For Quick Alerts
ALLOW NOTIFICATIONS  
For Daily Alerts

ಹೊಟ್ಟೆ ನೋವು, ಅಜೀರ್ಣಕ್ಕೆ ಸಮಸ್ಯೆಗೆ ಪವರ್ ಫುಲ್ ಮನೆಮದ್ದುಗಳು

ಹೊಟ್ಟೆ ನೋವು, ಅಜೀರ್ಣ ಭಾರತದಲ್ಲಿ ಸಾಮಾನ್ಯವಾಗಿ ಎಲ್ಲರೂ ಎದುರಿಸುವ ಸಮಸ್ಯೆ. ಸಮಸ್ಯೆ ಚಿಕ್ಕದೆಂದು ಉದಾಸೀನ ಮಾಡುವಂತಿಲ್ಲ. ಆದರೆ, ಸಮಸ್ಯೆ ಬಗ್ಗೆ ಗೆಳೆಯ/ತಿಯರಲ್ಲೂ ಹೇಳುವಂತಿಲ್ಲ. ಪ್ರತಿಷ್ಠೆ ಪ್ರಶ್ನೆ! ಹಾಗಾದರೆ ಈ ಟಿಪ್ಸ್ ಅನುಸರಿಸಿ ನೋಡಿ

By Hemanth
|

ಸಣ್ಣ ಮಕ್ಕಳಿಗೆ ಶಾಲೆಗೆ ಹೋಗಲು ಮನಸ್ಸಿಲ್ಲದೆ ಇದ್ದರೆ ನೀಡುವಂತಹ ಕಾರಣ ಹೊಟ್ಟೆನೋವು. ಹೊಟ್ಟೆನೋವು ಇದ್ದರೆ ಶಾಲೆಗೆ ಕಳುಹಿಸುವುದಿಲ್ಲವೆನ್ನುವ ನಂಬಿಕೆ ಮಕ್ಕಳಲ್ಲಿ ಇರುತ್ತದೆ. ಇದರಿಂದಾಗಿ ಮಕ್ಕಳು ಈ ಕಾರಣ ನೀಡುತ್ತಾರೆ. ಇನ್ನು ಕೆಲಸಕ್ಕೆ ಹೋಗಲು ಮನಸ್ಸಿಲ್ಲದಿದ್ದರೂ ಇಂತಹ ಕಾರಣ ನೀಡುವುದಿದೆ. ಆದರೆ ನಾವಿಲ್ಲಿ ಗಮನಿಸಬೇಕಾದ ವಿಷಯವೆಂದರೆ ಹೊಟ್ಟೆ ನೋವು ಅಥವಾ ಅಸಿಡಿಟಿ ಸಮಸ್ಯೆಯಿದ್ದರೆ ಅದು ಇನ್ನಿಲ್ಲದಂತೆ ಕಾಡುವುದು. ಆಯುರ್ವೇದ ಟಿಪ್ಸ್: ಬರೀ ಒಂದೇ ದಿನದಲ್ಲಿ ಅಸಿಡಿಟಿ ನಿಯಂತ್ರಣಕ್ಕೆ...

ಇಂತಹ ಸಮಸ್ಯೆ ಇರುವವರು ಅನುಭವಿಸುವ ನೋವು ಕೂಡ ಅಪಾರ. ಇದಕ್ಕಾಗಿ ತಕ್ಷಣ ಹೋಗಿ ಯಾವುದಾದರೂ ನೋವು ನಿವಾರಕ ಔಷಧಿಯನ್ನು ತೆಗೆದುಕೊಳ್ಳುತ್ತೇವೆ. ಆದರೆ ಇದು ಅಡ್ಡಪರಿಣಾಮಗಳನ್ನು ಉಂಟು ಮಾಡುತ್ತದೆ. ಇದರಿಂದ ಕೆಲವೊಂದು ಮನೆಮದ್ದನ್ನು ಬಳಸಿಕೊಂಡು ಹೊಟ್ಟೆನೋವು ಅಥವಾ ಅಸಿಡಿಟಿ ಸಮಸ್ಯೆಯನ್ನು ನಿವಾರಿಸಬಹುದು. ಇದು ಹೇಗೆಂದು ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ...

ತುಳಸಿ

ತುಳಸಿ

ತುಳಸಿ ಎಲೆಗಳನ್ನು ಹಸಿಯಾಗಿ ಜಗಿಯಬಹುದು ಅಥವಾ ಚಹಾಗೆ ಹಾಕಿ ಕುಡಿಯಬಹುದು. ಇದು ಅಸಿಡಿಟಿಯನ್ನು ನಿವಾರಣೆ ಮಾಡುವಲ್ಲಿ ಪ್ರಮುಖ ಪಾತ್ರ ನಿವಾರಿಸುತ್ತದೆ. ಹೊಟ್ಟೆಯಲ್ಲಿ ಆಮ್ಲದ ಹಿಮ್ಮುಖ ಹರಿವನ್ನು ಇದು ತಡೆಯುತ್ತದೆ. ತುಳಸಿ ಚಹಾ: ಸ್ವಾದದ ಜೊತೆ ಆರೋಗ್ಯದ ಭಾಗ್ಯ

ದಾಲ್ಚಿನ್ನಿ

ದಾಲ್ಚಿನ್ನಿ

ದಾಲ್ಚಿನ್ನಿಯನ್ನು ಸಾಂಬಾರ ಪದಾರ್ಥಗಳಲ್ಲಿ ಪ್ರಮುಖವಾಗಿ ಬಳಸಿಕೊಳ್ಳಲಾಗುತ್ತದೆ. ಇದರಲ್ಲಿ ಇರುವಂತಹ ಪ್ರಮುಖ ಗುಣವೆಂದರೆ ಇದು ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಮತ್ತು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ.ನಂಬಿಕೆಯೇ ಬರುತ್ತಿಲ್ಲ!! 'ದಾಲ್ಚಿನ್ನಿ' ಇಷ್ಟೊಂದು ಪ್ರಯೋಜನಕಾರಿಯೇ?

ಜೀರಿಗೆ

ಜೀರಿಗೆ

ಜೀರಿಗೆ ಇದು ಲಾಲಾರಸವನ್ನು ಹೆಚ್ಚಿಸುವ ಅಂಶಗಳನ್ನು ತನ್ನಲ್ಲಿ ಹೊಂದಿರುವುದರಿಂದಾಗಿ ಜೀರ್ಣಶಕ್ತಿಯನ್ನು ಪ್ರಚೋದಿಸುತ್ತದೆ. ಇದು ನಮ್ಮ ಚೈತನ್ಯವನ್ನು ಹೆಚ್ಚಿಸಿ, ಗ್ಯಾಸನ್ನು ಹೊಡೆದೋಡಿಸುತ್ತದೆ ಹಾಗು ಗ್ಯಾಸ್ ಟ್ರಬಲ್ ಬರದಂತೆ ಕಾಪಾಡುತ್ತದೆ. ಆಯುರ್ವೇದಿಕ್ ಪದ್ಧತಿಯಲ್ಲಿ ಇದನ್ನು ಅಲ್ಸರ್ ನಿರೋಧಕವಾಗಿ ಬಳಸುತ್ತಿದ್ದರು. ಇದರಲ್ಲಿರುವ ಉಪಶಮನಕಾರಿ ಗುಣಗಳು ಹೊಟ್ಟೆ ತೊಳೆಸುವ ಸಮಸ್ಯೆಯಿಂದ ಮುಕ್ತಿ ಕೊಡುತ್ತಿದ್ದವು. ಇದರ ಪ್ರಯೋಜನವನ್ನು ಪಡೆಯಬೇಕಾದರೆ ಆಗಾಗ ಇದನ್ನು ಸೇವಿಸಿ ಅಸಿಡಿಟಿಯಿಂದ ಮುಕ್ತರಾಗಿ ಅಥವಾ ಇದನ್ನು ಬಿಸಿ ನೀರಿನಲ್ಲಿ ಕುದಿಸಿ, ಆರಿಸಿ. ಸಮಸ್ಯೆ ಉದ್ಬವಿಸಿದಾಗಲೆಲ್ಲ ಇದನ್ನು ಸೇವಿಸಿ. ಹಾಲಿಗೆ ಜೀರಿಗೆ-ಕರಿಮೆಣಸಿನ ಪುಡಿ ಸೇರಿಸಿ ಕುಡಿದು ನೋಡಿ...

ಶುಂಠಿ

ಶುಂಠಿ

ಅಪ್ಪಿತಪ್ಪಿಯೂ ಹೊಟ್ಟೆ ನೋವನ್ನು ನಿರ್ಲಕ್ಷಿಸಬೇಡಿ

ಲವಂಗ

ಲವಂಗ

ಇದರಲ್ಲಿ ಸ್ವಾಭಾವಿಕವಾದ ಕಾರ್ಮಿಟಿವ್‍ಗಳಿದ್ದು, ಇದು ಪೆರಿಸ್ಟಲಿಸಿಸ್ ( ಅನ್ನನಾಳದ ಮುಖಾಂತರ ಆಹಾರವು ಜಠರ ಸೇರುವ ಪ್ರಕಿಯೆ) ಅನ್ನು ಇದು ಹೆಚ್ಚಿಸುತ್ತದೆ. ಇದಲ್ಲದೆ ಇದು ಲಾಲಾರಸವನ್ನು ಸಹ ಹೆಚ್ಚು ಮಾಡುತ್ತದೆ. ಇದು ಸ್ವಲ್ಪ ಕಟುವಾದ ಘಾಟು ರೀತಿಯ ರುಚಿಯನ್ನು ಹೊಂದಿದೆ. ಇದರ ರುಚಿಯನ್ನು ನೊಡುವುದರಿಂದ ನಮ್ಮ ರುಚಿಗ್ರಂಥಿಗಳು ಸಕ್ರಿಯಗೊಂಡು, ಲಾಲಾರಸವನ್ನು ಹೆಚ್ಚಿಗೆ ಉತ್ಪಾದಿಸುತ್ತವೆ. ಈ ಲಾಲಾರಸವು ಜೀರ್ಣಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ಹಾಗಾಗಿ ನೀವೇನಾದರು ಅಸಿಡಿಟಿಯಿಂದ ಬಾಧೆಪಡುತ್ತಿದ್ದರೆ, ಒಂದು ಲವಂಗವನ್ನು ಕಚ್ಚಿ ತಿನ್ನಿ. ಆಗ ನಿಮ್ಮ ಬಾಯಿಯಲ್ಲಿ ಉತ್ಪತಿಯಾಗುವ ಲಾಲಾರಸವು ಅಸಿಡಿಟಿಯನ್ನು ಶಮನ ಮಾಡುವ ಸಲುವಾಗಿ ಹೊಟ್ಟೆಗೆ ದೌಡಾಯಿಸುತ್ತದೆ.

ಪುದೀನಾ

ಪುದೀನಾ

ಇದನ್ನು ಬಹು ಹಿಂದಿನ ಕಾಲದಿಂದಲು ಬಾಯಿ ದುರ್ವಾಸನೆಯನ್ನು ತೊಲಗಿಸಲು ಬಳಸುತ್ತಿದ್ದಾರೆ. ಇದರ ಜೊತೆಗೆ ಹಲವಾರು ಆಹಾರಗಳ ತಯಾರಿಕೆಯಲ್ಲಿ ಸಹ ಇದು ಅತ್ಯಾವಶ್ಯಕ. ಇದೊಂದು ಅದ್ಭುತ ಗುಣಗಳನ್ನು ಹೊಂದಿರುವ ಎಲೆಯಾಗಿದೆ. ಅಸಿಡಿಟಿಯಿಂದ ವಿಮುಕ್ತಿ ಹೊಂದಲು ಇದು ನೆರವಾಗುತ್ತದೆ. ಹೊಟ್ಟೆಯಲ್ಲಿ ಅಸಿಡನ್ನು ಕಡಿಮೆ ಮಾಡಿ ಜೀರ್ಣಶಕ್ತಿಯನ್ನು ಹೆಚ್ಚಿಸಲು ಇದು ಸಹಕರಿಸುತ್ತದೆ. ಇದರಲ್ಲಿನ ತಂಪುಕಾರಿ ಗುಣಗಳು ಹೊಟ್ಟೆಯಲ್ಲಿನ ಉರಿಯನ್ನು ನಿವಾರಿಸುತ್ತವೆ. ಪುದೀನಾ ಎಲೆಯನ್ನು ಬಿಸಿನೀರಿನಲ್ಲಿ ಹಾಕಿ ಕುದಿಸಿ, ಅದು ಆರಿದ ನಂತರ ಕುಡಿಯುವುದರಿಂದ ಅಸಿಡಿಟಿಯಿಂದ ಮುಕ್ತರಾಗಬಹುದು.

ಏಲಕ್ಕಿಯ ಬೀಜ ಮತ್ತು ಜೀರಿಗೆ ಕುದಿಸಿದ ನೀರು

ಏಲಕ್ಕಿಯ ಬೀಜ ಮತ್ತು ಜೀರಿಗೆ ಕುದಿಸಿದ ನೀರು

ಏಲಕ್ಕಿಯ ಬೀಜ ಮತ್ತು ಜೀರಿಗೆ ಕುದಿಸಿದ ನೀರು ಒಂದು ವೇಳೆ ಅಜೀರ್ಣದ ಕಾರಣ ಹೊಟ್ಟೆನೋವಾಗಿದ್ದರೆ (ಅಜೀರ್ಣದ ಸುಲಭ ಸಂಕೇತವೆಂದರೆ ಊಟದ ಬಳಿಕ ಹೊಟ್ಟೆಯಲ್ಲಿ ಆಹಾರ ಗುಡುಗುಡು ಓಡಿದಂತಾಗುವುದು) ಇದಕ್ಕೆ ಏಲಕ್ಕಿಯ ಬೀಜ ಉತ್ತಮ ಪರಿಹಾರವಾಗಿದೆ. ಜೊತೆಗೆ ವಾಕರಿಕೆ, ವಾಂತಿಯನ್ನೂ ಕಡಿಮೆಮಾಡುತ್ತದೆ. ಇದಕ್ಕಾಗಿ ಒಂದು ಲೋಟ ನೀರಿಗೆ ಸುಮಾರು ಐದರಿಂದ ಆರು ಏಲಕ್ಕಿಗಳ ಸಿಪ್ಪೆ ಸುಲಿದು ಕೇವಲ ಬೀಜಗಳನ್ನು ಮತ್ತು ಒಂದು ಚಿಕ್ಕ ಚಮಚ ಜೀರಿಗೆಯನ್ನು ಹಾಕಿ ಕುದಿಸಿ. ಸುಮಾರು ಮೂರು ನಿಮಿಷ ಕುದಿದ ಬಳಿಕ ಒಲೆಯಿಂದಿಳಿಸಿ ತಣಿಯಲು ಬಿಡಿ. ಈ ನೀರನ್ನು ದಿನಕ್ಕೆ ಮೂರು ಬಾರಿ ಊಟದ ಬಳಿಕ ಕುಡಿಯಬಹುದು.

{promotion-urls}

English summary

Amazing Herbs To Cure Stomach Pain And Acidity

Below are some herbs/ayurvedic rescue sources that can help fight both the predicaments and restore our digestive fire back to their normalcy. Herbs To Cure Stomach Pain And Acidity:
X
Desktop Bottom Promotion