಕು. ಅತಿಯಾದ ದೇಹ ತೂಕವನ್ನು ವೇಗವಾಗಿ ಮತ್ತು ಪರಿಣಾಮಕಾರಿಯಾಗಿ ಕಡಿಮೆಗೊಳಿಸಲು ಕೆಲವೊಂದು ಸಲಹೆಗಳು ಇಲ್ಲಿವೆ.. ಮುಂದೆ ಓದಿ...

ಪ್ರತಿದಿನ ಕುಡಿಯುತ್ತಿದ್ದ ಚಹಾ ಬದಲಿಗೆ ಹಸಿರು ಚಹಾ ಸೇವಿಸಿ

ಪ್ರತಿದಿನ ಕುಡಿಯುತ್ತಿದ್ದ ಚಹಾ ಬದಲಿಗೆ ಹಸಿರು ಚಹಾ ಸೇವಿಸಿ

ಆರೋಗ್ಯಕರವಾದ ಹಸಿರು ಚಹಾದಲ್ಲಿ ಕೊಬ್ಬು ಕರಗಿಸುವ ಹಲವು ಆಂಟಿ ಆಕ್ಸಿಡೆಂಟುಗಳಿದ್ದು ಕೊಬ್ಬು ಕರಗಿಸಲು ಸಹಾಯ ಮಾಡುತ್ತವೆ. ಕಪ್ಪು ಚಹಾದಲ್ಲಿ ಹಾಲು ಸೇರಿಸುವ ಕಾರಣ ಅರಿವಿಲ್ಲದೇ ಮತ್ತೆ ಕೊಬ್ಬು ಸಂಗ್ರಹವಾಗುತ್ತದೆ. ಅದರ ಬದಲಿಗೆ ಹಸಿರು ಚಹಾ ಸೇವಿಸುವುದರಿಂದ ಹೊಸತಾಗಿ ಕೊಬ್ಬು ಸೇರದಂತೆ ಹಾಗೂ ಈಗಾಗಲೇ ದೇಹದಲ್ಲಿರುವ ಕೊಬ್ಬನ್ನು ಕರಗಿಸಲು ಸಾಧ್ಯವಾಗುತ್ತದೆ.

ಮನೆಯ ಊಟ ಅಮೃತ

ಮನೆಯ ಊಟ ಅಮೃತ

ಅತ್ಯಂತ ಅನಿವಾರ್ಯವಾದ ಕಾರಣಗಳಲ್ಲದೇ ಮನೆಯ ಊಟವನ್ನೇ ಮಾಡಿ. ನಿಮಗೆ ಕಡಿಮೆ ಕ್ಯಾಲೋರಿಯ ಊಟ ಅಗತ್ಯ ಎಂದು ಹೋಟೆಲಿನ ಬಾಣಸಿಗನಿಗೆ ಗೊತ್ತಿರುವುದುದಿಲ್ಲವಲ್ಲ, ಹಾಗಾಗಿ ಆ ಊಟದಲ್ಲಿ ತೂಕ ಹೆಚ್ಚಿಸುವ ಅಂಶಗಳು ಹೆಚ್ಚೇ ಇರುತ್ತವೆ. ಮನೆಯ ಊಟ, ಅದರಲ್ಲೂ ನೀವೇ ಅಡುಗೆ ಮಾಡಿ ಉಣ್ಣುವಿರಾದರೆ ಆ ಆಹಾರ ಸ್ವಾದಿಷ್ಟವೂ, ಪೌಷ್ಟಿಕವೂ, ತೂಕ ಹೆಚ್ಚಿಸದಂತಹದ್ದೂ ಆಗಿರುತ್ತದೆ.

ಮೆಂತೆ

ಮೆಂತೆ

ಭಾರತೀಯ ಅಡುಗೆ ಮನೆಯಲ್ಲಿ ಹೆಚ್ಚು ಲಭ್ಯವಾಗುವ ಮೆಂತೆಯ ಕಮಾಲು ಹೆಚ್ಚಿನವರಿಗೆ ಗೊತ್ತಿಲ್ಲ. ದೇಹದ ಕೊಬ್ಬು ಕರಗಿಸುವ ಅದ್ಭುತ ಮದ್ದಾಗಿರುವ ಇದು ಫೈಬರ್ ಅಂಶಗಳನ್ನು ಒಳಗೊಂಡಿದೆ. ಇದರಲ್ಲಿ ಕ್ಯಾಲೋರಿ ಇಲ್ಲವೇ ಇಲ್ಲ ಮತ್ತು ಹಸಿವಾಗುವಿಕೆಯನ್ನೂ ಇದು ತಡೆಯುತ್ತದೆ. ಇದು ಆಯುರ್ವೇದದಲ್ಲಿ ತಿಳಿಸಿರುವ ಉತ್ತಮ ಪರಿಹಾರವಾಗಿದೆ. ರಾತ್ರಿ ಒಂದು ಚಮಚದಷ್ಟು ಮೆಂತೆಯನ್ನು ನೆನೆಸಿಡಿ. ಮರುದಿನ ಬೆಳಗ್ಗೆ ಖಾಲಿ ಹೊಟ್ಟೆಗೆ ಈ ನೀರನ್ನು ಸೇವಿಸಿ. ಹುರಿದ ಮೆಂತೆ ಬೀಜಗಳನ್ನು ಮೊಸರು ಅಥವಾ ಸಲಾಡ್‌ಗಳಲ್ಲಿ ಬಳಸಿ.

ಜಂಕ್ ಆಹಾರಗಳಿಗೆ ತಿಲಾಂಜಲಿ ನೀಡಿ

ಜಂಕ್ ಆಹಾರಗಳಿಗೆ ತಿಲಾಂಜಲಿ ನೀಡಿ

ಸಿದ್ಧರೂಪದಲ್ಲಿ, ಸುಲಭವಾಗಿ ಸಿಗುತ್ತದೆ ಎಂಬ ಕಾರಣಕ್ಕೆ ಲಭ್ಯವಿರುವ ಜಂಕ್ ಆಹಾರಗಳಿಗೆ ತಿಲಾಂಜಲಿ ನೀಡಿ. ಇವುಗಳಲ್ಲಿ ದೇಹಕ್ಕೆ ಅಗತ್ಯವಾದ ಪೌಷ್ಟಿಕಾಂಗಳು ಇರುವುದಿಲ್ಲ ಹಾಗೂ ಅನಗತ್ಯವಾದ ಕೊಬ್ಬು ಹೆಚ್ಚಿರುವುದರಿಂದ ಇಂತಹ ಆಹಾರಗಳನ್ನು ಪ್ರಚಾರ ಮಾಡುವ ಜಾಹೀರಾತುಗಳಿಗೆ, ಪೊಳ್ಳು ಪ್ರತಿಷ್ಠೆಗೆ ಮರುಳಾಗದೇ ಮನೆಯ ಊಟವನ್ನು ಆಸ್ವಾದಿಸಿ.

ಕರಿಬೇವು

ಕರಿಬೇವು

ಕೊಬ್ಬು ಕರಗಿಸುವ ಅದ್ಭುತ ಗಿಡಮೂಲಿಕೆಯಾಗಿದೆ ಕರಿಬೇವು. ತೂಕ ಇಳಿಕೆಯಲ್ಲಿ ಈ ಔಷಧೀಯ ಸಸ್ಯದ್ದು ಅದರದ್ದೇ ಆದ ಹೆಸರಿದೆ. ತೂಕ ಇಳಿಸುವ ಅಂಶಗಳಲ್ಲದೆ, ನಿಮ್ಮ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುತ್ತದೆ ಮತ್ತು ಉತ್ಕರ್ಷಣ ನಿರೋಧಿ ಅಂಶಗಳೂ ಇದರಲ್ಲಿದೆ. ಸಣ್ಣ ಕರುಳು ಮತ್ತು ಹೊಟ್ಟೆಯ ಉತ್ತಮ ಕಾರ್ಯನಿರ್ವಹಣೆಗೆ ಇದು ಸಹಾಯ ಮಾಡುತ್ತದೆ. ನೀವು ತಯಾರಿಸುವ ದಾಲ್ ಮತ್ತು ಪಲ್ಯದಲ್ಲಿ ಕೂಡ ಕರಿಬೇವನ್ನು ಬಳಸಬಹುದಾಗಿದೆ. ಬಿಸಿನೀರಿನಲ್ಲಿ ಇದನ್ನು ಕುದಿಸಿ ನಂತರ ಅದನ್ನು ಸೇವಿಸಿ.

ಆಹಾರ-ವ್ಯಾಯಾಮದಲ್ಲಿ ಸಮತೋಲನವಿರಲಿ

ಆಹಾರ-ವ್ಯಾಯಾಮದಲ್ಲಿ ಸಮತೋಲನವಿರಲಿ

ಪ್ರತಿದಿನದ ಚಟುವಟಿಕೆಗಳಲ್ಲಿ ಆಹಾರ ಮತ್ತು ವ್ಯಾಯಾಮದಲ್ಲಿ ಸಮತೋಲನವಿರಲಿ. ಅಂದರೆ ಒಂದು ವೇಳೆ ಹೆಚ್ಚಿನ ಆಹಾರ ತೆಗೆದುಕೊಂಡಲ್ಲಿ ಹೆಚ್ಚಿನ ವ್ಯಾಯಾಮ ಹಾಗೂ ನಿಯಮಿತ ಆಹಾರ ತೆಗೆದುಕೊಂಡರೆ ನಿಯಮಿತ ವ್ಯಾಯಾಮ ಇರಲಿ. ಸಾಧ್ಯವಾದಷ್ಟು ಆರೋಗ್ಯಕರ ಆಹಾರಗಳನ್ನೇ ಸೇವಿಸಿ. ದೇಹದ ತೂಕ ಒಂದೇ ತೆರನಾಗಿದ್ದು ಉತ್ತಮ ಆರೋಗ್ಯ, ಸುಖಕರ ಬಾಳು ನಿಮ್ಮದಾಗಲಿ.

 ತ್ರಿಫಲ

ತ್ರಿಫಲ

ತೂಕವನ್ನು ನಿಯಂತ್ರಣದಲ್ಲಿರಿಸುವ ಆರೋಗ್ಯ ಔಷಧವಾಗಿರುವ ತ್ರಿಫಲ ಹರಿತಾಕಿ, ಬಿಬಿತಾಕಿ ಮತ್ತು ಆಮ್ಲತಾಕಿ ಹೀಗೆ ಮೂರು ಮಿಶ್ರಣಗಳ ಗಿಡಮೂಲಿಕೆಯಾಗಿದೆ. ನಿತ್ಯವೂ ಇದನ್ನು ಸೇವಿಸುವುದರಿಂದ ಉತ್ತಮ ಜೀರ್ಣಕ್ರಿಯೆಯನ್ನು ಇದು ಖಾತ್ರಿಪಡಿಸಿ ನೀವು ಸೇವಿಸುವ ಆಹಾರದಿಂದ ಹೆಚ್ಚಿನ ನ್ಯೂಟ್ರಿಷನ್ ದೊರೆಯುವಂತೆ ಮಾಡುತ್ತದೆ. ಇದರಿಂದ ಹಸಿವು ನಿಮಗೆ ಕಡಿಮೆ ಉಂಟಾಗುತ್ತದೆ. ಬಳಕೆ ಬೆಚ್ಚಗಿನ ನೀರಿನಲ್ಲಿ ಒಂದು ಚಮಚದಷ್ಟು ತ್ರಿಫಲ ಹುಡಿಯನ್ನು ಹಾಕಿಕೊಂಡು ಒಂದು ತಿಂಗಳಿನವರೆಗೆ ಸೇವಿಸಿ. ಉತ್ತಮ ಫಲಿತಾಂಶ ದೊರೆಯುತ್ತದೆ.

ಬಳಕೆ

ಬೆಚ್ಚಗಿನ ನೀರಿನಲ್ಲಿ ಒಂದು ಚಮಚದಷ್ಟು ತ್ರಿಫಲ ಹುಡಿಯನ್ನು ಹಾಕಿಕೊಂಡು ಒಂದು ತಿಂಗಳಿನವರೆಗೆ ಸೇವಿಸಿ. ಉತ್ತಮ ಫಲಿತಾಂಶ ದೊರೆಯುತ್ತದೆ.

ದಿನಕ್ಕೆ ಎರಡು ಬಾರಿ ಊಟ ಮಾತ್ರವಿರಲಿ

ದಿನಕ್ಕೆ ಎರಡು ಬಾರಿ ಊಟ ಮಾತ್ರವಿರಲಿ

ಡಯಟ್ ಮಾಡುತ್ತಿದ್ದೀರ ಎಂದರೆ ಸಂಪೂರ್ಣ ಊಟ ಬಿಟ್ಟು ಕೂರಬೇಕೆಂದೇನಿಲ್ಲ. ದೇಹಕ್ಕೆ ಅವಶ್ಯಕವಾದ ಪೋಷಕಾಂಶವನ್ನು ನೀಡಲೇಬೇಕು. ದಿನದಲ್ಲಿ ಒಂದು ಗ್ಲಾಸ್ ಹಾಲು, ಧಾನ್ಯಗಳು, ಮೊಟ್ಟೆ ಮತ್ತು ಫೈಬರ್ ಇರುವ ತರಕಾರಿ ನಿಮ್ಮ ಆಹಾರದೊಂದಿಗಿರಲಿ.

ಗ್ಯಾಸ್ ಉಂಟು ಮಾಡುವ ಆಹಾರ ತ್ಯಜಿಸಿ

ಗ್ಯಾಸ್ ಉಂಟು ಮಾಡುವ ಆಹಾರ ತ್ಯಜಿಸಿ

ಆಲೂಗಡ್ಡೆ, ಹೂಕೋಸು, ಎಲೆಕೋಸು, ಮದ್ಯ, ಜೋಳ, ಹೊಟ್ಟೆಯಲ್ಲಿ ಗ್ಯಾಸ್ ಉಂಟುಮಾಡುವ ಇಂತಹ ತರಕಾರಿ ಸೇವನೆಯನ್ನು ತ್ಯಜಿಸಬೇಕು. ಇದರ ಸೇವನೆಯಿಂದ ಹೊಟ್ಟೆ ಊದಿಕೊಂಡಂತಾಗುತ್ತದೆ.

ಪುದೀನ ಜ್ಯೂಸ್ ಮಾಡಿ ಕುಡಿಯಿರಿ

ಪುದೀನ ಜ್ಯೂಸ್ ಮಾಡಿ ಕುಡಿಯಿರಿ

*ತಲಾ ಒಂದು ಕಟ್ಟು ಪುದೀನ ಹಾಗೂ ಕೊತ್ತಂಬರಿ ಎಲೆಗಳನ್ನು ದಂಟುಗಳಿಂದ ಬೇರ್ಪಡಿಸಿ ಚೆನ್ನಾಗಿ ತೊಳೆಯಿರಿ.

*ಒಂದು ಲೋಟ ನೀರನ್ನು ಬ್ಲೆಂಡರಿನಲ್ಲಿ ಹಾಕಿ ಈ ಎಲೆಗಳನ್ನು ಬೆರೆಸಿ, ಚಿಟಿಕೆಯಷ್ಟು ಕಲ್ಲುಪ್ಪು ಮತ್ತು ಕಾಳುಮೆಣಸಿನ ಪುಡಿ ಬೆರೆಸಿ ಎಲ್ಲವನ್ನೂ ಚೆನ್ನಾಗಿ

ಗೊಟಾಯಿಸಿ.

*ಬಳಿಕ ಅರ್ಧ ಲಿಂಬೆಯ ರಸವನ್ನು ಬೆರೆಸಿ ಚೆನ್ನಾಗಿ ಕಲಕಿ.

*ಈ ಪೇಯವನ್ನು ಪ್ರತಿದಿನ ಬೆಳಗ್ಗಿನ ಪ್ರಥಮ ಆಹಾರವಾಗಿ ಸೇವಿಸಿ. ಇದು ತೂಕ ಇಳಿಯಲು ನೆರವಾಗುತ್ತದೆ.

 ಆಹಾರದಲ್ಲಿ ಪುದೀನ ಸೇರಿಸಿ

ಆಹಾರದಲ್ಲಿ ಪುದೀನ ಸೇರಿಸಿ

ಕೆಲವು ತಾಜಾ ಪುದೀನ ಎಲೆಗಳನ್ನು ನಿಮ್ಮ ನಿತ್ಯದ ಸಾಲಾಡ್ ನೊಂದಿಗೆ ಬೆರೆಸಿ ಹಸಿಯಾಗಿ ಸೇವಿಸಿ. ಇದರಿಂದ ಹೊಟ್ಟೆಯುಬ್ಬರಿಕೆಯಿಂದ ರಕ್ಷಣೆ ದೊರಕುವುದು ಮಾತ್ರವಲ್ಲ, ತೂಕ ಇಳಿಯಲೂ ನೆರವಾಗುತ್ತದೆ. ಪುದೀನ ಸೇವನೆಯ ಜೊತೆಗೇ ಕೊಬ್ಬು ಹೆಚ್ಚಿಸುವ, ಕ್ಯಾಲೋರಿಗಳು ಹೆಚ್ಚಿರುವ

ಆಹಾರಗಳನ್ನು ಸೇವಿಸದೇ ಇರುವುದು, ನಿಯಮಿತವಾಗಿ ವ್ಯಾಯಾಮ ಮಾಡುವುದು, ನಿತ್ಯವೂ ಅರ್ಧ ಗಂಟೆಯಾದರೂ ನಡೆದಾಡುವುದು ತೂಕ ಇಳಿಯಲು ಅಗತ್ಯವಾಗಿದೆ.

ಮಸಾಲೆ ಆಹಾರಗಳು

ಮಸಾಲೆ ಆಹಾರಗಳು

ಮಸಾಲೆ ಪಧಾರ್ಥಗಳು ಭಾರತೀಯ ಆಹಾರಗಳಲ್ಲಿ ಅತ್ಯಗತ್ಯವಾಗಿರುತ್ತದೆ. ನೀವು ಬಲು ಬೇಗ ತೂಕವನ್ನು ಇಳಿಸಿಕೊಳ್ಳಲು ಬಯಸಿದರೆ ಚೆಕ್ಕೆ, ಲವಂಗ, ಜೀರಿಗೆ, ಶುಂಠಿ, ಸಾಸಿವೆ, ಅರಿಶಿನ ಮತ್ತು ಕರಿ ಮೆಣಸು ಇವುಗಳನ್ನು ತೂಕವಿಳಿಸುವ ವಿವಿಧ ಆಹಾರ ತಯಾರುಮಾಡುವಾಗ ಸೇರಿಸಬೇಕು.

ಬೀಜವಿರುವ ಕಾಯಿ (ನಟ್ಸ್) ಮತ್ತು ಬೀಜಗಳು

ಬೀಜವಿರುವ ಕಾಯಿ (ನಟ್ಸ್) ಮತ್ತು ಬೀಜಗಳು

ಆರೋಗ್ಯಕರ ಆಹಾರಗಳಲ್ಲಿ ತೂಕ ಕಡಿಮೆಮಾಡಲು ಅತ್ಯುತ್ತಮವಾದದ್ದು ಒಂದು ವಿಧವಾದ ನಟ್ಸ್ ಮತ್ತು ಬೀಜಗಳು. ಕೊಬ್ಬನ್ನು ಇಳಿಸಲು ಒಂದು ಹಿಡಿ ಪೀನಟ್ಸ್ ಮತ್ತು ಬಾದಾಮಿಯನ್ನು ಸೇವಿಸಿ. ಬೀಜಗಳಲ್ಲಿ ಕುಂಬಳಕಾಯಿ ಬೀಜ ಮತ್ತು ಪ್ಲಾಕ್ಸ್ ಬೀಜ ಇವುಗಳು ಕೆಟ್ಟ ಕೊಲೆಸ್ಟ್ರಾಲ್ ಇಳಿಸಿ ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತವೆ.

ರಾಗಿ ಮಾಲ್ಟ್

ರಾಗಿ ಮಾಲ್ಟ್

ರಾಗಿ ಮಲ್ಟ್ ದಕ್ಷಿಣ ಭಾರತೀಯರು ಬಹಳಷ್ಟು ಸೇವಿಸುವ ಶಕ್ತಿ ಕೊಡುವ ಒಂದು ಸಾಮಾನ್ಯ ಪಾನೀಯ. ನೀವು ನಿಮ್ಮ ತೂಕವನ್ನು ಬೇಗ ಕಡಿಮೆಮಾಡಿಕೊಳ್ಳಲು ಪ್ರತಿದಿನ ಬೆಳಗ್ಗೆ ಒಂದು ಗ್ಲಾಸ್ ರಾಗಿ ಮಾಲ್ಟನ್ನು ಮುಂದಿನ 2 ವಾರ ಸೇವಿಸಿ.

ಧಾನ್ಯಗಳು

ಧಾನ್ಯಗಳು

ಧಾನ್ಯಗಳಲ್ಲಿ ಅಧಿಕವಾಗಿ ನಾರಿನಾಂಶವಿದ್ದು ಕಡಿಮೆ ಕೊಬ್ಬು ಇರುತ್ತದೆ. ಆದ್ದರಿಂದ ನಿಮ್ಮ ಕೊಬ್ಬನ್ನು ತೊಡೆದುಹಾಕಲು ಬಯಸಿದರೆ ನಿಮ್ಮ ದೈನಂದಿನ ಆಹಾರದಲ್ಲಿ ಧಾನ್ಯಗಳನ್ನು ಸೇರಿಸುವುದನ್ನು ಅಭ್ಯಾಸಮಾಡಿಕೊಳ್ಳಿ. ಒಳ್ಳೆಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಬೇಕಾಗಿರುವ ಪ್ರೋಟೀನ್, ಖನಿಜಗಳು, ಜೀವಸತ್ವಗಳು (ವಿಟಮಿನ್), ಉತ್ಕರ್ಷಣ (ಆಂಟಿ ಆಕ್ಸಿಡೆಂಟ್) ಮತ್ತು ಸಸ್ಯ ರಸಾಯನಿಕಗಳು ಧಾನ್ಯದಲ್ಲಿ ಇರುತ್ತವೆ.

English summary

ayurvedic medicine for weight loss in one month

According to Ayurveda, a human body is made up of one of these three doshas. Therefore, a diet in accordance with your doshas will suit you the best. The next step in losing your weight is introducing Ayurvedic herbs in your life, which make weight loss much more easier. So, here are the best Ayurvedic remedies to reduce weight gain.
X
Desktop Bottom Promotion