For Quick Alerts
ALLOW NOTIFICATIONS  
For Daily Alerts

ಆರೋಗ್ಯ ಟಿಪ್ಸ್: ಬೆಳಿಗ್ಗೆ ಎದ್ದ ತಕ್ಷಣ 'ಬೆಂಡೆಕಾಯಿ ನೆನೆಸಿದ' ನೀರು ಕುಡಿಯಿರಿ!

By Arshad
|

ಇಂಗ್ಲಿಷ್‌ನಲ್ಲಿ ಲೇಡೀಸ್ ಫಿಂಗರ್ ಎಂಬ ಅನ್ವರ್ಥನಾಮವನ್ನು ಪಡೆದಿರುವ ಬೆಂಡೆಕಾಯಿ ದೇಹದ ಆರೋಗ್ಯವನ್ನು ಹಲವಾರು ಬಗೆಯಲ್ಲಿ ವೃದ್ಧಿಸುತ್ತದೆ. ಬೆಂಡೆಯನ್ನು ವಿಶ್ವದ ಬಹುತೇಕ ದೇಶಗಳಲ್ಲಿ ಬೆಳೆಯುತ್ತಾರೆ ಹಾಗೂ ಎಲ್ಲೆಡೆಯೂ ಇದನ್ನು ಆಹಾರವಾಗಿ ಸೇವಿಸಲಾಗುತ್ತದೆ. ಇದರ ಪೋಷಕಾಂಶಗಳನ್ನು ಅರಿತ ಬಳಿಕ ಇದನ್ನು ನಿತ್ಯದ ಆಹಾರವಾಗಿಸದೇ ಇರಲು ಯಾವ ಕಾರಣವೂ ಉಳಿಯುವುದಿಲ್ಲ. ಬೆಂಡೆಯನ್ನು ಹಸಿಯಾಗಿ ಸೇವಿಸುವ ಜೊತೆಗೇ ಹಲವು ಬಗೆಯ ಖಾದ್ಯಗಳ ರೂಪದಲ್ಲಿಯೂ ಸೇವಿಸಬಹುದು. ಇದರಲ್ಲಿ ವಿಟಮಿನ್ನುಗಳು ಹಾಗೂ ಖನಿಜಗಳು ಹೆಚ್ಚಿನ ಪ್ರಮಾಣದಲ್ಲಿವೆ. ಬೆಂಡೆ ನೆನೆಸಿದ ನೀರನ್ನು ಏಕಾಗಿ ನಿಮ್ಮ ನಿತ್ಯದ ಆಹಾರವಾಗಿಸಬೇಕು ಎಂಬುದನ್ನು ಈ ಕೆಳಗಿನ ಹತ್ತು ಮಾಹಿತಿಗಳು ವಿವರಿಸಲಿವೆ:

ಬೆಂಡೆ ನೀರು ತಯಾರಿಸುವ ಕ್ರಮ:
ಬೆಂಡೆಯನ್ನು ಚೆನ್ನಾಗಿ ತೊಳೆದು ತುದಿ ಮತ್ತು ತೊಟ್ಟುಗಳನ್ನು ನಿವಾರಿಸಿ ಚಿಕ್ಕ ಚಿಕ್ಕ ತುಂಡುಗಳನ್ನಾಗಿಸಿ. ಬಳಿಕ ಈ ತುಂಡುಗಳನ್ನು ಒಂದು ಲೋಟ ನೀರಿನಲ್ಲಿ ಹಾಕಿ ಮುಚ್ಚಳ ಮುಚ್ಚಿ ಇಡಿಯ ರಾತಿ ಹಾಗೇ ಬಿಡಿ. ಮರುದಿನ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಈ ನೀರನ್ನು ಸೋಸಿ ಕುಡಿಯಿರಿ. ಈ ನೀರಿನಲ್ಲಿ ಇನ್ಸುಲಿನ್ ಅನ್ನೇ ಹೋಲುವ ಗುಣವಿದ್ದು ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸಲು ನೆರವಾಗುತ್ತದೆ...

#1 ರಕ್ತಹೀನತೆಯಿಂದ ರಕ್ಷಿಸುತ್ತದೆ

#1 ರಕ್ತಹೀನತೆಯಿಂದ ರಕ್ಷಿಸುತ್ತದೆ

ನಮ್ಮ ರಕ್ತದಲ್ಲಿ ನಿಗದಿತ ಪ್ರಮಾಣದ ಕೆಂಪು ರಕ್ತಕಣಗಳಿರಬೇಕು. ಈ ಪ್ರಮಾಣ ಕಡಿಮೆಯಾದರೆ ರಕ್ತಹೀನತೆ ಎದುರಾಗಿದೆ ಎಂದರ್ಥ. ಬೆಂಡೆ ನೆನೆಸಿದ ನೀರನ್ನು ಕುಡಿಯುವ ಮೂಲಕ ರಕ್ತದಲ್ಲಿ ಹೆಚ್ಚು ಹೆಚ್ಚು ಕೆಂಪು ರಕ್ತಕಣಗಳು ಉತ್ಪತ್ತಿಯಾಗುತ್ತದೆ, ತನ್ಮೂಲಕ ಹೀಮೋಗ್ಲೋಬಿನ್ ಪ್ರಮಾಣ ಹೆಚ್ಚುತ್ತದೆ ಹಾಗೂ ದೇಹದ ಆರೋಗ್ಯ ಕಾಪಾಡಿಕೊಳ್ಳಲು ಈ ಪ್ರಮಾಣ ಕನಿಷ್ಟ ಮಟ್ಟಕ್ಕಿಂತಲೂ ಕಡಿಮೆಯಾಗದಂತೆ ನೋಡಿಕೊಳ್ಳುತ್ತದೆ.

#2 ಗಂಟಲ ಬೇನೆ ಹಾಗೂ ಕೆಮ್ಮು ಕಡಿಮೆಯಾಗಲು ನೈಸರ್ಗಿಕ ಪರಿಹಾರವಾಗಿದೆ

#2 ಗಂಟಲ ಬೇನೆ ಹಾಗೂ ಕೆಮ್ಮು ಕಡಿಮೆಯಾಗಲು ನೈಸರ್ಗಿಕ ಪರಿಹಾರವಾಗಿದೆ

ಗಂಟಲ ಬೇನೆ, ಕಿರಿಕಿರಿ ಹಾಗೂ ಕೆಮ್ಮು ಕಡಿಮೆಯಾಗಲು ಬೆಂಡೆ ನೆನೆಸಿದ ನೀರು ಉತ್ತಮ ಆಯ್ಕೆಯಾಗಿದೆ. ಗಂಟಲ ಕಿರಿಕಿರಿ ಕೆಮ್ಮು ಯಾರಿಗೂ ಇಷ್ಟವಾಗದ ಪರಿಸ್ಥಿತಿಯಾಗಿದೆ. ಬೆಂಡೆಯಲ್ಲಿರುವ ಬ್ಯಾಕ್ಟೀರಿಯಾ ನಿವಾರಕ ಗುಣ ಗಂಟಲ ಬೇನೆಯನ್ನು ತಕ್ಷಣವೇ ಕಡಿಮೆಯಾಗಿಸುತ್ತದೆ. ಅಲ್ಲದೇ ಇದರ ಪ್ರತಿಜೀವಕ ಗುಣ ಅದ್ಭುತಗಳನ್ನೇ ಸಾಧಿಸಬಲ್ಲುದು.

#3 ಮಧುಮೇಹ ಆವರಿಸುವುದನ್ನು ತಡವಾಗಿಸುತ್ತದೆ

#3 ಮಧುಮೇಹ ಆವರಿಸುವುದನ್ನು ತಡವಾಗಿಸುತ್ತದೆ

ಮಧುಮೇಹ ಯಾವುದೇ ವಯೋಮಾನದ ವ್ಯಕ್ತಿಯನ್ನು ಆವರಿಸಬಹುದು. ಒಂದು ವೇಳೆ ಈಗಾಗಲೇ ಆವರಿಸಿದ್ದರೆ ಇದನ್ನು ನಿಯಂತ್ರಣದಲ್ಲಿರಿಸಿಕೊಳ್ಳುವುದು ತುಂಬಾ ಅಗತ್ಯವಾಗಿದೆ. ಬೆಂಡೆಯಲ್ಲಿರುವ ಇನ್ಸುಲಿನ್ ಹೋಲುವ ಗುಣಗಳು ಮಧುಮೇಹವನ್ನು ನಿಯಂತ್ರಣದಲ್ಲಿರಿಸಲು ನೆರವಾಗುತ್ತದೆ. ಬೆಂಡೆ ನೆನೆಸಿದ ನೀರನ್ನು ನಿಯಮಿತವಾಗಿ ಕುಡಿಯುವ ಮೂಲಕ ರಕ್ತದಲ್ಲಿ ಸಕ್ಕರೆಯ ಪ್ರಮಾಣ ನಿಯಂತ್ರಣದಲ್ಲಿರುತ್ತದೆ. ಸಕ್ಕರೆ ನಿಯಂತ್ರಣ ಮೀರುವುದು ಮಧುಮೇಹ ಉಲ್ಬಣಗೊಳ್ಳಲು ಪ್ರಮುಖ ಕಾರಣವಾಗಿದೆ.

#4 ಅತಿಸಾರವನ್ನು ಗುಣಪಡಿಸುತ್ತದೆ

#4 ಅತಿಸಾರವನ್ನು ಗುಣಪಡಿಸುತ್ತದೆ

ಅತಿಸಾರ ನಿಯಂತ್ರಣಕ್ಕೆ ಬರದೇ ಇದ್ದರೆ ದೇಹ ಅತಿ ಹೆಚ್ಚಿನ ನಿರ್ಜಲೀಕರಣಕ್ಕೆ ಒಳಗಾಗಬಹುದು ಹೆಚ್ಚು ಕಾಲ ಹಾಗೇ ಬಿಟ್ಟರೆ ಹಾಗೂ ಪ್ರಾಣಾಪಾಯವೂ ಎದುರಾಗಬಹುದು. ಈ ಕೊರತೆಯನ್ನು ನೀಗಿಸಲು ಬೆಂಡೆ ನೆನೆಸಿದ ನೀರು ಅತ್ಯುತ್ತಮವಾದ ಆಯ್ಕೆಯಾಗಿದೆ. ಇದರಲ್ಲಿರುವ ಖನಿಜಗಳು ದೇಹ ಕಳೆದುಕೊಂಡ ಪೋಷಕಾಂಶಗಳನ್ನು ಮತ್ತೆ ಪಡೆಯಲು ನೆರವಾಗುತ್ತದೆ. ಅತಿಸಾರವಿದ್ದಾಗ ನಿತ್ಯವೂ ಒಂದು ಲೋಟ ನೀರನ್ನು ಪೂರ್ಣವಾಗಿ ಗುಣವಾಗುವವರೆಗೂ ಸೇವಿಸುತ್ತಿರಬೇಕು.

#5 ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ

#5 ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ

ಬೆಂಡೆಯಲ್ಲಿ ಹೆಚ್ಚಿನ ಪ್ರಮಾಣದ ಕರಗುವ ನಾರು ಇದ್ದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ನೆರವಾಗುತ್ತದೆ. ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗಿದ್ದಷ್ಟೂ ಹೃದಯದ ಮೇಲಿನ ಒತ್ತಡ ಹೆಚ್ಚುತ್ತದೆ ಹಾಗೂ ಹಲವು ಹೃದಯ ಸಂಬಂಧಿ ತೊಂದರೆಗಳು ಎದುರಾಗಬಹುದು. ನಿಯಮಿತವಾಗಿ ಬೆಂಡೆ ನೆನೆಸಿದ ನೀರನ್ನು ಕುಡಿಯುವ ಮೂಲಕ ರಕ್ತದಲ್ಲಿ ಕೊಲೆಸ್ಟ್ರಾಲ್ ಮಟ್ಟ ಸಮತೋಲನದಲ್ಲಿರಲು ಸಾಧ್ಯವಾಗುತ್ತದೆ, ತನ್ಮೂಲಕ ಹೃದಯವನ್ನು ಕೆಲವಾರು ತೊಂದರೆಗಳಿಂದ ರಕ್ಷಿಸುತ್ತದೆ.

#6 ಮಲಬದ್ಧತೆಯನ್ನು ಕಡಿಮೆ ಮಾಡುತ್ತದೆ

#6 ಮಲಬದ್ಧತೆಯನ್ನು ಕಡಿಮೆ ಮಾಡುತ್ತದೆ

ಮಲಬದ್ಧತೆ ಹಾಗೂ ಹೊಟ್ಟೆಯುಬ್ಬರಿಕೆ ನಿಮಗೆ ಯಾವಾಗಲಾದರೂ ಎದುರಾಗಿರಬಹುದು. ಇದು ಎಷ್ಟು ಅಸಹನೀಯವೆಂದು ನಿಮಗೆ ಅನುಭವವಾಗಿರಬಹುದು.ಈ ಸ್ಥಿತಿಯನ್ನು ಬೆಂಡೆ ನೆನೆಸಿದ ನೀರು ಸುಲಭವಾಗಿ ಪರಿಹರಿಸುತ್ತದೆ. ಇದರಲ್ಲಿರುವ ಹೆಚ್ಚಿನ ಪ್ರಮಾಣದ ಕರಗುವ ನಾರು ಕೊಲೆಸ್ಟ್ರಾಲ್ ನಿಯಂತ್ರಿಸುವ ಜೊತೆಗೇ ಮಲಬದ್ಧತೆಯನ್ನೂ ನಿವಾರಿಸಲು ನೆರವಾಗುತ್ತದೆ. ಇದೊಂದು ನೈಸರ್ಗಿಕ ವಿರೇಚಕವಾಗಿದ್ದು ಕರಗುವ ನಾರು ಕರುಳುಗಳಲ್ಲಿ ಜೀರ್ಣಗೊಂಡ ಆಹಾರ ಸುಲಭವಾಗಿ ಚಲಿಸಲು ನೆರವಾಗುತ್ತದೆ.

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

ಆರೋಗ್ಯ ಕಾಪಾಡಿಕೊಳ್ಳಬೇಕೆಂದರೆ ರೋಗ ನಿರೋಧಕ ಶಕ್ತಿಯೂ ಉತ್ತಮವಾಗಿರುವುದು ಅಗತ್ಯವಾಗಿದೆ. ಬೆಂಡೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಶೀತ-ಕೆಮ್ಮು ಮೊದಲಾದ ಸಾಮಾನ್ಯ ಕಾಯಿಲೆಗಳ ಸಹಿತ ಹಲವಾರು ರೋಗಗಳನ್ನು ದೂರವಿಡಲು ನೆರವಾಗುತ್ತದೆ. ಬೆಂಡೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ವಿಟಮಿನ್ ಸಿ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಲು ನೆರವಾಗುತ್ತದೆ.

ತ್ವಚೆಯ ಆರೋಗ್ಯವನ್ನು ಉತ್ತಮಗೊಳಿಸುತ್ತದೆ

ತ್ವಚೆಯ ಆರೋಗ್ಯವನ್ನು ಉತ್ತಮಗೊಳಿಸುತ್ತದೆ

ತ್ವಚೆಗೆ ಸಂಬಂಧಿಸಿದ ಹಲವಾರು ರೋಗಗಳಿಂದ ರಕ್ಷಣೆ ಪಡೆಯಲು ತ್ವಚೆಯ ಆರೋಗ್ಯವೂ ಉತ್ತಮವಾಗಿರುವುದು ಅಗತ್ಯವಾಗಿದೆ. ಬೆಂಡೆಯ ನಿಯಮಿತವಾದ ಸೇವನೆಯಿಂದ ತ್ವಚೆಯ ಆರೋಗ್ಯ ಉತ್ತಮಗೊಳ್ಳುತ್ತದೆ ಹಾಗೂ ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ರಕ್ತವನ್ನು ಶುದ್ದೀಕರಿಸಿ ರಕ್ತಪರಿಚಲನೆ ಉತ್ತಮಗೊಳಿಸುತ್ತದೆ ಹಾಗೂ ಚರ್ಮದಡಿಯಲ್ಲಿರುವ ಕಲ್ಮಶಗಳನ್ನು ನಿವಾರಿಸಲು ನೆರವಾಗುತ್ತದೆ. ಪರಿಣಾಮವಾಗಿ ಕಲ್ಮಶಗಳು ಹೆಚ್ಚುವ ಮೂಲಕ ಮೊಡವೆ ಮತ್ತು ಇತರ ಚರ್ಮ ಸಂಬಂಧಿತ ತೊಂದರೆಗಳು ಇಲ್ಲವಾಗುತ್ತವೆ.

 ಅಸ್ತಮಾ ಆಘಾತದಿಂದ ರಕ್ಷಿಸುತ್ತದೆ

ಅಸ್ತಮಾ ಆಘಾತದಿಂದ ರಕ್ಷಿಸುತ್ತದೆ

ಬೆಂಡೆಯಲ್ಲಿರುವ ಹಲವಾರು ಪೋಷಕಾಂಶಗಳು ಅಸ್ತಮಾ ಆಘಾತವನ್ನು ತಡೆಯುವ ಕ್ಷಮತೆಯನ್ನೂ ಹೊಂದಿವೆ. ಶ್ವಾಸನಾಳಗಳು ಕಿರಿದಾಗುವ ಮೂಲಕ ಎದುರಾಗುವ ಅಸ್ತಮಾ ಆಘಾತ ಯಾವುದೇ ಮುನ್ಸೂಚನೆ ನೀಡದೇ ಹಠಾತ್ತಾಗಿ ಎದುರಾಗಬಹುದು. ಆದ್ದರಿಂದ ಈ ಆಘಾತ ಎದುರಾದ ಬಳಿಕ ಚಿಕಿತ್ಸೆ ಪಡೆಯುವುದಕ್ಕಿಂತಲೂ ಬರದಂತೆ ರಕ್ಷಿಸಿಕೊಳ್ಳುವುದೇ ಜಾಣ್ಮೆಯ ಕ್ರಮವಾಗಿದೆ. ನಿಯಮಿತವಾಗಿ ಬೆಂಡೆನೀರನ್ನು ಕುಡಿಯುವ ಮೂಲಕ ಅಸ್ತಮಾ ಆಘಾತ ಎದುರಾಗುವ ಸಾಧ್ಯತೆಯನ್ನು ಕಡಿಮೆ ಮಾಡಬಹುದು.

ಮೂಳೆಗಳನ್ನು ದೃಢಗೊಳಿಸುತ್ತದೆ

ಮೂಳೆಗಳನ್ನು ದೃಢಗೊಳಿಸುತ್ತದೆ

ಮೂಳೆಗಳನ್ನು ದೃಢಗೊಳಿಸಲು ಬೆಂಡೆ ಹೆಚ್ಚಿನ ದೇಣಿಗೆಯನ್ನು ನೀಡುತ್ತದೆ. ಇದರಲ್ಲಿರುವ ಫೋಲೇಟ್ ವಿಶೇಷವಾಗಿ ಗರ್ಭಿಣಿಯರ ಆರೋಗ್ಯ ವೃದ್ಧಿಸುವಲ್ಲಿ ನೆರವಾಗುತ್ತದೆ ಹಾಗೂ ಹುಟ್ಟಲಿರುವ ಮಗು ಆರೋಗ್ಯಕರವಾಗಿರಲು ನೆರವಾಗುತ್ತದೆ. ಅಲ್ಲದೇ ಮೂಳೆಗಳ ಸಾಂದ್ರತೆ ಹೆಚ್ಚಲು ನೆರವಾಗುವ ಮೂಲಕ ಮೂಳೆಗಳ ದೃಢತೆ ಹೆಚ್ಚಿಸುತ್ತದೆ ಹಾಗೂ ಮೂಳೆಗಳಲ್ಲಿ ಗಾಳಿ ಗುಳ್ಳೆಗಳು ತುಂಬಿ ಟೊಳ್ಳಾಗುವ (osteoporosis) ಹಾಗೂ ಸಂಧಿವಾತ ಎದುರಾಗುವ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ. ಬೆಂಡೆ ನೆನೆಸಿದ ನೀರಿನಿಂದ ಇವುಗಳ ಹೊರತಾಗಿಯೂ ಇನ್ನೂ ಹಲವಾರು ಪ್ರಯೋಜನಗಳನ್ನು ಪಡೆಯಬಹುದಾಗಿದ್ದು ನಿಯಮಿತವಾಗಿ ಸೇವಿಸುವ ಮೂಲಕ ಒಟ್ಟಾರೆ ಆರೋಗ್ಯ ವೃದ್ಧಿಸುವುದನ್ನು ಗಮನಿಸಬಹುದು.

English summary

Amazing Benefits of Drinking Lady's Finger–soaked Water

Okra is also known as lady's finger in English-speaking countries. The green pod found inside this vegetable is highly beneficial for the overall health of our body. Okra is grown and consumed in many parts of the world and is highly regarded for its nutritional values. It can be prepared in various ways. It is a great source of vitamins and minerals for the body. Here are the amazing benefits of drinking lady's finger-soaked water:
X
Desktop Bottom Promotion