Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಆರೋಗ್ಯದ ಖಜಾನೆ, ಕಿವಿ ಹಣ್ಣು!
'ಹಸಿದು ಹಲಸು, ಉಂಡು ಮಾವು', 'ಊಟವಾದ ಮೇಲೆ ಹಣ್ಣುಗಳನ್ನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು'...ಹೀಗೆ, ಅನೇಕ ನಾಡ ನುಡಿಗಳು ಹಣ್ಣುಗಳ ಗುಣಗಾನ ಮಾಡುತ್ತವೆ. ಅದರಿಂದಾಗಿಯೇ ಇವು ನಮ್ಮ ದೈನಂದಿನ ಆಹಾರದ ಪಟ್ಟಿಯಲ್ಲಿ ಬಹಳ ಹಿಂದಿನಿಂದಲೇ ಸೇರ್ಪಡೆಗೊಂಡಿವೆ.
ಮೂಲತಃ ವಿದೇಶೀ ಹಣ್ಣೆನಿಸಿರುವ ' ಕಿವಿ' ಹಣ್ಣು ಹೊರಗಿನಿಂದ ನೋಡುವುದಕ್ಕೆ ಸರಳವಾಗಿ ಕಂಡರೂ, ಖನಿಜಾಂಶ ಮತ್ತು ಜೀವಸತ್ವಗಳ ಗಣಿ ಎನಿಸಿದೆ. ಇದನ್ನು ತುಂಡರಿಸಿದಾಗ, ಇದರ ಬಣ್ಣ ಮತ್ತು ವಿನ್ಯಾಸ ಬಹಳ ಆಕರ್ಷನೀಯವಾಗಿದೆ. ಅತ್ಯಾಧಿಕ ಪೋಷಕಾಂಶವಿರುವ ಹಣ್ಣು-ಕಿವಿ
ಇದರಲ್ಲಿರುವ ಕಬ್ಬಿಣ ಸತ್ವ, ಪೋಲಿಕ್ ಆಸಿಡ್, 'ಸಿ' ವಿಟಮಿನ್ ಗಳು ಅಂಗಾಂಗಗಳ ಬೆಳವಣಿಗೆ, ಮೂಳೆಯ ಗಟ್ಟಿತನ ಮತ್ತು ಕೆಂಪುರಕ್ತ ಕಣಗಳ ಉತ್ಪಾದನೆಗಾಗಿ ಶ್ರಮಿಸುತ್ತವೆ. ಹಲ್ಲುಗಳ ಆರೋಗ್ಯ, ಶಕ್ತಿಯುತವಾದ ಮಾಂಸಖಂಡ, ಮತ್ತು ಹೃದಯದ ಆರೋಗ್ಯಕ್ಕೆ ಕಿವಿ ಸೇವನೆ ಒಳ್ಳೆಯದು.

ಅಷ್ಟೇ ಅಲ್ಲದೆ, ಇತರ ಹಣ್ಣು ತರಕಾರಿಗಳಲ್ಲಿ ಇರುವಂತಹ ಗುಣಗಳು, ಉದಾಹರಣೆಗೆ ಬಾಳೆಯ ಹಣ್ಣಿನ ಪೊಟ್ಯಾಶಿಯಂ, ಕಿತ್ತಳೆ ಹಣ್ಣಿನ 'ಸಿ' ಸತ್ವ, ಅವಕಾಡೋದ 'ಈ' ಸತ್ವ, ಹಸಿರು ತರಕಾರಿ, ಸೊಪ್ಪಿನಲ್ಲಿರುವ ತಾಮ್ರ ಸತ್ವ, ಮೆಗ್ನೇಶಿಯ, ಕ್ರೋಮಿಯಂ, ಜೀರ್ಣಕಾರಿ ನಾರಿನ ಅಂಶಗಳು ಇದರಲ್ಲಿ ಹೇರಳವಾಗಿದೆ. ಕ್ಯಾನ್ಸರ್ ರೋಗ ವನ್ನು ತಡೆಯುವ ಆಂಟಿ ಆಕ್ಸಿಡಂಟ್ ತತ್ವವೂ ಇದರಲ್ಲಿದೆ . ಒಟ್ಟಿನಲ್ಲಿ ಇದು ಆಲ್ ಇನ್ ಒನ್! ನಿಜಾರ್ಥದಲ್ಲಿ ಖಜಾನೆ!
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
